Saturday, January 11, 2020

ಅಂತರ್ಜಾಲ ಸಂಪರ್ಕ ಮೂಲಭೂತ ಹಕ್ಕು: ಸುಪ್ರೀಂಕೋರ್ಟ್

ಅಂತರ್ಜಾಲ ಸಂಪರ್ಕ ಮೂಲಭೂತ ಹಕ್ಕು: ಸುಪ್ರೀಂಕೋರ್ಟ್
ಜಮ್ಮು-ಕಾಶ್ಮೀರದ ಎಲ್ಲ ನಿರ್ಬಂಧ ಮರು ಪರಿಶೀಲನೆಗೆ ಗಡುವು
ನವದೆಹಲಿ: ಅಂತರ್ಜಾಲ (ಇಂಟರ್ ನೆಟ್) ಸಂಪರ್ಕ ಪಡೆಯುವ ಹಕ್ಕು ಭಾರತೀಯ ಸಂವಿಧಾನದ ೧೯ನೇ ಪರಿಚ್ಛೇದದ ಅಡಿಯಲ್ಲಿ ಮೂಲಭೂತ ಹಕ್ಕು ಎಂಬುದಾಗಿ ಮಹತ್ವದ ತೀರ್ಪೊಂದನ್ನು  2020 ಜನವರಿ 10ರ ಶುಕ್ರವಾರ ನೀಡಿದ ಸುಪ್ರೀಂಕೋರ್ಟ್,  ಜಮ್ಮು- ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಿಸಲಾಗಿರುವ ಎಲ್ಲ ನಿರ್ಬಂಧಕ ಆಜ್ಞೆಗಳನ್ನು ಒಂದು ವಾರದ ಒಳಗಾಗಿ ಪುನರ್ ಪರಿಶೀಲನೆ ಮಾಡುವಂತೆ  ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಆಡಳಿತಕ್ಕೆ ನಿರ್ದೇಶನ ನೀಡಿತು.

ಅಂತರ್ಜಾಲದ ಮೇಲೆ ವಿಧಿಸಲಾಗುವ ನಿರ್ಬಂಧಗಳು ಸಂವಿಧಾನದ ೧೯() ಪರಿಚ್ಛೇದ ಅಡಿಯಲ್ಲಿನ ನಿಯಮಗಳಿಗೆ ಅನುಗುಣವಾಗಿರಬೇಕು. ೧೯ನೇ ಪರಿಚ್ಛೇದದ ಅನ್ವಯ ಭಾರತದ ಪ್ರಜೆಗಳಿಗೆ ನೀಡಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಾಪ್ತಿಯಲ್ಲಿ ಅಂತರ್ಜಾಲ ಬಳಕೆಯ ಸ್ವಾತಂತ್ರ್ಯವೂ ಸೇರುತ್ತz’ ಎಂದು ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠವು ಹೇಳಿತು. ನ್ಯಾಯಮೂರ್ತಿಗಳಾದ  ಆರ್. ಸುಭಾಷ್ ರೆಡ್ಡಿ ಮತ್ತು ಬಿ.ಆರ್. ಗವಾಯಿ ಅವರು ಪೀಠದ ಇತರ ಸದಸ್ಯರಾಗಿದ್ದರು.

ಪ್ರದೇಶದಲ್ಲಿ
ಅಂತರ್ಜಾಲ ಸ್ಥಗಿತಗೊಳಿಸಿರುವುದು ಸೇರಿದಂತೆ ಎಲ್ಲ ನಿರ್ಬಂಧಕಾಜ್ಞೆಗಳನ್ನು ಒಂದು ವಾರದ ಒಳಗಾಗಿ ಪುನರ್ ಪರಿಶೀಲಿಸಿ ಪ್ರಕಟಿಸಬೇಕು ಎಂದು ಹೇಳಿದ ಪೀಠ, ಆಸ್ಪತ್ರೆಗಳಂತಹ ಎಲ್ಲ ಅಗತ್ಯ ಸೇವೆಗಳನ್ನು ಒದಗಿಸುವ ಸಂಸ್ಥೆಗಳು ಮತ್ತು ಶಿಕ್ಷಣ ಕೇಂದ್ರಗಳಲ್ಲಿ ತುರ್ತಾಗಿ ಇಂಟರ್ ನೆಟ್ ಸೇವೆ ಪುನಃಸ್ಥಾಪನೆ ಮಾಡುವಂತೆ ನಿರ್ದೇಶನ ನೀಡಿತು.

ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ್ದ ಸಂವಿಧಾನದ ೩೭೦ನೇ ವಿಧಿ ರದ್ದುಗೊಳಿಸಿದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಿಸಲಾಗಿದ್ದ ನಿರ್ಬಂಧಗಳನ್ನು ಪ್ರಶ್ನಿಸಿ ಕಾಶ್ಮೀರಿ ಟೈಮ್ಸ್ ಸಂಪಾದಕ ಅನುರಾಧ ಭಾಸಿನ್, ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಸೇರಿದಂತೆ ಹಲವರು ಸಲ್ಲಿಸಿದ್ದ ಮನವಿಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತೀರ್ಪು ನೀಡಿತು. ಪ್ರದೇಶದಲ್ಲಿ ಸಂಪರ್ಕ ಮತ್ತು ಇಂಟರ್ ನೆಟ್ ಸೇವೆಗಳನ್ನು ನಿಷೇಧಿಸಿದ ಕ್ರಮವನ್ನು ಅರ್ಜಿಗಳು ಪ್ರಶ್ನಿಸಿದ್ದವು.

ಸ್ವಾತಂತ್ರ್ಯವನ್ನು ಎಲ್ಲ ಸಂಬಂಧಿತ ಅಂಶಗಳ ಪರಿಶಿಲನೆಯ ಬಳಿಕ ಬೇರೆ ಯಾವುದೇ ಆಯ್ಕೆಗಳೂ ಇಲ್ಲ ಎಂಬಂತಹ  ಸಂದರ್ಭದಲ್ಲಿ ಮಾತ್ರವೇ ನಿರ್ಬಂಧಿಸಬಹುದುಎಂದು ನ್ಯಾಯಮೂರ್ತಿ ರಮಣ ಹೇಳಿದರು.

ತೀರ್ಪನ್ನು
ಓದಿ ಹೇಳಿದ ನ್ಯಾಯಮೂರ್ತಿ ರಮಣ ಅವರುನ್ಯಾಯಾಲವು ನಿಷೇಧಾಜ್ಞೆಗಳ ಹಿಂದಿನ ರಾಜಕೀಯ ಉದ್ದೇಶವನ್ನು ಅಗೆಯುವುದಿಲ್ಲಎಂದು ಹೇಳಿದರು.

ಕಾಶ್ಮೀರದಲ್ಲಿ ಐದು ತಿಂಗಳುಗಳಿಗೂ ಹೆಚ್ಚು ಕಾಲ ಜಾರಿಗೊಳಿಸಲಾದ ಇಂಟರ್ ನೆಟ್ ನಿಷೇಧವು ಪ್ರಜಾಪ್ರಭುತ್ವ ರಾಷ್ಟ್ರವೊಂದರಲ್ಲಿ ವಿಧಿಸಲಾದ ಇಂಟರ್ನೆಟ್ ನಿಷೇಧದಲ್ಲೇ ಅತ್ಯಂತ ದೀರ್ಘಾವಧಿಯದ್ದು. ವಿಶ್ವಸಂಸ್ಥೆಯ ಅಭಿಪ್ರಾಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ವಿಶೇಷ ಕಾರ್ಯಕಲಾಪ ವರದಿಗಾರ  ಡೇವಿಡ್ ಕಾಯೆ ಅವರುಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಿಸಲಾದ ಇಂಟರ್ ನೆಟ್ ನಿಷೇಧವನ್ನು ಹಿಂದೆಂದೂ ನಡೆಯದ ಘಟನೆ  ಎಂದು ಬಣ್ಣಿಸಿದ್ದರು.

ಪೀಠವು ಅರ್ಜಿಗಳ ವಿಚಾರಣೆಯ ಬಳಿಕ ೨೦೧9ರ ನವೆಂಬರ್ ೨೭ರಂದು ತೀರ್ಪನ್ನು ಕಾಯ್ದಿರಿಸಿತ್ತು.

