ರಾಜ್ಯೋತ್ಸವ ಕಳೆಗಟ್ಟಿಸಿದ ಚಿಣ್ಣರ ʼಅಭಿಮನ್ಯು ಕಾಳಗʼ
ಬೆಂಗಳೂರಿನಲ್ಲಿ
ರಾಜ್ಯೋತ್ಸವ ಅಂದರೆ ನೆನಪಾಗುವುದು ಭಾಷಣ, ನಾಟಕ,ಸಂಗೀತ,
ನೃತ್ಯ.
ಆದರೆ,
ರಾಮಕೃಷ್ಣ ಹೆಗಡೆ ನಗರ, ಜಕ್ಕೂರಿಗೆ ಸಮೀಪದ ಅಮೃತಹಳ್ಳಿಯ ತಲಕಾವೇರಿ ಬಡಾವಣೆಯಲ್ಲಿ ಈ ಬಾರಿಯ ರಾಜ್ಯೋತ್ಸವ
ವಿಶೇಷವಾಗಿತ್ತು. ಈ ಬಡಾವಣೆಯ ಪುಟ್ಟ ಮಕ್ಕಳು ಬಣ್ಣ ಬಣ್ಣದ ವೇಷ ತೊಟ್ಟು, ಕಾಲಿಗೆ ಗೆಜ್ಜೆ ಕಟ್ಟಿಕೊಂಡು
ಪೌರಾಣಿಕ ಪ್ರಸಂಗದ ಪಾತ್ರಧಾರಿಗಳಾಗಿ ಯಕ್ಷ ರಂಗಭೂಮಿಯಲ್ಲಿ ಮಿಂಚಿದರು.
ಕೇವಲ
೧೦ರಿಂದ ೧೫ದಿನಗಳ ಅವಧಿಯ ತರಬೇತಿಯಲ್ಲಿ ಯಕ್ಷಗಾನದ ಭಾಗವತಿಕೆಗೆ ಹೆಜ್ಜೆ ಹಾಕಿ ಅದ್ಭುತ ಪ್ರದರ್ಶನ
ನೀಡಿದರು. ʼಅಭಿಮನ್ಯು ಕಾಳಗʼವನ್ನು ಪ್ರದರ್ಶಿಸಿ ಪ್ರೇಕ್ಷಕರನ್ನು ಹುಚ್ಚೆಬ್ಬಿಸಿದರು.
ʼಯಕ್ಷ ಕಲಾ ಕೌಸ್ತುಭʼದ ಯಕ್ಷಗುರು ಉಮೇಶ ರಾಜ್ ಮಂದಾರ್ತಿ ಅವರ ನಿರ್ದೇಶನ ಮತ್ತು ಅವರ ತಂಡದ ಸದಸ್ಯರ ಸಹಕಾರದೊಂದಿಗೆ
ತಲಕಾವೇರಿ ಬಡಾವಣೆಯ ʼಅಭಿಮನ್ಯು
ಕಾಳಗʼ ಯಕ್ಷಗಾನ ಎಲ್ಲರ ಮನ ಸೆಳೆಯಿತು. ವಿವರಗಳಿಗೆ: ಇಲ್ಲಿ ಕ್ಲಿಕ್ ಮಾಡಿರಿ,
$$$$
ಯಕ್ಷಗಾನ ಅಂದರೇನು?
ಯಕ್ಷಗಾನವು ನವರಸ ಭರಿತವಾದ ಒಂದು ಸಂಪೂರ್ಣ ಕಲೆ. ಈ ಕಲೆಯನ್ನು ಮುಂದಿನ ಜನಾಂಗಕ್ಕೆ ತಲುಪಿಸಬೇಕು ಎಂಬ ನಿಟ್ಟಿನಲ್ಲಿ ಹಲವಾರು ಕಡೆಗಳಲ್ಲಿ ಯತ್ನಗಳು ನಡೆಯುತ್ತಿವೆ. ತರಗತಿಗಳೂ ನಡೆಯುತ್ತಿವೆ.
