Tuesday, August 11, 2020

ಅವಿಭಕ್ತ ಹಿಂದೂ ಕುಟುಂಬ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೆ ಸಮಾನ ಹಕ್ಕು: ಸುಪ್ರೀಂ

 ಅವಿಭಕ್ತ ಹಿಂದೂ ಕುಟುಂಬ ಆಸ್ತಿಯಲ್ಲಿ

ಹೆಣ್ಣುಮಕ್ಕಳಿಗೆ ಸಮಾನ ಹಕ್ಕು: ಸುಪ್ರೀಂ

ನವದೆಹಲಿ: ಹೆಣ್ಣುಮಕ್ಕಳು ಹಿಂದೂ ಅವಿಭಜಿತ ಕುಟುಂಬದ ಆಸ್ತಿಯಲ್ಲಿನ ಸಮಾನತೆಯ ಹಕ್ಕಿನಿಂದ ವಂಚಿತರಾಗಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ 2020 ಆಗಸ್ಟ್  11ರ ಮಂಗಳವಾರ  ಮಹತ್ವದ ತೀರ್ಪು ನೀಡಿತು.

ಹಿಂದೂ ಉತ್ತರಾಧಿಕಾರ (ತಿದ್ದುಪಡಿ) ಕಾಯ್ದೆಗೆ ತಿದ್ದುಪಡಿ ತರಲಾದ ೨೦೦೫ ಕ್ಕೆ ಮೊದಲೇ ತಂದೆ ತೀರಿಕೊಂಡಿದ್ದರೂ ಸಹ ಜಂಟಿ ಹಿಂದೂ ಕುಟುಂಬ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಸಮಾನ ಸಹವರ್ತಿ ಹಕ್ಕುಗಳಿವೆ ಎಂದು ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಎಸ್ ನಜೀರ್ ಮತ್ತು ಎಮ್‌ಆರ್ ಷಾ ಅವgನ್ನು ಒಳಗೊಂಡ ತ್ರಿಸದಸ್ಯ ನ್ಯಾಯಪೀಠವು ತೀರ್ಪು ನೀಡಿತು.

೧೯೫೬ ಹಿಂದೂ ಉತ್ತರಾಧಿಕಾರ ಕಾಯ್ದೆಯ ಸೆಕ್ಷನ್ ೬ಕ್ಕೆ ಸೇರಿಸಲಾಗಿರುವ ವಿಧಿಗಳು ತಿದ್ದುಪಡಿಗೆ ಮೊದಲ ಅಥವಾ ನಂತರ ಜನಿಸಿದ ಪುತ್ರಿಗೆ, ಪುತ್ರನಿಗೆ ಸಮಾನವಾದ ಹಕ್ಕು ಮತ್ತು ಹೊಣೆಗಾರಿಕೆಗಳೊಂದಿಗೆ ಸಹವರ್ತಿ (ಕೋಪಾರ್ಸೆನರ್) ಸ್ಥಾನಮಾನವನ್ನು ನೀಡುತ್ತದೆ ಎಂದು ಪೀಠ ಹೇಳಿತು.

ಕೋಪಾರ್ಸೆನರ್ ಎನ್ನುವುದು ಜನ್ಮದಿಂದ ಮಾತ್ರ ಪೋಷಕರ ಆಸ್ತಿಯಲ್ಲಿ ಕಾನೂನುಬದ್ಧ ಹಕ್ಕನ್ನು ಪಡೆದುಕೊಳ್ಳುವ ವ್ಯಕ್ತಿಗೆ ಬಳಸುವ ಪದವಾಗಿದೆ.

