ರಾಹುಲ್ ’ಬಡಿಗೆ
ಏಟು’
ಬೆದರಿಕೆಗೆ ’ಸೂರ್ಯ
ನಮಸ್ಕಾರ’ದ ಪ್ರತ್ಯಸ್ತ್ರ ಸಂಸತ್ತಿನಲ್ಲಿ
ವಿಪಕ್ಷಗಳನ್ನು ಜಗ್ಗಾಡಿದ ಪ್ರಧಾನಿ
ಮೋದಿ
ನವದೆಹಲಿ:
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ’ಬಡಿಗೆ
ಏಟು’
ಚಾಟಿಗೆ ’ಸೂರ್ಯ
ನಮಸ್ಕಾರ’ದ
ಪ್ರತ್ಯಸ್ತ್ರ ಪ್ರಯೋಗ ಸೇರಿದಂತೆ ಕಾಶ್ಮೀರ, ಆಯೋಧ್ಯಾ, ಪೌರತ್ವ ತಿದ್ದುಪಡಿ ಕಾಯ್ದೆ ಸಹಿತವಾಗಿ ವಿವಿಧ ವಿಷಯಗಳನ್ನು ಪ್ರಸ್ತಾಪಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನ ಉಭಯ ಸದನಗಳಲ್ಲೂ 2020 ಫೆಬ್ರುವರಿ
06ರ ಗುರುವಾರ ವಿರೋಧ
ಪಕ್ಷಗಳನ್ನು ಹಿಗ್ಗಾಮುಗ್ಗಾ ಜಗ್ಗಾಡಿದರು.
ರಾಷ್ಟ್ರಪತಿಯವರ
ಭಾಷಣಕ್ಕ ವಂದನಾ ನಿರ್ಣಯದ ಮೇಲೆ ಉಭಯ ಸದನಗಳಲ್ಲಿ ನಡೆದ ಚರ್ಚೆಗೆ ಉತ್ತರಿಸಿದ ಪ್ರಧಾನಿ ಎನ್ಡಿಎ ಸರ್ಕಾರದ ದೃಢನಿರ್ಧಾರವಲ್ಲದೇ ಹೋಗಿದ್ದರೆ ರಾಷ್ಟ್ರವು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಹುಡುಕಲೂ ಇಂದಿಗೂ ಸಾಧ್ಯವಾಗುತ್ತಿರಲಿಲ್ಲ ಎಂದು ಪ್ರತಿಪಾದಿಸಿದರು.
ರಾಹುಲ್
ಗಾಂಧಿಯವರು ಪ್ರಧಾನಿ ಮೋದಿಯವರಿಗೆ ದೇಶದ ಯುವಕರು ಬಡಿಗೆ ಏಟಿನಮೂಲಕ ಮುಂದಿನ ಆರು ತಿಂಗಳಲ್ಲಿ ’ದಂಡ’ ವಿಧಿಸಲಿದ್ದಾರೆ ಎಂಬುದಾಗಿ ನೀಡಿದ ಎಚ್ಚರಿಕೆಗೆ ’ಸೂರ್ಯ ನಮಸ್ಕಾರ’ದ ಪ್ರತ್ಯಸ್ತ್ರ ಎಸೆದ
ಮೋದಿ, ’ಕಳೆದ ೨೦ ವರ್ಷಗಳಿಂದ ನಾನು
ಸಾಕಷ್ಟು ಅನುಭವಿಸಿದ್ದು ನನ್ನ ಬೆನ್ನು ’ದಂಡ-ನಿರೋಧಕ’
(ದಂಡ-ಪ್ರೂಫ್)’ ಆಗಿದೆ ಎಂದು ಎದಿರೇಟು ನೀಡಿದರು.
‘ಕಾಂಗ್ರೆಸ್
ನಾಯಕರೊಬ್ಬರು ಯುವಕರು ಮುಂದಿನ ೬ ತಿಂಗಳಲ್ಲಿ ಮೋದಿಯವರನ್ನು
ಬಡಿಗೆಗಳಿಂದ ಹೊಡೆಯಲಿದ್ದಾರೆ ಎಂಬುದಾಗಿ ಹೇಳಿದ್ದನ್ನು ನಾನು ಕೇಳಿದ್ದೇನೆ. ಬಡಿಗೆ ಏಟುಗಳನ್ನು ತಾಳಿಕೊಳ್ಳುವಷ್ಟು ಬೆನ್ನು ಬಲವಾಗಲು ನಾನು ನನ್ನ ಸೂರ್ಯ ನಮಸ್ಕಾರದ ವೇಗವನ್ನು
ಇನ್ನಷ್ಟು ಹೆಚ್ಚಿಸಲು ನಿರ್ಧರಿಸಿದ್ದೇನೆ’ ಎಂದು
ಪ್ರಧಾನಿ ಚುಚ್ಚಿದರು.
