Friday, June 19, 2020

ಕಾಶ್ಮೀರ ಕಣಿವೆ: ೮ ಭಯೋತ್ಪಾದಕರ ಹತ್ಯೆ

ಕಾಶ್ಮೀರ ಕಣಿವೆ:   ಭಯೋತ್ಪಾದಕರ ಹತ್ಯೆ

ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಉಗ್ರರ ಸಂಹಾರ ಕಾರ್ಯಾಚರಣೆ ಮುಂದುವರೆಸಿರುವ ಭದ್ರತಾ ಪಡೆಗಳು ಕಳೆದ  ೨೪ ಗಂಟೆಗಳಲ್ಲಿ ಭಯೋತ್ಪಾದಕರನ್ನು ಘರ್ಷಣೆಯಲ್ಲಿ ಹೊಡೆದುರುಳಿಸಿವೆ.

ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು ಭಯೋತ್ಪಾದಕರನ್ನು ಹತ್ಯೆಗೈಯ್ಯಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್ 2020 ಜೂನ್ 19ರ ಶುಕ್ರವಾರ  ಸ್ಪಷ್ಟಪಡಿಸಿದರು.

ಸತ್ತಿರುವ ಭಯೋತ್ಪಾದಕರಲ್ಲಿ ಪಾಂಪೋರ್ನ ಜಾಮಿಯಾ ಮಸೀದಿಯಲ್ಲಿ ಅಡಗಿದ್ದ ಇಬ್ಬರು ಉಗ್ರರೂ ಸೇರಿದ್ದಾರೆ. ಇವರನ್ನು ಹೊಡೆದುರುಳಿಸುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿವೆ ಎಂದು ಅವರು ನುಡಿದರು.

ಮಸೀದಿಯಲ್ಲಿ ಅಡಗಿದ್ದ ಉಗ್ರರ ಮೇಲೆ ನಡೆದ ದಾಳಿಯ ಸಂದರ್ಭದಲ್ಲಿ ಧಾರ್ಮಿಕ ಕಟ್ಟಡಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ದಿಲ್ಬಾಗ್ ಸಿಂಗ್ ಸ್ಪಷ್ಟಪಡಿಸಿದ್ದು, ಅತ್ಯಂತ ಕರಾರುವಾಕ್ ಕಾರ್ಯಾಚರಣೆ ನಡೆಸಲಾಗಿದೆ ಎಂದು ಹೇಳಿದರು.

ಮಸೀದಿಯಲ್ಲಿ ಅಡಗಿದ್ದ ಭಯೋತ್ಪಾದಕರನ್ನು ಮೊದಲು ಮಸೀದಿ ಬಿಟ್ಟು ಹೊರಬರುವ ಅನಿವಾರ್ಯತೆ ಸೃಷ್ಟಿಸಿದ ಭದ್ರತಾ ಪಡೆಗಳು, ನಂತರ ಇಬ್ಬರನ್ನೂ ಹೊಡೆದುರುಳಿಸುವಲ್ಲಿ ಯಶಸ್ವಿಯಾದವು.

ಮಸೀದಿಗೆ ಯಾವುದೇ ಹಾನಿಯಾಗದಂತೆ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿದ್ದರಿಂದ ಸ್ಥಳೀಯರು ಸಂತಸಗೊಂಡಿದ್ದಲ್ಲದೇ ಪೊಲೀಸರ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿವೆ.

ಕಣಿವೆಯಲ್ಲಿ ಉಗ್ರರ ಸಂಹಾರ ಮುಂದುವರೆದಿದ್ದು, ಕಣಿವೆಯನ್ನು ಉಗ್ರವಾದದಿಂದ ಮುಕ್ತಗೊಳಿಸುವ ಕೇಂದ್ರ ಸರ್ಕಾರದ ನೀತಿಯನ್ನು ಅತ್ಯಂತ ಯಶಸ್ವಿಯಾಗಿ ಜಾರಿಗೆ ತರಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

ಪುಲ್ವಾಮ ಮತ್ತು ಶೋಪಿಯಾನ್: ಜಮ್ಮು-ಕಾಶ್ಮೀರದ  ಪುಲ್ವಾಮಾ ಮತ್ತು ಶೋಪಿಯಾನ್ ಜಿಲ್ಲೆಗಳಲ್ಲಿ ನಡೆದ ಪ್ರತ್ಯೇಕ ಎರಡು ಕಾರ್ಯಾಚರಣೆಗಳಲ್ಲಿ ಶುಕ್ರವಾರ ಆರು ಮಂದಿ ಭಯೋತ್ಪಾದಕರು ಹತರಾದರು.

ಇದರಿಂದಾಗಿ ಗುರುವಾರ ರಾತ್ರಿಯಿಂದ ನಡೆದ ಕಾರ್ಯಾಚರಣೆಗಳಿಗೆ ಒಟ್ಟು ಎಂಟು ಉಗ್ರರು ಬಲಿಯಾದಂತಾಗಿದೆ ಎಂದು ಅಧಿಕಾರಿಗಳು ಹೇಳಿದರು.

ಪುಲ್ವಾಮಾ ಕಾರ್ಯಾಚರಣೆಯಲ್ಲಿ ಶುಕ್ರವಾರ ಇಬ್ಬರು ಉಗ್ರರು ಹತ್ಯೆಗೀಡಾದರೆ, ಶೋಪಿಯಾನ್‌ನಲ್ಲಿ ನಾಲ್ವರು ಹತರಾಗಿದ್ದಾರೆ.

ಪುಲ್ವಾಮಾದ ಪಾಂಪೊರ್ ಬಳಿಯ ಮಸೀದಿಯಲ್ಲಿ ಭಯೋತ್ಪಾದಕರು ಅಡಗಿರುವ ಮಾಹಿತಿ ತಿಳಿಯುತ್ತಿದ್ದಂತೆಯೇ ಭದ್ರತಾ ಪಡೆಗಳು ಅಲ್ಲಿ ಗುರುವಾರ ಬೆಳಗ್ಗೆಯಿಂದಲೇ ಕಾರ್ಯಾಚರಣೆ ಆರಂಭಿಸಿದ್ದವು.

ಭಯೋತ್ಪಾದಕರಿಗಾಗಿ ಶೋಧ ನಡೆಸುತ್ತಿದ್ದಾಗ ಅವರು ಗುಂಡಿನ ದಾಳಿ ನಡೆಸಿದ್ದರಿಂದ ಭದ್ರತಾ ಪಡೆ ಸಿಬ್ಬಂದಿಯೂ ಪ್ರತಿ ದಾಳಿ ನಡೆಸಿದರು. ಸಂದರ್ಭದಲ್ಲಿ ಗುರುವಾರ ಒಬ್ಬ ಉಗ್ರ ಹತನಾಗಿದ್ದ. ಆದರೆ ಇತರ ಇಬ್ಬರು ಸಮೀಪದ ಮಸೀದಿ ಪ್ರವೇಶಿಸಿ ಆಶ್ರಯ ಪಡೆದಿದ್ದರು.

ಮಸೀದಿಯನ್ನು ಸುತ್ತುವರೆದ ಭದ್ರತಾ ಪಡೆ ರಾತ್ರಿಯಡೀ ನಡೆಸಿದ ಕಾರ್ಯಾಚರಣೆಗೆ ಶುಕ್ರವಾರ ಬೆಳಗ್ಗೆ ಇಬ್ಬರು ಉಗ್ರರು ಬಲಿಯಾದರು ಎಂದು ಪೊಲೀಸರು ವಿವರಿಸಿದರು.

No comments:

Advertisement