Friday, June 19, 2020

ಪ್ರಧಾನಿ ಸರ್ವಪಕ್ಷ ಸಭೆಗೆ ಕರೆದಿಲ್ಲ: ಆಪ್, ಆರ್ ಜೆಡಿ ಆಕ್ರೋಶ

ಪ್ರಧಾನಿ ಸರ್ವಪಕ್ಷ ಸಭೆಗೆ ಕರೆದಿಲ್ಲ: ಆಪ್, ಆರ್ ಜೆಡಿ ಆಕ್ರೋಶ

ನವದೆಹಲಿ: ಉಲ್ಬಣಗೊಳ್ಳುತ್ತಿರುವ ಭಾರತ-ಚೀನಾ ಉದ್ವಿಗ್ನತೆಗಳ ಬಗ್ಗೆ ಚರ್ಚಿಸಲು 2020 ಜೂನ್ 19ರ ಶುಕ್ರವಾರ  ಕರೆಯಲಾದ ಸರ್ವಪಕ್ಷ ಸಭೆಗೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಕೆಲವು ವಿರೋಧ ಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದವು.

ಸಂಸತ್ತಿನಲ್ಲಿನ ನಗಣ್ಯ ಉಪಸ್ಥಿತಿಯನ್ನು ಅನುಸರಿಸಿ ಆರ್‌ಜೆಡಿ, ಆಮ್ ಆದ್ಮಿ ಪಕ್ಷ (ಆಪ್) ಮತ್ತು ಎಐಐಎಂಐಎಂUಳಿಗೆ ಸಭೆಯಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಿಲ್ಲ ಎಂದು ಹೇಳಲಾಗಿತ್ತು.

ಸಭೆಯ ಮುನ್ನಾದಿನ ಟ್ವಿಟರ್ ಖಾತೆ ಬಳಸಿ, ಪ್ರಧಾನಿ ಹಾಗೂ ಬಿಜೆಪಿ ವಿರುದ್ಧ ಕಿಡಿಕಾರಿದ ಆರ್‌ಜೆಡಿ ಮುಖಂಡ ಹಾಗೂ ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್ ಅವರ ಪುತ್ರ ತೇಜಸ್ವಿ ಯಾದವ್ ಅವರು ಗಲ್ವಾನ್ ಕಣಿವೆ ಕುರಿತ ಸರ್ವ ಪಕ್ಷ ಸಭೆಗಾಗಿ ರಾಜಕೀಯ ಪಕ್ಷಗನ್ನು ಆಹ್ವಾನಿಸಲು ಅನುಸರಿಸಲಾಗಿರುವ ಮಾನದಂಡಗಳೇನು ಎಂಬುದಾಗಿ ತಾವು ತಿಳಿಯಬಯಸುವುದಾಗಿ ರಕ್ಷಣಾ ಸಚಿವರು ಮತ್ತು ಪ್ರಧಾನಿಯವರ ಟ್ವಿಟ್ಟರ್ ಖಾತೆಯನ್ನು ಹ್ಯಾಷ್ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ. ತಮ್ಮ ಪಕ್ಷಕ್ಕೆ ಈವರೆಗೆ ಯಾವುದೇ ಸಂದೇಶ ಬಂದಿಲ್ಲ, ಆದ್ದರಿಂದ ಸಭೆಗೆ ಆಹ್ವಾನಿಸುವ/ ಹೊರಗಿಡುವ ಆಧಾರಗಳು ಏನು ಎಂಬುದಾಗಿ ತಿಳಿಯಬಯಸಿದ್ದೇನೆ ಎಂದು ತೇಜಸ್ವಿ ಟ್ವೀಟ್ ಮಾಡಿದರು.

ಯಾದವ್ ಅವರ ಭಾವನೆಗಳನ್ನು ಪ್ರತಿಧ್ವನಿಸಿದ ಪಕ್ಷದ ರಾಜ್ಯಸಭಾ ಸದಸ್ಯ ಮನೋಜ್ ಝಾ ಅವರುಆರ್‌ಜೆಡಿ ಬಿಹಾರದಲ್ಲಿ ೮೦ ಶಾಸಕರನ್ನು ಹೊಂದಿದ್ದು, ರಾಜ್ಯದ ಏಕೈಕ ದೊಡ್ಡ ಪಕ್ಷವಾಗಿದೆ ಮತ್ತು ರಾಜ್ಯಸಭೆಯಲ್ಲಿ ಐದು ಸಂಸದರನ್ನು ಹೊಂದಿದೆ. ನೀವು ಸರ್ವಪಕ್ಷ ಸಭೆಯಲ್ಲಿ ನಮ್ಮನ್ನು ಹೊರಗಿಡಲು ಕಾರಣವೇನು ಎಂಬುದು ನಮ್ಮ ತಿಳುವಳಿಕೆಯನ್ನು ಮೀರಿದೆ ಎಂದು ಹೇಳಿದರು. 

