Friday, January 24, 2020

ಶಿಕ್ಷಿತ ಅಪರಾಧಿಗಳ ಗಲ್ಲು ಜಾರಿ ವಿಳಂಬಕ್ಕೆ ಸುಪ್ರೀಂ ಸಿಡಿಮಿಡಿ

ಶಿಕ್ಷಿತ ಅಪರಾಧಿಗಳ ಗಲ್ಲು ಜಾರಿ ವಿಳಂಬಕ್ಕೆ ಸುಪ್ರೀಂ ಸಿಡಿಮಿಡಿ
'ಆರೋಪಿಗಳಷ್ಟೇ  ಅಲ್ಲ  ನೊಂದವರ ಹಕ್ಕುಗಳೂ ಮುಖ್ಯ
ನವದೆಹಲಿ: ಮರಣದಂಡನೆಗೆ ಗುರಿಯಾದ ಅಪರಾಧಿಗಳು ಕೊನೆಯಿಲ್ಲದಂತೆ ಅರ್ಜಿಗಳನ್ನು ಸಲ್ಲಿಸುತ್ತಾ ಹೋಗುವುದಕ್ಕೆ 2020 ಜನವರಿ 23ರ ಬುಧವಾರ ಮುಖ ಗಂಟಿಕ್ಕಿದ ಭಾರತದ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ ಬೋಬ್ಡೆ  ಅವರುಸುಪ್ರೀಂಕೋರ್ಟ್ ಆರೋಪಿಗಳ ಹಕ್ಕುಗಳ ಬಗ್ಗೆ ಮಾತ್ರವೇ ಬೆಳಕು ಚೆಲ್ಲುವುದಲ್ಲ, ಬಲಿಪಶುಗಳ (ತೊಂದರೆಗೆ ಒಳಗಾದವರ) ಹಕ್ಕುಗಳ ಬಗೆಗೂ ಬೆಳಕು ಚೆಲ್ಲಬೇಕುಎಂದು ಹೇಳಿದರು.

ಉತ್ತರ ಪ್ರದೇಶದ ಆಮ್ರೋಹದ ದಂಪತಿ ಜೋಡಿಯೊಂದು ಸಲ್ಲಿಸಿದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಬೋಬ್ಡೆ ಅವರು ಮಹತ್ವದ ಅಭಿಪ್ರಾಯ ವ್ಯಕ್ತ ಪಡಿಸಿದರು.

೨೦೦೮ರಲ್ಲಿ ಮಹಿಳೆಯೊಬ್ಬಳ ಕುಟುಂಬ ಸದಸ್ಯರನ್ನು ಅಮಲು ಪದಾರ್ಥ ಉಣಿಸಿ ಬಳಿಕ ಕತ್ತು ಬಿಗಿದು ಕೊಂದದ್ದಕ್ಕಾಗಿ ಜೋಡಿಗೆ ಮರಣದಂಡನೆ ವಿಧಿಸಲಾಗಿತ್ತು. ಕತ್ತು ಹಿಸುಕಿದ ಪರಿಣಾಮವಾಗಿ ಸಾವನ್ನಪ್ಪಿದ ಜನರ ಪೈಕಿ ಒಂದು ಹಸುಳೆ  ಕೂಡಾ ಸೇರಿತ್ತು.

ಆರೋಪಿ ಜೋಡಿಯನ್ನು ಐದು ದಿನಗಳ ಒಳಗಾಗಿ ಬಂಧಿಸಲಾಗಿತ್ತು ಮತ್ತು ಅವರಿಗೆ ೨೦೧೦ರಲ್ಲಿ ಮರಣದಂಡನೆ ವಿಧಿಸಲಾಗಿತ್ತು.

ಮ್ಯಾಜಿಸ್ಟ್ರೇಟರು ಅವಸರಪಟ್ಟರು ಎಂಬ ನೆಲೆಯಲ್ಲಿ ಸುಪ್ರೀಂಕೋರ್ಟ್ ೨೦೧೫ರಲ್ಲಿ ಅವರ ವಿರುದ್ಧ ಹೊರಡಿಸಲಾಗಿದ್ದಡೆತ್ ವಾರಂಟ್ರದ್ದು ಪಡಿಸಿತ್ತು ಮತ್ತು ಶಿಕ್ಷಿತರು ತಮ್ಮ ಕಾನೂನುಬದ್ಧ ಪರಿಹಾರದ ಆಯ್ಕೆಗಳನ್ನು ಇನ್ನೂ ಚಲಾಯಿಸಿಲ್ಲ.

