Monday, May 11, 2020

ಭಾರತದಿಂದ ಜಗತ್ತಿಗೆ ೧ ಬಿಲಿಯನ್ ರೂ ಕೋವಿಡ್ -೧೯ ವೈದ್ಯಕೀಯ ನೆರವು

ಭಾರತದಿಂದ ಜಗತ್ತಿಗೆ ಬಿಲಿಯನ್ ರೂ ಕೋವಿಡ್ -೧೯ ವೈದ್ಯಕೀಯ ನೆರವು
ನವದೆಹಲಿ: ಕೊರೋನಾವೈರಸ್ ಸೋಂಕನ್ನು (ಕೋವಿಡ್ -೧೯) ಎದುರಿಸುವಲ್ಲಿ ವಿಶ್ವದ ಸುಮಾರು ೯೦ ರಾಷ್ಟ್ರಗಳಿಗೆ ವೈದ್ಯಕೀಯ ನೆರವನ್ನು ಹೆಚ್ಚಿಸುವ ಗುರಿ ಈಡೇರಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲು ಭಾರತ ತೀರ್ಮಾನಿಸಿದೆ ಎಂದು ಸುದ್ದಿ ಮೂಲಗಳು  2020 ಮೇ 11ರ ಸೋಮವಾರ ತಿಳಿಸಿದವು.
ವಿದೇಶಗಳನ್ನು ತಲುಪುವ ಭಾರತೀಯ ರಾಜತಾಂತ್ರಿಕ ವ್ಯವಸ್ಥೆಗೆ ಕಾರ್ಯಕ್ಕೆ ಅಗುವ  ವೆಚ್ಚ ಅಂದಾಜು  ೧೧೦-೧೨೦ ಕೋಟಿ ರೂಪಾಯಿಗಳು  (.-. ಬಿಲಿಯನ್ ರೂ) ಎಂದು ಮೂಲಗಳು ಹೇಳಿವೆ.

ಭಾರತವು ವಿವಿಧ ದೇಶಗಳಿಗೆ ವಾಣಿಜ್ಯ ದೃಷ್ಟಿಯಿಂದ ಪೂರೈಸುತ್ತಿರುವ ಔಷಧಗಳಿಗೆ ಹೊರತಾಗಿ ಮಾಡಲಾಗುವ ಹೊಸ ನೆರವು ಇದು ಎಂದು ಮೂಲಗಳು ಹೇಳಿವೆ.

ಸದ್ಯಕ್ಕೆ ೬೭ ದೇಶಗಳಿಗೆ ೬೦ ಕೋಟಿ ರೂಪಾಯಿ ಮೌಲ್ಯದ ಔಷಧ, ಪರೀಕ್ಷಾ ಕಿಟ್ಗಳು ಮತ್ತು ಇತರ ವೈದ್ಯಕೀಯ ನೆರವು ನೀಡುವುದಾಗಿ ಭಾರತದ ವಿದೇಶಾಂಗ ಸಚಿವಾಲಯ ವಾಗ್ದಾನ ಮಾಡಿದೆ.

"ಆದರೆ ಪ್ರಧಾನಿ ಮೋದಿಯವರ ಸ್ಪಷ್ಟ ನಿರ್ದೇಶನಗಳನ್ನು ಅನುಸರಿಸಿ, ವಿದೇಶಾಂಗ ಸಚಿವಾಲಯವು ವಿವಿಧ ದೇಶಗಳಿಂದ ನೆರವಿಗಾಗಿ ಬಂದಿರುವ ಹೆಚ್ಚಿನ ಮನವಿಗಳಿಗೆ ಸ್ಪಂದಿಸುವ ಸಾಧ್ಯತೆಗಳಿವೆ" ಎಂದು ಉನ್ನತ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೋವಿಡ್ -೧೯ ಆರಂಭಿಕ ದಿನಗಳಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರಿಗೆ ಸಾಧ್ಯವಾದಷ್ಟು ದೇಶಗಳನ್ನು ತಲುಪಲು ಪ್ರಧಾನಿ ನರೇಂದ್ರ ಮೋದಿಯವರು ಸಲಹೆ ಮಾಡಿದ್ದರು.