ಯಕ್ಷ ಕಲಾ ಕೌಸ್ತುಭದ ಯಕ್ಷಗುರು ಉಮೇಶ ರಾಜ್ ಮಂದಾರ್ತಿ (ಫೋನ್ 9663671591) ಅವರು ತರಗತಿಗಳನ್ನು ನಡೆಸುತ್ತಿದ್ದಾರೆ. ವಿವರಗಳಿಗೆ ಮೇಲಿನ ಚಿತ್ರ ಕ್ಲಿಕ್ ಮಾಡಿರಿ. ವಿಡಿಯೋ ನೋಡಲು ಯೂ ಟ್ಯೂಬ್ ಲಿಂಕ್ ಕ್ಲಿಕ್ ಮಾಡಿರಿ: https://youtu.be/1EhpNPAlZA8
$$$$
ಹೆಸರಾಂತ ಯಕ್ಷಗಾನ ಅರ್ಥಧಾರಿ ವಿಟ್ಲ ಶಂಭು ಶರ್ಮ ಅಸ್ತಂಗತ
ಹೆಸರಾಂತ ಯಕ್ಷಗಾನ ಅರ್ಥಧಾರಿ ವಿಟ್ಲ
ಶಂಭು ಶರ್ಮ ಅವರು ಇನ್ನಿಲ್ಲ. ೨೦೨೫ರ ನವೆಂಬರ್ ೧ರ ಶನಿವಾರ ಅವರು ಸ್ವರ್ಗಸ್ಥರಾದರು.
ಶಂಭು ಶರ್ಮರ ಬಗ್ಗೆ ಯಕ್ಷದೀಪ.ಕಾಮ್ ಐದು ವರ್ಷಗಳ ಹಿಂದೆ ಇದೇ ದಿನ ಪ್ರಕಟಿಸಿದ್ದ ಬರಹ ಇಲ್ಲಿದೆ. ಶಂಭುಶರ್ಮದ ಸಂಪೂರ್ಣ ಚಿತ್ರವನ್ನು ಇದು ನೀಡುತ್ತದೆ. ಇದರ ಜೊತೆಗೆ ಶಂಭು ಶರ್ಮರು ಉತ್ತರಕುಮಾರನಾಗಿ ಮಾಡಿದ್ದ ಅರ್ಥಗಾರಿಕೆಯ ತುಣುಕೊಂದು ಇಲ್ಲಿದೆ. ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ.
$$$$
ಈ ಕುರಿತು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಬಂದಿರುವ ವರದಿ ಇಲ್ಲಿದೆ.
ಸಮೀಪ ನೋಟಕ್ಕೆ ಎಡಬದಿಯ ಚಿತ್ರ ಕ್ಲಿಕ್ ಮಾಡಿ.
ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ ಮಾಡಿ
ಇದರ ಜೊತೆಗೆ ಯಕ್ಷಗಾನದ ಮಹತ್ವ ಕುರಿತ ಇನ್ನೊಂದು ವರದಿಯೂ ಇಲ್ಲಿದೆ. ಸಮೀಪ ನೋಟಕ್ಕೆ ಕೆಳಗಿನ ಚಿತ್ರವನ್ನು ಕ್ಲಿಕ್ ಮಾಡಿ.
$$$$
ಯಕ್ಷಗಾನ ಕಲಿಯಲು ಇಲ್ಲಿಗೆ ಬನ್ನಿ
ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ
ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ 2025 ನವೆಂಬರ್ 26ರ ಭಾನುವಾರ
ಯಕ್ಷ ಕಲಾ ಕೌಸ್ತುಭ ವತಿಯಿಂದ ಯಕ್ಷಗಾನ ತರಬೇತಿ ತರಗತಿಗಳು ಆರಂಭವಾಗಲಿವೆ.
ತರಗತಿಗಳು ನವೆಂಬರ್ 26ರಿಂದ ಪ್ರತೀ ಭಾನುವಾರ ಬೆಳಗ್ಗೆ 10ರಿಂದ 12
ಗಂಟೆಯವರೆಗೆ ನಡೆಯಲಿವೆ. ವಿವರಗಳಿಗೆ ಮೇಲಿನ ಚಿತ್ರ ಕ್ಲಿಕ್ ಮಾಡಿ.