ಲೋಕಸಭೆಯಲ್ಲಿ
ರಾಹುಲ್ ಗಾಂಧಿಯವರ ಮೇಲಿನ ತಮ್ಮ ದಾಳಿಯನ್ನು ಮುಂದುವರೆಸಿದ ಅವರು ’ಕಳೆದ ೨೦ ವರ್ಷಗಳಲ್ಲಿ ನಾನು
ಸಾಕಷ್ಟು ನಿಂದನೆಗಳನ್ನು ಕೇಳಿದ್ದೇನೆ ಮತ್ತು ನಿಂದನೆ ನಿರೋಧಕವಾಗಿದ್ದೇನೆ. ಈಗ ನಾನು ನನ್ನನ್ನು
’ದಂಡ ನಿರೋಧಕ’ವನ್ನಾಗಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.
‘ರಾಷ್ಟ್ರದ
ನಿರುದ್ಯೋಗ ಸಮಸ್ಯೆಯನನು ಬಗೆಹರಿಸದೇ ಇದ್ದಲ್ಲಿ ದೇಶದ ಯುವಕರು ಮುಂದಿನ ಆರು ತಿಂಗಳಲ್ಲಿ ನಿಮ್ಮನ್ನು ಬಡಿಗೆಗಳಿಂದ ಹೊಡೆಯಲಿದ್ದಾರೆ’ ಎಂದು
ರಾಹುಲ್ ಗಾಂಧಿಯವರು ಬುಧವಾರ ದೆಹಲಿ ಸಭೆಯೊಂದರಲ್ಲಿ ಪ್ರಧಾನಿ ಮೋದಿ ಅವರಿಗೆ ಎಚ್ಚರಿಕೆ ನೀಡಿದ್ದರು.
’ಪ್ರಧಾನಿಯವರು ಈಗ ಭಾಷಣಗಳನ್ನು ಮಾಡುತ್ತಿದ್ದಾರೆ. ಆದರೆ ಆರು ತಿಂಗಳ ನಂತರ ಅವರು ತಮ್ಮ ಮನೆಯಿಂದ ಹೊರಕ್ಕೆ ಬರಲೂ ಸಾಧ್ಯವಾಗುವುದಿಲ್ಲ’ ಎಂದು ರಾಹುಲ್ ಗಾಂಧಿ ಹೇಳಿದ್ದರು.
’ಪ್ರಧಾನಿಯವರು ಈಗ ಭಾಷಣಗಳನ್ನು ಮಾಡುತ್ತಿದ್ದಾರೆ. ಆದರೆ ಆರು ತಿಂಗಳ ನಂತರ ಅವರು ತಮ್ಮ ಮನೆಯಿಂದ ಹೊರಕ್ಕೆ ಬರಲೂ ಸಾಧ್ಯವಾಗುವುದಿಲ್ಲ’ ಎಂದು ರಾಹುಲ್ ಗಾಂಧಿ ಹೇಳಿದ್ದರು.
ಎನ್ಡಿಎ ದೃಢ ನಿರ್ಧಾರ: ಎನ್ಡಿಎ ಸರ್ಕಾರದ ದೃಢ ನಿರ್ಧಾರ ಮತ್ತು ಖಚಿತತೆಯ ನಿಲುವು ದಶಕಗಳಷ್ಟು ಹಳೆಯದಾದ ರಾಮಜನ್ಮಭೂಮಿ ವಿಷಯ, ೩೭೦ನೇ ವಿಧಿ ಮತ್ತು ತ್ರಿವಳಿ ತಲಾಖ್ ನಂತಹ ಸಮಸ್ಯೆಗಳನ್ನು ಇತ್ಯರ್ಥಗೊಳಿಸಿದೆ ಎಂದು ಪ್ರಧಾನಿ ನುಡಿದರು.
ದೇಶವು
೨೦೧೪-೨೦೧೯ರ ನಡುವಣ ತಮ್ಮ ಸರ್ಕಾರದ ಕೆಲಸವನ್ನು ನೋಡಿದೆ ಮತ್ತು ೨೦೧೯ರಲ್ಲಿ ಇನ್ನೂ ಹೆಚ್ಚಿನ ಬಹುಮತದ ಜನಾದೇಶವನ್ನು ನೀಡಿದೆ ಎಂದು ಮೋದಿ ಹೇಳಿದರು.
