Tuesday, August 4, 2020

ಯೋಗ ಸಂಸ್ಥೆ, ಜಿಮ್‌ಗಳು ಆರಂಭ: ಅನ್ ಲಾಕ್ ೩ ಮಾರ್ಗಸೂಚಿ

ಯೋಗ ಸಂಸ್ಥೆ, ಜಿಮ್‌ಗಳು ಆರಂಭ: ನ್ ಲಾಕ್ ಮಾರ್ಗಸೂಚಿ

ನವದೆಹಲಿ: ಕೋವಿಡ್ -೧೯ ದಿಗ್ಬಂಧನವನ್ನು (ಲಾಕ್‌ಡೌನ್) ತೆರವುಗೊಳಿಸುವ (ಅನ್ಲಾಕ್) ಮಾಡುವ ಮೂರನೇ ಹಂತದ ಅಡಿಯಲ್ಲಿ ಆಗಸ್ಟ್ ರಿಂದ ಜಿಮ್ನಾಷಿಯಂಗಳು ಮತ್ತು ಯೋಗ ಸಂಸ್ಥೆಗಳಿಗೆ ತೆರೆಯಲು ಕೇಂದ್ರ  ಸರ್ಕಾರ ಅನುಮತಿ ನೀಡಿದೆ.

ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್‌ಎ) 2020 ಆಗಸ್ಟ್ 03ರ ಸೋಮವಾರ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ, ಕೋವಿಡ್ -೧೯ ಕಂಟೈನ್ ಮೆಂಟ್ (ಧಾರಕ ವಲಯ) ಪ್ರದೇಶಗಳಲ್ಲಿನ ಯೋಗ ಸಂಸ್ಥೆಗಳು ಮತ್ತು ವ್ಯಾಯಾಮಶಾಲೆಗಳಿಗೆ ಮಾತ್ರ ತೆರೆಯಲು ಅನುಮತಿ ನೀಡಲಾಗುವುದಿಲ್ಲ.

೬೫ ವರ್ಷಕ್ಕಿಂತ ಮೇಲ್ಪಟ್ಟ ಹಿರಿಯರು, ಸಹ-ಅಸ್ವಸ್ಥತೆ ಹೊಂದಿರುವ ಜನರು, ಗರ್ಭಿಣಿಯರು ಮತ್ತು ೧೦ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮುಚ್ಚಿದ ಸ್ಥಳಗಳಲ್ಲಿ ಇರುವ ಜಿಮ್ನಾಷಿಯಂ ಅಥವಾ ಯೋಗ ಸಂಸ್ಥೆಗಳನ್ನು ಬಳಸದಂತೆ ನಿರ್ದೇಶನ ನೀಡಲಾಗಿದೆ.

ಯೋಗ ಕ್ರಿಯೆಗಳನ್ನು ತೆರೆದ ಸ್ಥಳಗಳಲ್ಲಿ ನಡೆಸಬೇಕು. ಫಿಟ್‌ನೆಸ್ ಕೇಂದ್ರಕ್ಕೆ ಪ್ರವೇಶಿಸುವಾಗ ಮತ್ತು ನಿರ್ಗಮಿಸುವಾಗ ಜನಸಂದಣಿಯನ್ನು ತಪ್ಪಿಸಲು ಬಳಕೆದಾರರಿಗೆ ತಂಡಗಳಲ್ಲಿ ಪ್ರವೇಶ ನೀಡಬೇಕು ಮತ್ತು ಅವರಿಗೆ ಸಮಯಗಳನ್ನು ನಿಗದಿ ಪಡಿಸಬೇಕು. ಪ್ರತಿ ಎರಡು ತಂಡಗಳ ನಡುವೆ ೧೫-೩೦ ನಿಮಿಷಗಳ ಅಂತರವನ್ನು ಹೊಂದಿರಬೇಕು. ಅವಧಿಯಲ್ಲಿ ಸ್ವಚ್ಛತೆ ಮತ್ತು ಸೋಂಕು ನಿವಾರಣೆ ಪ್ರಕ್ರಿಯೆ ನಡೆಸಬೇಕು ಎಂದು ಮಾರ್ಗಸೂಚಿಸಿ ತಿಳಿಸಿದೆ.

