ಗ್ರಾಹಕರ ಸುಖ-ದುಃಖ

My Blog List

Tuesday, August 4, 2020

ರಾಮಮಂದಿರ ಭೂಮಿಪೂಜೆ: ವೇದಿಕೆಯಲ್ಲಿ ಪ್ರಧಾನಿ ಸಹಿತ ೪ ಜನ

ರಾಮಮಂದಿರ ಭೂಮಿಪೂಜೆ: ವೇದಿಕೆಯಲ್ಲಿ ಪ್ರಧಾನಿ ಸಹಿತ ಜನ

ಮೊದಲ ಆಮಂತ್ರಣ ಮುಸ್ಲಿಂ ಮೂಲದಾವೆದಾರ ಅನ್ಸಾರಿಗೆ

ನವದೆಹಲಿ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ 2020 ಆಗಸ್ಟ್ 05 ರಂದು ನಡೆಯಲಿರುವ ಭವ್ಯ ರಾಮಮಂದಿರದ ಭೂಮಿ ಪೂಜಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಮಂದಿ ಮಾತ್ರ ವೇದಿಕೆಯಲ್ಲಿ ಇರುತ್ತಾರೆ. ಸಮಾರಂಭಕ್ಕೆ ಎರಡು ದಿನ ಮುಂಚಿತವಾಗಿ ಬಿಡುಗಡೆಯಾಗಿರುವ ಅತಿಥಿ ಪಟ್ಟಿ ಮತ್ತು ಕೇಸರಿ ಬಣ್ಣದ  ಆಮಂತ್ರಣ ಪತ್ರದಲ್ಲಿ ವಿವರ ನಮೂದಾಗಿದೆ.

ಆಮಂತ್ರಣ ಪತ್ರದಲ್ಲಿ ಪ್ರಧಾನಿ ಮೋದಿ ಮತ್ತು ಇತರ ಮೂವರ ಹೆಸರನ್ನು ಮಾತ್ರ ಉಲ್ಲೇಖಿಸಲಾಗಿದ್ದು, ಕೋವಿಡ್ -೧೯ರ ಹಿನ್ನೆಲೆಯಲ್ಲಿ ಸಂಖ್ಯೆ ಮಿತಿಗೊಳಿಸಿದ್ದನ್ನು ಇದು ಸೂಚಿಸಿದೆ.

ಪ್ರಧಾನಿ ಮೋದಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ ಭಾಗವತ್, ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಮಹಂತ ನೃತ್ಯ ಗೋಪಾಲದಾಸ್ ಐದು ಮಂದಿ ಮಾತ್ರ ವೇದಿಕೆಯಲ್ಲಿ ಇರಲಿದ್ದಾರೆ.

ಆಮಂತ್ರಣ ಪತ್ರವುರಾಮ ಲಲ್ಲಾಅಥವಾಬಾಲ ರಾಮ ವಿಗ್ರಹದ ಚಿತ್ರವನ್ನು ಹೊಂದಿದೆ. ಪ್ರತಿ ಆಮಂತ್ರಣ ಪತ್ರವೂ sದ್ರತಾ ಕೋಡ್‌ನ್ನು ಹೊಂದಿದ್ದು, ಅದು ಒಮ್ಮೆ ಮಾತ್ರ ಕಾರ್ಯನಿರ್ವಹಿಸುತ್ತದೆ. ಅತಿಥಿ ಸ್ಥಳದಿಂದ ನಿರ್ಗಮಿಸಿದರೆ ಅವರನ್ನು ಮತ್ತೆ ಒಳಗೆ ಬರಲು ಅನುಮತಿ ನೀಡಲಾಗುವುದಿಲ್ಲ ಎಂದು ರಾಮ ಮಂದಿರ ಟ್ರಸ್ಟಿನ  ಚಂಪತ್ ರೈ ಹೇಳಿದರು.

ರಾಷ್ಟ್ರವು ಕೊರೋನವೈರಸ್ ಸಾಂಕ್ರಾಮಿಕದ ಮಧ್ಯೆ ಹೋರಾಟದ ನಡೆಸುತ್ತಿರುವಾಗಲೇ ಆಯೋಜಿಸಲಾಗಿರುವ  ಭೂಮಿ ಪೂಜೆಸಮಾರಂಭದಲ್ಲಿ ಪಾಲ್ಗೊಳ್ಳಲು ಒಟ್ಟು ೧೭೫ ಜನರಿಗೆ ಆಹ್ವಾನಗಳನ್ನು ಕಳುಹಿಸಲಾಗಿದೆ.

