Friday, January 24, 2020

‘ಉತ್ತಮ ಗೆಳೆಯ ಚೀನಾ'ದ ಮುಸ್ಲಿಂ ವಿರೋಧಿ ನಡೆಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮೌನ

ಉಘುರ್ಮುಸ್ಲಿಮರ  ಬಗ್ಗೆ , ಬಹಿರಂಗ ಚರ್ಚೆ ಇಲ್ಲ
ಉತ್ತಮ ಗೆಳೆಯ ಚೀನಾ'ದ ಮುಸ್ಲಿಂ ವಿರೋಧಿ ನಡೆಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮೌನ
ಬಾನ್:  ಅಲ್ಪಸಂಖ್ಯಾತರ ವಿರುದ್ಧ ಚೀನಾ ನಡೆಸುತ್ತಿರುವ ದೌರ್ಜನ್ಯಗಳ ಬಗ್ಗೆ ಜಾಗತಿಕ ಟೀಕೆ ವ್ಯಕ್ತವಾಗುತ್ತಿರುವುದರ ಹೊರತಾಗಿಯೂ, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಚೀನಾದಲ್ಲಿನ ಉಘುರ್ ಮುಸ್ಲಿಮರ ದಯನೀಯ ಸ್ಥಿತಿಗತಿ ಬಗ್ಗೆ ತಮ್ಮ ತುಟಿ ಬಿಗಿ ಹಿಡಿದಿದ್ದಾರೆ.
ಬೀಜಿಂಗ್ ಉತ್ತಮ ಗೆಳೆಯ ಮತ್ತು ಅತ್ಯಂತ ಕಷ್ಟದ ಸಂದರ್ಭಗಳಲ್ಲಿ ಇಸ್ಲಾಮಾಬಾದಿಗೆ ನೆರವು ನೀಡಿದೆಎಂದು ಅವರು ಹೇಳಿಕೊಂಡಿದ್ದಾರೆ.

ಜರ್ಮನಿ ಮೂಲದ ಪತ್ರಿಕೆಯೊಂದಕ್ಕೆ ಜನವರಿ ೧೬ರಂದು ನೀಡಿದ ಸಂದರ್ಶನದಲ್ಲಿ ಇಮ್ರಾನ್ ಖಾನ್ ಅವರು ಕಾಶ್ಮೀರ ವಿಷಯದ ಬಗ್ಗೆ ವಿಸ್ತೃತವಾಗಿ ಮಾತನಾಡಿದ್ದಾರೆ, ಆದರೆ, ’ಚೀನೀಯರು ಅತ್ಯಂತ ಸೂಕ್ಷ್ಮ ಹಾಗಾಗಿ ಪಾಕಿಸ್ತಾನವು ಉಘುರ್ ಮುಸ್ಲಿಮರ ಬಗ್ಗೆ ಅವರ ಜೊತೆಗೆ ಚರ್ಚಿಸುವುದಿಲ್ಲಎಂದು ಎಂದು ಹೇಳಿದ್ದಾರೆ.

