Showing posts with label ಆಪರೇಷನ್‌ ಸಿಂಧೂರ. Show all posts
Showing posts with label ಆಪರೇಷನ್‌ ಸಿಂಧೂರ. Show all posts

Thursday, May 29, 2025

ಬ್ರಹ್ಮೋಸ್‌ ದಾಳಿ: ಕಡೆಗೂ ಒಪ್ಪಿಕೊಂಡ ಪಾಕ್‌ ಪ್ರಧಾನಿ

 ಬ್ರಹ್ಮೋಸ್‌ ದಾಳಿ: ಕಡೆಗೂ ಒಪ್ಪಿಕೊಂಡ ಪಾಕ್‌ ಪ್ರಧಾನಿ

ವದೆಹಲಿ: ಭಾರತವು ಪಾಕಿಸ್ತಾನದ ಮೇಲೆ ಬ್ರಹೋಸ್‌ ಕ್ಷಿಪಣಿ ದಾಳಿ ನಡೆಸಿದ್ದು ನಿಜ ಎಂಬುದಾಗಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌ ಕಡೆಗೂ ಒಪ್ಪಿಕೊಂಡಿದ್ದಾರೆ.
ಅಜೆರ್ಬೈಜಾನ್‌ನಲ್ಲಿ 2025 ಮೇ 26ರಂದು ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಷರೀಫ್, ಭಾರತದ ಬ್ರಹ್ಮೋಸ್‌ ಕ್ಷಿಪಣಿ ದಾಳಿಯನ್ನು ಒಪ್ಪಿಕೊಂಡರು.
ʼಪಾಕಿಸ್ತಾನದ ಸಶಸ್ತ್ರ ಪಡೆಗಳು ಬೆಳಗಿನ ಪ್ರಾರ್ಥನೆಗೆ ಮುನ್ನ ಭಾರತದ ಮೇಲೆ ದಾಳಿ ಮಾಡಲು ಯೋಜಿಸಿದ್ದವು, ಆದರೆ ಅದು ಸಾಧ್ಯವಾಗುವ ಮೊದಲೇ ಪಾಕಿಸ್ತಾನದ ಹಲವಾರು ಪ್ರಾಂತ್ಯಗಳ ಮೇಲೆ ಬ್ರಹ್ಮೋಸ್ ಕ್ಷಿಪಣಿಗಳ ದಾಳಿ ನಡೆದವುʼ ಎಂದು ಶೆಹಬಾಜ್‌ ಹೇಳಿದರು.
"ಮೇ 9-10ರ ರಾತ್ರಿ, ನಾವು ಭಾರತದ ಆಕ್ರಮಣಕ್ಕೆ ವ್ಯವಸ್ಥಿತವಾಗಿ ಪ್ರತಿಕ್ರಿಯಿಸಲು ನಿರ್ಧರಿಸಿದ್ದೆವು. ಫಜ್ರ್ ಪ್ರಾರ್ಥನೆಯ ನಂತರ ಬೆಳಿಗ್ಗೆ 4.30ಕ್ಕೆ ನಮ್ಮ ಸಶಸ್ತ್ರ ಪಡೆಗಳು ಪಾಠ ಕಲಿಸಲು ಸಿದ್ಧವಾಗಿದ್ದವು. ಆದರೆ ಆ ಗಂಟೆ ಬರುವ ಮೊದಲೇ, ಭಾರತ ಮತ್ತೊಮ್ಮೆ ಬ್ರಹ್ಮೋಸ್ ಬಳಸಿ ಕ್ಷಿಪಣಿ ದಾಳಿ ನಡೆಸಿ, ರಾವಲ್ಪಿಂಡಿಯ ವಿಮಾನ ನಿಲ್ದಾಣ ಸೇರಿದಂತೆ ಪಾಕಿಸ್ತಾನದ ವಿವಿಧ ಪ್ರಾಂತ್ಯಗಳನ್ನು ಗುರಿಯಾಗಿಸಿಕೊಂಡಿತು" ಎಂದು ಷರೀಫ್ ತಮ್ಮ ಭಾಷಣದಲ್ಲಿ ಹೇಳಿದರು.