ತೀರ್ಪಿನ
ಮುಖ್ಯಾಂಶಗಳು
* ಅಂತರ್ಜಾಲ ಬಳಕೆಗೆ ವಿಧಿಸಿರುವ ನಿರ್ಬಂಧವನ್ನು ವಾರದ ಒಳಗಾಗಿ ಮರುಪರಿಶೀಲಿಸಬೇಕು. ಅಂಥ ನಿರ್ಬಂಧಗಳು ನಿರ್ದಿಷ್ಟ ಅವಧಿಗೆ ಮಾತ್ರ ಸೀಮಿತವಾಗಿರಬೇಕು ಮತ್ತು ನ್ಯಾಯಾಂಗದ ಪರಿಶೀಲನೆಗೆ ಒಳಪಡಬೇಕು.
* ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ನೀಡುವ ಸಂವಿಧಾನದ ೧೯ನೇ ಪರಿಚ್ಛೇದವು, ಅಂತರ್ಜಾಲ ಬಳಸಿ ವ್ಯಾಪಾರ ಮತ್ತು ವೃತ್ತಿ ನಿರ್ವಹಿಸುವ ವಿಚಾರಕ್ಕೂ ಅನ್ವಯಯವಾಗುತ್ತದೆ. ಸಂವಿಧಾನದ ಮೂಲಭೂತ ಹಕ್ಕುಗಳನ್ನು ನಿರ್ಬಂಧಿಸುವ ಮೊದಲು ಸರ್ಕಾರ ಸಾಕಷ್ಟು ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು.
* ಶೀಘ್ರ ಅಂತರ್ಜಾಲ ಸೇವೆ ಮರುಸ್ಥಾಪನೆ ಸಾಧ್ಯವಾದ ಪ್ರದೇಶಗಳಲ್ಲಿ ಸರ್ಕಾರಿ ವೆಬ್ ಸೈಟುಗಳು, -ಬ್ಯಾಂಕಿಂಗ್ ಸವಲತ್ತು, ಆಸ್ಪತ್ರೆ ಸೇವೆಗಳು ಮತ್ತು ಇತರ ಅಗತ್ಯ ಸೇವೆಗಳನ್ನು ಪೂರೈಸಲು ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಬೇಕು.
* ಭಾರತೀಯ ಅಪರಾಧ ದಂಡ ಸಂಹಿತೆಯ (ಸಿಆರ್ಪಿಸಿ) ೧೪೪ನೇ ವಿಧಿಯ ಅನ್ವಯ ಪದೇಪದೆ ನಿಷೇಧಾಜ್ಞೆ ವಿಧಿಸುವುದು ಸಹ ಅಧಿಕಾರ ದುರುಪಯೋಗ ಎನಿಸಿಕೊಳ್ಳುತ್ತದೆ. ೧೪೪ನೇ ವಿಧಿ ಹೇರಲು ಇರುವ ಕಾರಣಗಳನ್ನು ತಿಳಿಸಬೇಕು. ದಂಡಾಧಿಕಾರಿಯು ಜನರ ಸ್ವಾತಂತ್ರ್ಯ ಮತ್ತು ಸರ್ಕಾರದ ಹಿತಾಸಕ್ತಿಯ ನಡುವೆ ಸಮತೋಲನ ಕಾಪಾಡಬೇಕು.
* ೧೪೪ನೇ ವಿಧಿಯ ಅನ್ವಯ ನಿಷೇಧಾಜ್ಞೆ ಹೇರಿದಾಗ ಎಲ್ಲ ನಿರ್ಬಂಧಗಳು ಮತ್ತು ಆದೇಶಗಳನ್ನು ಪ್ರಕಟಿಸಬೇಕು. ಕಾಲಮಿತಿಯಿಲ್ಲದೆ ಅಂತರ್ಜಾಲ ಸಂಪರ್ಕ ಕಡಿತಗೊಳಿಸುವುದು ಟೆಲಿಕಾಂ ನಿಯಮಗಳ ಉಲ್ಲಂಘನೆ ಆಗುತ್ತದೆ.