ಯಕ್ಷಗಾನ / ತಾಳಮದ್ದಳೆ
ಒಂದು ವಿನೂತನ ಪ್ರಯೋಗ
ಇತ್ತೀಚೆಗೆ ಉಡುಪಿ ಜಿಲ್ಲೆಯ ಅಜೆಕಾರು ಸಮೀಪದ ಅಂಡಾರಿನಲ್ಲಿ ಪೂಕಳ
ಗೋಪಾಲ ಕೃಷ್ಣ ಭಟ್- ಲೀಲಾವತಿ ದಂಪತಿ ತಾವು ನಿರ್ಮಿಸಿದ ʼಸಮುದ್ಯತಾʼ ಮನೆಯ ಗೃಹ
ಪ್ರವೇಶವನ್ನು ಪುತ್ರ ಅಮೃತ ಕಿರಣ ಭಟ್, ಸೊಸೆ ಅನುಷಾ ಭಟ್ ನೆತ್ರಕೆರೆ, ಪುತ್ರಿ ಚೈತ್ರಿಕಾ ಮತ್ತು
ಬಂಧು ಬಾಂಧವರೊಡಗೂಡಿ ವಿಧಿಯುಕ್ತವಾಗಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಅಲ್ಲಿಗೆ ಅತಿಥಿಗಳಾಗಿ ಬಂದಿದ್ದ
ಕೆಲವು ಯಕ್ಷಗಾನ ಪ್ರಿಯರಿಗೆ ತಾಳಮದ್ದಳೆಯೊಂದನ್ನು ಆಯೋಜಿಸಿದರೆ ಹೇಗೆ ಎಂಬ ಯೋಚನೆ ಬಂತು. ಪೂರ್ಲುಪಾಡಿ
ಈಶ್ವರ್ ಭಟ್ ಅವರು ಈ ಬಗ್ಗೆ ಪೂಕಳ ಶ್ರೀಕೃಷ್ಣ ಭಟ್ ಅವರ ಜೊತೆಗೆ ಮಾತನಾಡಿದರು.
ಯಕ್ಷಗಾನ ಎಂದರೆ ಕುಣಿದಾಡುವ ಶ್ರೀಕೃಷ್ಣ ಭಟ್ ಸೈ ಎಂದರು. ಮೊದಲೇ
ಗೊತ್ತಾಗಿದ್ದರೆ ಇನ್ನೊಂದು ಆಸಕ್ತರನ್ನು ಕರೆಸಬಹುದಿತ್ತು ಎಂದರು. ಇತ್ತೀಚೆಗೆ ಭಾಗವತಿಕೆಯನ್ನು ಕಲಿತುಕೊಂಡಿದ್ದ ಶ್ಯಾಮ ಸುಂದರ ನೆತ್ರಕೆರೆ
ಮೊದಲೇ ಹೇಳಿದ್ದರೆ ಭಾಗವತಿಕೆಗೆ ಅಗತ್ಯ ಸಿದ್ಧತೆಗಳೊಂದಿಗೆ ಬರುತ್ತಿದ್ದೆ ಎಂದರು. ಅಷ್ಟರಲ್ಲಾಗಲೇ
ಈಶ್ವರ ಭಟ್ ಅವರು ತಮ್ಮ ಮಿತ್ರ ಮೋನಪ್ಪ ಸೇರಾಜೆ ಅವರನ್ನು ಸಂಪರ್ಕಿಸಿ ಚರ್ಚಿಸಿದ್ದರು.
ಮೋನಪ್ಪ ಅವರು ಮನೆಯಲ್ಲೇ ಕುಳಿತು ಭಾಗತಿಕೆಯ ಕೆಲವು ಪದಗಳನ್ನು ಹಾಡಿ
ಮೊಬೈಲಿನಲ್ಲೇ ದಾಖಲಿಸಿ ಕಳುಹಿಸಿದರು. ಆಧುನಿಕ ತಂತ್ರಜ್ಞಾನ ಸಾಧನವಾದ ಮೊಬೈಲನ್ನೇ ಬಳಸಿಕೊಂಡು ಯಕ್ಷಗಾನ ತಾಳಮದ್ದಳೆ ಮಾಡೋಣ ಎಂಬ ತೀರ್ಮಾನವಾಯಿತು.
ಕಡೆಗೂ ಸುಮಾರು ೩೦-೪೦ ನಿಮಿಷಗಳ ತಾಳಮದ್ದಳೆ ನಡೆಸಲು ಅವರೆಲ್ಲ ಸಜ್ಜಾದರು.
ಶ್ಯಾಮ ಸುಂದರ ನೆತ್ರಕೆರೆ ಭಾಗವತಿಕೆಯ ನೇತೃತ್ವ ವಹಿಸಿ ಸ್ವತಃ ಹಾಡುವುದರ ಜೊತೆಗೆ, ಮೊಬೈಲ್ ಮೂಲಕ ದಾಖಲಿಸಲಾದ ಹಾಡುಗಳನ್ನು ಧ್ವನಿವರ್ಧಕದ ಮುಂದೆ ಹಿಡಿದು ಮೋನಪ್ಪ ಸೇರಾಜೆ ಭಾಗವತಿಕೆ ಹಾಡುಗಳನ್ನು ಸಭೆಗೆ ಕೇಳಿಸಿದರು.
