Tuesday, June 30, 2009

ಇಂದಿನ ಇತಿಹಾಸ History Today ಜೂನ್ 29

ಇಂದಿನ ಇತಿಹಾಸ

ಜೂನ್ 29

ಫೆರ್ನಾಂಡೊ ಟೊರೆಸ್ ಅವರು ತಂದಿತ್ತ ಏಕೈಕ ಗೋಲಿನ ನೆರವಿನಿಂದ ಸ್ಪೇನ್ ತಂಡ ಜರ್ಮನಿ ತಂಡವನ್ನು ಮಣಿಸಿ ಯೂರೊ 2008 ಫುಟ್ಬಾಲ್ ಚಾಂಪಿಯನ್ಶಿಪ್ನ ಕಿರೀಟ ಮುಡಿಗೇರಿಸಿಕೊಂಡಿತು. ಆಸ್ಟ್ರಿಯಾದ ರಾಜಧಾನಿ ವಿಯೆನ್ನಾದಲ್ಲಿರುವ ಅರ್ನೆಸ್ಟ್ ಹಾಪೆಲ್ ಕ್ರೀಡಾಂಗಣದಲ್ಲಿ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಫೆರ್ನಾಂಡೊ ಟೊರೆಸ್ ಅವರು ಮೊದಲಾರ್ಧದ 33ನೇ ನಿಮಿಷದಲ್ಲಿ ನಿರ್ಣಾಯಕ ಗೋಲು ಗಳಿಸಿದರು.

2008: ಫೆರ್ನಾಂಡೊ ಟೊರೆಸ್ ಅವರು ತಂದಿತ್ತ ಏಕೈಕ ಗೋಲಿನ ನೆರವಿನಿಂದ ಸ್ಪೇನ್ ತಂಡ ಜರ್ಮನಿ ತಂಡವನ್ನು ಮಣಿಸಿ ಯೂರೊ 2008 ಫುಟ್ಬಾಲ್ ಚಾಂಪಿಯನ್ಶಿಪ್ನ ಕಿರೀಟ ಮುಡಿಗೇರಿಸಿಕೊಂಡಿತು. ಆಸ್ಟ್ರಿಯಾದ ರಾಜಧಾನಿ ವಿಯೆನ್ನಾದಲ್ಲಿರುವ ಅರ್ನೆಸ್ಟ್ ಹಾಪೆಲ್ ಕ್ರೀಡಾಂಗಣದಲ್ಲಿ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಫೆರ್ನಾಂಡೊ ಟೊರೆಸ್ ಅವರು ಮೊದಲಾರ್ಧದ 33ನೇ ನಿಮಿಷದಲ್ಲಿ ನಿರ್ಣಾಯಕ ಗೋಲು ಗಳಿಸಿದರು. ಈ ಗೆಲುವಿನೊಂದಿಗೆ ಸ್ಪೇನ್ ತಂಡ 44 ವರ್ಷಗಳ ಪ್ರಶಸ್ತಿ ಬರವನ್ನು ನೀಗಿಸಿಕೊಂಡಿತು. ವಿಶ್ವಕಪ್ ಒಳಗೊಂಡಂತೆ ಪ್ರಮುಖ ಟೂರ್ನಿಗಳಲ್ಲಿ ಸ್ಪೇನ್ ತಂಡಕ್ಕೆ ಹಲವು ಬಾರಿ ಅದೃಷ್ಟ ಕೈಕೊಟ್ಟಿತ್ತು. ಆದರೆ ಈ ಬಾರಿ ಅವರು ಎಡವಲಿಲ್ಲ. ಮೈಕಲ್ ಬಲಾಕ್, ಲೂಕಾಸ್ ಪೊಡೊಲ್ಸ್ಕಿ ಮತ್ತು ಮಿರೊಸ್ಲಾವ್ ಕ್ಲೋಸ್ ಅವರಂತಹ ಘಟಾನುಘಟಿ ಆಟಗಾರರಿದ್ದ ಜರ್ಮನಿ ತಂಡವನ್ನು ಮಣಿಸುವ ಮೂಲಕ ಐಕರ್ ಕೆಸಿಲಾಸ್ ನೇತೃತ್ವದ ಸ್ಪೇನ್ ಜಗತ್ತನ್ನೇ ನಿಬ್ಬೆರಗಾಗಿಸಿತು. ಫೆರ್ನಾಂಡೊ ಟೊರೆಸ್ ಅವರು ತಂದಿತ್ತ ಏಕೈಕ ಗೋಲಿನ ನೆರವಿನಿಂದ ಸ್ಪೇನ್ ತಂಡ ಜರ್ಮನಿ ತಂಡವನ್ನು ಮಣಿಸಿ ಯೂರೊ

2008 ಫುಟ್ಬಾಲ್ ಚಾಂಪಿಯನ್ಶಿಪ್ನ ಕಿರೀಟ ಮುಡಿಗೇರಿಸಿಕೊಂಡಿತು.