ಅವರ ಅರ್ಜಿಯ ಮೇಲಿನ ವಿಚಾರಣೆ ಗುರುವಾರ ಆರಂಭವಾಗುತ್ತಿದ್ದಂತೆಯೇ ಮುಖ್ಯ ನ್ಯಾಯಮೂರ್ತಿ ಬೋಬ್ಡೆ ಅವರು ಮರಣದಂಡನೆಯ ವಿಚಾರದಲ್ಲಿ ಏನಾದರೂ ಒಂದು ಅಂತಿಮ ನಿರ್ಧಾರಕ್ಕೆ ಬರುವುದು ಅತ್ಯಂತ ಮುಖ್ಯ ಎಂದು ಹೇಳಿದರು.

ದಂಡನೆಯನ್ನು ಎಲ್ಲ ಸಮಯದಲ್ಲಿಯೂ ಪ್ರಶ್ನಿಸಬಹುದು ಎಂಬ ಭಾವನೆ ಗಲ್ಲು ಶಿಕ್ಷೆಗೆ ಗುರಿಯಾದ ವ್ಯಕ್ತಿಗೆ ಬಾರದಂತೆ ನೋಡಿಕೊಳ್ಳುವುದು ಮುಖ್ಯ ಎಂದು ನುಡಿದ ಮುಖ್ಯ ನ್ಯಾಯಮೂರ್ತಿವ್ಯಕ್ತಿಯೊಬ್ಬ ಕೊನೆಯೇ ಇಲ್ಲದಂತೆ ಹೋರಾಡುತ್ತಾ ಇರಬಾರದುಎಂದು ಒತ್ತಿ ಹೇಳಿದರು.

೧೦ ತಿಂಗಳ ಹಸುಳೆ ಸೇರಿದಂತೆ ಜನರನ್ನು ಕೊಂದ ಪ್ರಕರಣದಲ್ಲಿ ಕೇವಲ ಆರೋಪಿಗಳ ಹಕ್ಕುಗಳಿಗೆ ಮಹತ್ವ ನೀಡಲು ನಾವು ಬಯಸುವುದಿಲ್ಲಎಂದು ಮುಖ್ಯ ನ್ಯಾಯಮೂರ್ತಿ ನುಡಿದರು.
ಕ್ಷಮಾದಾನ ಕೋರಿಕೆ ಅರ್ಜಿಗಳನ್ನು ನಿಭಾಯಿಸುವ ಬಗ್ಗೆ ಮಾರ್ಗದರ್ಶಿ ಸೂತ್ರಗಳನ್ನು ನೀಡಿದ ತನ್ನ ೨೦೧೪ರ ತೀರ್ಪನ್ನು ತಿದ್ದುಪಡಿ ಮಾಡುವಂತೆ ಕೇಂದ್ರ ಸರ್ಕಾರವು ಸುಪ್ರೀಂಕೋರ್ಟಿಗೆ ಮನವಿ ಮಾಡಿದ ಒಂದು ದಿನದ ಬಳಿಕ ಭಾರತದ ಮುಖ್ಯ ನ್ಯಾಯಮೂರ್ತಿ ಅವರಿಂದ ಮಹತ್ವದ ಅಭಿಪ್ರಾಯ ಬಂದಿದೆ.