ಏಪ್ರಿಲ್ 22 ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರು ಅಸು ನೀಗಿದ ಬಳಿಕ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗಿತ್ತು.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ಮೇ 7 ರಂದು ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ಪ್ರಾರಂಭಿಸಿತು, ಪಾಕಿಸ್ತಾನ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿ ಒಂಬತ್ತು ಸ್ಥಳಗಳಲ್ಲಿ ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಮೂಲಕ 100ಕ್ಕೂ ಹೆಚ್ಚು ಭಯೋತ್ಪಾದಕರನ್ನು ಯಮಲೋಕಕ್ಕೆ ಅಟ್ಟಿತ್ತು.
 ಈ ಕಾರ್ಯಾಚರಣೆಯಲ್ಲಿ ಭಾರತದ ವಿರುದ್ಧ ಭಯೋತ್ಪಾದಕ ದಾಳಿಗಳನ್ನು ಯೋಜಿಸುತ್ತಿದ್ದ ಮತ್ತು ನಿರ್ದೇಶಿಸುತ್ತಿದ್ದ ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳನ್ನು ನಾಶಪಡಿಸಲಾಯಿತು.
ಇದು ನಾಲ್ಕು ದಿನಗಳ ಘರ್ಷಣೆಗೆ ಕಾರಣವಾಯಿತು, ಉಭಯ ಕಡೆಗಳೂ ಡ್ರೋನ್‌ಗಳು, ಕ್ಷಿಪಣಿಗಳು ಮತ್ತು ದೀರ್ಘ-ಶ್ರೇಣಿಯ ಶಸ್ತ್ರಾಸ್ತ್ರಗಳನ್ನು ಬಳಸಿದವು. ಇದರಿಂದ ಸಂಪೂರ್ಣ ಯುದ್ಧದ ವಾತಾವರಣ ಸೃಷ್ಟಿಯಾಗಿತ್ತು.
ಮೇ 10 ರಂದು, ಭಾರತದ ಸೇನೆಯು ಅದೇ ದಿನದ ನಸುಕಿನಲ್ಲಿ ಹಲವಾರು ಮಿಲಿಟರಿ ಸೌಲಭ್ಯಗಳ ಮೇಲೆ ಪಾಕಿಸ್ತಾನ ನಡೆಸಿದ ವಿಫಲ ದಾಳಿಗೆ ಪ್ರತೀಕಾರವಾಗಿ ಮುರಿಯದ್ ಮತ್ತು ನೂರ್ ಖಾನ್ ವಾಯುನೆಲೆಗಳು ಸೇರಿದಂತೆ ಎಂಟು ಪಾಕಿಸ್ತಾನಿ ವಾಯುನೆಲೆಗಳ ಮೇಲೆ ದಾಳಿ ನಡೆಸಿತು.
ಭಾರತೀಯ ವಾಯುಪಡೆಯ ದಾಳಿಯ ಗುರಿಗಳಲ್ಲಿ ರನ್‌ವೇಗಳು, ಹ್ಯಾಂಗರ್‌ಗಳು, ಕಮಾಂಡ್ ಮತ್ತು ನಿಯಂತ್ರಣ ಕೇಂದ್ರಗಳು, ರಾಡಾರ್ ನೆಲೆಗಳು, ಕ್ಷಿಪಣಿ ತಾಣಗಳು ಮತ್ತು ಶಸ್ತ್ರಾಸ್ತ್ರ ಸಂಗ್ರಹಣಾ ಪ್ರದೇಶಗಳು ಸೇರಿದ್ದವು. ಆ ದಿನದ ನಂತರ ಪಾಕಿಸ್ತಾನದ ಮೊರೆಯನ್ನು ಅನುಸರಿಸಿ, ಉಭಯ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದವು.

