ಭಾರತೀಯ ಸಿಟಿಯಲ್ಲಿ ಲವ ಕುಶ ಕಾಳಗ
ಮುಗಿಲೆತ್ತರಕ್ಕೆ
ಚಾಚಿದ ಅಪಾರ್ಟ್‌ಮೆಂಟುಗಳು, ಬೃಹತ್ ಐಟಿ ಕಂಪೆನಿಗಳು. ಮಧ್ಯೆ ಮಧ್ಯೆ ಅಂಕುಡೊಂಕಿನ ಸಿಮೆಂಟ್ ರಸ್ತೆಗಳು.
ಅವುಗಳ ಬದಿಯಲ್ಲಿ ಹಸಿರಿಗಾಗಿ ನೆಟ್ಟ ಗಿಡಗಳು. ಎಲ್ಲಿ ನೋಡಿದರೂ ಬಹುತೇಕ ಹಿಂದಿ ಭಾಷೆಯಲ್ಲಿ ಇಲ್ಲವೇ
ಇಂಗ್ಲೀಷಿನಲ್ಲೇ ಮಾತನಾಡುವ ಮಂದಿ.
ಇದು
ಬೆಂಗಳೂರು ರಾಮಕೃಷ್ಣ ಹೆಗಡೆ ನಗರ ಸಮೀಪದ ಭಾರತೀಯ ಸಿಟಿ.
೨೦೨೬ ಮಾರ್ಚ್ ೨೭ರ ರಾಮನವಮಿಯ ದಿನ. ಇಲ್ಲಿ ರಾಮೋತ್ಸವ ಸಡಗರ. ಭಜನೆ, ನೃತ್ಯ, ಹಾಡುಗಳ ಸಂಭ್ರಮ. ಇವೆಲ್ಲದರ ಮಧ್ಯೆ ಅಲ್ಲಿದ್ದ ಎಲ್ಲರನ್ನೂ ಸೂಜಿಗಲ್ಲಿನಂತೆ ಗಮನ ಸೆಳೆದದ್ದು, ಚೆಂಡೆ- ಮದ್ದಳೆಯ ಸದ್ದು, ಯಕ್ಷಗಾನದ ನೃತ್ಯ, ಭಾಗವತರ ಕಂಚಿನ ಕಂಠದ ಹಾಡುಗಳು.
ರಾಮಕೃಷ್ಣ
ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ
ಸ್ವಾಮಿ ದೇವಸ್ಥಾನದ ಆವರಣದಲ್ಲಿ ಕಳೆದ ಕೆಲವು ದಿನಗಳಿಂದ ಅಭ್ಯಾಸ ನಡೆಸುತ್ತಿದ್ದ ಯಕ್ಷ ಕಲಾ ಕೌಸ್ತುಭ
ತಂಡದ ಮಕ್ಕಳು, ಅವರ ಅಮ್ಮಂದಿರು ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಕುಣಿದು ಸಂಭ್ರಮದೊಂದಿಗೆ ಈ ಯಕ್ಷಗಾನ
ಪ್ರದರ್ಶನ ನೀಡಿದವರು.
ಅವರು
ಪ್ರದರ್ಶಿಸಿದ್ದು ರಾಮಾಯಣದ ಉತ್ತರ ಕಾಂಡದಲ್ಲಿ ಬರುವ ʼಲವ ಕುಶ ಕಾಳಗʼದ
ಪ್ರಸಂಗ. ಈ ಪ್ರಸಂಗದ ವಿವರವನ್ನು ಸಂಘಟಕರ ಜೊತೆಗೆ ತಂಡದ ಸದಸ್ಯರೇ ಆದ ಶಿವಾಂಶ್ ಮತ್ತು ಉಮಾ ದೇವಿ
ಎನ್. ಅವರು ಹಿಂದಿ ಮತ್ತು ಇಂಗ್ಲಿಷಿನಲ್ಲಿ ವಿವರ ನೀಡಿದರು.
ʼಯಕ್ಷ ಕಲಾ ಕೌಸ್ತುಭʼದ ಯಕ್ಷಗುರು ಉಮೇಶ ರಾಜ್ ಮಂದಾರ್ತಿ ಅವರ ನಿರ್ದೇಶನದಲ್ಲಿ ಶ್ರೀರಾಮನಾಗಿ ಉಮಾದೇವಿ ಎನ್,
ಸೀತಾಮಾತೆಯಾಗಿ ಅರ್ಚನಾ ಬಂಗೇರ, ಲವಕುಮಾರನಾಗಿ ಆದ್ಯಾ ಶ್ರೀವಲ್ಲಿ, ಕುಶಕುಮಾರನಾಗಿ ಆದ್ಯ ಎಂ ಕಶ್ಯಪ್, ಶತ್ರುಘ್ನನಾಗಿ ಆದ್ಯ ಭಟ್ ಮತ್ತು ವಾಲ್ಮೀಕಿ ಮಹರ್ಷಿಯಾಗಿ ಪ್ರಣೀತಾ ರೈ ಮಿಂಚಿದರು.
ವೆಂಕಟೇಶ್ ಪ್ರಭು ಅವರು
ಮದ್ದಳೆ, ಸುಬ್ರಹ್ಮಣ್ಯ ಗಾಣಿಗ ಸಾಸ್ತಾನ ಚೆಂಡೆಯೊಂದಿಗೆ
ಉಮೇಶರಾಜ್ ಅವರಿಗೆ ಸಾಥ್ ನೀಡಿದರು. ಚೌಕಿಯಲ್ಲಿ ಹಲವು ತಾಸುಗಳ ಮೊದಲೇ ಬಣ್ಣ ಹಚ್ಚಿಕೊಂಡು, ವೇಷಭೂಷಣ
ಧರಿಸಿ ಸಿದ್ದರಾಗುವಲ್ಲಿ ಪ್ರಸನ್ನ ಮಯ್ಯ ಮತ್ತು ಉಮೇಶ ಮಂದಾರ್ತಿ ಸಹಕರಿಸಿದರು.
ಉಮೇಶ
ರಾಜ್ ಮಂದಾರ್ತಿ ಅವರು ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ
ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಪ್ರತಿ ಭಾನುವಾರ ಮಕ್ಕಳಿಗೆ
ಯಕ್ಷಗಾನ ಹೇಳಿಕೊಡುತ್ತಿದ್ದಾರೆ.
ರಂಗಸ್ಥಳದ ಸಮೀಪ ʼಚೌಕಿʼಯಲ್ಲಿ ಮಕ್ಕಳು ವೇಷಭೂಷಣ ತೊಟ್ಟುಕೊಳ್ಳುತ್ತಿದ್ದ ಸಡಗರದ ಚಿತ್ರಗಳು, ಚೌಕಿ ಪೂಜೆಯ ವಿಡಿಯೋ ಸೇರಿದಂತೆ ʼಲವ ಕುಶ ಕಾಳಗʼದ ಎರಡು ಭಾಗಗಳು ಇಲ್ಲಿವೆ.
ಮೇಲಿನ ಮತ್ತು ಕೆಳಗಿನ ಚಿತ್ರಗಳನ್ನು ಕ್ಲಿಕ್ ಮಾಡುವ ಮೂಲಕ ಈ ಯಕ್ಷಗಾನ ಪ್ರಸಂಗವನ್ನು ಪೂರ್ತಿಯಾಗಿ ಇಲ್ಲಿ ವೀಕ್ಷಿಸಿ.




No comments:
Post a Comment