2007: 1948ರ ಒಲಿಂಪಿಕ್ ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಅಂತಾರಾಷ್ಟ್ರೀಯ ಫುಟ್ ಬಾಲ್ ಆಟಗಾರ ಬಿ.ಎನ್. ವಜ್ರವೇಲು (84) ಬೆಂಗಳೂರಿನಲ್ಲಿ ನಿಧನರಾದರು. 1948ರಲಲ್ಲಿ ಇಂಗ್ಲೆಂಡಿನಲ್ಲಿ ನಡೆದ ಒಲಿಂಪಿಕ್ನಲ್ಲಿ ಬರಿಗಾಲಿನಲ್ಲೇ ಆಡುವ ಮೂಲಕ ವಜ್ರವೇಲು ಜನರನ್ನು ನಿಬ್ಬೆರಗಾಗಿಸಿದ್ದರು. ಆಗ ಭಾರತ ನಾಲ್ಕನೇ ಸ್ಥಾನ ಪಡೆದಿತ್ತು. ವಜ್ರವೇಲು ಅವರನ್ನು ಅಭಿಮಾನಿಗಳು ಭಾರತದ 'ಸ್ಟಾರ್ಲಿ ಮ್ಯಾಥ್ಯೂಸ್' ಎಂದೇ ಕರೆಯುತ್ತಿದ್ದರು. ಒಂದು ಕಾಲಿನ ತೊಂದರೆ ಕಾರಣ ಫುಟ್ ಬಾಲ್ ನಿಂದ ನಿವೃತ್ತರಾದ ಅವರು ಬೆಂಗಳೂರಿನಲ್ಲಿ ಸಣ್ಣ ಕೈಗಾರಿಕೆಯೊಂದನ್ನು ಆರಂಭಿಸಿದ್ದರು.

2007: ಬೆಲ್ ಫಾಸ್ಟಿನಲ್ಲಿ ನಡೆದ ದಕ್ಷಿಣ ಆಫ್ರಿಕ ವಿರುದ್ಧದ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ 50 ರನ್ನುಗಳ ಗಡಿ ದಾಟಿದ ಕ್ಷಣದಲ್ಲಿ 15,000 ರನ್ನುಗಳನ್ನು ಸೇರಿಸಿದ ವಿಶ್ವದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಶ್ರೀಲಂಕೆಯ ಸನತ್ ಜಯಸೂರ್ಯ ಅವರು ಹೆಚ್ಚು ರನ್ನುಗಳನ್ನು ಪೇರಿಸಿದವರಲ್ಲಿ ಎರಡನೇ ಸ್ಥಾನದಲ್ಲಿದ್ದು ಅವರು ಸೇರಿಸಿರುವ ರನ್ನುಗಳ ಒಟ್ಟು ಮೊತ್ತ 12,063.

2007: ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ನೀಡಲಾಗುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ 'ನೃಪತುಂಗ' ಪ್ರಶಸ್ತಿಗೆ ಪ್ರಸಕ್ತ ಸಾಲಿನಲ್ಲಿ ದೇ. ಜವರೇಗೌಡ ಅವರನ್ನು ಆರಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಸ್ಥಾಪಿಸಲಾಗಿರುವ ಈ ಪ್ರಶಸ್ತಿಯ ಮೊತ್ತ ಐದು ಲಕ್ಷದ ಒಂದು ಸಾವಿರ ರೂಪಾಯಿಗಳು.