ಆಮಂತ್ರಣಗಳು ಅಯೋಧ್ಯೆಯ ನಿವಾಸಿಗಳಿಗೆ ಮಾತ್ರ. ಮೊದಲ ಆಹ್ವಾನವು ಅಯೋಧ್ಯೆ ಪ್ರಕರಣದ ಮೂಲ ಮುಸ್ಲಿಂ ದಾವೆದಾರರಲ್ಲಿ ಒಬ್ಬರಾದ ಇಕ್ಬಾಲ್ ಅನ್ಸಾರಿ ಅವರ ಬಳಿಗೆ ಹೋಯಿತು ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. "ಇದು ಭಗವಾನ್ ರಾಮನ ಇಚ್ಛೆಎಂದು ಇಕ್ಬಾಲ್ ಅನ್ಸಾರಿ ಪ್ರತಿಕ್ರಿಯಿಸಿದರು.

ರಾಮ ಮಂದಿರದ ಅಡಿಪಾಯ ಹಾಕಲು ಪ್ರಧಾನಿ ಬರುತ್ತಿರುವುದರಿಂದ ನಾನು ಅವರನ್ನು ಸ್ವಾಗತಿಸುತ್ತೇನೆ. ಹಿಂದೂಗಳ ಪವಿತ್ರ ಪುಸ್ತಕವಾದ ರಾಮ ಚರಿತ ಪುಸ್ತಕವನ್ನು ಅದರ ಮೇಲೆ ಭಗವಾನ್ ರಾಮನ ಹೆಸರು ಇರುವ ಬಟ್ಟೆಯೊಂದಿಗೆ ಅರ್ಪಿಸುತ್ತೇನೆಎಂದು ಅನ್ಸಾರಿ ಹೇಳಿದರು.

ಪ್ರಕರಣದಲ್ಲಿ ಮೂಲ ದಾವೆ ಹೂಡಿರುವ ಹಶೀಮ್ ಅನ್ಸಾರಿ ಅವರ ಪುತ್ರ ಇಕ್ಬಾಲ್ ಅನ್ಸಾರಿ ಅವರು ೨೦೦ ವಿವಿಐಪಿಗಳನ್ನು ಮಾತ್ರ ಆಹ್ವಾನಿಸುತ್ತಿರುವ ಕಾರ್ಯಕ್ರಮಕ್ಕೆ ೧೪೬ನೇ ಅತಿಥಿಯಾಗಿ ಆಹ್ವಾನ ಸ್ವೀಕರಿಸಿದ್ದಾರೆ.

ಅಯೋಧ್ಯೆಯಲ್ಲಿ ಯಾವುದೇ ಧರ್ಮದ ವಿರುದ್ಧ ಯಾರಲ್ಲೂ ಕೆಟ್ಟ ಭಾವನೆ ಇಲ್ಲ ಎಂದು ಪ್ರತಿಪಾದಿಸಿದ ಅವರು, "ಅಯೋಧ್ಯೆಯಲ್ಲಿ ಗಂಗಾ-ಜಮುನಿ-ತಹಜೀಬ್ ಇದೆ ಮತ್ತು ಎಲ್ಲಾ ಧರ್ಮಗಳನ್ನು ಇಲ್ಲಿ ಸಮಾನವಾಗಿ ಗೌರವಿಸಲಾಗುತ್ತದೆ. ಇರಬಹುದು, ಇದು ಭಗವಾನ್ ರಾಮನ ಆಶಯವಾಗಿತ್ತು ಅದಕ್ಕಾಗಿಯೇ ನನ್ನನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಅಯೋಧ್ಯೆಯಲ್ಲಿ ವಾಸಿಸುವ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಯಾವುದೇ ವ್ಯತ್ಯಾಸವಿಲ್ಲ. ವಿಷಯವನ್ನು ಈಗ ಸುಪ್ರೀಂ ಕೋರ್ಟ್ ಬಗೆಹರಿಸಿದೆಎಂದು ನುಡಿದರು.

ಹಕ್ಕು ಪ್ರತಿಪಾದಿಸದ ೧೦,೦೦೦ ಕ್ಕೂ ಹೆಚ್ಚು ದೇಹUಳಿಗೆ ಅಂತ್ಯಸಂಸ್ಕಾರ ಮಾಡಿದ್ದಕ್ಕಾಗಿಪದ್ಮಶ್ರೀಗೌರವಕ್ಕೆ ಪಾತ್ರರಾಗಿರುವ ಮೊಹಮ್ಮದ್ ಷರೀಫ್ ಅವರನ್ನು ಸಹ ಸಮಾರಂಭಕ್ಕೆ ಆಹ್ವಾನಿಸಲಾಗಿದೆ.