ಈಶ್ವರ ಭಟ್ ಪೂರ್ಲುಪಾಡಿ, ಶ್ರೀಕೃಷ್ಣ ಭಟ್ ಪೂಕಳ, ನೆತ್ರಕೆರೆ ಉದಯಶಂಕರ
ನಾರಾಯಣ ಭಟ್ ಅರ್ಥಗಾರಿಕೆಯನ್ನು ಮಾಡಿದರು. ತಾಳ ಮದ್ದಳೆಯನ್ನು ಅಮೃತ ಕಿರಣ ಭಟ್ ಪೂಕಳ ಮತ್ತು ಅನುಷಾ
ಭಟ್ ನೆತ್ರಕೆರೆ ಸಿನೀಮೀಯವಾಗಿ ಸೆರೆ ಹಿಡಿದರು.
ಆಧುನಿಕ ತಂತ್ರಜ್ಞಾನ ಬಳಸಿಕೊಂಡು ನಡೆಸಿದ ಈ ಯಕ್ಷಗಾನ ತಾಳಮದ್ದಳೆ
ಕಂತು ಕಂತುಗಳಾಗಿ ಈ ಪುಟದಲ್ಲಿ ಮೂಡಿ ಬರಲಿವೆ. ಚಿತ್ರಗಳನ್ನು ಕ್ಲಿಕ್ ಮಾಡುವ ಮೂಲಕ ಅಥವಾ ಯು ಟ್ಯೂಬ್
ವಿಡಿಯೋ ಲಿಂಕ್ ಕ್ಲಿಕ್ ಮಾಡುವ ಮೂಲಕ ಅವುಗಳನ್ನು ಇಲ್ಲಿ ನೋಡಬಹುದು- ಆಲಿಸಬಹುದು.
ಶ್ರೀರಾಮ ದರ್ಶನ- ತಾಳಮದ್ದಳೆ ಭಾಗ-೧
ಶೇಷ ಶಯನನಾಗಿ ಪವಡಿಸಿದ್ದ ವಿಷ್ಣು ಪರಮಾತ್ಮನಿಗೆ ದಿಢೀರನೇ ಎಚ್ಚರವಾಯಿತು.
ಭಕ್ತ ಪರಾಧೀನನಾದ ಆತನಿಗೆ ಎಲ್ಲಿಂದಲೋ ಆಕ್ರಂದನದ ಸದ್ದು ಕೇಳಿದಂತಾಯಿತು. ಜ್ಞಾನಚಕ್ಷುವನ್ನು ತೆರೆದು
ನೋಡುತ್ತಾನೆ. ತನ್ನ ಪರಮ ಭಕ್ತನಾದ ಪಾಂಡು ಪುತ್ರ ಪಾರ್ಥ ತನ್ನನ್ನೇ ಸ್ಮರಿಸುತ್ತಾ ಗೋಳಾಡುತ್ತಿದ್ದಾನೆ.
ಏನಾಯಿತು ಪಾರ್ಥನಿಗೆ?
&&&&&&&
ಶ್ರೀರಾಮ ದರ್ಶನ- ತಾಳಮದ್ದಳೆ ಭಾಗ-೨
ವೃದ್ಧ ಬ್ರಾಹ್ಮಣ ಸಮುದ್ರ ತಟಕ್ಕೆ ಬಂದಿದ್ದಾನೆ. ಸದೃಢಕಾಯನಾದ ವ್ಯಕ್ತಿ
ಅಗ್ನಿಕುಂಡವನ್ನು ಸಿದ್ಧ ಪಡಿಸಿಕೊಂಡು ಅದಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಸಿದ್ಧನಾಗಿದ್ದಾನೆ.
ಅನತಿ ದೂರದಲ್ಲಿ ಕೋತಿಯೊಂದು ಮರದ ಕೆಳಗೆ ಪವಡಿಸಿದೆ.
ವೃದ್ಧ ಬ್ರಾಹ್ಮಣ ದೃಢಕಾಯನಾದ ವ್ಯಕ್ತಿಯನ್ನು ಮಾತನಾಡಿಸುತ್ತಾನೆ.