‘ನಾವು
ಹಳೆಯ ಮಾರ್ಗದಲ್ಲೇ ಮುಂದುವರೆದಿದ್ದರೆ ಸಂವಿಧಾನದ ೩೭೦ನೇ ವಿಧಿ ರದ್ದಾಗುತ್ತಿರಲಿಲ್ಲ. ತ್ರಿವಳಿ ತಲಾಖ್ ಹೋಗುತ್ತಿರಲಿಲ್ಲ. ನಾವು ಹಳೆಯ ದಾರಿಯಲ್ಲೇ ಸಾಗಿದ್ದರೆ ರಾಮ ಜನ್ಮಭೂಮಿ ವಿಷಯವು ಪರಿಹಾರವಾಗುತ್ತಿರಲಿಲ್ಲ. ಕರ್ತಾರಪುರ ಕಾರಿಡಾರ್ ನನಸಾಗುತ್ತಿರಲಿಲ್ಲ. ಭಾರತ-ಬಾಂಗ್ಲಾದೇಶ ಭೂ ಒಪ್ಪಂದ ಇರುತ್ತಿರಲಿಲ್ಲ’ ಎಂದು
ಪ್ರಧಾನಿ ಹೇಳಿದರು.
ನೂತನ
ಪೌರತ್ವ ಕಾಯ್ದೆ ರೂಪಿಸಿದ ಕ್ರಮ ಮತ್ತು ಜಮ್ಮು ಹಾಗೂ ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಿನ ಬಳಿಕ ಕಾಶ್ಮೀರಿ ನಾಯಕರನ್ನು ತಮ್ಮ ಸರ್ಕಾರವು ಬಂಧನದಲ್ಲಿ ಇಟ್ಟಿರುವುದನ್ನು ಪ್ರಶ್ನಿಸುತ್ತಿರುವುದಕ್ಕಾಗಿ ವಿಪಕ್ಷಗಳ ಮೇಲೆ ಪ್ರಧಾನಿ ಹರಿಹಾಯ್ದರು.
ಕಾಶ್ಮೀರದ
ಅಸ್ಮಿತೆ: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬಾ ಮುಫ್ತಿ ಮತ್ತು ಓಮರ್ ಅಬ್ದುಲ್ಲ ಅವರು ೩೭೦ನೇ ವಿಧಿ ರದ್ದು ಪಡಿಸಿದ್ದಕ್ಕಾಗಿ ಮಾಡಿದ ಟೀಕೆಗಳಿಗಾಗಿ ಅವರನ್ನು ತರಾಟೆಗೆ ತೆಗೆದುಕೊಂಡ ಮೋದಿ, ’ಉಗ್ರಗಾಮಿಗಳ ಹಾವಳಿಯಿಂದಾಗಿ ಕಾಶ್ಮೀರಿ ಪಂಡಿತರು ಕಣಿವೆಯನ್ನು ತ್ಯಜಿಸಲು ಆರಂಭಿಸಿದ ೧೯೯೦ರ ಜನವರಿ ೧೯ರಂದೇ ಕಾಶ್ಮೀರದ ಅಸ್ಮಿತೆಯು ಹುಗಿಯಲ್ಪಟಿದೆ’ ಎಂದು
ಹೇಳಿದರು.
‘ಕಾಶ್ಮೀರವನ್ನು
ಕೇವಲ ಕಬಳಿಕೆಯ ಭೂಮಿಯನ್ನಾಗಿ ಮಾಡಿದ್ದು ಯಾರು? ಬಾಂಬ್ಗಳು ಮತ್ತು ಬಂದೂಕುಗಳೇ ಕಾಶ್ಮೀರದ ಅಸ್ಮಿತೆಯಾಗುವಂತೆ ಮಾಡಿದ್ದು ಯಾರು? ಜನವರಿಯ ಆ ಕರಾಳ ರಾತ್ರಿಯನ್ನು
ಯಾರಾದರೂ ಮರೆಯಲು ಸಾಧ್ಯವಿದೆಯೇ? ವಾಸ್ತವವಾಗಿ ಕಾಶ್ಮೀರದ ಅಸ್ಮಿತೆಯು ಸಾಮರಸ್ಯದ ಜೊತೆಗೆ ಅತ್ಯಂತ ನಿಕಟವಾಗಿ ಜೋಡಿಕೊಂಡಿದೆ’ ಎಂದು
ಪ್ರಧಾನಿ ಹೇಳಿದರು.