ಪ್ರಧಾನಿ
ಮೋದಿ ಮತ್ತು ಜೈಶಂಕರ್ ಅವರು ಸಾಧ್ಯವಾದಷ್ಟು ದೇಶಗಳನ್ನು ತಲುಪುವ ಪ್ರಯತ್ನದ ಭಾಗವಾಗಿ ನಿರಂತರ ದೂರವಾಣಿಗಳನ್ನು ಬಳಸುತ್ತಿದ್ದಾರೆ. ಇದೇ ವೇಳೆಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಪಶ್ಚಿಮ ಏಷ್ಯಾದ ದೇಶಗಳಾದ ಸೌದಿ ಅರೇಬಿಯಾ, ಯುಎಇ, ಕುವೈತ್ ಮತ್ತು ಜೋರ್ಡಾನ್ ಕಡೆಗೆ ಗಮನಹರಿಸಿದ್ದಾರೆ.

ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಹೊಣೆಯನ್ನು ವಿದೇಶಾಂಗ ಕಾರ್ಯದರ್ಶಿ ಹರ್ಷ ವರ್ಧನ್  ಶ್ರೀಂಗ್ಲಾ ಅವರಿಗೆ ವಹಿಸಲಾಗಿದೆ.

೬೭ ದೇಶಗಳಲ್ಲಿ, ದಕ್ಷಿಣ ಏಷ್ಯಾ ಪ್ರದೇಶ, ಹಿಂದೂ ಮಹಾಸಾಗರ ಪ್ರದೇಶ, ಕೊಲ್ಲಿ (ಕುವೈತ್), ಮಧ್ಯ ಏಷ್ಯಾ ಕಜಕಸ್ತಾನ್, ಅರ್ಮೇನಿಯಾ, ತಾಜಿಕಿಸ್ತಾನ್, ಉಕ್ರೇನ್) ದೇಶಗಳಲ್ಲಿ ಹರಡಿರುವ ೨೯ ದೇಶಗಳಿಗೆ  ಭಾರತ ಸರ್ಕಾರ ಈಗಾಗಲೇ ಸರಕುಗಳನ್ನು ತಲುಪಿಸಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದಲ್ಲದೆ ಡೊಮಿನಿಕನ್ ರಿಪಬ್ಲಿಕ್ ಮತ್ತು ಈಕ್ವೆಡಾರ್ ನಂತಹ ದೂರದ ದೇಶಗಳು ಹಾಗೂ ಇತರ ಆರು ಆಫ್ರಿಕನ್ ದೇಶಗಳಿಗೂ ಹೈಡ್ರಾಕ್ಸಿಕ್ಲೋರೋಕ್ವಿನ್ (ಎಚ್ಸಿಕ್ಯು) ಮತ್ತು ಪ್ಯಾರಾಸಿಟಮಾಲ್ ಕಳುಹಿಸಲಾಗಿದೆ.

