ಪಾಕ್ ‘ಡಾನ್
ಟಿವಿ’ಯಲ್ಲಿ
ರಾರಾಜಿಸಿದ
ತಿರಂಗಾ!
ಇಸ್ಲಾಮಾಬಾದ್: ಪಾಕಿಸ್ತಾನದ ಮುಂಚೂಣಿಯ ಸುದ್ದಿವಾಹಿನಿಯಾದ ’ಡಾನ್ ಟಿವಿ’ಯಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಾಡಿದ ಘಟನೆ 2020 ಆಗಸ್ಟ್ 02ರ ಭಾನುವಾರ ಘಟಿಸಿದೆ.
ಭಾರತದ
ವಿರುದ್ಧ ಸದಾ ಕಾಲ ಕತ್ತಿ ಮಸೆಯು ಪಾಕಿಸ್ತಾನದ ಪ್ರಮುಖ
ಟಿವಿವಾಹಿನಿಯಲ್ಲಿ ತ್ರಿವರ್ಣ
ಧ್ವಜ ಹಾರಾಡುವುದರ ಜೊತೆಗೆ ಸ್ವಾತಂತ್ರ್ಯ ದಿನದ ಶುಭಾಶಯಗಳು ಎಂಬ ವಾಕ್ಯ ಕೂಡಾ ಕಂಡು ಬಂದದ್ದು ಎಲ್ಲರ ಹುಬ್ಬೇರಿಸಿತು.
ಆದರೆ,
ಇದು ತಾಂತ್ರಿಕ ತಪ್ಪಿನಿಂದ ಆಗಿರುವುದಲ್ಲ, ಭಾರತೀಯ ಹ್ಯಾಕರುಗಳು ಪ್ರದರ್ಶಿಸಿದ ಕೈಚಳಕ ಎಂಬುದು ಬೆಳಕಿಗೆ ಬಂದಿದೆ.
ಭಾನುವಾರ
ಮಧ್ಯಾಹ್ನ ೩.೩೦ಕ್ಕೆ ಡಾನ್
ಸುದ್ದಿ ವಾಹಿನಿಯಲ್ಲಿ ಜಾಹೀರಾತು ಪ್ರಸಾರವಾಗುತ್ತಿದ್ದ ಸಂzರ್ಭದಲ್ಲಿ ಹಾರಾಡುವ
ಭಾರತದ ಧ್ವಜದೊಂದಿಗೆ
ಸ್ವಾತಂತ್ರ್ಯ ದಿನದ ಶುಭಾಶಯಗಳು ಎಂಬ ಸಂದೇಶ ಕಂಡುಬಂದಿತು. ಸುಮಾರು ೪೫ ಸೆಕೆಂಡ್ ಕಾಲ
ಡಾನ್ ಟಿವಿ ಪರದೆಯಲ್ಲಿ ಭಾರತದ ಧ್ವಜ ರಾರಾಜಿಸಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು.
ಘಟನೆಯ
ಬಳಿಕ ಹೇಳಿಕೆ ’ಹ್ಯಾಕರುಗಳಿಂದ ಟಿವಿ ವಾಹಿನಿ ಹ್ಯಾಕ್ ಆಗಿದೆ’ ಎಂದು ಡಾನ್ ತನ್ನ ವೆಬ್ ಸೈಟಿನಲ್ಲಿ ಹೇಳಿಕೆ ನೀಡಿತು.
ಘಟನೆ
ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಟ್ವಿಟ್ಟರ್ ಸಂದೇಶದಲ್ಲಿ ಡಾನ್ ತಿಳಿಸಿತು.ತನಿಖೆ ಪೂರ್ಣಗೊಂಡ ಬಳಿಕ ಪೂರ್ಣ ಮಾಹಿತಿಯನ್ನು ವೀಕ್ಷಕರಿಗೆ ನೀಡಲಾಗುವುದು ಎಂದೂ ಡಾನ್ ತಿಳಿಸಿತು.
ಪಾಕ್
ಟಿವಿ ವಾಹಿನಿಯಲ್ಲಿ ಭಾರತದ ತ್ರಿವರ್ಣ ಧ್ವಜ ರಾರಾಜಿಸುತ್ತಿದ್ದಂತೆಯೇ ಭಾರತೀಯರು ಸಾಮಾಜಿಕ ಜಾಲತಾಣದಲ್ಲಿ ಜೈ ಹಿಂದ್ ಮತ್ತಿತರ
ಘೋಷಣೆಗಳ ಜೊತೆಗೆ ಇದನ್ನು ಹಂಚಿಕೊಂಡು ಹ್ಯಾಕರುಗಳ ಸಾಹಸಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ವಿಡಿಯೋ ನೋಡಲು ಕೆಳಗೆ ಕ್ಲಿಕ್ ಮಾಡಿರಿ:
No comments:
Post a Comment