ನೀವು ಚೀನಾದ ಉಘರ್ ಮುಸ್ಲಿಮರ ವಿಷಯದ ಬಗ್ಗೆ ಮಾತನಾಡುವುದೇ ಇಲ್ಲ, ಆದರೆ ಕಾಶ್ಮೀರದ ವಿಷಯದಲ್ಲಿ ಭಾರತವನ್ನು ಅತಿಯಾಗಿ ಟೀಕಿಸುತ್ತೀರಲ್ಲಎಂಬ ಪ್ರಶ್ನೆಗೆಸರಿ, ಎರಡು ಕಾರಣಗಳಿಗಾಗಿ. ಮೊದಲನೆಯದಾಗಿ ಭಾರತದಲ್ಲಿ ಏನಾಗುತ್ತಿದೆಯೋ ಅದನ್ನು ಚೀನಾದ ಉಘುರ್ಗಳಿಗೆ ಆಗುತ್ತಿರುವುದಕ್ಕೆ ಹೋಲಿಸಲು ಸಾಧ್ಯವಿಲ್ಲ. ಎರಡನೆಯದಾಗಿ, ಚೀನಾವು ನಮ್ಮ ಮಹಾನ್ ಗೆಳೆಯ. ಅದು ನಮ್ಮ ಸರ್ಕಾರಕ್ಕೆ ಹಿಂದಿನಿಂದ ಬಳುವಳಿಯಾಗಿ ಬಂದಿರುವ ಆರ್ಥಿಕ ಸಂಕಷ್ಟದ ನಮ್ಮ ಅತ್ಯಂತ ಕಷ್ಟದ ದಿನಗಳಲ್ಲಿ ನಮಗೆ ನೆರವಾಗಿದೆ. ಆದ್ದರಿಂದ ಸೂಕ್ಷ್ಮ ವಿಷಯಗಳ ಬಗ್ಗೆ ನಾವು ಚೀನಾದ ಜೊತೆಗೆ ಖಾಸಗಿಯಾಗಿ ಚರ್ಚಿಸುತ್ತೇವೆ, ಬಹಿರಂಗವಾಗಿ ಅಲ್ಲಎಂದು ಖಾನ್ ಉತ್ತರ ನೀಡಿದ್ದಾರೆ.

ತಮ್ಮ ರಾಷ್ಟ್ರದಲ್ಲಿ ವಾಸವಾಗಿರುವ ಅಲ್ಪಸಂಖ್ಯಾತರನ್ನು ದಮನಿಸುತ್ತಿರುವುದಕ್ಕಾಗಿ ಚೀನಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖಂಡನೆಗೆ ಗುರಿಯಾಗಿದೆ. ಉಘುರ್  ಮುಸ್ಲಿಮರ ಮೇಲೆ ಚೀನಾ ದೌರ್ಜನ್ಯಗಳನ್ನು ಎಸಗುತ್ತಿದ್ದು, ಅವರನ್ನು ಸಾಮೂಹಿಕ ಬಂಧನ ಶಿಬಿರಗಳಿಗೆ ಕಳುಹಿಸುತ್ತಿದೆ, ಅವರ ಧಾರ್ಮಿಕ ಚಟುವಟಿಕೆಗಳಲ್ಲಿ ಮಧ್ಯಪ್ರವೇಶ ಮಾಡುತ್ತಿದೆ ಮತ್ತು ಸಮುದಾಯವನ್ನು ಬಲವಂತದ ಮರುಶಿಕ್ಷಣ ಪಡೆಯಲು ಅಥವಾ ತಲೆಗೆ ತುರುಕುವ ತರಬೇತಿಗಳಿಗೆ ಕಳುಹಿಸುತ್ತಿದೆ.

ಆದಾಗ್ಯೂ
, ಪಾಕಿಸ್ತಾನವು ವಿಷಯದ ಬಗ್ಗೆ ಮೌನ ತಾಳಿದೆ.

ಭಾರತವು ಕಳೆದ ಆಗಸ್ಟ್ ತಿಂಗಳಲ್ಲಿ ಸಂವಿಧಾನದ ೩೭೦ನೇ ವಿಧಿಯನ್ನು ರದ್ದು ಪಡಿಸಿದಾಗ, ನವದೆಹಲಿಯ ವಿರುದ್ಧ ಕೂಗೆಬ್ಬಿಸಿದ ಪಾಕಿಸ್ತಾನ, ಕಾಶ್ಮೀರ ಪ್ರದೇಶದ ಮುಸ್ಲಿಮರ ಪರಿಸ್ಥಿತಿ ಬಗ್ಗೆ ಹಾಹಾಕಾರ ವ್ಯಕ್ತ ಪಡಿಸಿತ್ತು. ಖಾನ್ ಅವರು ಸ್ವತಃ ತಮ್ಮನ್ನು ಕಾಶ್ಮೀರಿ ಜನರ ರಾಯಭಾರಿ ಎಂದೂ ಕರೆದುಕೊಂಡಿದ್ದರು.