ರಹಸ್ಯವಾಗಿ ಗಲ್ಲು ಶಿಕ್ಷೆಗಳನ್ನು ಜಾರಿಗೊಳಿಸುವುದನ್ನು ತಡೆಯುವ ಸಲುವಾಗಿ ಕ್ಷಮಾದಾನ ಕೋರಿಕೆ ಅರ್ಜಿ ತಿರಸ್ಕೃತವಾದ ದಿನ ಮತ್ತು  ಗಲ್ಲು ಜಾರಿಗೆ ನಿಗದಿ ಪಡಿಸಲಾಗುವ ದಿನದ ಮಧ್ಯೆ ೧೪ ದಿನಗಳ ಅಂತರ ಇರಬೇಕು ಮತ್ತು ಮರಣದಂಡನೆಗೆ ಗುರಿಯಾದ ಪುರುಷ ಅಥವಾ ಮಹಿಳೆಗೆ ಸಾವನ್ನು ಎದುರಿಸುವ ಸಿದ್ಧತೆಗೆ ಮಾಡಿಕೊಳ್ಳಲು ಕಾಲಾವಕಾಶ ನೀಡಬೇಕು ಎಂಬುದನ್ನು ಕೂಡಾ ಶತ್ರುಘ್ನ ಚೌಹಾಣ್ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ಕಡ್ಡಾಯಗೊಳಿಸಿತ್ತು.

ಅತಿ ಹೀನ ಸ್ವರೂಪದ ಅಪರಾಧಗಳಲ್ಲಿ ನ್ಯಾಯಾಂಗ ಪ್ರಕ್ರಿಯೆ ಮೇಲಿನ ಸಾರ್ವಜನಿಕರ ವಿಶ್ವಾಸ ಅಲುಗಾಡದಂತೆ ನೋಡಿಕೊಳ್ಳುವ ಸಲುವಾಗಿ ಬಲಿಪಶು (ನೊಂದವರು) ಕೇಂದ್ರಿತ ಧೋರಣೆಯನ್ನು ಸುಪ್ರೀಂಕೋರ್ಟ್ ತಾಳಬೇಕು ಎಂದು ಸರ್ಕಾರವು ತನ್ನ ಅರ್ಜಿಯಲ್ಲಿ ಮನವಿ ಮಾಡಿತ್ತು.

ನಿರ್ಭಯಾ ಪ್ರಕರಣ ಎಂದೇ ಪರಿಚಿತವಾಗಿರುವ ೨೦೧೨ರ ದೆಹಲಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಿಗೆಡೆತ್ ವಾರಂಟ್ಜಾರಿಗೊಳಿಸುವಲ್ಲಿ ಆಗುತ್ತಿರುವ ವಿಳಂಬದ ಹಿನ್ನೆಲೆಯಲಿ ಕೇಂದ್ರವು ಮನವಿ ಮಾಡಿತ್ತು.

ಮರಣದಂಡನೆ ಜಾರಿಯಲ್ಲಿ ಆಗುತ್ತಿರುವ ವಿಳಂಬಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ವಿಶೇಷವಾಗಿ ಪ್ರಕರಣದಲ್ಲಿ ದಾರುಣವಾಗಿ ಸಾವನ್ನಪ್ಪಿದ ಮೃತ ಯುವತಿಯ ತಾಯಿ ಮರಣದಂಡನೆ ಜಾರಿ ಪ್ರಕ್ರಿಯೆಯಲ್ಲಿನ ವಿಳಂಬದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಕೇಂದ್ರದ ಅಧಿಕಾರಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು  ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಆಪ್) ಪರಸ್ಪರ ಆರೋಪಗಳನ್ನು ಮಾಡಿಕೊಳ್ಳುವುದರೊಂದಿಗೆ ನಿರ್ಭಯಾ ಪ್ರಕರಣದ ಅಪರಾಧಿಗಳ ಮರಣದ ದಂಡನೆ ಜಾರಿ ವಿಳಂಬ ವಿಷಯವು ಇದೀಗ ರಾಜಕೀಯ ವಿಷಯವಾಗಿಯೂ ಪರಿವರ್ತನೆಗೊಂಡಿದೆ.

ದೆಹಲಿ ವಿಧಾನಸಭೆಗೆ ಫೆಬ್ರುವರಿ ೮ರಂದು ಮತದಾನ ನಡೆಯಲಿದ್ದು, ಫೆಬ್ರುವರಿ ೧೧ರಂದು ಫಲಿತಾಂಶ ಹೊರಬೀಳಲಿದೆ.

No comments:

Advertisement