ಅವರು ಮಾತನಾಡಿದ್ದು ಏನು?
ಎರಡನೇ ಭಾಗ ವೀಕ್ಷಿಸಲು ಮೇಲಿನ ಚಿತ್ರ ಕ್ಲಿಕ್ ಮಾಡಿ ಅಥವಾ ಈ ಯೂ ಟ್ಯೂಬ್ ವಿಡಿಯೋ ಲಿಂಕ್ ಕ್ಲಿಕ್ ಮಾಡಿರಿ:
&&&&&&&
ಶ್ರೀರಾಮ ದರ್ಶನ- ತಾಳಮದ್ದಳೆ ಭಾಗ-೩
ವೃದ್ಧ ಬ್ರಾಹ್ಮಣನ ಜೊತೆ ಮಾತನಾಡಿದ ಸದೃಢಕಾಯದ ವ್ಯಕ್ತಿ ತಾನು ಪಾಂಡು
ರಾಜನ ಪುತ್ರ ಮಧ್ಯಮ ಪಾಂಡವ ಪಾರ್ಥ ಎಂಬುದಾಗಿ ಹೇಳುತ್ತಾನೆ. ಹಳೆಯ ಸೇತುವೆ ಇದ್ದ ಈ ಸಮುದ್ರ ತೀರಕ್ಕೆ
ಬಂದಾಗ ಮುದಿ ಕೋತಿಯೊಂದಿಗೆ ನಡೆದ ಮಾತುಕತೆ ವಾಗ್ವಾದಕ್ಕೆ ತಿರುಗಿ, ಪಂಥಾಹ್ವಾನ ಮಾಡಿಕೊಂಡು ತಾನು
ಅಗ್ನಿಕುಂಡಕ್ಕೆ ಹಾರಬೇಕಾದ ಸ್ಥಿತಿ ಹೇಗೆ ಬಂದೊದಗಿತು ಎಂದು ವಿವರಿಸುತ್ತಾನೆ. ಹಾಗಾದರೆ ಮುದಿ ಕೋತಿ
ಜೊತೆಗಿನ ಮಾತುಕತೆಯಾದರೂ ಏನು?
ಮೂರನೇ ಭಾಗ ವೀಕ್ಷಿಸಲು ಮೇಲಿನ ಚಿತ್ರ ಕ್ಲಿಕ್ ಮಾಡಿ ಅಥವಾ ಈ ಯೂ ಟ್ಯೂಬ್ ವಿಡಿಯೋ ಲಿಂಕ್ ಕ್ಲಿಕ್ ಮಾಡಿರಿ:
&&&&&&&
ಶ್ರೀರಾಮ ದರ್ಶನ- ತಾಳಮದ್ದಳೆ ಭಾಗ-4
ತಮ್ಮಿಬ್ಬರ ನಡುವಣ ಪಂಥಾಹ್ವಾನದಲ್ಲಿ ತಾನು ಸೋತು ಈಗ ಈ ಅಗ್ನಿಕುಂಡಕ್ಕೆ
ಹಾರುವ ಸ್ಥಿತಿ ಬಂದೊದಗಿದೆ ಎಂಬುದಾಗಿ ಪಾರ್ಥ ಹೇಳುತ್ತಿದ್ದಂತೆಯೇ ʼಇದೊಳ್ಳೆ
ಕಥೆಯಾಯಿತಲ್ಲ. ನೀನು ಬಾಣದ ಸೇತುವೆ ನಿರ್ಮಿಸುವುದಂತೆ ಅದನ್ನು ಆ ಕೋತಿ ಮುರಿಯುವುದಂತೆ. ಇದರ ಚಂದವನ್ನು
ನೋಡಬೇಕಪ್ಪ. ಯಾರಿದ್ದಾರಯ್ಯ ಇದನ್ನು ನೋಡಿದವರು? ಎಂಬ ಮರುಪ್ರಶ್ನೆ ಎಸೆಯುತ್ತಾನೆ ವೃದ್ಧ. ಮುಂದೇನಾಯಿತು?
