My Blog List

Saturday, June 20, 2020

೫ ದಿನಗಳ ಸಾಂಸ್ಥಿಕ ಕ್ವಾರಂಟೈನ್: ಆದೇಶ ಹಿಂಪಡೆದ ಎಲ್ ಜಿ ಬೈಜಾಲ್

ದಿನಗಳ ಸಾಂಸ್ಥಿಕ ಕ್ವಾರಂಟೈನ್: ಆದೇಶ
 ಹಿಂಪಡೆದ ಎಲ್ ಜಿ ಬೈಜಾಲ್

ಭಾರತದಲ್ಲಿ ಒಂದೇ ದಿನ ೧೪,೫೧೬ ಪ್ರಕರಣ, ಒಟ್ಟು ಸೋಂಕು ,೯೫,೦೪೮

ನವದೆಹಲಿ: ದೆಹಲಿಯ ಪ್ರತಿ ಕೋವಿಡ್ -೧೯ ಪ್ರಕರಣದಲ್ಲೂ ಐದು ದಿನಗಳ ಕ್ವಾರಂಟೈನ್ ಕಡ್ಡಾಯಗೊಳಿಸಿ ಲೆಪ್ಟಿನೆಂಟ್ ಗವರ್ನರ್ (ಎಲ್ ಜಿ) ಅನಿಲ್ ಬೈಜಾಲ್ ಅವರು ಹೊರಡಿಸಿದ ಆದೇಶವನ್ನು ತೀವ್ರ ವಿವಾದ ಮತ್ತು ಅರವಿಂದ ಕೇಜ್ರಿವಾಲ್ ಸರ್ಕಾರದ ವಿರೋಧದ ಬಳಿಕ 2020 ಜೂನ್ 20ರ ಶನಿವಾರ ಸಂಜೆ ಹಿಂಪಡೆಯಲಾಯಿತು.

ಮಧ್ಯೆ, ಹೊಸದಾಗಿ ೧೪,೫೧೬ ಸೋಂಕಿನ ಪ್ರಕರಣಗಳು ದಾಖಲಾಗುವುದರೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ,೯೫,೦೪೮ಕ್ಕೆ ಮತ್ತು ಸಾವಿನ ಸಂಖ್ಯೆ ೧೨,೯೪೮ಕ್ಕೆ ಏರಿತು. ,೧೩,೮೩೧ ಜನರು ವೈರಸ್ನಿಂದ ಚೇತರಿಸಿಕೊಂಡಿದ್ದಾರೆ

ತೀವ್ರ ವಿವಾದಕ್ಕೆ ಸಿಲುಕಿದ ಐದು ದಿನಗಳ ಕಡ್ಡಾಯ ಕ್ವಾರಂಟೈನ್ ಆದೇಶವನ್ನು ಹಿಂಪಡೆಯುವಂತೆ ಕೇಜ್ರಿವಾಲ್ ಸರ್ಕಾರವು ಇದಕ್ಕೆ ಮುನ್ನ ಲೆಫ್ಟಿನೆಂಟ್ ಗವರ್ನರ್ ಅವರನ್ನು ತೀವ್ರವಾಗಿ ಒತ್ತಾಯಿಸಿತ್ತು.

ದೆಹಲಿ ಸರ್ಕಾರದ ಹಿರಿಯ ಮಂತ್ರಿಗಳು ಎರಡನೇ ಬಾರಿಗೆ ಶನಿವಾರ ಸಂಜೆ ಗಂಟೆಗೆ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರನ್ನು ಭೇಟಿ ಮಾಡಿದ್ದರು. ಮಧ್ಯಾಹ್ನ ನಡೆದ ಸಭೆಯಲ್ಲಿ ರಾಜ್ಯ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ಅವರು ವಿಷಯದಲ್ಲಿ ಒಪ್ಪಿಕೊಳ್ಳಲು ವಿಫಲವಾದ ನಂತರ ಸಭೆ ನಡೆಯಿತು.