ಇವುಗಳನ್ನೂ ಓದಿರಿ: 
ಆಪರೇಷನ್‌ ಸಿಂಧೂರ- ಸೇನೆಯಿಂದ ಇನ್ನೊಂದು ವಿಡಿಯೋ ಬಿಡುಗಡೆ
ಆಪರೇಷನ್‌ ಸಿಂಧೂರ IN ತುಳು…

ಯೋಜನೆತರಬೇತಿಅನುಷ್ಠಾನ: ಸಂದಿತು ನ್ಯಾಯ
ನೂರ್‌ ಖಾನ್‌ ವಾಯುನೆಲೆ ಮೇಲೆ ದಾಳಿ: ಕಡೆಗೂ ಒಪ್ಪಿದ ಶೆಹಬಾಜ್
ಪೆಹಲ್ಗಾಮ್‌ ನರಹಂತಕರು ಖತಮ್?‌
ಕೈ ಮುಗಿವೆಯುದ್ದ ಬೇಡ ಎಂದದ್ದು ಏಕೆ ಗೊತ್ತಾ?
ಆಪರೇಷನ್‌ ಸಿಂಧೂರ ಮುಗಿದಿಲ್ಲ.. ಮಾತುಕತೆ ಪಿಒಕೆ ವಾಪಸಿಗೆ ಸೀಮಿತ
"ಷರತ್ತುಬದ್ಧ" ಕದನ ವಿರಾಮಸಿಂಧೂ ನೀರು ಹರಿಯುವುದಿಲ್ಲ
ಆಪರೇಷನ್‌ ಸಿಂಧೂರ್:‌ ೩ನೇ ದಿನ ಏನೇನಾಯಿತು?

Tuesday, May 27, 2025

ಆಪರೇಷನ್‌ ಸಿಂಧೂರ- ಸೇನೆಯಿಂದ ಇನ್ನೊಂದು ವಿಡಿಯೋ ಬಿಡುಗಡೆ

 ಆಪರೇಷನ್‌ ಸಿಂಧೂರ- ಸೇನೆಯಿಂದ ಇನ್ನೊಂದು ವಿಡಿಯೋ ಬಿಡುಗಡೆ

ಪಾಕಿಸ್ತಾನದ ಭೂಪ್ರದೇಶದೊಳಗಿನ ಭಯೋತ್ಪಾದಕ ಉಡಾವಣಾ ನೆಲೆಗಳ ಮೇಲೆ ಭಾರತ ನಡೆಸಿದ ಗುರಿ ದಾಳಿಗಳನ್ನು ಮತ್ತು ಪಾಕಿಸ್ತಾನ ರೇಂಜರ್‌ಗಳು ಗುಂಡಿನ ದಾಳಿಯಿಂದ ಪಲಾಯನ ಮಾಡುತ್ತಿರುವುದನ್ನು ತೋರಿಸುಆಪರೇಷನ್ ಸಿಂಧೂರ್‌ನ ಸೇನಾ ಕಾರ್ಯಾಚರಣೆಯ ಹೊಸ ವಿಡಿಯೋವನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಬಿಡುಗಡೆ ಮಾಡಿದೆ.

೨೦೨೫ ಮೇ ೧೭ರ ಮಂಗಳವಾರ ಬಿಡುಗಡೆ ಮಾಡಲಾಗಿರುವ ವಿಡಿಯೋ, ಪಾಕಿಸ್ತಾನದೊಳಗೆ 2.2 ಕಿಲೋಮೀಟರ್‌ವರೆಗಿನ ಮೂರು ಭಯೋತ್ಪಾದಕ ನೆಲೆಗಳ ಮೇಲೆ ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ ನಿಖರ ದಾಳಿಗಳನ್ನು ಮತ್ತು ಗಡಿಯಾಚೆಗಿನ ಪಾಕಿಸ್ತಾನಿ ಸೇನಾ ಠಾಣೆಗಳ ನಾಶವನ್ನು ಸೆರೆಹಿಡಿದಿದೆ.