ನಾಲ್ಕನೇ ಭಾಗ ವೀಕ್ಷಿಸಲು ಮೇಲಿನ ಚಿತ್ರ ಕ್ಲಿಕ್ ಮಾಡಿ ಅಥವಾ ಈ ಯೂ ಟ್ಯೂಬ್ ವಿಡಿಯೋ ಲಿಂಕ್ ಕ್ಲಿಕ್ ಮಾಡಿರಿ:
&&&&&&&
ಶ್ರೀರಾಮ ದರ್ಶನ- ತಾಳಮದ್ದಳೆ ಭಾಗ-5
ಪಾರ್ಥನು ಸೇತುವೆಯನ್ನು ಮತ್ತೊಮ್ಮೆ ನಿರ್ಮಿಸಿದ್ದೇ ಆದರೆ, ಅದನ್ನು
ಮತ್ತೆ ಮುರಿಯುವುದಕ್ಕೆ ತಾನೂ ಸಿದ್ಧ ಎಂಬುದಾಗಿ ಹನುಮಂತ ವೃದ್ಧನಿಗೆ ಹೇಳುತ್ತಾನೆ. ಅರ್ಜುನ ಮತ್ತೊಮ್ಮೆ
ಬಾಣ ಪ್ರಯೋಗಿಸಿ ಸೇತುವೆ ನಿರ್ಮಿಸುತ್ತಾನೆ. ಆಗ ವೃದ್ಧ ಈ ಸೇತುವೆ ಎಷ್ಟು ಗಟ್ಟಿ ಇದೆ ಎಂದು ಒಮ್ಮೆ
ಪರೀಕ್ಷಿಸಿ ಬರುತ್ತೇನೆ ಹೇಳಿ ತೆರಳುತ್ತಾನೆ.
ಸ್ವಲ್ಪ ಹೊತ್ತು ವೃದ್ಧನ ಬರುವಿಕೆಗಾಗಿ ಕಾದ ಹನುಮಂತ ಮುಂದೇನು ಮಾಡುತ್ತಾನೆ?
ಐದನೇ ಭಾಗ ವೀಕ್ಷಿಸಲು ಮೇಲಿನ ಚಿತ್ರ ಕ್ಲಿಕ್ ಮಾಡಿ ಅಥವಾ ಈ ಯೂ ಟ್ಯೂಬ್ ವಿಡಿಯೋ ಲಿಂಕ್ ಕ್ಲಿಕ್ ಮಾಡಿರಿ:
&&&&&&&
ಶ್ರೀರಾಮ ದರ್ಶನ- ತಾಳಮದ್ದಳೆ ಭಾಗ-6
ಪಾರ್ಥನು ಮತ್ತೊಮ್ಮೆ ನಿರ್ಮಿಸಿದ ಬಾಣಗಳ ಸೇತುವೆಯನ್ನು ಮುರಿದೇ ಬಿಡುತ್ತೇನೆ
ಎಂಬ ಅತ್ಯುತ್ಸಾಹದೊಂದಿಗೆ ನೆಗೆದ ಹನುಮಂತ ತನ್ನ ಯತ್ನದಲ್ಲಿ ಸೋತು ಬಿಡುತ್ತಾನೆ. ಪರಮ ರಾಮಭಕ್ತನಿಗೆ ಎಂತಹ ಸೋಲಾಯಿತು ಎಂದು ಮರುಗುತ್ತಾನೆ. ತನ್ನ ರಾಮಭಕ್ತಿಗೆ ಚ್ಯುತಿ ಬಂತಲ್ಲ ಎಂದು ಪರಿ ಪರಿಯಾಗಿ ಪ್ರಲಾಪಿಸುತ್ತಾನೆ.
ಇದನ್ನೆಲ್ಲ ನೋಡುತ್ತಲೇ ಇದ್ದ ವೃದ್ಧ ತನ್ನಷ್ಟಕ್ಕೇ ಒಂದು ತೀರ್ಮಾನಕ್ಕೆ ಬರುತ್ತಾನೆ. ಆಗ, ಹನುಮ,
ಪಾರ್ಥನ ಎದುರು ಅದ್ಭುತ ಘಟನೆಯೊಂದು ನಡೆಯುತ್ತದೆ. ಏನದು ಆ ಅದ್ಭುತ ಘಟನೆ?
ಐದನೇ ಭಾಗ ವೀಕ್ಷಿಸಲು ಮೇಲಿನ ಚಿತ್ರ ಕ್ಲಿಕ್ ಮಾಡಿ ಅಥವಾ ಈ ಯೂ ಟ್ಯೂಬ್ ವಿಡಿಯೋ ಲಿಂಕ್ ಕ್ಲಿಕ್ ಮಾಡಿರಿ:















No comments:
Post a Comment