2006: ಗುಜರಾತಿನ ಕಾಂಡ್ಲಾ ಬಂದರಿನಲ್ಲಿ ಎರಡು ನೌಕೆಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮವಾಗಿ ಒಟ್ಟು 7 ಮಂದಿ ಅಸು ನೀಗಿದರು. ಕಾಲುವೆಯ ಹೊರಭಾಗದಲ್ಲಿ ಸಾಗುತ್ತಿದ್ದ ಜೆಶು ಶಿಪ್ಪಿಂಗ್ ಮಾಲಕತ್ವದ ಬಾರ್ಜ್ ಮತ್ತು ಬಂದರಿನಿಂದ ಹೊರಟಿದ್ದ ನೌಕೆ ಪರಸ್ಪರ ಡಿಕ್ಕಿಯಾಗಿ ಈ ದುರಂತ ಸಂಭವಿಸಿತು. ಬಾರ್ಜಿನಿಂದ ಸಮುದ್ರಕ್ಕೆ ಬಿದ್ದ 16 ಮಂದಿಯ ಪೈಕಿ 9 ಮಂದಿಯನ್ನು ರಕ್ಷಿಸಲಾಯಿತು, 7 ಮಂದಿ ನೀರಿನಲ್ಲಿ ಮುಳುಗಿದರು.

2006: ಜಮ್ಮು ಮತ್ತು ಕಾಶ್ಮೀರದ ಲಡಾಖ್ ನಿಂದ ಅರುಣಾಚಲ ಪ್ರದೇಶದ ದಿಫು ಲಾ ವರೆಗಿನ ಭಾರತ-ಚೀನಾ ಗಡಿಭಾಗದ ರಸ್ತೆ ಅಭಿವೃದ್ಧಿ ಪಡಿಸಲು ಭದ್ರತೆ ಮೇಲಿನ ಕೇಂದ್ರ ಸಂಪುಟ ಸಮಿತಿಯು ತೀರ್ಮಾನ ಕೈಗೊಂಡಿತು. 608 ಕಿ.ಮೀ ಹರಡಿಕೊಂಡಿರುವ ಭಾರತ-ಚೀನಾ ಗಡಿ ರಸ್ತೆಗಳ ಸುಧಾರಣೆ ಮತ್ತು ನಿರ್ಮಾಣಕ್ಕೆ ಒಟ್ಟು 912 ಕೋಟಿ ರೂ ಬೇಕಾಗುತ್ತದೆ. ಕಳೆದ 50 ವರ್ಷಗಳ ಹಿಂದೆ ಗಡಿ ರಸ್ತೆ ನಿರ್ಮಾಣ ಮಾಡಿದ್ದು, ಇಲ್ಲಿಯವರೆಗೆ ಯಾವುದೇ ಸುಧಾರಣೆ ಮಾಡದ್ದರಿಂದ ಇಂಡೋ-ಟಿಬೆಟ್ ಗಡಿ ಪೊಲೀಸರಿಗೆ ಹಾಗು ಸೇನೆಗೆ ಸಂಚರಿಸಲು ಸಾಕಷ್ಟು ತೊಂದರೆಯಾಗುತ್ತಿತ್ತು.

2006: ಪ್ರಖ್ಯಾತ ಶಿವನ ಯಾತ್ರಾಕ್ಷೇತ್ರ ಅಮರನಾಥದಲ್ಲಿ ಕೃತಕ ಹಿಮಲಿಂಗ ನಿರ್ಮಿಸಲಾಗಿದೆ ಎಂಬ ಆರೋಪಗಳ ಕುರಿತು ನ್ಯಾಯಾಂಗ ತನಿಖೆ ನಡೆಸಲು ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಎಸ್.ಕೆ. ಸಿನ್ಹಾ ಆದೇಶ ನೀಡಿದರು. ಮುಖ್ಯಮಂತ್ರಿ ಗುಲಾಮ್ ನಬಿ ಆಜಾದ್ ಅವರೊಂದಿಗೆ ಸಮಾಲೋಚಿಸಿ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಕೆ.ಕೆ.ಗುಪ್ತಾ ಅವರನ್ನು ತನಿಖಾ ಆಯೋಗದ ಮುಖ್ಯಸ್ಥರನ್ನಾಗಿ ನೇಮಕ ಮಾಡಿ ಅವರು ಆದೇಶ ಹೊರಡಿಸಿದರು.