"ಸಾಂಸ್ಥಿಕ ಕ್ವಾರಂಟೈನ್ಗೆ ಸಂಬಂಧಿಸಿದಂತೆ, ಕ್ಲಿನಿಕಲ್ ಮೌಲ್ಯಮಾಪನದ ಮೇಲೆ ಆಸ್ಪತ್ರೆಗೆ ಅಗತ್ಯವಿಲ್ಲದ ಮತ್ತು ಮನೆ ಪ್ರತ್ಯೇಕವಾಸಕ್ಕೆ (ಹೋಮ್ ಕ್ವಾರಂಟೈನ್) ಸಾಕಷ್ಟು ಸೌಲಭ್ಯಗಳನ್ನು ಹೊಂದಿರದ ಕೊವಿಡ್ ಪಾಸಿಟಿವ್  ಪ್ರಕರಣಗಳು ಮಾತ್ರ ಸಾಂಸ್ಥಿಕ ಪ್ರತ್ಯೇಕತೆಗೆ ಒಳಗಾಗಬೇಕಾಗುತ್ತದೆ" ಎಂದು ಬೈಜಾಲ್ ಸಭೆಯ ನಂತರ ಟ್ವೀಟ್ ಮಾಡಿದರು.

ಮುಖ್ಯಮಂತ್ರಿಯವರ ಕಚೇರಿಯು ಸಂಜೆ ಎಲ್ ಜಿ ಆದೇಶ ವಾಪಸ್ ಬೆಳವಣಿಗೆಯನ್ನು ದೃಢಪಡಿಸಿತು.

ಇದಕ್ಕೆ ಮುನ್ನ ಕೇಂದ್ರ ಗೃಹ ಸಚಿವ ಜಿ. ಕಿಶೆನ್ ರೆಡ್ಡಿ ಅವರನ್ನು ಉಲ್ಲೇಖಿಸಿದ, ಸುದ್ದಿ ಸಂಸ್ಥೆಯೊಂದರ ವರದಿ, ಸಂಜೆಯ ವೇಳೆಗೆ ಹೊಸ ಆದೇಶವನ್ನು ನಿರೀಕ್ಷಿಸುವುದಾಗಿ ಹೇಳಿತ್ತು.

"ದೆಹಲಿಯ ಲೆಫ್ಟಿನೆಂಟ್ ಜನರಲ್ ಅವರು ತಮ್ಮ ಮನೆಗಳಲ್ಲಿ ಸ್ಥಳಾವಕಾಶವಿಲ್ಲದವರ ಅನುಕೂಲಕ್ಕಾಗಿ ಸಾಂಸ್ಥಿಕ ಸಂಪರ್ಕತಡೆಯನ್ನು ಆದೇಶಿಸಿರಬಹುದು. ಆದರೆ ತಮ್ಮ ಮನೆಗಳಲ್ಲಿ ಪ್ರತ್ಯೇಕವಾಸಕ್ಕೆ ಪ್ರತ್ಯೇಕ ಕೋಣೆಯನ್ನು ರಚಿಸಬಲ್ಲ ಜನರಿಗೆ ಅವರು ಇಂದು ಸಂಜೆಯ ವೇಳೆಗೆ ಮತ್ತೊಂದು ಮಾಹಿತಿಯನ್ನು ನೀಡುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ರೆಡ್ಡಿ ಹೇಳಿದ್ದರು.

"ರೋಗಿಗಳ ಮೇಲೆ ನಿಗಾ ಇಡಲು ವ್ಯವಸ್ಥೆ ಇಲ್ಲದ ಹೋಮ್ ಕ್ವಾರಂಟೈನ್ಗಳು ದೆಹಲಿಯಲ್ಲಿ ಕೋವಿಡ್ -೧೯ ಸೋಂಕುಗಳ ಹರಡುವಿಕೆ ಹೆಚ್ಚಳಕ್ಕೆ ಕಾರಣವಾಗಬಹುದು" ಎಂದು ಬೈಜಾಲ್ ನೇತೃತ್ವದ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರವು ತನ್ನ ಹಿಂದಿನ ಆದೇಶದಲ್ಲಿ ಆತಂಕ ವ್ಯಕ್ತಪಡಿಸಿತ್ತು.

