My Blog List

Saturday, January 11, 2020

೨೦೧೮ನೇ ಸಾಲಿನ ಚಲನಚಿತ್ರ ಪ್ರಶಸ್ತಿ: ಅತ್ಯುತ್ತಮ ಚಿತ್ರ ‘ಆ ಕರಾಳ ರಾತ್ರಿ’

೨೦೧೮ನೇ ಸಾಲಿನ ಚಲನಚಿತ್ರ ಪ್ರಶಸ್ತಿ: ಅತ್ಯುತ್ತಮ  ಚಿತ್ರ   ಕರಾಳ ರಾತ್ರಿ
ಬೆಂಗಳೂರು: ೨೦೧೮ನೇ ಸಾಲಿನ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಗೆ ಕರಾಳ ರಾತ್ರಿಸಿನಿಮಾ ಆಯ್ಕೆಯಾಗಿದೆ. ’ರಾಮನ ಸವಾರಿಮತ್ತುಒಂದಲ್ಲಾ ಎರಡಲ್ಲಾಚಲನಚಿತ್ರಗಳು  ಕ್ರಮವಾಗಿ ಎರಡನೇ ಮತ್ತು ಮೂರನೇ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಗೆ ಭಾಜನವಾಗಿವೆ.

ರಿಷಬ್
ಶೆಟ್ಟಿ ನಿರ್ದೇಶನಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡುಸಿನಿಮಾ ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ ಪ್ರಶಸ್ತಿಗೆ, ’ಸಂತಕವಿ ಕನಕದಾಸ ರಾಮಧಾನ್ಯಸಿನಿಮಾ ವಿಶೇಷ ಸಾಮಾಜಿಕ ಕಾಳಜಿಯ ಪ್ರಶಸ್ತಿಗೆ ಹಾಗೂ ಅತ್ಯುತ್ತಮ ಮಕ್ಕಳ ಚಿತ್ರವಾಗಿಹೂ ಬಳ್ಳಿಆಯ್ಕೆಯಾಗಿವೆ.

ಅತ್ಯುತ್ತಮ ನಟನಾಗಿ ರಾಘವೇಂದ್ರ ರಾಜಕುಮಾರ್, ಅತ್ಯುತ್ತಮ ನಟಿಯಾಗಿ ಮೇಘನಾ ರಾಜ್ ಮತ್ತು ಅತ್ಯುತ್ತಮ ಪೋಷಕ ನಟರಾಗಿ ಬಾಲಾಜಿ ಮನೋಹರ್ ಹಾಗೂ ಅತ್ಯುತ್ತಮ ಪೋಷಕ ನಟಿಯಾಗಿ ವೀಣಾ ಸುಂದರ್ ಆಯ್ಕೆಯಾಗಿದ್ದಾರೆ.

ಮುಖ್ಯಮಂತ್ರಿ
ಬಿ.ಎಸ್. ಯಡಿಯೂರಪ್ಪ ಅವರು ೨೦೧೮ ನೆ ಕ್ಯಾಲೆಂಡರ್ ವರ್ಷದ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು 2020 ಜನವರಿ 10ರ ಶುಕ್ರವಾರ  ಪ್ರಕಟಿಸಿದರು. ಆಯ್ಕೆ ಸಮಿತಿಗಳ ಅಧ್ಯಕ್ಷರುಗಳಾದ ಜೋಸೈಮನ್, ವಸಂತಕುಮಾರ್ ಪಾಟೀಲ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಎಸ್ ಎನ್. ಸಿದ್ದರಾಮಪ್ಪ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರಶಸ್ತಿ
ಪಟ್ಟಿ;


No comments:

Advertisement