2002: ದಕ್ಷಿಣ ಕೊರಿಯಾದ ವಿರುದ್ಧ ನಡೆದ ಪಂದ್ಯದಲ್ಲಿ ಟರ್ಕಿಯು ಹಕನ್ ಸುಕುರ್ ಅವರು ಫುಟ್ ಬಾಲ್ ವಿಶ್ವಕಪ್ ನಲ್ಲೇ ಅತ್ಯಂತ ಕಡಿಮೆ ಅವಧಿಯಲ್ಲಿ (11 ಸೆಕೆಂಡುಗಳಲ್ಲಿ) ಗೋಲ್ ಗಳಿಸಿ ಅತ್ಯಂತ ವೇಗದ ಗೋಲ್ ಪಡೆದರು.

1995: ಅಟ್ಲಾಂಟಿಸ್ ಷಟ್ಲ್ ನೌಕೆ ಮತ್ತು ರಷ್ಯದ ಮೀರ್ ಬಾಹ್ಯಾಕಾಶ ನಿಲ್ದಾಣ ಜೊತೆಗೂಡಿ ಭೂಮಿಗೆ ಸುತ್ತು ಹಾಕುವ ಅತ್ಯಂತ ದೊಡ್ಡದಾದ ಮಾನವ ನಿರ್ಮಿತ ಅಟ್ಟಣಿಗೆ ರೂಪಿಸಲು ಅಡಿಪಾಯ ಹಾಕಿದವು. ಕಮಾಂಡರ್ ರಾಬರ್ಟ್ ಗಿಬ್ಸನ್ ಮೀರ್ ನೊಳಕ್ಕೆ ತೇಲುತ್ತಾ ಸಾಗಿ ರಷ್ಯದ ಕಮಾಂಡರ್ ವ್ಲಾಡಿಮೀರ್ ಡೆಝ್ ರೊವ್ ಅವರ ಕೈ ಕುಲುಕಿದರು. 1975ರಲ್ಲಿ ಅಮೆರಿಕದ ಅಪೋಲ್ಲೋ ಮತ್ತು ಸೋವಿಯತ್ ಸೋಯುಜ್ ಸಿಬ್ಬಂದಿ ಕಕ್ಷೆಯಲ್ಲಿ ಜೊತೆಗೂಡಿದ ಬಳಿಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ನೌಕೆಗಳಲ್ಲಿ ಪರಸ್ಪರ ಸಹಕರಿಸಿದ್ದು ಇದೇ ಪ್ರಥಮ.

1986: ರಿಚರ್ಡ್ ಬ್ರಾಂಡ್ಸನ್ ಅವರ ದೋಣಿ `ವರ್ಜಿನ್ ಅಟ್ಲಾಂಟಿಕ್ ಚಾಲೆಂಜರ್ 2' ಮೂರು ದಿನ ಎಂಟು ಗಂಟೆ 31 ನಿಮಿಷಗಳಲ್ಲಿ ಅಟ್ಲಾಂಟಿಕ್ ಸಾಗರವನ್ನು ದಾಟುವ ಮೂಲಕ ಅತಿ ವೇಗವಾಗಿ ಅಟ್ಲಾಂಟಿಕ್ ದಾಟಿದ ಹೆಗ್ಗಳಿಕೆಗೆ ಪಾತ್ರವಾಯಿತು.

1873: ಬಂಗಾಳಿ ಸಾಹಿತಿ ಮೈಕೆಲ್ ಮಧುಸೂದನ ದತ್ತ ಅವರು ತಮ್ಮ 49ನೇ ವಯಸ್ಸಿನಲ್ಲಿ ನಿಧನರಾದರು. ಕವಿ ಹಾಗೂ ನಾಟಕಕಾರರಾಗಿದ್ದ ಅವರು ಆಧುನಿಕ ಬಂಗಾಳಿ ಸಾಹಿತ್ಯದ ಮೊತ್ತ ಮೊದಲ ಮಹಾನ್ ಕವಿಯಾಗಿದ್ದರು.

1864: ಅಶುತೋಶ್ ಮುಖರ್ಜಿ (1864-1924) ಜನ್ಮದಿನ. ಭಾರತೀಯ ನ್ಯಾಯವಾದಿ ಹಾಗೂ ಶಿಕ್ಷಣ ತಜ್ಞರಾದ ಇವರು ಜನಸಂಘದ ಸ್ಥಾಪಕ ಶ್ಯಾಮ ಪ್ರಸಾದ ಮುಖರ್ಜಿ ಅವರ ತಂದೆ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement