ರಾಷ್ಟ್ರೀಯ
ಜನಸಂಖ್ಯಾ ನೋಂದಣಿಗೆ ಉದ್ಧವ್ ಅಸ್ತು
ಮಹಾ
’ಆಘಾಡಿ’ ಅಂಗಪಕ್ಷಗಳಲ್ಲಿ
ಮತ್ತಷ್ಟು ಬಿರುಕು
ನ್ಯಾಷನಲಿಸ್ಟ್
ಕಾಂಗ್ರೆಸ್ ಪಕ್ಷ (ಎನ್ಸಿಪಿ) ಮತ್ತು ಕಾಂಗ್ರೆಸ್ ಪಕ್ಷದ ವಿರೋಧದ ಹೊರತಾಗಿಯೂ, ಮಹಾರಾಷ್ಟ್ರದಲ್ಲಿ
ಮೇ ೧ರಿಂದ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನು ಅನುಷ್ಠಾನಗೊಳಿಸಲು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಅತ್ಯಾಸಕ್ತರಾಗಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿದವು.
ರಾಷ್ಟ್ರೀಯ
ಜನಸಮಖ್ಯಾ ನೋಂದಣಿಯು ’ಮಾರುವೇಶದಲ್ಲಿ ಬಂದಿರುವ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ)’ ಹೊರತು ಬೇರೇನೂ ಅಲ್ಲ ಎಂದು ಕಾಂಗ್ರೆಸ್ ಪಕ್ಷವು ಈ ಮೊದಲೇ ಹೇಳಿತ್ತು
ಮತ್ತು ರಾಜ್ಯದಲ್ಲಿ ಎನ್ಪಿಆರ್ ಜಾರಿಗೆ ಆಕ್ಷೇಪ ವ್ಯಕ್ತ ಪಡಿಸಿತ್ತು.
ಮಾಧ್ಯಮ
ಒಂದರ ಜೊತೆಗೆ ಮಾತನಾಡಿದ ಎನ್ಸಿಪಿಯ ಮಜೀದ್ ಮೆಮನ್ ಅವರು ’ಪಕ್ಷವು ಎನ್ಪಿಆರ್ನ್ನು ಬೆಂಬಲಿಸುವುದಿಲ್ಲ ಎಂಬುದು ಸುಸ್ಪಷ್ಟ. ನಮ್ಮ ಮುಖ್ಯಸ್ಥ ಶರದ್ ಪವಾರ್ ಅವರು ಇದನ್ನು ಸ್ಪಷ್ಟ ಪಡಿಸಿದ್ದಾರೆ. ಅಂತಿಮ ತೀರ್ಮಾನವನ್ನು ಮೂರೂ ಪಕ್ಷಗಳು ಕೈಗೊಳ್ಳಬೇಕಾಗಿದೆ ಎಂದು ಹೇಳಿದರು.
ಪ್ರಮುಖ
ವಿಷಯಗಳಲ್ಲಿಯೇ ಮೈತ್ರಿಕೂಟದ ಅಂಗ ಪಕ್ಷಗಳು ಭಿನ್ನಮತ ತಾಳಿದ್ದು ಇದೇ ಮೊದಲೇನಲ್ಲ. ಮಹಾರಾಷ್ಟ್ರದಲ್ಲಿ ತಮ್ಮ ಮೈತ್ರಿಕೂಟವು ಅಧಿಕಾರಕ್ಕೆ ಬಂದ ಬಳಿಕ ಶುಕ್ರವಾರ ಮುಖ್ಯಮಂತ್ರಿ ಠಾಕ್ರೆ ವಿರುದ್ಧದ ತಮ್ಮ ಮೊತ್ತ ಮೊದಲ ಟೀಕೆಯಲ್ಲಿ ಎನ್ಸಿಪಿ ನಾಯಕ ಶರದ್ ಪವಾರ್ ಅವರು ಎಲ್ಗರ್ ಪರಿಷದ್ ಪ್ರಕರಣದ ತನಿಖೆಯನ್ನು ರಾಜ್ಯ ಪೊಲೀಸರಿಂದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ವಹಿಸಿಕೊಳ್ಳಲು ಶಿವಸೇನಾ ಮುಖ್ಯಸ್ಥರು ಅವಕಾಶ ನೀಡಿದ್ದು ತಪ್ಪು ಎಂದು ಹೇಳಿದ್ದರು.
ಪುಣೆ
ನ್ಯಾಯಾಲಯವು ಎಲ್ಗರ್ ಪರಿಷದ್ ಪ್ರಕರಣದ ತನಿಖೆಯನ್ನು ಮುಂಬೈಯ ರಾಷ್ಟ್ರೀಯ ತನಿಖಾ ಸಂಸ್ಥೆಯ ನ್ಯಾಯಾಲಯಕ್ಕೆ ವಹಿಸಲು ಅನುಮತಿ ನೀಡಿ ಶುಕ್ರವಾರ ಆದೇಶ ನೀಡಿದ ಬಳಿಕ ಪವಾರ್ ಈ ಹೇಳಿಕೆ ನೀಡಿದ್ದರು.
ಕೇಂದ್ರೀಯ
ಸಂಸ್ಥೆಯ ತನಿಖೆಯನ್ನು ಅಕ್ರಮ ಎಂದಾಗಲೀ ಅಸಮಪರ್ಕಎಂದಾಗಲೀ ಹೇಳಲು ಸಾಧ್ಯವಿಲ್ಲ ಎಂದು ಕೂಡಾ ನ್ಯಾಯಾಲಯ ಹೇಳಿತ್ತು.
ಎನ್ಸಿಪಿ ನಾಯಕ, ರಾಜ್ಯದ ಗೃಹ ಸಚಿವ ಅನಿಲ್ ದೇಶಮುಖ್ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಯವರು ತಮ್ಮನ್ನು ನಿರ್ಲಕ್ಷಿಸಿದ್ದಾರೆ ಎಂದು ಹೇಳಿದ್ದರು.
ಮಹಾರಾಷ್ಟ್ರ
ವಿಧಾನಸಭಾ ಚುನಾವಣೆಗಳ ಬಳಿಕ ಮುಖ್ಯಮಂತ್ರಿ ಹುದ್ದೆಗೆ ಸಂಬಂಧಿಸಿದಂತೆ, ತನ್ನ ದೀರ್ಘಕಾಲದ ಮಿತ್ರಪಕ್ಷವಾದ ಬಿಜೆಪಿಯ ಜೊತೆಗಿನ ಶಿವಸೇನೆಯ ಕಹಿ ವೈಮನಸ್ಯದ ಬಳಿಕ ಪರಸ್ಪರ ವಿರುದ್ಧ ಸಿದ್ಧಾಂತಗಳ ಮೂರೂ ಪಕ್ಷಗಳು ಒಂದಾಗಿ ಸರ್ಕಾರ ರಚಿಸಿದ್ದವು. ಆದಾಗ್ಯೂ, ವಿಭಿನ್ನ ಸಿದ್ಧಾಂತಗಳ ಈ ಮೈತ್ರಿಕೂಟವು ದೀರ್ಘಕಾಲ
ಬಾಳುವ ಬಗ್ಗೆ ಟೀಕಾಕಾರು ಅನುಮಾನಗಳನ್ನು ವ್ಯಕ್ತ ಪಡಿಸಿದ್ದರು.
No comments:
Post a Comment