ಅಯೋಧ್ಯಾ ತೀರ್ಪು ಶನಿವಾರವೇ ಏಕೆ?
ನವದೆಹಲಿ: ಅಯ್ಯೋಧ್ಯೆಯಲ್ಲಿನ ರಾಮ ಜನ್ಮಭೂಮಿ- ಬಾಬರಿ ಮಸೀದಿ ವಿವಾದಕ್ಕೆ ತೆರೆ ಎಳೆದ ತೀರ್ಪಿನ ಪ್ರಕಟಣೆಗೆ ಶನಿವಾರವನ್ನೇ
ಆಯ್ಕೆ ಮಾಡಿದ್ದು ಏಕೆ ಎಂಬ ಪ್ರಶ್ನೆ
ಇದೀಗ ಟ್ರೆಂಡ್ ಸೃಷ್ಟಿಸುತ್ತಿದ್ದು, ಇದರ ಹಿಂದಿರುವ ಕಾರಣ ಇಲ್ಲಿದೆ.
ನವೆಂಬರ್
ಮಧ್ಯಂತರದಲ್ಲಿ ಅಯೋಧ್ಯೆ ವಿವಾದಕ್ಕೆ ಸಂಬಂಧಪಟ್ಟಂತೆ ತೀರ್ಪು ಹೊರಬರಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಇದ್ದಕ್ಕಿದ್ದಂತೆ ಶುಕ್ರವಾರ ರಾತ್ರಿ ಅಯೋಧ್ಯೆ ಪ್ರಕರಣದ ತೀರ್ಪನ್ನು ಶನಿವಾರ ಬೆಳಿಗ್ಗೆ ೧೦.೩೦ಕ್ಕೆ ಪ್ರಕಟಿಸಲಾಗುವುದು
ಎಂದು ಘೋಷಿಸಲಾಯಿತು. ಈ ದಿಢೀರ್ ಬೆಳವಣಿಗೆ
ದೇಶದೆಲ್ಲೆಡೆ ಸಂಚಲನ ಮೂಡಿಸಿದ್ದಲ್ಲದೇ ಕಸಿವಿಸಿ ವಾತಾವರಣವು ಸೃಷ್ಟಿಯಾಗಿತ್ತು. ಆದರೆ ಈ ನಿರ್ಧಾರ ಸಾಮಾಜ
ವಿರೋಧಿ ಶಕ್ತಿಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಕಾರ್ಯತಂತ್ರದ ನಿಲುವಾಗಿದ್ದು, ಯಾವುದೇ ರೀತಿಯಲ್ಲೂ ಧಾರ್ಮಿಕ ಸೂಕ್ಷ್ಮ ಭಾವನೆಗಳಿಗೆ ದಕ್ಕೆ ಉಂಟಾಗದಂತೆ, ಗಲಭೆ ,ಪಿತೂರಿಗೆ ಅವಕಾಶ ನೀಡದಂತೆ ನಿರ್ವಹಿಸುವುದು ಇದರ ಉದ್ದೇಶವಾಗಿತ್ತು.
ಸಾಮಾನ್ಯವಾಗಿ
ನ್ಯಾಯಾಲಯವು ತೀರ್ಪನ್ನು ಪ್ರಕಟಿಸಿದರೆ, ಮರುದಿನ ಫಿರ್ಯಾದಿ ಅಥವಾ ಪ್ರತಿವಾದಿಗಳಲ್ಲಿ ಒಬ್ಬರು ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸುವಂತೆ ನ್ಯಾಯಾಲಯವನ್ನು ಕೋರುತ್ತಾರೆ. ಈ ಪ್ರಕ್ರಿಯೆಯು ಒಂದು
ಅಥವಾ ಎರಡು ದಿನ ತೆಗೆದುಕೊಳ್ಳಬಹುದು. ಈ ನಿಟ್ಟಿನಲ್ಲಿ ಮರುವಿಚಾರಣೆಗೆ
ಅನೂಕೂಲವಾಗಲಿ ಎಂದು ನಿರೀಕ್ಷೆ ಮಾಡಿದ ಅವಧಿಗಿಂತ ಮೊದಲ್ಲೇ ತೀರ್ಪುನ್ನು ನೀಡಲಾಯಿತು.
ಗೊಗೋಯಿ
ನಿವೃತ್ತಿಯೂ ಒಂದು ಕಾರಣ
ನ್ಯಾಯಮೂರ್ತಿ
ಗೊಗೋಯಿ ಅವರು ನವೆಂಬರ್ ೧೭ರಂದು ನಿವೃತ್ತರಾಗಲಿದ್ದು, ನ್ಯಾಯಾಲಯವು ಯಾವುದೇ ದಿನ ವಿಚಾರಣೆ ನಡೆಸಿ, ಪ್ರಕರಣವನ್ನು ಅದಕ್ಕೆ ಸಂಬಂಧಿಸಿದ ತೀರ್ಪು ಸಹ ನೀಡಬಹುದಿತ್ತು. ಆದರೆ,
ಪ್ರಮುಖವಾದ ಪ್ರಕರಣದ ತೀರ್ಪನ್ನು ರಜಾ ದಿನಗಳಲ್ಲಿ ಘೋಷಿಸಲು ಆಗುವುದಿಲ್ಲ. ನ್ಯಾಯಾಧೀಶರು ನಿವೃತ್ತರಾಗುವ ಒಂದು ದಿನ ಮೊದಲು ತೀರ್ಪುಗಳನ್ನು ನೀಡುವಂತಿಲ್ಲ. ನವೆಂಬರ್ ೧೬ ಕೂಡ ಶನಿವಾರ
ಬಂದಿದ್ದು. ಇದಲ್ಲದೇ ನ್ಯಾಯಮೂರ್ತಿ ಗೊಗೋಯಿ ಅವರ ಕೊನೆಯ ಕೆಲಸದ ದಿನ ನವೆಂಬರ್ ೧೫ ಆಗಿದೆ. ಈ
ಹಿನ್ನಲೆಯಲ್ಲಿ ಅಯೋಧ್ಯೆ ಪ್ರಕರಣದ ತೀರ್ಪನ್ನು ನವೆಂಬರ್ ೧೪ ಅಥವಾ ನವೆಂಬರ್
೧೫ ಕ್ಕಿಂತ ಮುನ್ನವೇ ಘೋಷಿಸಿದ್ದು, ನ್ಯಾಯಮೂರ್ತಿ ಗೊಗೋಯಿ ನಿವೃತ್ತಿಗೆ ಮೊದಲು ಪ್ರಕರಣ ಇತ್ಯರ್ಥವಾಗಿದೆ.
No comments:
Post a Comment