ಪಹಲ್ಗಾಮ್‌ನಲ್ಲಿ ನಡೆದ ಮಾರಕ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ "ಶತ್ರು ಠಾಣೆಗಳನ್ನು ನಾಶಪಡಿಸಲಾಗಿದೆ" ಮತ್ತು ಅಂತಾರಾಷ್ಟ್ರೀಯ ಗಡಿ ಮತ್ತು ನಿಯಂತ್ರಣ ರೇಖೆಯ ಉದ್ದಕ್ಕೂ ಒಳನುಸುಳುವಿಕೆ ಪ್ರಯತ್ನಗಳನ್ನು ತಡೆಗಟ್ಟಲಾಗಿದೆ ಎಂದು ಜಮ್ಮು ಗಡಿನಾಡಿನ ಬಿಎಸ್‌ಎಫ್‌ನ ಇನ್ಸ್‌ಪೆಕ್ಟರ್ ಜನರಲ್ ಶಶಾಂಕ್ ಆನಂದ್ ಹೇಳಿದ್ದಾರೆ.

ಪಹಲ್ಗಾಮ್ ದಾಳಿಯ ನಂತರ ಪಾಕಿಸ್ತಾನಿ ರೇಂಜರ್‌ಗಳು ತಮ್ಮ ಎಂದಿನ ಮುಂಚೂಣಿಯ ಸ್ಥಾನಗಳಿಂದ ಹಿಂದೆ ಸರಿದರು, ಆದರೆ ಪುರುಷರು ಮತ್ತು ಮಹಿಳೆಯರನ್ನು ಒಳಗೊಂಡ ಬಿಎಸ್‌ಎಫ್ ಪಡೆಗಳು ತಮ್ಮ ನೆಲೆಯನ್ನು ಭದ್ರವಾಗಿ ಹಿಡಿದುಕೊಂಡಿದ್ದರು ಎಂದು ಅಧಿಕಾರಿ ಹೇಳಿದರು.

" ಗಡಿ ಬೇಲಿಯ ಆಚೆಗಿನ ಪಾಕ್‌ ಸೇನಾ ಠಾಣೆಗಳನ್ನೂ ನಮ್ಮ ಸಿಬ್ಬಂದಿ ನಿಭಾಯಿಸಿದ್ದಾರೆ" ಎಂದು ಅವರು ಹೇಳಿದರು.

ಮೇ 8 ರಂದು ಗಡಿಯನ್ನು ಸಮೀಪಿಸುತ್ತಿರುವ ಭಯೋತ್ಪಾದಕರ ದೊಡ್ಡ ಗುಂಪಿನ ತೀವ್ರ ಚಟುವಟಿಕೆಯನ್ನು ಬಿಎಸ್‌ಎಫ್ ಗಮನಿಸಿತು. ಒಳನುಸುಳುವಿಕೆ ಸನ್ನಿಹಿತವಾಗಿದೆ ಎಂಬ ಗುಪ್ತಚರ ಮಾಹಿತಿಯ ಮೇರೆಗೆ, ಬಿಎಸ್‌ಎಫ್ ಪಡೆಗಳು ಸರಣಿ ಮುಂಜಾಗ್ರತಾ ದಾಳಿಗಳನ್ನು ನಡೆಸಿದವು.