ಕೋವಿಡ್ -೧೯ ಪರಿಸ್ಥಿತಿ ಕುರಿತು ಗೃಹ ಸಚಿವ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷ ಸಭೆಗೆ ತಮ್ಮ ಪಕ್ಷವನ್ನು ಆಹ್ವಾನಿಸಲಾಗಿಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಹೇಳಿದ್ದಾರೆ.

ನಾನು ಚೀನಾ ವಿಷಯದ ಬಗ್ಗೆ ಕೇಂದ್ರಕ್ಕೆ ಪ್ರಶ್ನೆಗಳನ್ನು ಪದೇ ಪದೇ ಕೇಳುತ್ತಿದ್ದೇನೆ. ಆದರೆ ಅವರು ರೀತಿಯ ವಿಷಯದಲ್ಲಿ ನಮ್ಮನ್ನು ಆಹ್ವಾನಿಸುವುದಿಲ್ಲ. ಅವರು ತಮ್ಮ ಸ್ವರಗಳ ಹೊರತಾಗಿ ವಿರೋಧದ ಧ್ವನಿಗಳನ್ನು ಲೆಕ್ಕಿಸುವುದಿಲ್ಲ ಎಂಬುದು  ನನ್ನ ಭಾವನೆ ಎಂದು ಒವೈಸಿ ಟೀಕಿಸಿದರು.

ನಾಲ್ಕು ಸಂಸದರನ್ನು ಹೊಂದಿರುವ ಆಮ್ ಆದ್ಮಿ ಪಕ್ಷವನ್ನು ಎರಡೂ ಸಭೆಗಳಿಂದ ಹೊರಗಿಡಲಾಗಿತ್ತು. ಪಕ್ಷದ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರು ಕೇಂದ್ರ ಸರ್ಕಾರವು ರಾಜಕೀಯ ದುರಹಂಕಾರ ಪ್ರದರ್ಶಿಸುತ್ತಿದೆ. ಬದಲಾಗಿ ಅದು ಸಹಕಾರವನ್ನು ಬಯಸಬೇಕು ಎಂದು ಹೇಳಿದರು.

ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ೨೦ ಭಾರತೀಯ ಸೈನಿಕರನ್ನು ಕ್ರೂರವಾಗಿ ಹತ್ಯೆಗೈದ ನಂತರ ಚೀನಾದೊಂದಿಗೆ ಉದ್ವಿಗ್ನತೆ ಉಲ್ಬಣಗೊಳ್ಳುವ ಬಗ್ಗೆ ಚರ್ಚಿಸಲು ಮೋದಿಯವರು ಶುಕ್ರವಾರ ಸಂಜೆ ಗಂಟೆಗೆ ಕರೆದ ಸರ್ವಪಕ್ಷ ಸಭೆಯಲ್ಲಿ ಕನಿಷ್ಠ ೧೭ ಪಕ್ಷಗಳ ನಾಯಕರಿಗೆ ಆಹ್ವಾನ ನೀಡಲಾಗಿತ್ತು.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಪಕ್ಷಗಳ ಮುಖ್ಯಸ್ಥರಿಗೆ ಕರೆಗಳನ್ನು ಮಾಡಿದ್ದರೆ, ಕೆಲವು ಪಕ್ಷಗಳನ್ನು ಪ್ರಧಾನಿ ಕಚೇರಿಯ ಅಧಿಕಾರಿಗಳು ಸಂಪರ್ಕಿಸಿದ್ದರು.

ಜೆ.ಪಿ.ನಡ್ಡಾ (ಬಿಜೆಪಿ), ಸೋನಿಯಾ ಗಾಂಧಿ (ಕಾಂಗ್ರೆಸ್), ಮಮತಾ ಬ್ಯಾನರ್ಜಿ (ತೃಣಮೂಲ ಕಾಂಗ್ರೆಸ್), ಉದ್ಧವ್ ಠಾಕ್ರೆ (ಶಿವಸೇನೆ), ಎಂ.ಕೆ.ಸ್ಟಾಲಿನ್ (ಡಿಎಂಕೆ), ಎಡಪ್ಪಾಡಿ ಕೆ ಪಳನಿಸ್ವಾಮಿ ಮತ್ತು ಪನ್ನೀರ್‌ಸೆಲ್ವಂ (ಎಐಎಡಿಎಂಕೆ ), ಎನ್ ಚಂದ್ರಬಾಬು ನಾಯ್ಡು (ಟಿಡಿಪಿ), ಜಗನ್ ಮೋಹನ್ ರೆಡ್ಡಿ (ವೈಎಸ್‌ಆರ್ ಕಾಂಗ್ರೆಸ್), ಶರದ್ ಪವಾರ್ (ಎನ್‌ಸಿಪಿ), ನಿತೀಶ್ ಕುಮಾರ್ (ಜೆಡಿ-ಯು), ಅಖಿಲೇಶ್ ಯಾದವ್ (ಸಮಾಜವಾದಿ ಪಕ್ಷ), ಡಿ ರಾಜ (ಸಿಪಿಐ), ಸೀತಾರಾಮ್ ಯೆಚೂರಿ (ಸಿಪಿಎಂ), ಕೆ ಚಂದ್ರಶೇಖರ್ ರಾವ್ (ಟಿಆರ್‌ಎಸ್), ಸುಖ್ಬೀರ್ ಬಾದಲ್ (ಅಕಾಲಿ ದಳ), ಚಿರಾಗ್ ಪಾಸ್ವಾನ್ (ಲೋಕ ಜನಶಕ್ತಿ ಪಕ್ಷ) ಮತ್ತು ಹೇಮಂತ್ ಸೊರೆನ್ (ಜಾರ್ಖಂಡ್ ಮುಕ್ತಿ ಮೋರ್ಚಾ) ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಒಡಿಶಾ ಸಿಎಂ ಮತ್ತು ಬಿಜು ಜನತಾದಳದ ಮುಖ್ಯಸ್ಥ ನವೀನ್ ಪಟ್ನಾಯಕ್ ಲಭ್ಯವಿಲ್ಲದಿದ್ದರೂ, ಪಕ್ಷವನ್ನು ಅದರ ಲೋಕಸಭಾ ಮಹಡಿ ನಾಯಕ ಪಿನಾಕಿ ಮಿಶ್ರಾ ಪ್ರತಿನಿದಿಸುವರು ಎಂದು ಸುದ್ದಿ ಮೂಲಗಳು ತಿಳಿಸಿದ್ದವು.

ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಒಂದು ತಿಂಗಳ ಕಾಲದ ಬಿಕ್ಕಟ್ಟು ಹಿಂಸಾತ್ಮಕವಾಗಿ ಉಲ್ಬಣಗೊಂಡು ಚೀನಾ ಸೇನೆಯೊಂದಿಗೆ ಘರ್ಷಣೆಗೆ ಕಾರಣವಾದ ಸನ್ನಿವೇಶಗಳ ಕುರಿತು ಹಲವಾರು ವಿರೋಧ ಪಕ್ಷದ ನಾಯಕರು ಸರ್ಕಾರದಿಂದ ಸ್ಪಷ್ಟತೆ ಕೋರಿದ್ದರು.

,೫೦೦ ಕಿಲೋಮೀಟರ್ ಗಡಿಯಲ್ಲಿ ಸಂಪೂರ್ಣ ಸೇನಾ ಮುಖಾಮುಖಿಯನ್ನು ತಪ್ಪಿಸುವ ಗುರಿಯನ್ನು ಹೊಂದಿರುವ ದೀರ್ಘಕಾಲದ ಪರಂಪರೆಗೆ ಅನುಗುಣವಾಗಿ ಸೈನಿಕರು ಪರಸ್ಪರ ಕೈಕೈ ಮಿಲಾಯಿಸಿ ಘರ್ಷಿಸಿದರು. ಚೀನೀ ಸೈನಿಕರು ಕಲ್ಲು, ಕಬ್ಬಿಣದ ಸರಳುಗಳು, ಬ್ಯಾಟ್‌ಗಳನ್ನು ಘರ್ಷಣೆಯಲ್ಲಿ ಬಳಸಿದರು ಎಂದು ವರದಿಗಳು ತಿಳಿಸಿವೆ.

ಬಿಕ್ಕಟ್ಟು ಶಮನಕ್ಕಾಗಿ ಭಾರತವು ಚೀನಾದೊಂದಿಗೆ ರಾಜತಾಂತ್ರಿಕ ಮಾರ್ಗಗಳನ್ನು ಬಳಸುತ್ತಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ಲೆಹ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ೧೮ ಸೈನಿಕರ ದೇಹಸ್ಥಿತ ಗಂಭೀರವಾಗಿದ್ದು, ಆರೋಗ್ಯ ಸ್ಥಿರವಾಗಿಲ್ಲ.  ಇತರ ಆಸ್ಪತ್ರೆಗಳಲ್ಲಿ ೫೮ ಸೈನಿಕರು ಒಂದು ವಾರದೊಳಗೆ ಕರ್ತವ್ಯಕ್ಕೆ gಳುವ ಸಾಧ್ಯತೆ ಇದೆ ಎಂದು ಭಾರತೀಯ ಸೇನಾ ಮೂಲಗಳನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ.

No comments:

Advertisement