My Blog List

Saturday, June 20, 2020

ಚೀನಾ-ಭಾರತ ಗಡಿಯಲ್ಲಿ ಭಾರತದ ವಾಯುಪಡೆಗಳು ಸನ್ನದ್ಧ

ಚೀನಾ-ಭಾರತ ಗಡಿಯಲ್ಲಿ ಭಾರತದ  ವಾಯುಪಡೆಗಳು ಸನ್ನದ್ಧ

ನವದೆಹಲಿ: ಭಾರತ ಮತ್ತು ಚೀನಾ ನಡುವೆ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಗಡಿ ಉದ್ವಿಗ್ನತೆ ಹೆಚ್ಚುತ್ತಿರುವಂತೆಯೇ, ಯಾವುದೇ ತುರ್ತು ಸ್ಥಿತಿ ಎದುರಿಸಲು ಭಾರತದ ಪಡೆಗಳು ಸನ್ನದ್ಧವಾಗಿವೆ ಎಂದು ಭಾರತೀಯ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಆರ್ ಕೆ ಎಸ್ ಭದೌರಿಯಾ 2020 ಜೂನ್ 20ರ ಶನಿವಾರ ಹೇಳಿದರು.

ಹೈದರಾಬಾದಿನಲ್ಲಿ ಜಂಟಿ ತರಬೇತಿ ಮುಕ್ತಾಯ ಸಮಾರಂಭದಲ್ಲಿ ಮಾತನಾಡುತ್ತಿದ್ದ ಭದೌರಿಯಾ, ’ನಾವು ಸಂಪೂರ್ಣ ಸಜ್ಜಾಗಿದ್ದೇವೆ ಮತ್ತು ಯಾವುದೇ ತುರ್ತು ಪರಿಸ್ಥಿತಿ ಎದುರಿಸುವ ಸಲುವಾಗಿ ಸೂಕ್ತ ಸ್ಥಳಗಳಲ್ಲಿ ಪಡೆಗಳನ್ನು ನಿಯೋಜಿಸಿದ್ದೇವೆ. ನಾವು ತಕ್ಕ ಶಾಸ್ತಿ ಮಾಡುತ್ತೇವೆ, ನಮ್ಮ ಯೋಧರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ ಎಂಬುದಾಗಿ ನಾನು ದೇಶಕ್ಕೆ  ಭರವಸೆ ನೀಡುತ್ತೇನೆ ಎಂದು ಹೇಳಿದರು.

ಕಾರ್ಯಾಚರಣಾ ಸಿದ್ಧತೆಗಳ ಪರಿಶೀಲನೆಗಾಗಿ ಏರ್ ಚೀಫ್  ಮಾರ್ಷಲ್ ಭದೌರಿಯಾ ಅವರು ಲಡಾಖ್ ಮತ್ತು ಕಾಶ್ಮೀರದ ಮುಂಚೂಣಿಯ ನೆಲೆಗಳಿಗೆ ಬುಧವಾರ ಮತ್ತು ಗುರುವಾರ ಸದ್ದುಗದ್ದಲವಿಲ್ಲದ ಭೇಟಿ ನೀಡಿದ್ದರು.

ವಾಯುಪಡೆಯು ತನ್ನ ಮುಂಚೂಣಿಯ ಸಮರ ವಿಮಾನಗಳು ಮತ್ತು ಹೆಲಿಕಾಪ್ಟರುಗಳನ್ನು ಚೀನಾಕ್ಕೆ ಎದುರಾಗಿರುವ ಮುಂಚೂಣಿಯ ನೆಲೆಗಳತ್ತ ರವಾನಿಸಿದೆ. ಸುಖೋಯ್-೩೦ ಎಂಕೆಐ, ಮಿಗ್-೨೯ ಮತ್ತು ಜಾಗ್ವಾರ್ ಇವುಗಳಲ್ಲಿ ಸೇರಿವೆ.

ಭಾರತೀಯ ವಾಯುಪಡೆಯು (ಐಎಎಫ್) ಅಪಾಚೆ ಮತ್ತು ಚಿನೂಕ್ ಹೆಲಿಕಾಪ್ಟರುಗಳನ್ನು ಹೊಸದಾಗಿ ತನ್ನ ಬತ್ತಳಿಕೆಗೆ ಸೇರ್ಪಡೆ ಮಾಡಿದ್ದು, ಇವುಗಳು ಕೂಡಾ ಲಡಾಖ್ ಬಾನಂಗಳದಲ್ಲಿ ಕಂಡು ಬಂದವು.

ಅಪಾಚೆ ಹೆಲಿಕಾಪ್ಟರುಗಳು ಆಗಸದಿಂದ ಭೂಮಿ ಮೇಲಿನ ಕ್ಷಿಪಣಿಗಳು ಮತ್ತು ರಾಕೆಟ್ಗಳ ಮೇಲೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿವೆ. ಚಿನೂಕ್ ಹೆಲಿಕಾಪ್ಟರುಗಳು ತೂಕದ ವಸ್ತುಗಳನ್ನು ಒಯ್ಯಬಲ್ಲ ಹೆಲಿಕಾಪ್ಟರುಗಳಾಗಿದ್ದು ಪಡೆಗಳನ್ನು ಮತ್ತು  ಹೊವಿಟ್ಜರ್Uಳನ್ನು ಎತ್ತರದ ಪ್ರದೇಶUಳಿಗೆ ಒಯ್ಯಬಲ್ಲವು.

ವಾಯುಪಡೆ ಮುಖ್ಯಸ್ಥ  ಆರ್ಕೆಎಸ್ ಭದೌರಿಯಾ ಅವರು ಚೀನಾದ ಕಡೆಯಲ್ಲಿ ಹೆಚ್ಚುತ್ತಿರುವ ವಾಯುಚಟುವಟಿಕೆಗಳ ಬಗೆಗೂ ಮಾತನಾಡಿದರು.

