Monday, January 27, 2020

ಶಹೀನ್ ಬಾಗ್ ಚಳವಳಿ: ಶಾರ್ಜೀಲ್ ಇಮಾಮ್ ವಿರುದ್ಧ ಕೇಸ್

ಶಹೀನ್ ಬಾಗ್ ಚಳವಳಿ: ಶಾರ್ಜೀಲ್ ಇಮಾಮ್
ವಿರುದ್ಧ ಕೇಸ್
ಪ್ರಚೋದನಾಕಾರಿ ಭಾಷಣ ಆರೋಪ,  ಬಿಹಾರ ಮನೆ ಮೇಲೆ ದಾಳಿ
ಪಾಟ್ನಾ/ ನವದೆಹಲಿ: ಶಹೀನ್ ಬಾಗ್ ಪ್ರತಿಭಟನೆಯ ವೇಳೆಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದದಕ್ಕಾಗಿ ಶಾಜೀಲ್ ಇಮಾಮ್ ವಿರುದ್ಧ ದೆಹಲಿ ಪೊಲೀಸರು  2020 ಜನವರಿ 26ರ ಭಾನುವಾರ ರಾಷ್ಟ್ರದ್ರೋಹ ಆರೋಪ ಹೊರಿಸಿ ಪ್ರಕರಣ ದಾಖಲಿಸುತ್ತಿದ್ದಂತೆಯೇ,  ಜೆಹಾನಾಬಾದ್ ಪೊಲೀಸರು ಅವರ ಬಿಹಾರ ನಿವಾಸದ ಮೇಲೆ ದಾಳಿ ನಡೆಸಿ ಅವರ ಇಬ್ಬರು ಬಂಧುಗಳನ್ನು ಬಂಧಿಸಿದರು.

ಶಹೀನಾಬಾಗ್ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರಿಯ ನಾಗರಿಕ ನೋಂದಣಿ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳ ವೇಳೆಯಲ್ಲಿ ಭಾನುವಾರ ಬೆಳಗ್ಗೆ ಪ್ರಚೋದನಾಕಾರಿ ಭಾಷಣ ಮಾಡಿದ್ದಕ್ಕಾಗಿ ಶಾಜೀಲ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಪೊಲೀಸರ ಪ್ರಕಾರ ಜವಾಹರ ನೆಹರೂ ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿ ಹಾಗೂ ಬಿಹಾರದ ನಿವಾಸಿ ಇಮಾಮ್, ಸಿಎಎ ಮತ್ತು ಎನ್ಆರ್ಸಿ ವಿರುದ್ಧದ ಪ್ರತಿಭಟನೆಯ ಕಾಲದಲ್ಲಿ ಅತ್ಯಂತ ಪ್ರಚೋದನಾಕಾರಿ ಭಾಷಣ ಮಾಡಿರುವುದಾಗಿ ಹೇಳಲಾಯಿತು.