* ಕಾಶ್ಮೀರದಲ್ಲಿ ನಿಷೇಧಾಜ್ಞೆಯನ್ನು ತಕ್ಷಣ ತೆರವುಗೊಳಿಸಬೇಕಾದ ಅಗತ್ಯವಿದೆ. (ಯಾರಿಗಾದರೂ ಅಥವಾ ಜನರಿಗೆ ಸರ್ಕಾರದೊಂದಿಗೆ) ಭಿನ್ನಮತ ಇದೆ ಎನ್ನುವುದು ನಿಷೇಧಾಜ್ಞೆ ವಿಧಿಸಲು ಪ್ರಬಲ ಕಾರಣವಾಗಲಾರದು.
* ಬೇರೆ ಯಾವುದೇ ಮಾರ್ಗ ಇಲ್ಲ ಎಂದು ಮನವರಿಕೆಯಾದಾಗ ಮತ್ತು ಸಾಕಷ್ಟು ತೃಪ್ತಿಕರ ಕಾರಣಗಳಿವೆ ಎನಿಸಿದಾಗ ಮಾತ್ರ ನಿಷೇಧಾಜ್ಞೆ ವಿಧಿಸಬಹುದು. ಆದರೆ ಜನರ ಸ್ವಾತಂತ್ರ್ಯ ಮತ್ತು ಅದನ್ನು ನಿರ್ಬಂಧಿಸುವ ಮೂಲಕ ಸರ್ಕಾರ ಏನು ಸಾಧಿಸಲು ಹೊರಟಿದೆ ಎನ್ನುವುದರ ನಡುವೆ ಸಮತೋಲನ ಇರಬೇಕು.
* ದೇಶದ ಎಲ್ಲ ಪ್ರಜೆಗಳಿಗೂ ಹಕ್ಕುಗಳು ಮತ್ತು ಭದ್ರತೆಯನ್ನು ಖಾತ್ರಿಪಡಿಸುವುದು ನ್ಯಾಯಾಲಯಗಳ ಕರ್ತವ್ಯ. (ಆದರೆ) ಸ್ವಾತಂತ್ರ್ಯ ಮತ್ತು ಭದ್ರತೆಯ ವಿಚಾರದಲ್ಲಿ (ಪರಸ್ಪರ) ಘರ್ಷಣೆ ಇದ್ದಂತೆ ಕಾಣಿಸುತ್ತಿದೆ.
* ಕಾಶ್ಮೀರ ಸಾಕಷ್ಟು ಹಿಂಸಾಚಾರವನ್ನು ಕಂಡಿದೆ. ಅದು ಹಲವು ವಿಪರ್ಯಾಸಗಳ ಮಾತೃಭೂಮಿಯೂ ಆಗಿದೆ. ಭದ್ರತೆ ಮತ್ತು ಮಾನವ ಹಕ್ಕುಗಳ ನಡುವೆ ಸಮತೋಲನ ಸಾಧಿಸಲು ನಾವು (ನ್ಯಾಯಾಲಯಗಳು) ನಮ್ಮ ಕೈಲಾದ ಎಲ್ಲ ಪ್ರಯತ್ನಗಳನ್ನೂ ಮಾಡುತ್ತೇವೆ.
* ಜನರ ಹಕ್ಕುಗಳನ್ನು ಖಾತ್ರಿಪಡಿಸಲೆಂದು (ನ್ಯಾಯಾಧೀಶರು) ನಾವು (ನ್ಯಾಯಾಲಯಗಳಲ್ಲಿ) ಇದ್ದೇವೆ. ಭದ್ರತೆ ಮತ್ತು ಜನರ ಸ್ವಾತಂತ್ರ್ಯದ ನಡುವೆ ಸಮತೋಲನ ಕಾಪಾಡಲು ಏನು ಮಾಡಬೇಕು ಎಂಬುದನ್ನು ಗಮನದಲಿ ಇಲ್ಲಿರಿಸಿಕೊಂಡು ಕೆಲಸ ಮಾಡುತ್ತೇವೆ. (ಸರ್ಕಾರ ಹೊರಡಿಸಿದ) ಯಾವುದೇ ಆದೇಶದ ಹಿಂದೆ ಇರಬಹುದಾದ ರಾಜಕೀಯ ಉದ್ದೇಶಗಳು ನಮಗೆ ಬೇಕಿಲ್ಲ (ಜನರ ಹಕ್ಕು ಮತ್ತು ದೇಶದ ಭದ್ರತೆ ನಮಗೆ ಮುಖ್ಯ).

No comments:

Advertisement