"ನಾವು ಮೇ 9 ಮತ್ತು 10 ರ ಮಧ್ಯರಾತ್ರಿ ಗಡಿಯ ಬಳಿ ಲಷ್ಕರ್‌ನ ಲೂನಿ ಭಯೋತ್ಪಾದಕ ಲಾಂಚ್‌ಪ್ಯಾಡ್ ಅನ್ನು ನಾಶಪಡಿಸಿದ್ದೇವೆ" ಎಂದು ಐಜಿ ಆನಂದ್ ಹೇಳಿದರು. "ಆರ್‌ಎಸ್ ಪುರ ಸೆಕ್ಟರ್‌ನ ಎದುರಿನ ಮಸ್ತ್‌ಪುರ್ ಎಂಬ ಮತ್ತೊಂದು ಲಾಂಚ್‌ಪ್ಯಾಡ್ ಅನ್ನು ಸಹ ನಾವು ನಾಶಪಡಿಸಿದ್ದೇವೆ. ನಮ್ಮ ಕಾರ್ಯಾಚರಣೆಯ ಸಮಯದಲ್ಲಿ, ಪಾಕಿಸ್ತಾನಿ ರೇಂಜರ್‌ಗಳು ಓಡಿಹೋಗುತ್ತಿರುವುದು ಕಂಡುಬಂದಿದೆ" ಎಂದು ಅವರು ಹೇಳಿದರು.

ಇವುಗಳನ್ನೂ ಓದಿರಿ: 
ಆಪರೇಷನ್‌ ಸಿಂಧೂರ IN ತುಳು…

ಯೋಜನೆ, ತರಬೇತಿ, ಅನುಷ್ಠಾನ: ಸಂದಿತು ನ್ಯಾಯ
ನೂರ್‌ ಖಾನ್‌ ವಾಯುನೆಲೆ ಮೇಲೆ ದಾಳಿ: ಕಡೆಗೂ ಒಪ್ಪಿದ ಶೆಹಬಾಜ್
ಪೆಹಲ್ಗಾಮ್‌ ನರಹಂತಕರು ಖತಮ್?‌
ಕೈ ಮುಗಿವೆಯುದ್ದ ಬೇಡ ಎಂದದ್ದು ಏಕೆ ಗೊತ್ತಾ?
ಆಪರೇಷನ್‌ ಸಿಂಧೂರ ಮುಗಿದಿಲ್ಲ.. ಮಾತುಕತೆ ಪಿಒಕೆ ವಾಪಸಿಗೆ ಸೀಮಿತ
"ಷರತ್ತುಬದ್ಧ" ಕದನ ವಿರಾಮಸಿಂಧೂ ನೀರು ಹರಿಯುವುದಿಲ್ಲ
ಆಪರೇಷನ್‌ ಸಿಂಧೂರ್:‌ ೩ನೇ ದಿನ ಏನೇನಾಯಿತು?

Monday, May 26, 2025

ಆಪರೇಷನ್‌ ಸಿಂಧೂರ IN ತುಳು…

 ಆಪರೇಷನ್‌ ಸಿಂಧೂರ IN.... ತುಳು

ದು ಮೈ ನವಿರೇಳಿಸುವ, ಕಣ್ಣಂಚಿನಲ್ಲಿ ನೀರಿಳಿಸುವ, ತಾಯಿನಾಡಿನ ಬಗ್ಗೆ, ದೇಶದ ಸೈನಿಕರ ಬಗ್ಗೆ ಎಂತಹವರಲ್ಲೂ ಹೆಮ್ಮೆ ಉಕ್ಕಿಸುವ 5.47 ನಿಮಿಷಗಳ ಪುಟ್ಟ ವಿಡಿಯೋ.

ಭಾಷೆ ಬರದವರಿಗೂ ಅರ್ಥವಾಗಬಲ್ಲಂತಹ ನಿರೂಪಣೆ, ಸುಂದರವಾದ ಎಡಿಟಿಂಗ್‌.

ಜಿತೇಶ್‌ ಮಿಜಾರ್‌ ಅವರೇ ಬರೆದ, ಅವರೇ ಸ್ವರ ನೀಡಿದ, ನಮ್ಮ ದೇಶದ ಪ್ರತೀಕಾರದ ಸ್ವರ- ಆಪರೇಷನ್‌ ಸಿಂಧೂರದ ಕಥೆ- ತುಳುವಿನಲ್ಲಿ.