ಏನಿದ್ದರೂ, ಚೀನಾವು ಮುಸ್ಲಿಮರನ್ನು ನಡೆಸಿಕೊಳ್ಳುತ್ತಿರುವ ವಿಚಾರಕ್ಕೆ ಬಂದಾಗ ಮಾತ್ರ ಪಾಕಿಸ್ತಾನವು ಮೌನ ತಾಳುತ್ತದೆ. ಪ್ರತಿಕ್ರಿಯೆ ಕೇಳಿದರೂ ಪಾಕ್ ಪ್ರಧಾನಿ ತನ್ನದೇ ರಾಷ್ಟ್ರದಲ್ಲಿ ಬಹಳಷ್ಟು ವಿಷಯಗಳು ನಡೆಯುತ್ತಿವೆ ಎನ್ನುತ್ತಾ ವಿಷಯಾಂತರ ಮಾಡುತ್ತಾರೆ.

ಕಾಶ್ಮೀರದ ಬಗ್ಗೆ ವ್ಯಕ್ತಪಡಿಸುತ್ತಿರುವ ಕಾಳಜಿಯನ್ನೇ ಪಶ್ಚಿಮ ಚೀನಾದಲ್ಲಿ ಬಂಧನದಲ್ಲಿರುವ ಮುಸ್ಲಿಮರ ಬಗೆಗೂ ವ್ಯಕ್ತ ಪಡಿಸುವಂತೆ ಅಮೆರಿಕ ಪಾಕಸ್ತಾನವನ್ನು ಒತ್ತಾಯಿಸಿದೆ.

ಪಶ್ಚಿಮ ಚೀನಾದಲ್ಲಿ ಬಂಧಿತರಾಗಿರುವ ಮುಸ್ಲಿಮರ ಬಗೆಗೇ ಅಷ್ಟೇ ಪ್ರಮಾಣದಲ್ಲಿ ಪಾಕಿಸ್ತಾನವು ಕಳವಳ ವ್ಯಕ್ತ ಪಡಿಸುವುದನ್ನು ನೋಡಲು ನಾವು ಬಯಸುತ್ತೇವೆ.  ಅದೇ ರೀತಿ ಕಾಶ್ಮೀರಕ್ಕಿಂತಲೂ ಇವರ ಮಾನವ ಹಕ್ಕುಗಳ ಬಗ್ಗೆ ಹೆಚ್ಚಿನ ಕಳವಳ ವ್ಯಕ್ತವಾಗಬೇಕಾಗಿದೆ. ವಿಶ್ವಸಂಸ್ಥೆ ಮಹಾಧಿವೇಶನದ ಕಾಲದಲ್ಲಿ ಚೀನಾದ್ಯಂತ ಮುಸ್ಲಿಮರು ಎದುರಿಸುತ್ತಿರುವ ಭಯಾನಕ ಸ್ಥಿತಿ ಬೆಳಕಿಗೆ ಬಾರದಂತೆ ಮಾಡಲು ಚೀನಾದ ಆಡಳಿತ ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತದೆ ಎಂದು ಅಮೆರಿಕದ ಹಂಗಾಮೀ ಸಹಾಯಕ ಕಾರ್ಯದರ್ಶಿ (ದಕ್ಷಿಣ ಮತ್ತು ಮಧ್ಯ ಏಷ್ಯಾ) ಅಲೀಸ್ ವೆಲ್ಸ್ ಕಳೆದ ವರ್ಷ ಸೆಪ್ಟೆಂಬರಿನಲ್ಲಿ ಕಾಶ್ಮೀರಕ್ಕೆ ಸಂಬಂಧಿಸಿದಂತೆ ಪಾಕ್ ಪ್ರಧಾನಿಯ ಕಾಳಜಿ ಕುರಿತಾ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದ್ದರು.

No comments:

Advertisement