ನ್ಯಾಯಪೀಠವು, "ಸೆಪ್ಟೆಂಬರ್ , ೨೦೦೫ ರಿಂದ ಜಾರಿಗೆ ಬಂದ ಸೆಕ್ಷನ್ () ಪ್ರಕಾರ, ಮಗಳು ೨೦೦೪ ಡಿಸೆಂಬರ್ ಮುನ್ನ ನಡೆದ ಇತ್ಯರ್ಥ ಅಥವಾ ಅನ್ಯೀಕರಣ, ವಿಭಜನೆ ಅಥವಾ ಒಡಂಬಡಿಕೆಯ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಉಳಿತಾಯ ಸಹಿತವಾದ ಹಕ್ಕುಗಳನ್ನು ಪಡೆಯಬಹುದು. ಕೊಪಾರ್ಸೆನರಿಯಲ್ಲಿನ ಹಕ್ಕು ಹುಟ್ಟಿನಿಂದಲೇ ಇರುವುದರಿಂದ, ಸೆಪ್ಟೆಂಬರ್ , ೨೦೦೫ ರಲ್ಲಿ ಕೊಪಾರ್ಸೆನರ್ ತಂದೆ ಜೀವಂತವಾಗಿರುವುದು ಅನಿವಾರ್ಯವಲ್ಲ ಎಂದು ಪೀಠ ಹೇಳಿತು.

ಪೂರ್ವಜರ ಆಸ್ತಿಯನ್ನು ಆನುವಂಶಿಕವಾಗಿ ಪಡೆಯಲು ಹೆಣ್ಣುಮಕ್ಕಳಿಗೆ ಸಮಾನ ಹಕ್ಕುಗಳನ್ನು ನೀಡುವ ಹಿಂದೂ ಉತ್ತರಾಧಿಕಾರ ಕಾಯ್ದೆ ೧೯೫೬ರ ತಿದ್ದುಪಡಿಯು ಪೂರ್ವಾನ್ವಯ ಪರಿಣಾಮವನ್ನು ಬೀರುತ್ತದೆ ಎಂದು ತೀರ್ಪು ಸ್ಪಷ್ಟಪಡಿಸಿದೆ.

ವಿವಿಧ ಹೈಕೋರ್ಟ್‌ಗಳು ಮತ್ತು ಅಧೀನ ನ್ಯಾಯಾಲಯಗಳ ಮುಂದೆ ವಿಷಯದ ಮೇಲ್ಮನವಿಗಳು ಬಾಕಿ ಉಳಿದಿವೆ ಮತ್ತು ಶಾಸನಾತ್ಮಕ ತೊಡಕುಗಳಿಂದಾಗಿ ಪರಸ್ಪರ ವಿರೋಧಾಭಾದ ತೀರ್ಪುಗಳು ಬಂದು ವಿಷಯಗಳ ಇತ್ಯರ್ಥ ಈಗಾಗಲೇ ಈಗಾಗಲೇ ವಿಳಂಬವಾಗಿವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

"ಹೆಣ್ಣುಮಕ್ಕಳಿಗೆ ಸೆಕ್ಷನ್ ಮೂಲಕ ಲಭಿಸಿರುವ ಸಮಾನತೆಯ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ, ಬಾಕಿ ಇರುವ ವಿಷಯಗಳನ್ನು ಆರು ತಿಂಗಳೊಳಗೆ ಸಾಧ್ಯವಾದಷ್ಟು ನಿರ್ಧರಿಸಬೇಕೆಂದು ನಾವು ಕೋರುತ್ತೇವೆ" ಎಂದು ನ್ಯಾಯಪೀಠ ಹೇಳಿದೆ.

ಪೂರ್ವಜರ ಆಸ್ತಿಯನ್ನು ಆನುವಂಶಿಕವಾಗಿ ಪಡೆಯಲು ಹೆಣ್ಣುಮಕ್ಕಳಿಗೆ ಸಮಾನ ಹಕ್ಕುಗಳನ್ನು ನೀಡುವ ೧೯೫೬ ಹಿಂದೂ ಉತ್ತರಾಧಿಕಾರ ಕಾಯ್ದೆಗೆ ಮಾಡಿರುವ ತಿದ್ದುಪಡಿ ಪೂರ್ವಾನ್ವಯಗೊಳ್ಳುವುದೇ ಎಂಬ ಪ್ರಶ್ನೆ ಸುಪ್ರೀಂಕೋರ್ಟಿನ ಮುಂದೆ ಬಂದಿತ್ತು. ಹಿನ್ನೆಲೆಯಲ್ಲಿ ಪೀಠವು ತೀರ್ಪು ನೀಡಿತು.

No comments:

Advertisement