ದೇಶಾದ್ಯಂತ ರೋಗಲಕ್ಷಣ ರಹಿತ ಪ್ರಕರಣಗಳು ಮತ್ತು ಅತ್ಯಂತ ಲಘು ಲಕ್ಷಣಗಳ ಪ್ರಕರಣಗಳಲ್ಲಿ ಹೋಮ್ ಕ್ವಾರಂಟೈನಿಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು (ಐಸಿಎಂಆರ್) ಅನುಮತಿ ನೀಡಿರುವಾಗ ದೆಹಲಿಯಲ್ಲಿ ಭಿನ್ನ ನಿಯಮಗಳು ಏಕೆ ಜಾರಿಯಾಗುತ್ತಿವೆ?’ ಎಂದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಭೆಯಲ್ಲಿ ಎಲ್ಜಿಯವರನ್ನು ಪ್ರಶ್ನಿಸಿದರು ಎಂದು ಶನಿವಾರದ ಸಭೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಯೊಬ್ಬರು ತಿಳಿಸಿದರು.

ತಮ್ಮನ್ನು ಐದು ದಿನಗಳ ಸಾಂಸ್ಥಿಕ ಕ್ವಾರಂಟೈನಿಗೆ ಕಳುಹಿಸಲಾಗುತ್ತದೆ ಎಂಬ ಭೀತಿಯಿಂದ ಜನರ ಪರೀಕ್ಷೆ ಮಾಡಿಸಿಕೊಳ್ಳಲೂ ಹಿಂಜರಿಯುತ್ತಾರೆ ಎಂದೂ ಮುಖ್ಯಮಂತ್ರಿ ಎಲ್ಜಿ ಅವರಿಗೆ ಹೇಳಿದರು ಎನ್ನಲಾಗಿದೆ.

ಆರೋಗ್ಯ ಕಾರ್ಯಕರ್ತರ ಕೊರತೆ ಮತ್ತು ಕ್ವಾರಂಟೈನ್ ಕೇಂದ್ರಗಳಲ್ಲಿ ಸಹಸ್ರಾರು ಮಂದಿಗೆ ಚಿಕಿತ್ಸೆ ಒದಗಿಸಲು ಇಂತಹ ಅಲ್ಪಾವಧಿಗೆ ವೈದ್ಯರು ಮತ್ತು ದಾದಿಯರನ್ನು ಪಡೆಯುವುದು ಕಷ್ಟದ ಕೆಲಸ ಎಂದೂ ಮುಖ್ಯಮಂತ್ರಿ ಹೇಳಿದರು ಎಂದು ಅಧಿಕಾರಿಗಳು ನುಡಿದರು.

ಆಪ್ ಶಾಸಕ ರಾಘವ ಛಢಾ ಅವರು ಕೂಡಾ ಆದೇಶವನ್ನು ವಿರೋಧಿಸಿದರು. ಜೂನ್ ೩೦ರ ವೇಳೆಗೆ ೧೫,೦೦೦ ಹಾಸಿಗೆಗಳು ಬೇಕಾಗುತ್ತವೆ ಎಂದು ಅಂದಾಜು ಮಾಡಲಾಗಿತ್ತು ಎಂದು ಅವರು ಬೆಳಗ್ಗೆ ವರದಿಗಾರರಿಗೆ ತಿಳಿಸಿದ್ದರು. ಆದರೆ ಎಲ್ಜಿ ಆದೇಶದ ಪರಿಣಾಮವಾಗಿ ದೆಹಲಿಯಲ್ಲಿ ಇದೇ ವೇಳೆಗೆ ೯೦,೦೦೦ ಹಾಸಿಗೆಗಳು ಬೇಕಾಗುತ್ತವೆ. ಇಷ್ಟೊಂದು ಹಾಸಿಗೆಗಳನ್ನು ನಾವು ವ್ಯವಸ್ಥೆ ಮಾಡುವುದು ಹೇಗೆ? ಎಂದು ಅವರು ಕೇಳಿದ್ದರು.