ಯೋಗಿ ಆದಿತ್ಯನಾಥ್ ಅವರು ಆಯೋಜಿಸಿರುವ ಭವ್ಯ ಕಾರ್‍ಯಕ್ರಮದಲ್ಲಿ ರಾಮಮಂದಿರ ಅಭಿಯಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ ಜೋಶಿ ಮತ್ತು ಉಮಾಭಾರತಿಯಂತಹ ನಾಯಕರು ಇರುವುದಿಲ್ಲ.

ದೂರವಾಣಿ ಮೂಲಕ ಆಹ್ವಾನ ಪಡೆದಿರುವ ಅಡ್ವಾಣಿ ಮತ್ತು ಜೋಶಿ ಇವರಿಬ್ಬರೂ ಕೊರೋನವೈರಸ್ ಮುನ್ನೆಚ್ಚರಿಕೆಯಾಗಿ ಸಮಾರಂಭವನ್ನು ವರ್ಚುವಲ್ ಆಗಿ ವೀಕ್ಷಿಸಲಿದ್ದಾರೆ. ಪ್ರಧಾನಿ ಹಾಗೂ ಇತರ ಅತಿಥಿಗಳ ಸುರಕ್ಷತೆಗಾಗಿ, ತಾವು ಸಮಾರಂಭದಿಂದ ದೂರ ಇರಲಿದ್ದು, ಎಲ್ಲರೂ ತೆರಳಿದ ಸ್ಥಳಕ್ಕೆ ಭೇಟಿ ನೀಡುವುದಾಗಿ ಉಮಾ ಭಾರತಿ ಹೇಳಿದ್ದಾರೆ.

ಆಹ್ವಾನಿತರನ್ನು ದೂರವಾಣಿ ಕರೆಗಳ  ಮೂಲಕ ಆಹ್ವಾನಿಸಿ, ಬರುವುದನ್ನು ಖಚಿತ ಪಡಿಸಿದ ಬಳಿಕವೇ ಆಹ್ವಾನಿತರ ಪಟ್ಟಿಯನ್ನು ಅಂತಿಮಗೊಳಿಸಲಾಯಿತು ಎಂದು ಚಂಪತ್ ರೈ ಹೇಳಿದರು.

"ಕೋವಿಡ್ ಹಿನ್ನೆಲೆಯಲ್ಲಿ ನಾವು ಸಾಮಾಜಿಕ ಅಂತರವನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದೇವೆ. ನಾವು ವೈಯಕ್ತಿಕವಾಗಿ ಅನೇಕರನ್ನು ಕರೆದು ಕ್ಷಮೆಯಾಚಿಸಿದ್ದೇವೆ. ವಯಸ್ಸು ಕೂಡ ಒಂದು ಮುಖ್ಯ ಅಂಶವಾಗಿದೆ. ಅಡ್ವಾಣಿ ಜಿ (೯೧) ಅವರ ವಯಸ್ಸಿನಲ್ಲಿ ಹೇಗೆ ಬರುತ್ತಾರೆ? ಆದ್ದರಿಂದ ನಾವು ಎಚ್ಚರಿಕೆಯಿಂದ ಪಟ್ಟಿ ಸಿದ್ಧಪಡಿಸಿದ್ದೇವೆಎಂದು ಅವರು ನುಡಿದರು.

ಮುಸ್ಲಿಂ ದಾವೆ ಹೂಡಿದವರನ್ನು ಆಹ್ವಾನಿಸಿದ ಬಗ್ಗೆ ಉಲ್ಲೇಖಿಸಿದ ಚಂಪತ್ ರೈ, "ಒಂದು ಘಟನೆಯ ಆಚರಣೆಯನ್ನು  ಬೇರೊಬ್ಬರು ಕೆಟ್ಟದ್ದನ್ನು ಅನುಭವಿಸಬೇಕು ಎಂದು ಮಾಡುವುದಲ್ಲ. ಯಾರನ್ನೂ ಕೀಟಲೆ ಮಾಡಬಾರದುಎಂದು ಹೇಳಿದರು.

ಬಿಜೆಪಿಯ ಪ್ರಮುಖ ಕಾರ್ಯಸೂಚಿ ಮತ್ತು ಚುನಾವಣಾ ಭರವಸೆಗಳ ಕೇಂದ್ರಬಿಂದುವಾಗಿರುವ ರಾಮ ಮಂದಿರ  ನಿರ್ಮಾಣದ ಸಾಂಕೇತಿಕ ಆರಂಭಕ್ಕಾಗಿ ಪ್ರಧಾನಿ ಮೋದಿ ಅವರು ೪೦ ಕೆಜಿ ಬೆಳ್ಳಿ ಇಟ್ಟಿಗೆಯನ್ನು ಪ್ರತಿಷ್ಠಾಪಿಸುವ  ನಿರೀಕ್ಷೆಯಿದೆ.