ಶೇಕಡಾ ೯೫ಕ್ಕಿಂತ ಕಡಿಮೆ ಮಟ್ಟದ ಆಮ್ಲಜನಕದ ಸ್ಯಾಚುರೇಷನ್ ಹೊಂದಿರುವವರಿಗೆ ವ್ಯಾಯಾಮ ಮಾಡಲು ಅನುಮತಿ ನೀಡಬಾರದು" ಎಂದು ಪ್ರಕಟಣೆ ತಿಳಿಸಿತು.

 "ವ್ಯಕ್ತಿಗಳು ಸಾಧ್ಯವಾದಷ್ಟು ಕನಿಷ್ಠ ಅಡಿಗಳಷ್ಟು ದೂರವನ್ನು ಕಾಯ್ದುಕೊಳ್ಳಬೇಕುಎಂದು ಮಾರ್ಗಸೂಚಿ ತಿಳಿಸಿದೆ. ಮುಖಗವಸು (ಮಾಸ್ಕ್)  ಮತ್ತು ಮುಖದ ಹೊದಿಕೆ ಧರಿಸುವುದು ಕಡ್ಡಾಯವಾಗಿದೆ, ಆದಾಗ್ಯೂ, ಅವು ವ್ಯಾಯಾಮದ ಸಮಯದಲ್ಲಿ ಉಸಿರಾಟದ ತೊಂದರೆ ಉಂಟುಮಾಡಬಹುದಾದ ಕಾರಣ, ಜನರು ಇದರ ನಿವಾರಣೆಗಾಗಿ ತಡೆಗಟ್ಟುವ ಮುಂಜಾಗರೂಕತಾ ಕ್ರಮವಾಗಿ ಮುಸುಕು (ವೀಸರ್) ಬಳಸಬಹುದು ಎಂದು ಸರ್ಕಾರ ಹೇಳಿದೆ.

ಆಗಾಗ್ಗೆ ಕೈ ತೊಳೆಯುವುದು ಮತ್ತು ಕೈ ಸ್ಯಾನಿಟೈಸರ್ಗಳನ್ನು ಬಳಸುವುದನ್ನು ಗೃಹ ವ್ಯವಹಾರಗಳ ಇಲಾಖೆ ಒತ್ತಿಹೇಳಿದೆ ಮತ್ತು "ಉಸಿರಾಟದ ಶಿಷ್ಟಾಚಾರಗಳಕಟ್ಟುನಿಟ್ಟಿನ ಅಭ್ಯಾಸವನ್ನು ಸಹ ಸೂಚಿಸಿದೆ.

"ಸೀನುವಾಗ / ಕೆಮ್ಮುವಾಗ ಬಾಯಿ ಮತ್ತು ಮೂಗನ್ನು ಟಿಶ್ಯೂ ಪೇಪರ್ ಅಥವಾ ಬಟ್ಟೆಯಿಂದ ಮುಚ್ಚಿ, ಬಳಿಕ ಟಿಶ್ಯೂಪೇಪರನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕುಎಂದು ಮಾರ್ಗಸೂಚಿ ತಿಳಿಸಿದೆ.

ವ್ಯಾಯಾಮಶಾಲೆಗಳು ಮತ್ತು ಯೋಗ ಸಂಸ್ಥೆಗಳ ಮಾಲೀಕರು ಮತ್ತು ವ್ಯವಸ್ಥಾಪಕರಿಗೆ ಫಿಟ್‌ನೆಸ್ ಚಟುವಟಿಕೆಗಳನ್ನು ಯೋಜಿಸಲು ನಿರ್ದೇಶಿಸಲಾಗಿದೆ. ಉಪಕರಣ ಮತ್ತು ಯಂತ್ರಗಳನ್ನು ಅಡಿ ದೂರದಲ್ಲಿ ಇಡಬೇಕು. ಯಾವುದಾದರೂ ಹೊರಾಂಗಣ ಸ್ಥಳಾವಕಾಶ ಇದ್ದರೆ ಅದರ ಬಳಕೆಯನ್ನು ಪ್ರೋತ್ಸಾಹಿಸಲಾಗಿದೆ. ನೆಲ ಅಥವಾ ಗೋಡೆಯ ಗುರುತುಗಳನ್ನು ಬಳಸಿಕೊಂಡು ಆವರಣಕ್ಕೆ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಿಗೆ ನಿರ್ದಿಷ್ಟ ಮಾರ್ಗಗಳನ್ನು ರಚಿಸಲು ಸಂಸ್ಥೆಗಳಿಗೆ ಸೂಚಿಸಲಾಗಿದೆ. ಆವರಣ, ಯಂತ್ರೋಪಕರಣಗಳನ್ನು ನಿಯಮಿತವಾಗಿ ಮತ್ತು ಸಕಾಲಿಕವಾಘಿ ಶುಚಿ ಹಾಗೂ ಸೋಂಕುಮುಕ್ತಗೊಳಿಸಬೇಕು ಎಂದು ಮಾರ್ಗಸೂಚಿ ಹೇಳಿದೆ.