ನಾವು ೨೯ ದೇಶಗಳಿಗೆ ೨೮ ಕೋಟಿ ರೂ. ಮೌಲ್ಯದ ನೆರವು ಒದಗಿಸಿದ್ದೇವೆ. ೧೩. ಕೋಟಿ ರೂಪಾಯಿ ಮೌಲ್ಯದ ಸರಕುಗಳು ಸಾಗಣೆ ಹಂತದಲ್ಲಿವೆಎಂದು ಅಧಿಕಾರಿ ಹೇಳಿದರು.
ಅಂತಾರಾಷ್ಟ್ರೀಯ ವಿಮಾನಯಾನಗಳೂ ಸ್ಥಗಿತಗೊಂಡಿರುವುದರಿಂದ ದೇಶಗಳಿಗೆ ನೆರವು ತಲುಪಿಸುವ ನಿಟ್ಟಿನಲ್ಲಿ ಸರಕು ಸಾಗಣೆ  ದೊಡ್ಡ ಸವಾಲು. ಅದಕ್ಕಾಗಿಯೇ, ಹಿಂದೂ ಮಹಾಸಾಗರ ಪ್ರದೇಶದ ಮಾಲ್ಡೀವ್ಸ್, ಮಾರಿಷಸ್, ಮಡಗಾಸ್ಕರ್, ಕೊಮೊರೊಸ್ ಮತ್ತು ಸೀಶೆಲ್ಸ್ನಂತಹ ದೇಶಗಳಿಗೆ ವೈದ್ಯಕೀಯ ತಂಡಗಳು, ಔಷಧಗಳು ಮತ್ತು ಸರಬರಾಜುಗಳನ್ನು ತಲುಪಿಸಲು ಭಾರತವು ನೌಕಾಪಡೆಯ ,೬೦೦ ಟನ್ ಇಳಿಕೆ ಸಾಮರ್ಥ್ಯದ  ಐಎನ್ಎಸ್ ಕೇಸರಿ ಲ್ಯಾಂಡಿಂಗ್ ನೌಕೆಯನ್ನು ನಿಯೋಜಿಸಿದೆ ಎಂದು ಅಧಿಕಾರಿ ನುಡಿದರು.

ಯುದ್ಧನೌಕೆಯಲ್ಲಿರುವ ಎರಡು ವೈದ್ಯಕೀಯ ನೆರವು ತಂಡಗಳನ್ನು ಮಾರಿಷಸ್ ಮತ್ತು ಕೊಮೊರೊಸ್ನಲ್ಲಿ ನಿಯೋಜಿಸಲಾಗುವುದು ಎಂದು ಅವರು ಹೇಳಿದರು.

ಭಾರತದ ನೆರೆಹೊರೆಯಲ್ಲಿನ ದೇಶಗಳಿಗೆ ಅಗತ್ಯ ಪ್ರತಿಜೀವಕಗಳು, ಕೋವಿಡ್ -೧೯ ಪ್ರೊಟೆಕ್ಷನ್ ಗೇರ್ ಮತ್ತು ಪರೀಕ್ಷಾ ಕಿಟ್ಗಳು ಸೇರಿದಂತೆ ೧೭ ಕೋಟಿ ರೂ.ಗಿಂತ ಹೆಚ್ಚಿನ ವೈದ್ಯಕೀಯ ಸಹಾಯವನ್ನು ಭಾರತ ಮಾಡಿದೆ.

ಬದ್ಧತೆಯ ಸುಮಾರು ಶೇಕಡಾ ೪೦ರಷ್ಟು ಸಹಾಯವನ್ನು ನೀಡಲಾಗಿದೆ, ಉಳಿz ನೆರವು ವಾರ ಸಾರ್ಕ್ ದೇಶಗಳಿಗೆ ತಲುಪಲಿದೆ ಎಂದು ವಿದೇಶಾಂಗ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದರು.

ವೈದ್ಯಕೀಯ ನೆರವಿನ ಹೊರತಾಗಿ, ಭಾರತವು ಕ್ಷಿಪ್ರ ಸ್ಪಂದನಾ ತಂಡಗಳು (ರಾಪಿಡ್ ರೆಸ್ಪಾನ್ಸ್ ಟೀಮ್ಸ್) ಎಂಬ ವೈದ್ಯಕೀಯ ಸಿಬ್ಬಂದಿಯ ತಂಡಗಳನ್ನು ಕುವೈತ್ ಮತ್ತು ಮಾಲ್ಡೀವ್ಸ್ಗೆ ಕಳುಹಿಸಿದೆ. ಇತರ ದೇಶಗಳಲ್ಲಿನ ಸಿಬ್ಬಂದಿಗೆ ತರಬೇತಿ ನೀಡಲು ವಿಡಿಯೋ ಸಂವಹನ (ವೆಬ್ನಾರ್) ನಡೆಸುತ್ತಿದೆ ಮತ್ತು ಇತರ ಸ್ವರೂಪಗಳ ತಾಂತ್ರಿಕ ನೆರವು ನೀಡುತ್ತಿದೆ. ಇಲ್ಲಿಯವರೆಗೆ, ಪ್ರದೇಶದಲ್ಲಿ ಭಾರತವು . ಕೋಟಿ ರೂ.ಗಳ ಕೋವಿಡ್ -೧೯ ನೆರವು ನೀಡಿದೆ ಎಂದು ಸರ್ಕಾರದ ವಸ್ತುಸ್ಥಿತಿ ವರದಿ ತಿಳಿಸಿದೆ.

ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ ಪ್ರದೇಶದ ೨೮ ದೇಶಗಳು ಮತ್ತು ಆಫ್ರಿಕಾದ ೧೨ ದೇಶಗಳು ಸೇರಿದಂತೆ ಸುಮಾರು ೫೦ ಹೆಚ್ಚುವರಿ ದೇಶಗಳಿಗೆ ವೈದ್ಯಕೀಯ ನೆರವು ಸಂಗ್ರಹಣೆ ಮತ್ತು ವಿತರಣೆ ಮಾಡಲೂ ಉದ್ದೇಶಿಸಲಾಗಿದೆ ಎಂದು ಅಧಿಕಾರಿಗಳು ಹೇ:ಳಿದರು. ಪಟ್ಟಿಯಲ್ಲಿ ಮಡಗಾಸ್ಕರ್, ಈಜಿಪ್ಟ್, ಸಿರಿಯಾ, ಲೆಬನಾನ್, ಅರ್ಮೇನಿಯಾ, ಜಮೈಕಾ, ಉಜ್ಬೇಕಿಸ್ತಾನ್, ಮಾಲ್ಟಾ, ಲಾವೊ ಪಿಡಿಆರ್ ಮತ್ತು ಕೊಮೊರೊಸ್ನಂತಹ ಇತರ ಪ್ರದೇಶಗಳು ಸೇರಿವೆ.

ಭಾರತವು ೬೭ ದೇಶಗಳಿಗೆ ೧೦ ಮಿಲಿಯನ್ ಹೈಡ್ರಾಕ್ಸಿಕ್ಯೊರೋಕ್ವಿನ್ (ಎಚ್ಸಿಕು) ಟ್ಯಾಬ್ಲೆಟ್ಗಳನ್ನು ಒದಗಿಸುತ್ತಿದೆ, ಅದರಲ್ಲಿ ೨೧ ದೇಶಗಳಿಗೆ (ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ಮಾರಿಷಸ್, ನೇಪಾಳ, ಸೀಶೆಲ್ಸ್, ಕೊಮೊರೊಸ್, ಮಡಗಾಸ್ಕರ್, ಡೊಮಿನಿಕನ್ ರಿಪಬ್ಲಿಕ್, ಈಕ್ವೆಡಾರ್, ಕಜಕಿಸ್ತಾನ್, ಉಕ್ರೇನ್ , ಜಾಂಬಿಯಾ, ಉಗಾಂಡಾ, ಬುರ್ಕಿನಾ ಫಾಸೊ, ನೈಜರ್, ಮಾಲಿ, ಡಿಆರ್ ಕಾಂಗೋ, ಮ್ಯಾನ್ಮಾರ್, ಅರ್ಮೇನಿಯಾ).

ಆಫ್ರಿಕಾದ ಇನ್ನೂ ೧೩ ದೇಶಗಳು, ಪಶ್ಚಿಮ ಏಷ್ಯಾ ಮತ್ತು ಉತ್ತರ ಆಫ್ರಿಕಾ ಪ್ರದೇಶದ ದೇಶಗಳು ಮತ್ತು ಇತರ ೧೬ ದೇಶಗಳು ಹೆಚ್ಚುವರಿ ಸಹಾಯಕ್ಕಾಗಿ ಭಾರತಕ್ಕೆ ಮನವಿ ಮಾಡಿವೆ.

No comments:

Advertisement