ತಮ್ಮ
ಸರ್ಕಾರದ ಸಾಧನೆಗಳನ್ನು ವಿವರಿಸಿದ ಪ್ರಧಾನಿ ’ದೇಶದ ಜನರು ೨೦೧೪ರಿಂದ ೨೦೧೯ರವರೆಗಿನ ಅವಧಿಯಲ್ಲಿ ನನ್ನ ಸರ್ಕಾರದ ಕೆಲಸವನ್ನು ನೋಡಿದ್ದಾರೆ ಮತ್ತು ೨೦೧೯ರಲ್ಲಿ ಇನ್ನೂ ಪ್ರಚಂಡ ಬಹುಮತದ ಜನಾದೇಶ ನೀಡಿದ್ದಾರೆ’ ಎಂದು
ನುಡಿದರು.
‘ಭಾರತದ
ಜನರು ಐದು ವರ್ಷಗಳ ನಮ್ಮ ಕೆಲಸವನ್ನು ನೋಡಿದ್ದಾರೆ. ನಾವು ಇನ್ನಷ್ಟು ವೇಗವಾಗಿ ಕೆಲಸ ಮಾಡಬೇಕು ಎಂದು ಅವರು ನಮಗೆ ಪುನಃ ಆಶೀರ್ವಾದ ಮಾಡಿದ್ದಾರೆ’ ಎಂದು
ಅವರು ನುಡಿದರು.
ಸಮಸ್ಯೆಗಳನ್ನು
ನೆನೆಗುದಿಯಲ್ಲಿ ಇರಿಸಲು ಭಾರತ ಇನ್ನು ಸಿದ್ಧವಿಲ್ಲ ಎಂದು ಹೇಳಿದ ಮೋದಿ, ’ಹೀಗಾಗಿಯೇ ದೃಢ ನಿರ್ಧಾರ ಮತ್ತು ನಿರ್ಣಾಯಕತೆ, ಸೂಕ್ಷ್ಮತೆ ಮತ್ತು ಪರಿಹಾರವೇ ನಮ್ಮ ಗುರಿ ಮತ್ತು ಪ್ರಮಾಣವಾಗಿದೆ’ ಎಂದು
ನುಡಿದರು.
‘ಭಾರತದ
ಜನರು ಸರ್ಕಾರವನ್ನು ಮಾತ್ರವೇ ಬದಲಾಯಿಸಿಲ್ಲ. ಅವರು ’ಸಾರೋಕಾರ’
(ವರ್ತನೆ) ಕೂಡಾ ಬದಲಾಗಬೇಕು ಎಂದು ಬಯಸಿದ್ದಾರೆ. ನಾವು ಹಳೆಯ ಮಾರ್ಗದಲ್ಲೆ ಕೆಲಸ ಮಾಡಿದ್ದರೆ ಸಂವಿಧಾನದ ೩೭೦ನೇ ವಿಧಿಯು ಇತಿಹಾಸವಾಗುತ್ತಿರಲೇ ಇಲ್ಲ, ಮುಸ್ಲಿಂ ಮಹಿಳೆಯರು ತ್ರಿವಳಿ ತಲಾಖ್ ಪರಿಣಾಮವಾಗಿ ನರಳುತ್ತಲೇ ಇರಬೇಕಾಗುತ್ತಿತ್ತು’ ಎಂದು
ಮೋದಿ ಹೇಳಿದರು.
ಪೌರತ್ವ
ಕಾಯ್ದೆಗೆ ಬಲವಾದ ಸಮರ್ಥನೆ
ತಮ್ಮ
ಸರ್ಕಾರವು ನೆರೆಯ ರಾಷ್ಟ್ರಗಳ ಧಾರ್ಮಿಕ ಅಲ್ಪಸಂಖ್ಯಾತರನ್ನು ರಕ್ಷಿಸಲು ರೂಪಿಸಿದ ಪೌರತ್ವ ಕಾಯ್ದೆಯನ್ನು ಬಲವಾಗಿ ಸಮರ್ಥಿಸಿದ ಪ್ರಧಾನಿ, ’ಕಾಂಗ್ರೆಸ್ ಮತ್ತು ಅದರ ಪ್ರತಿಧ್ವನಿ ವ್ಯವಸ್ಥೆಯು ಭಾರತೀಯರಿಂದ ಪೌರತ್ವವನ್ನು ಕಿತ್ತುಕೊಳ್ಳಲಾಗುತ್ತಿದೆ ಎಂಬ ಕಾಲ್ಪನಿಕ ಭೀತಿಗಳನ್ನು ಹರಡುತ್ತಿದೆ’ ಎಂದು
ಟೀಕಿಸಿದರು.