ಕಾರ್ಡ್ ಆಧಾರಿತ, ಸಂಪರ್ಕವಿಲ್ಲದ ಪಾವತಿಯನ್ನು ಉತ್ತೇಜಿಸಿಎಂದು ತಿಳಿಸಿರುವ ಮಾರ್ಗಸೂಚಿ, ಸಾಮಾನ್ಯ ಜಿಮ್ ಮಹಡಿಯಲ್ಲಿ ಅಥವಾ ನಿರ್ದಿಷ್ಟ ತಾಲೀಮು ಪ್ರದೇಶಗಳಲ್ಲಿ ಸಿಬ್ಬಂದಿಯನ್ನು ಮಿತಿಗೊಳಿಸುವ ಅಗತ್ಯವನ್ನು ಪ್ರತಿಪಾದಿಸಿದೆ.

ಲಕ್ಷಣರಹಿತ ಜನರಿಗೆ ಮಾತ್ರ ಪ್ರವೇಶ ಅವಕಾಶ ನೀಡಬೇಕು. ಎಲ್ಲಾ ಬಳಕೆದಾರರ ಉಷ್ಣ ತಪಾಸಣೆಯನ್ನು ಕಡ್ಡಾಯವಾಗಿ ಕೈಗೊಳ್ಳಬೇಕು. ಎಲ್ಲಾ ಸಮಯದಲ್ಲೂ ಕನಿಷ್ಠ ಆರು ಅಡಿ ಅಂತರ ಇಟ್ಟುಕೊಳ್ಳಬೇಕು. ಜನಸಂದಣಿಯನ್ನು ತಪ್ಪಿಸಲು ಮತ್ತು ಸಾಮಾಜಿಕ ಅಂತರ ಖಚಿತಪಡಿಸಿಕೊಳ್ಳಲು ಪಾರ್ಕಿಂಗ್ ಸ್ಥಳಗಳು, ಕಾರಿಡಾರ್ ಮತ್ತು ಎಲಿವೇಟರ್‌ಗಳಲ್ಲಿ ತಂಡಗಳ ವ್ಯವಸ್ಥೆ ಮಾಡಬೇಕು. ಹೆಸರು, ವಿಳಾಸ ಮತ್ತು ಸಂಪರ್ಕ ಮಾಹಿತಿ ಸೇರಿದಂತೆ ಬಳಕೆದಾರರ ವಿವರಗಳೊಂದಿಗೆ ಚೆಕ್-ಇನ್ ಮತ್ತು ಚೆಕ್-ಔಟ್ ಸಮಯದ ವಿವರವಾದ ಖಾತೆಯನ್ನು ನಿರ್ವಹಿಸಲು ವ್ಯವಸ್ಥೆ ಮಾಡಬೇಕು ಎಂದೂ ಮಾರ್ಗಸೂಚಿ ತಿಳಿಸಿದೆ.

ಸ್ಪಾಗಳು, ಸೌನಾ, ಉಗಿ ಸ್ನಾನಗೃಹಗಳು ಮತ್ತು ಈಜುಕೊಳಗಳಿಗೆ ಇನ್ನೂ ತೆರೆಯಲು ಅವಕಾಶ ನೀಡಲಾಗಿಲ್ಲ.

No comments:

Advertisement