ಇದಕ್ಕೆ ಮುನ್ನ ಆತ ಕಳೆದ ವರ್ಷ ಡಿಸೆಂಬರ್ ೧೩ರಂದು ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದಲ್ಲಿ ಸಿಎಎ ಮತ್ತು ಎನ್ಆರ್ಸಿಯನ್ನು ವಿರೋಧಿಸುತ್ತಾ ಅತ್ಯಂತ ಪ್ರಚೋದನಾಕಾರಿ ಭಾಷಣ ಮಾಡಿರುವುದಾಗಿಯೂ ಪೊಲೀಸರು ತಿಳಿಸಿದ್ದು, ಸರ್ಕಾರದ ವಿರುದ್ಧ ಆತ ಮಾಡಿದ ಇನ್ನೂ ಪ್ರಚೋದನಾಕಾರಿ ಭಾಷಣ ಸಾಮಾಜಿಕ ಮಾಧ್ಯಮದಲ್ಲೂ ವೈರಲ್ ಆಗಿದೆ ಎಂದು ಪೊಲೀಸರು ಹೇಳಿದರು.
ಭಾಷಣಗಳು ದಾರ್ಮಿಕ ಸೌಹಾರ್ದಕ್ಕೆ ಹಾನಿ ಉಂಟು ಮಾಡುವುದಲ್ಲದೆ ಭಾರತದ ಏಕತೆ ಮತ್ತು ಸಮಗ್ರತೆಗೂ ಧಕ್ಕೆ ತರುವ ಸಾಧ್ಯತೆಗಳಿವೆ. ಕಾರಣಕ್ಕಾಗಿ ಆತನ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದರು.
ಆಡಿಯೋ ಭಾಷಣ ಒಂದರಲ್ಲಿ ಇಮಾಮ್ಬಂಗಾಳಿಗಳನ್ನು, ಹಿಂದುಗಳು ಮುಸ್ಲಿಮರಿಬ್ಬರನ್ನೂ ಕೊಲ್ಲಲಾಗುತ್ತಿದೆ ಅಥವಾ ಬಂಧನ ಕೇಂದ್ರಗಳಿಗೆ ತಳ್ಳಲಾಗುತ್ತಿದೆ, ಆದ್ದರಿಂದ ಅಸ್ಸಾಮ್ ಭಾರತದಿಂದ ಪ್ರತ್ಯೇಕಗೊಳ್ಳಬೇಕು ಮತ್ತು ಪಾಠ ಕಲಿಸಬೇಕುಎಂದು ಹೇಳಿರುವುದು ಕೇಳಿಸುತ್ತದೆ ಎಂದು ಪೊಲೀಸರು  ಹೇಳಿದರು.
ತಾನು ಲಕ್ಷ ಜನರನ್ನು ಸಂಘಟಿಸಬಲ್ಲೆ, ಅದು ಅಸ್ಸಾಮನ್ನು ಕಾಯಂ ಆಗಿ ಭಾರತದಿಂದ ಪ್ರತ್ಯೇಕಿಸಬಲ್ಲುದು, ಕಾಯಂ ಆಗಿ ಅಲ್ಲದೇ ಹೋದರೂ ಕೆಲವು ತಿಂಗಳುಗಳ ಅವಧಿಗಾದರೂ ಅದು ಅಸ್ಸಾಮನ್ನು ಪ್ರತ್ಯೇಕಿಸಬಲ್ಲುದುಎಂಬುದಾಗಿಯೂ ಇಮಾಮ್ ಆಡಿಯೋದಲ್ಲಿ ಹೇಳಿರುವುದಾಗಿ ವರದಿ ತಿಳಿಸಿತು.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೧೨೪ , ೧೫೩ಎ ಮತ್ತು ೫೦೫ರ ಅಡಿಯಲ್ಲಿ ಇಮಾಮ್ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದರು.
ಜನವರಿ ೧೬ರಂದು ಅಲಿಘಡ ಮುಸ್ಲಿಮ್ ವಿಶ್ವ ವಿದ್ಯಾಲಯದ (ಎಎಂಯು) ಆವರಣದಲ್ಲಿ ಮಾಡಿದ ಭಾಷಣಕ್ಕಾಗಿ ಇಮಾಮ್ ವಿರುದ್ಧ 2020 ಜನವರಿ 25ರ ಶನಿವಾರ ರಾಷ್ಟ್ರದ್ರೋಹದ ಪ್ರಕರಣ ದಾಖಲಾಗಿತ್ತು. ಅಸ್ಸಾಮ್ ಪೊಲೀಸರು ಕೂಡಾ ಇಮಾಮ್ ವಿರುದ್ಧ ಭಾಷಣಕ್ಕಾಗಿ ಭಯೋತ್ಪಾದನೆ ನಿಗ್ರಹ ಕಾಯ್ದೆ ಯುಎಪಿಎ (ಉಪ) ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.

No comments:

Advertisement