‘ಯಾರೇ
ಭಾರತೀಯ- ಅವರು ಹಿಂದುಗಳಿರಲಿ, ಮುಸ್ಲಿಮರಿರಲಿ, ಜೈನರಿರಲಿ, ಸಿಕ್ಖರಿರಲಿ, ಕ್ರೈಸ್ತರಿರಲಿ- ಈ ಕಾನೂನಿನ ಕಾರಣದಿಂದ
ತಮ್ಮ ಪೌರತ್ವವನ್ನು ಕಳೆದುಕೊಳ್ಳುವುದಿಲ್ಲ’ ಎಂದು
ಪ್ರಧಾನಿ ಸದನದಲ್ಲಿ ಪುನರುಚ್ಚರಿಸಿದರು.
ತಮ್ಮ
೧೦೦ ನಿಮಿಷಗಳ ಭಾಷಣದ ಕೊನೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ಮೇಲಿನ ದಾಳಿಗಾಗಿ ವಿರೋಧ ಪಕ್ಷಗಳ ಮೇಲೆ ಹರಿಹಾಯ್ದ ಪ್ರಧಾನಿ ಮೋದಿ, ತಮ್ಮ ನಿಲುವನ್ನು ಪುನರ್ ಪರಿಶೀಲನೆ ಮಾಡುವಂತೆ ವಿರೋಧ ಪಕ್ಷಗಳನ್ನು ಆಗ್ರಹಿಸಿದರು. ಪ್ರತಿಭಟನೆಗಳು ಮತ್ತು ಕಾನೂನು ಪಾಲನೆಗೆ ಜನರು ನಿರಾಕರಿಸಿದರೆ ರಾಷ್ಟ್ರವು ಅರಾಜಕತೆಯತ್ತ ಹೊರಳಬಹುದು ಎಂದೂ ಅವರು ಎಚ್ಚರಿಸಿದರು.
‘ರಾಜಸ್ಥಾನ
ವಿಧಾನಸಭೆಯು ಕಾನೂನು ಒಂದನ್ನು ರಚಿಸಿದರೆ ಮತ್ತು ಯಾರೂ ಅದನ್ನು ಅಂಗೀಕರಿಸದಿದರೆ ಪರಿಸ್ಥಿತಿ ಏನಾಗುತ್ತದೆ? ಮಧ್ಯ ಪ್ರದೇಶ ವಿಧಾನಸಭೆ ಏನಾದರೂ ಒಂದನ್ನು ನಿರ್ಧರಿಸಿದರೆ ಮತ್ತು ಜನರು ಅದರ ವಿರುದ್ಧ ಬೀದಿಗೆ ಇಳಿದರೆ? ನೀವು ಈ ರೀತಿಯಲ್ಲಿ ರಾಷ್ಟ್ರವನ್ನು
ನಡೆಸಲು ಬರುತ್ತದೆಯೇ? ಇದು ಅರಾಜಕತೆಯ ದಾರಿಯಾಗುತ್ತದೆ’ ಎಂದು
ಪ್ರಧಾನಿ ನುಡಿದರು.
‘ಸಂವಿಧಾನದ
ರಕ್ಷಣೆ ಬಗ್ಗೆ ಮಾತನಾಡುತ್ತಿರುವ ಕಾಂಗ್ರೆಸ್ ಹಲವಾರು ಸಂದರ್ಭಗಳಲ್ಲಿ ಸಂವಿಧಾನದ ಸ್ಫೂರ್ತಿಯನ್ನೇ ಉಲ್ಲಂಘಿಸಿದೆ. ಸಂವಿಧಾನದ ರಕ್ಷಣೆ ಬಗ್ಗೆ ಮಾತನಾಡಲಾಗುತ್ತಿದೆ. ನಾನು
ಒಪ್ಪುತ್ತೇನೆ. ಕಾಂಗ್ರೆಸ್ ಈ ಮಾತನ್ನು ದಿನಕ್ಕೆ
೧೦೦ ಬಾರಿ ಪಠಿಸಬೇಕು. ಆಗ ಅವರಿಗೆ ಅವರ
ಹಿಂದಿನ ತಪ್ಪುಗಳು ಅರಿವಾಗಬಹುದು. ತುರ್ತು ಪರಿಸ್ಥಿತಿ ಕಾಲದ ಘೋಷಣೆಯನ್ನು ನೀವು ಮರೆತಿದ್ದೀರಾ? ಚುನಾಯಿತ ಸರ್ಕಾರಗಳನ್ನು ವಜಾಗೊಳಿಸಿದ್ದು ಮರೆತುಹೋಗಿದೆಯೇ? ಸಂಪುಟ ನಿರ್ಣಯಗಳನ್ನು ಹರಿದು ಹಾಕಿದ್ದು ಮರೆತುಹೋಯಿತೇ?’ ಎಂದು ಮೋದಿ ಚುಚ್ಚಿದರು.