ವೇಳೆಯಲ್ಲಿ, ಚೀನಾವು ಬಹಳಷ್ಟು ವಿಮಾನಗಳನ್ನು ತರಬೇತಿ ಸಲುವಾಗಿ ನಿಯೋಜಿಸುತ್ತದೆ, ಆದರೆ ಬಾರಿ ನಿಯೋಜನೆ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದಿದೆ. ಅಸಹಜ ಚಲನವಲನ ಕಂಡು ಬಂದಾಗಲೆಲ್ಲ ನಾವು ಏನಾಗುತ್ತಿದೆ ಎಂಬುದಾಗಿ ತಿಳಿಯುವ ಸಲುವಾಗಿ ನಮ್ಮ ಸಾಧನಗಳನ್ನು ನಿಯೋಜಿಸುತ್ತೇವೆ. ಎಲ್ಎಸಿ ಇರಬಹುದು ಅಥವಾ ಅದರಾಚೆಗೂ ಇರಬಹುದು ಪರಿಸ್ಥಿತಿಯ ಬಗ್ಗೆ ನಮಗೆ ಅರಿವಿದೆ. ಅವರ ವಾಯು ನಿಯೋಜನೆ ಇರಬಹುದು ಅಥವಾ ಭಂಗಿಗಳು ಇರಬಹುದು, ನಾವು ನಿತ್ಯ ಗಮನಿಸುತ್ತೇವೆ ಎಂದು ಅವರು ಹೇಳಿದರು.

ಪೂರ್ವ ಲಡಾಖ್ ಗಲ್ವಾನ್ ಕಣಿವೆಯಲ್ಲಿ ಸೋಮವಾರ ರಾತ್ರಿ ಚೀನೀ ಪಡೆಗಳ ಜೊತೆಗೆ ನಡೆದ ಘರ್ಷಣೆಯಲ್ಲಿ ಕರ್ನಲ್ ಸೇರಿದಂತೆ ಭಾರತೀಯ ಸೇನೆಯ ೨೦ ಯೋಧರು ಹುತಾತ್ಮರಾಗಿದ್ದರು. ಭಾರತ ಮತ್ತು ಚೀನಾದ ಮಧ್ಯೆ ಕಳೆದ ಐದು ದಶಕಗಳಲ್ಲಿ ಸಂಭವಿಸಿದ ಅತ್ಯಂತ ದೊಡ್ಡ ಘರ್ಷಣೆ ಇದಾಗಿದ್ದು, ಪರಿಣಾಮವಾಗಿ ಪ್ರದೇಶದಲ್ಲಿ ಗಡಿ ಬಿಕ್ಕಟ್ಟು ಉಲ್ಬಣಿಸಿದೆ.

ಲೆಹ್ನಿಂದ ಹಶಿಮರದವರೆಗೂ ಉತ್ತರದ ಗಡಿಯಲ್ಲಿ ತನ್ನ ಎಲ್ಲ ವಾಯುನೆಲೆಗಳನ್ನು ಭಾರತವು ಸಕ್ರಿಯಗೊಳಿಸಿದ್ದು, ಭಾರತೀಯ ವಾಯುಪಡೆಗಳು ಎಂಟು ಚೀನೀ ವಾಯುನೆಲೆಗಳು ಮತ್ತು ಟಿಬೆಟಿನಲ್ಲಿನ ಏರ್ ಫೀಲ್ಡ್ಗಳ ಮೇಲೂ ಹದ್ದುಗಣ್ಣು ಇರಿಸಿದೆ.

ಲಡಾಖ್ನಲ್ಲಿ ವಿಸ್ತೃತ ಹಾರಾಟದ ಅನುಭವ ಹೊಂದಿರುವ ಗ್ರೂಪ್ ಕ್ಯಾಪ್ಟನ್ ಎಂಜೆ ಆಗಸ್ಟಿನ್ ಅವರುವಾಯುದಾಳಿಯ ಸಂದರ್ಭದಲ್ಲಿ ಭಾರತಕ್ಕೆ ಚೀನಾಕ್ಕಿಂತ ಹೆಚ್ಚಿನ ಅನುಕೂಲಗಳಿವೆ ಎಂದು ಹೇಳಿದರು.

ಟಿಬೆಟಿನಲ್ಲಿ ಹೋಟನ್ ಹೊರತಾಗಿ ಯುದ್ಧ ವಿಮಾನಗಳನ್ನು ಹಾರಿಸುವಂತಹ ವಾಯುನೆಲೆಗಳಿಲ್ಲ. ವಾಯುನೆಲೆಯು ಮುಕ್ತ ವಾಯುನೆಲೆಯಾಗಿದ್ದು ನೆಲದಿಂದ ನೆಲಕ್ಕೆ ಹಾರಿಸುವ ಕ್ಷಿಪಣಿಗಳ ಮೇಲP ಮತ್ತು ವಾಯುದಾಳಿಗಳ ಮೂಲಕವೇ ನಾಶಪಡಿಸಲು ಸಾಧ್ಯವಿರುವಂತಹ ವಾಯುನೆಲೆಯಾಗಿದೆ. ಇದಕ್ಕೆ ಹತ್ತಿರದ ಬೆಂಬಲ ನೆಲೆಯೆಂದರೆ ೪೦೦ ಕಿಮೀ ದೂರದಲ್ಲಿರುವ ಕಸ್ಘರ್ ಮಾತ್ರ ಎಂದು ಆಗಸ್ಟಿನ್ ನುಡಿದರು.

No comments:

Advertisement