೧೬ ನೇ ಶತಮಾನದ ವಿವಾದಾತ್ಮಕ ಬಾಬರಿ ಮಸೀದಿ ಕಟ್ಟಡವನ್ನು ಧ್ವಂಸಗೊಳಿಸಿದ ಹಲವಾರು ವರ್ಷಗಳ ಬಳಿಕ, ವಿವಾದಾತ್ಮಕವಾಗಿದ್ದ ಬಾಬರಿ ಕಟ್ಟಡವಿದ್ದ .೭೭ ಎಕರೆ ಜಾಗದಲ್ಲಿ ವಿವಾದ ಸುಪ್ರೀಂಕೋರ್ಟಿನಲ್ಲಿ ಇತ್ಯರ್ಥಗೊಂಡ ಬಳಿಕ ಈಗ ರಾಮ ಮಂದಿರವನ್ನು ನಿರ್ಮಿಸಲಾಗುತ್ತಿದೆ. ವಿವಾದಾತ್ಮಕ ಕಟ್ಟಡವನ್ನು ಭಗವಾನ್ ರಾಮನ ಜನ್ಮಸ್ಥಳವನ್ನು ಸೂಚಿಸುವ ಪುರಾತನ ದೇವಾಲಯದ ಅವಶೇಷಗಳ ಮೇಲೆ ನಿರ್ಮಿಸಲಾಗಿತ್ತು ಎಂದು ನಂಬಲಾಗಿತ್ತು.

ದೇವಾಲಯ ನಿರ್ಮಾಣಕ್ಕಾಗಿ ಸ್ಥಳವನ್ನು ಹಸ್ತಾಂತರಿಸಬೇಕು ಮತ್ತು ಪರ್‍ಯಾಯವಾಗಿ ಮುಸ್ಲಿಮರಿಗೆ ಮಸೀದಿ ನಿರ್ಮಾಣಕ್ಕಾಗಿ ಐದು ಎಕರೆ ಜಾಗ ಒದಗಿಸಬೇಕು ಎಂದು ಕಳೆದ ನವೆಂಬರ್ ತಿಂಗಳಲ್ಲಿ ನೀಡಿದ್ದ ತನ್ನ ಚಾರಿತ್ರಿಕ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ಹೇಳಿತ್ತು.

 ವಿಶೇಷ ಲಾಡು

ಏತನ್ಮಧ್ಯೆ, ರಾಮ ಮಂದಿರದಭೂಮಿ ಪೂಜೆಸಮಾರಂಭದ ಸಂದರ್ಭದಲ್ಲಿ ದೆಹಲಿಯ ಎಲ್ಲಾ ವಿದೇಶಿ ರಾಯಭಾರ ಕಚೇರಿಗಳಿಗೆ ಸಿಹಿತಿಂಡಿಗಳನ್ನು ಕಳುಹಿಸಲು ಮತ್ತು ಅಯೋಧ್ಯೆಯಲ್ಲಿಯೂ ವಿತರಿಸಲು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವಿಶೇಷ ವ್ಯವಸ್ಥೆ ಮಾಡಿದೆ.

ರಾಮ ಮಂದಿರ ದೇಗುಲ ಟ್ರಸ್ಟಿನ ಕೆಲವು ಅಧಿಕಾರಿಗಳ ಪ್ರಕಾರ, ನಾಲ್ಕು ಲಕ್ಷ ಪೊಟ್ಟಣ ಲಾಡುಗಳಿಗೆ  ನೀಡಲಾಗಿದೆ. ಸ್ವೀಕರಿಸಿದ ಮಾಹಿತಿಯ ಪ್ರಕಾರ, ಪ್ರತಿ ಪೊಟ್ಟಣದಲ್ಲಿ ನಾಲ್ಕು ಲಾಡುಗಳು ಇರುತ್ತವೆ, ಅದು ಲಕ್ನೋ ಮತ್ತು ದೆಹಲಿಯಿಂದ ಬರಲಿದೆ.

ಪ್ರಧಾನಿ ಮೋದಿ ಅವರು ಆಗಸ್ಟ್ ರಂದು ಬೆಳಿಗ್ಗೆ ೧೧ ಗಂಟೆಗೆ ಅಯೋಧ್ಯೆಯನ್ನು ತಲುಪುವ ನಿರೀಕ್ಷೆಯಿದೆ ಮತ್ತು ಅವರು ಸುಮಾರು ಮೂರು ಗಂಟೆಗಳ ಕಾಲ ಅಲ್ಲಿಯೇ ಇರುತ್ತಾರೆ. ಮೋದಿ ಮೊದಲು ಹನುಮಾನ್ ಗರ್ಹಿಯಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ.

No comments:

Advertisement