೧೯೮೪ರಲ್ಲಿ
ಸಿಖ್ ವಿರೋಧಿ ದಂಗೆಯಲ್ಲಿ ಸಹಸ್ರಾರು ಸಿಕ್ಖರನ್ನು ಕೊಲ್ಲಲಾಯಿತು, ಕೆಲವರನ್ನು ಜೀವಂತ ದಹಿಸಲಾಯಿತು. ಆದರೂ ಕಾಂಗ್ರೆಸ್ ದಂಗೆಗಳಲ್ಲಿ ಶಾಮೀಲಾದ ಆರೋಪ ಹೊತ್ತ ವ್ಯಕ್ತಿಯನ್ನೇ ರಾಜ್ಯ ಒಂದರ ಮುಖ್ಯಮಂತ್ರಿಯಗಿ ನೇಮಿಸಿತು ಎಂದು ಪ್ರಧಾನಿ ಛೇಡಿಸಿದರು.
ನೆಹರೂ
ಏನು ಹೇಳಿದ್ದರು ಗೊತ್ತಾ?
ಆಗಿನ
ಪ್ರಧಾನಿ ಜವಾಹರಲಾಲ್ ನೆಹರೂ ಅವರ ಪತ್ರವೊಂದನ್ನೂ ಪ್ರಧಾನಿ ಮೋದಿ ಉಲ್ಲೇಖಿಸಿದರು. ಉಭಯ ರಾಷ್ಟ್ರಗಳ ಅಲ್ಪಸಂಖ್ಯತರನ್ನು ರಕ್ಷಿಸಲು ರೂಪಿಸಲಾದ ನೆಹರೂ-ಲಿಯಾಖತ್ ಒಪ್ಪಂದಕ್ಕೆ ಸಹಿ ಮಾಡುವ ಮುನ್ನ ಜವಾಹರಲಾಲ್ ನೆಹರೂ ಅವರು ಅಸ್ಸಾಮಿನ ಮುಖ್ಯಮಂತ್ರಿ ಗೋಪಿನಾಥ್ ಬೋರ್ಡೋಲಿ ಅವರಿಗೆ ಈ ಪತ್ರ ಬರೆದಿದ್ದರು
ಎಂದು ಮೋದಿ ಹೇಳಿದರು.
‘ಇದು
ನಮ್ಮನ್ನು ಹಿಂದು-ಮುಸ್ಲಿಮ್ ಎಂಬುದಾಗಿ ಆರೋಪಿಸುವವರಿಗಾಗಿ. ’ನೀವು ಹಿಂದೂ ನಿರಾಶ್ರಿತರು ಮತ್ತು ಮುಸ್ಲಿಮ್ ವಲಸಿಗರ ನಡುವಣ ವ್ಯತ್ಯಾಸವನ್ನು ಗಮನಿಸಬೇಕು ಹಾಗೂ ರಾಷ್ಟ್ರವು ನಿರಾಶ್ರಿತರ ಹೊಣೆಗಾರಿಕೆಯನ್ನು ತೆಗೆದುಕೊಳ್ಳಲೇಬೇಕು ಎಂದು ನೆಹರೂ ಅವರು ಈ ಪತ್ರದಲ್ಲಿ ಹೇಳಿದ್ದರು
ಎಂದು ಮೋದಿ ವಿವರಿಸಿದರು.
‘ನೆಹರೂ
-ಲಿಯಾಖತ್ ಒಪ್ಪಂದದ ಬಳಿಕ, ನೆಹರೂ ಅವರು ೧೯೫೦ರ ನವೆಂಬರ್ ೫ರಂದು ಲೋಕಸಭೆಯಲ್ಲಿ ತೊಂದರೆಗೆ ಒಳಗಾಗಿ ಭಾರತಕ್ಕೆ ಬಂದ ಜನರಿಗೆ ಪೌರತ್ವ ನೀಡಬೇಕು ಎಂಬ ವಿಷಯದಲ್ಲಿ ಸಂಶಯವೇ ಇಲ್ಲ ಮತ್ತು ಇದಕ್ಕೆ ಕಾನೂನು ಅನುಮತಿ ಕೊಡದಿದ್ದರೆ ಕಾನೂನನ್ನು ಬದಲಾಯಿಸಬೇಕು ಎಂದು ಹೇಳಿದ್ದರು’
ಎಂದು ಪ್ರಧಾನಿ ಹೇಳಿದರು.