ಜಿತೇಶ್‌ ಮಿಜಾರ್‌ ಅವರು ಈ ವಿಡಿಯೋವನ್ನು ದೇಶದ ಹೆಮ್ಮೆಯ ಸೈನಿಕರ ಪಾದಕ್ಕೆ ಅರ್ಪಿಸಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ಪ್ರಕಟಗೊಂಡು 24 ಗಂಟೆಗಳು ಕಳೆಯುವುದರೊಳಗೆ ವೈರಲ್‌ ಆಗಿದೆ.

ಅಂದಹಾಗೆ ಬರಹಗಾರ, ನಿರ್ದೇಶಕ, ಧ್ವನಿ ಕಲಾವಿದ ಹಾಗೂ ಸಂಪಾದಕರಾಗಿರುವ ಜಿತೇಶ್‌ ಮಿಜಾರ್‌ ಅವರ ಸುಮಾರು 110ಕ್ಕೂ ಹೆಚ್ಚು ಬರಹ, ವಿಡಿಯೋಗಳು ಇನ್‌ ಸ್ಟಾ ಗ್ರಾಮ್‌ನಲ್ಲಿ ಕಾಣಸಿಗುತ್ತದೆ.

ಪ್ರತಿ ವಿಡಿಯೋ ಕೂಡಾ ಮತ್ತೆ ಮತ್ತೆ ನೋಡಬೇಕೆನಿಸುವಂತೆ ಮಾಡುತ್ತವೆ.

ತುಳುವಿನಲ್ಲಿ ಮನಸ್ಸಿಗೆ ನಾಟುವಂತೆ ಆಪರೇಷನ್‌ ಸಿಂಧೂರದ ಕಥೆ ☝ ವಿವರಿಸಿದ ಮಿಜಾರ್‌ ಅವರಿಗೆ ಅಭಿನಂದನೆಗಳನ್ನು ಹೇಳದಿದ್ದರೆ ಈ ಬರಹ ಅಪೂರ್ಣವಾಗುತ್ತದೆ- ಅಭಿನಂದನೆಗಳು ಜಿತೇಶ್.

ಆಪರೇಷನ್‌ ಸಿಂಧೂರದ ಕಥೆಯ ವಿಡಿಯೋವನ್ನು ಮೇಲೆ ☝ ಕ್ಲಿಕ್‌ ಮಾಡಿ ನೋಡಿ. ಮಿಜಾರ್‌ ಬಗೆಗಿನ ಹೆಚ್ಚಿನ ವಿವರಕ್ಕೆ https://www.instagram.com/jithesh_mijar/ ಕ್ಲಿಕ್‌ ಮಾಡಿ.

-ನೆತ್ರಕೆರೆ ಉದಯಶಂಕರ

ಇವುಗಳನ್ನೂ ಓದಿರಿ: 

ಯೋಜನೆ, ತರಬೇತಿ, ಅನುಷ್ಠಾನ: ಸಂದಿತು ನ್ಯಾಯ
ನೂರ್‌ ಖಾನ್‌ ವಾಯುನೆಲೆ ಮೇಲೆ ದಾಳಿ: ಕಡೆಗೂ ಒಪ್ಪಿದ ಶೆಹಬಾಜ್
ಪೆಹಲ್ಗಾಮ್‌ ನರಹಂತಕರು ಖತಮ್?‌
ಕೈ ಮುಗಿವೆಯುದ್ದ ಬೇಡ ಎಂದದ್ದು ಏಕೆ ಗೊತ್ತಾ?
ಆಪರೇಷನ್‌ ಸಿಂಧೂರ ಮುಗಿದಿಲ್ಲ.. ಮಾತುಕತೆ ಪಿಒಕೆ ವಾಪಸಿಗೆ ಸೀಮಿತ
"ಷರತ್ತುಬದ್ಧ" ಕದನ ವಿರಾಮಸಿಂಧೂ ನೀರು ಹರಿಯುವುದಿಲ್ಲ
ಆಪರೇಷನ್‌ ಸಿಂಧೂರ್:‌ ೩ನೇ ದಿನ ಏನೇನಾಯಿತು?

Advertisement