ಕೋವಿಡ್ ಅಂಕಿಸಂಖ್ಯೆ: ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯವು ಪ್ರಕಟಿಸಿದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ವಿಶ್ವಾದ್ಯಂತ ,೬೮೭,೨೩೧ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ೪೬೦,೫೩೦ ಸಾವುಗಳು ಸಂಭವಿಸಿವೆ. ಮತ್ತು ,೨೭೩,೦೫೪ ಜನರು ಚೇತರಿಸಿಕೊಂಡಿದ್ದಾರೆ.

ಭಾರತದಲ್ಲಿ ೩೯೫,೦೪೮ ಪ್ರಕರಣಗಳು ದೃಢ ಪಟ್ಟಿದ್ದು, ೧೨,೯೪೮ ಜನರು ಸಾವನ್ನಪ್ಪಿದ್ದಾರೆ ಮತ್ತು ೨೧೩,೮೩೧ ಜನರು ವೈರಸ್ನಿಂದ ಚೇತರಿಸಿಕೊಂಡಿದ್ದಾರೆ. ಭಾರತದಲ್ಲಿ ಶನಿವಾರ ಒಂದೇ ದಿನ ೧೪೫೧೬ ಹೊಸ ಪ್ರಕರಣಗಳು ದಾಖಲಾದವು.

ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿತರು ೮೮,೦೨,೪೭೧, ಸಾವು ,೬೩,೪೯೬ ಚೇತರಿಸಿಕೊಂಡವರು- ೪೬,೫೬,೩೧೨

ಅಮೆರಿಕ ಸೋಂಕಿತರು ೨೨,೯೯,೧೮೪, ಸಾವು ,೨೧,೪೫೧

ಸ್ಪೇನ್ ಸೋಂಕಿತರು ,೯೨,೬೫೫, ಸಾವು ೨೮,೩೧೫

ಇಟಲಿ ಸೋಂಕಿತರು ,೩೮,೦೧೧, ಸಾವು ೩೪,೫೬೧

ಜರ್ಮನಿ ಸೋಂಕಿತರು ,೯೦,೭೦೩, ಸಾವು ,೯೬೦

ಚೀನಾ ಸೋಂಕಿತರು ೮೩,೩೫೨, ಸಾವು ,೬೩೪

ಇಂಗ್ಲೆಂಡ್ ಸೋಂಕಿತರು ,೦೩,೧೧೦, ಸಾವು ೪೨,೫೮೯

ಭಾರತ ಸೋಂಕಿತರು ,೦೦,೫೬೬, ಸಾವು ೧೩,೦೩೦

ಅಮೆರಿಕದಲ್ಲಿ ೪೪, ಇರಾನಿನಲ್ಲಿ ೧೧೫, ಬೆಲ್ಜಿಯಂನಲ್ಲಿ , ಇಂಡೋನೇಷ್ಯ ೫೬, ನೆದರ್ ಲ್ಯಾಂಡ್ಸ್ನಲ್ಲಿ , ರಶ್ಯಾದಲ್ಲಿ ೧೬೧, ಪಾಕಿಸ್ತಾನದಲ್ಲಿ ೧೫೩, ಮೆಕ್ಸಿಕೋದಲ್ಲಿ ೬೪೭, ಭಾರತದಲ್ಲಿ ೬೦, ಒಟ್ಟಾರೆ ವಿಶ್ವಾದ್ಯಂತ ,೬೭೬ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ,೧೬,೬೭೬ ಮಂದಿ ಗುಣಮುಖರಾಗಿ ಚೇತರಿಸಿಕೊಂಡಿದ್ದಾರೆ.

No comments:

Advertisement