‘ಪಂಡಿತ್
ನೆಹರೂ ಅವರು ಕೋಮುವಾದಿಯಾಗಿದ್ದರೇ? ಅವರು ಹಿಂದೂ ರಾಷ್ಟ್ರವನ್ನು ಬಯಸಿದ್ದರೇ? ಎಂಬುದಾಗಿ ನಾನು ಕಾಂಗ್ರೆಸ್ಸನ್ನು ಪ್ರಶ್ನಿಸಬಯಸುತ್ತೇನೆ’ ಎಂದು
ಪ್ರಧಾನಿ ಮೋದಿ ಪೌರತ್ವ ಕಾಯ್ದೆಯನ್ನು ವಿರೋಧಿಸುತ್ತಿರುವ ವಿಪಕ್ಷಗಳಿಗೆ ಎದಿರೇಟು ನೀಡಿದರು.
ರಾಜ್ಯಸಭೆಯಲ್ಲಿ
ಮಾತನಾಡಿದ ಪ್ರಧಾನಿ ಮೋದಿ, ೩೭೦ನೇ ವಿಧಿ ರದ್ದು ಪಡಿಸಿದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಕೈಗೆತ್ತಿಕೊಂಡ ಕ್ರಮಗಳನ್ನು ಪಟ್ಟಿ ಮಾಡಿದರು. ೩೭೦ನೇ ವಿಧಿ ರದ್ದು ಪಡಿಸಿದ ಬಳಿಕ ಜಮ್ಮು ಮತ್ತು ಕಾಶ್ಮೀರದ ಜನರಿಗೆ ಇದೇ ಮೊತ್ತ ಮೊದಲ ಬಾರಿಗೆ ಮೀಸಲಾತಿಯ ಸವಲತ್ತುಗಳು ಲಭಿಸಿವೆ. ಬ್ಲಾಕ್ ಅಭಿವೃದ್ಧಿ ಮಂಡಳಿಯ ಚುನಾವಣೆಗಳು ನಡೆದಿವೆ. ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ ಜಾರಿಗೆ ಬಂದಿದೆ. ಭ್ರಷ್ಟಾಚಾರ ನಿಗ್ರಹ ಬ್ಯೂರೋ ರಚಿಸಲಾಗಿದೆ’ ಎಂದು
ಮೋದಿ ವಿವರಿಸಿದರು.
‘ಗುಲಾಂ
ನಬಿ ಆಜಾದ್ ಅವರು ಯಾವುದೇ ಚರ್ಚೆ ಇಲ್ಲದೆ ಜಮ್ಮು ಮತ್ತು ಕಾಶ್ಮೀರ ಕುರಿತು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. ಇದು ಸರಿಯಲ್ಲ. ಇಡೀ ರಾಷ್ಟ್ರವೇ ವಿಷಯದ ಕುರಿತ ವಿಸ್ತೃತ ಚರ್ಚೆಯನ್ನು ನೋಡಿದೆ. ಸಂಸದರು ನಿರ್ಣಯಗಳ ಪರವಾಗಿ ಮತ ನೀಡಿದ್ದಾರೆ’ ಎಂದು ಪ್ರಧಾನಿ ಹೇಳಿದರು.
ನಿರ್ಣಯ
ಅಂಗೀಕರಿಸಿದ ೨೦೧೯ರ ಆಗಸ್ಟ್ ೫ರ ದಿನವನ್ನು ’ಕರಾಳ
ದಿನ’
ಎಂಬುದಾಗಿ ಟೀಕಿಸಿದ್ದಕ್ಕಾಗಿ ಮರುಮಲರ್ಚಿ ದ್ರಾವಿಡ ಮುನ್ನೇತ್ರ ಕಳಗಂ (ಎಂಡಿಎಂಕೆ) ನಾಯಕ ವೈಕೋ ಅವರನ್ನು ತರಾಟೆಗೆ ತೆಗೆದುಕೊಂಡ ಪ್ರಧಾನಿ ’ವೈಕೋ ಜಿ, ಅದು ಜಮ್ಮು ಮತ್ತು ಕಾಶ್ಮೀರಕ್ಕೆ ಕರಾಳ ದಿನವಲ್ಲ, ಬದಲಿಗೆ ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದ ಬೆಳೆಸಿದವರ ಪಾಲಿಗೆ ಕರಾಳ ದಿನ. ಪ್ರತ್ಯೇಕತಾವಾದಿಗಳಿಗೆ ಕರಾಳ ದಿನ’ ಎಂದು ನುಡಿದರು.
