ಪುಸ್ತಕ ಪ್ರಪಂಚ

  ಬಲ್ಲಿರೇನಯ್ಯ? ಯಾರೆಂದುಕೊಂಡಿದ್ದೀರಿ?

 ಲೋಕರಾವಣ

ತ್ರಿಕೂಟಾಚಲದ ನೆತ್ತಿಯ ಮೇಲೆ ನಿಂತಿದ್ದೇನೆ.
ಸುತ್ತ ವಿಸ್ತಾರವಾದ ಜಲರಾಶಿ.
ಅದರ ನಟ್ಟ ನಡುವೆ  ಥಳ ಥಳಿಸುತ್ತಿರುವ ಮಹಾನಗರಿ.
ಅದೇ ಲಂಕೆ.
ಬರಿದೇ ಲಂಕೆ ಎನ್ನಬಹುದೇ?
ಇಲ್ಲ, ಸುವರ್ಣ ಲಂಕೆ.
ಅದರ ಒಂದೊಂದು ಗೋಪುರವೂ ನನ್ನ ಸಾಧನೆಯ ಪ್ರತೀಕ.
ಹೌದು.
ಸುವರ್ಣ ಲಂಕಾಧೀಶ್ವರನೆನಿಸಿದ  ದಶಕಂಠ ರಾವಣ ನಾನು.
ನನ್ನನ್ನು ಆವರಿಸಿರುವುದು ವಿಸ್ತಾರವಾದ ವೈಭವ.
ಅಲ್ಲ, ವೈಭವದ ವಿಸ್ತಾರ.
ಪಾತಾಳದ ಅಜ್ಞಾತವಾದ ಕತ್ತಲ ಕೂಪವೆಲ್ಲಿ?
ಈ ಪ್ರಖರ ಬೆಳಕಿನಲ್ಲಿ ಮೀಯುತ್ತಿರುವ ಮಹಾನಗರಿ ಎಲ್ಲಿ?
ಸಾಧನೆ ಅಂದರೆ ಇದು.
ಸಾಹಸ ಅಂದರೆ ಇದು.
ಭಲಾ ದಶಕಂಠ! ಸಾಹಸಕ್ಕೆ ಇನ್ನೊಂದು ಹೆಸರೇ ರಾವಣ.
ಈ ಹೆಸರು ಬಂದದ್ದೂ ಸಾಹಸದಿಂದಲೇ.
ಪಾತಾಳದ ಆಳದಲ್ಲಿ ನನ್ನ ಪಾದ.
ಅಷ್ಟೂ ಲೋಕಗಳು ನನ್ನ ಪದಾಕ್ರಾಂತವಾಗಿವೆ.
ಅಂತರಕ್ಷದಾಚೆಗೆ ಸ್ವರ್ಗದ ಎತ್ತರದಲ್ಲಿ ನನ್ನ ಮಣಿ ಮುಕುಟ.
ಸುಮ್ಮನೆ ಚತುರ್ದಶ ಭುವನದಲ್ಲಣ ಅಂದರೇನು, ನನ್ನ ಕುರಿತು?

ಕಥೆ ಆರಂಭವಾಗುವುದೇ ಹೀಗೆ. ಸ್ವಗತದೊಂದಿಗೆ. ಲಂಕಾಧಿಪತಿ ರಾವಣನ ಸ್ವಗತ. ಸ್ವಗತದ ರೂಪದಲ್ಲೇ ಸಾಗುವ ಕಾದಂಬರಿ ಇಡೀ ರಾಮಾಯಣದ ಸಮಗ್ರ ಕಥೆಯನ್ನೇ ಓದುಗನ ಕಣ್ಣ ಮುಂದಕ್ಕೆ ತರುತ್ತದೆ.
ರಾಮಾಯಣ ಶ್ರೀರಾಮನನ್ನೇ ಕೇಂದ್ರಬಿಂದುವಾಗಿ ಇರಿಸಿಕೊಂಡು ಮುಂದಕ್ಕೆ ಸಾಗುವ ಮಹಾಕಾವ್ಯ. ರಾಮನ ಹೆಜ್ಜೆಗಳ ಜಾಡಿನಲ್ಲೇ ಇಡೀ ರಾಮಾಯಣದ ಕಥೆ ಸಾಗುತ್ತದೆ. ವಿವರಗಳಿಗೆ ಕ್ಲಿಕ್‌ ಮಾಡಿ: ಲೋಕರಾವಣ

No comments:

Advertisement