ಗಾಂಧಿ
ನಿಮಗೆ ಟ್ರೇಲರ್, ನಮಗೆ ಜೀವನ
ಲೋಕಸಭೆಯ
ಭಾಷಣದ ಒಂದು ಹಂತದಲ್ಲಿ ಪ್ರಧಾನಿ
ಮೋದಿ ಅವರು ’ರಾಜಕೀಯ ಪ್ರಚಾರಕ್ಕೆ ರಾಷ್ಟ್ರಪಿತ ಮಹಾತ್ಮ ಗಾಂಧಿ ನಿಮಗೆ ಟ್ರೇಲರ್ ಆಗಿರಬಹುದು. ಆದರೆ ನಮಗೆ ಅವರು ಜೀವನ’ ಎಂದು ಹೇಳಿದರು.
ಪ್ರಧಾನಿ
ಭಾಷಣದ ವೇಳೆಯಲ್ಲಿ ಸಂಸದ ಅನಂತ್ ಕುಮಾರ ಹೆಗಡೆ ಹೇಳಿಕೆಗೆ ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸಿ ಸದನಲ್ಲಿ ಕೋಲಾಹಲವೆಬ್ಬಿಸಿದವು.
ಕಾಂಗ್ರೆಸ್
ನಾಯಕ ಅಧಿರ್ ರಂಜನ್, ’ಇದು ಟ್ರೇಲರ್ ಮಾತ್ರ’ ಎಂದರು. ಇದಕ್ಕೆ ತಿರುಗೇಟು ನೀಡಿದ ಮೋದಿ, ’ನಿಮಗೆ ಗಾಂಧಿ ಟ್ರೇಲರ್ ಆಗಿರಬಹುದು ಆದರೆ ನಮಗೆ ಅವರು ಜೀವನ’ ಎಂದರು.
ನಂತರ
ಭಾಷಣ ಮುಂದುವರಿಸಿದ ಪ್ರಧಾನಿ, ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ನಮಗೆ ಸ್ಪೂರ್ತಿ ತುಂಬಿದ್ದು, ಮುಂದಿನ ದಿನಗಳಲ್ಲಿ ದೇಶ ಮುನ್ನಡೆಸುವ ನೀಲನಕ್ಷೆ ಹಾಕಿಕೊಟ್ಟಿದ್ದಾರೆ
ಎಂದು ಹೇಳಿದರು.
ರಾಹುಲ್
ಗಾಂದಿ ಟ್ಯೂಬ್ ಲೈಟ್
ಒಂದು
ಹಂತದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಪ್ರಧಾನಿ ನರೇಂದ್ರ ಮೋದಿ ಟ್ಯೂಬ್ ಲೈಟ್ಗೆ ಹೋಲಿಸಿದರು. ಈ
ಮೂಲಕ ಮೋದಿ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕನ ಕಾಲೆಳೆದರು.
ಲೋಕಸಭೆಯಲ್ಲಿ
ರಾಷ್ಟ್ರಪತಿಗಳಿಗೆ ಧನ್ಯವಾದ ತಿಳಿಸುವ ಭಾಷಣದ ವೇಳೆ ಪ್ರಧಾನಿ ಮೋದಿ ಭಾಷಣ ಮಾತನಾಡಿದರು. ಈ ವೇಳೆ ಸ್ವಲ್ಪ
ತಡವಾಗಿ ಮಾತನಾಡಲು ಎದ್ದು ನಿಂತ ರಾಹುಲ್ ಗಾಂಧಿಯವರನ್ನು ಮೋದಿ ಟ್ಯೂಬ್ ಲೈಟ್ಗೆ ಹೋಲಿಸಿದರು.
‘ಕಳೆದ
ಸುಮಾರು ೩೦-೪೦ ನಿಮಿಷದಿಂದ
ನಾನು ಇಲ್ಲಿ ಮಾತನಾಡುತ್ತಿದ್ದೇನೆ. ಆದರೆ ಅಲ್ಲಿಯತನಕ ಕರೆಂಟ್ ತಲುಪಲು ಇಷ್ಟು ಸಮಯ ಬೇಕಾಯಿತು. ಕೆಲವು ಟ್ಯೂಬ್ ಲೈಟ್ಗಳು ಹಾಗೆಯೇ’ ಎಂದು ರಾಹುಲ್ ಗಾಂಧಿಯವರನ್ನು ಮೋದಿ ಛೇಡಿಸಿದರು.
No comments:
Post a Comment