My Blog List

Wednesday, July 15, 2020

ಸಶಸ್ತ್ರ ಪಡೆಗಳಿಂದಲೇ ಗಡಿ ಬಿಕ್ಕಟ್ಟಿನ ಮಧ್ಯೆ ಶಸ್ತ್ರಾಸ್ತ್ರ ಖರೀದಿ

ಸಶಸ್ತ್ರ ಪಡೆಗಳಿಂದಲೇ ಗಡಿ ಬಿಕ್ಕಟ್ಟಿನ ಮಧ್ಯೆ
ಶಸ್ತ್ರಾಸ್ತ್ರ
ಖರೀದಿ

ನವದೆಹಲಿ: ೧೯೬೨ರ ಭಾರತ-ಚೀನಾ ಸಮರದ ಬಳಿಕ ಇದೇ ಮೊದಲ ಬಾರಿಗೆ ಗಂಭಿರಗೊಂಡಿರುವ ಲಡಾಕ್ ಗಡಿ ಬಿಕ್ಕಟ್ಟು ಮತ್ತು ಉದ್ವಿಗ್ನತೆಗಳ ಮಧ್ಯೆ, ತನ್ನ ನಿರ್ಣಾಯಕ ಕಾರ್ಯಾಚರಣೆಯ ಅಗತ್ಯತೆಗಳನ್ನು ಪೂರೈಸಲು ಅಗತ್ಯವಿರುವ ಶಸ್ತ್ರಾಸ್ತ್ರಗಳು ಮತ್ತು ೩೦೦ ಕೋಟಿ ರೂ.ಗಳ ಮೌಲ್ಯದ ಉಪಕರಣಗಳನ್ನು ತುರ್ತಾಗಿ  ಖರೀದಿಸುವ ಪ್ರಕ್ರಿಯೆ ಪೂರ್ಣಗೊಳಿಸಲು ಸಶಸ್ತ್ರ ಪಡೆಗಳಿಗೆ ಕೇಂದ್ರ ಸರ್ಕಾರವು 2020 ಜುಲೈ 15ರ ಬುಧವಾರ ಅಧಿಕಾರ ನೀಡಿತು.

"ಇದು ಖರೀದಿಯ ಸಮಯವನ್ನು ಕುಗ್ಗಿಸುತ್ತದೆ ಮತ್ತು ಆರು ತಿಂಗಳಲ್ಲಿ ಆದೇಶಗಳನ್ನು ನೀಡುವುದನ್ನು ಖಚಿತಪಡಿಸುತ್ತದೆ ಮತ್ತು ಒಂದು ವರ್ಷದೊಳಗೆ ವಿತರಣೆ ಪ್ರಾರಂಭವಾಗುತ್ತದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ರಕ್ಷಣಾ ಸ್ವಾಧೀನ ಮಂಡಳಿಯ (ಡಿಎಸಿ) ವಿಶೇಷ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. "ಉತ್ತರ ಗಡಿಗಳಲ್ಲಿನ ಹಾಲಿ ಪರಿಸ್ಥಿತಿ ಮತ್ತು ನಮ್ಮ ಗಡಿಗಳ ರಕ್ಷಣೆಗಾಗಿ ಸಶಸ್ತ್ರ ಪಡೆಗಳನ್ನು ಬಲಪಡಿಸುವ ಅಗತ್ಯತೆ ಮತ್ತು ಭದ್ರತಾ ಪರಿಸರವನ್ನು ಪರಿಗಣಿಸಿ" ವಿಶೇಷ ಸಭೆ ಕರೆಯಲಾಗಿತ್ತು ಎಂದು ಸಚಿವಾಲಯ ಹೇಳಿದೆ.

೩೮,೯೦೦ ಕೋಟಿ ರೂ.ಗಳ ಮೌಲ್ಯದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಖರೀದಿಸಲು ಡಿಎಸಿ ಜುಲೈ ೨ರ ಗುರುವಾರ ಅನುಮೋದನೆ ನೀಡಿದೆ. ಖರೀದಿಗಳಲ್ಲಿ ಯುದ್ಧ ವಿಮಾನಗಳ ಕೊರತೆಯನ್ನು ಎದುರಿಸುತ್ತಿರುವ ಭಾರತೀಯ ವಾಯುಪಡೆಗಾಗಿ (ಐಎಎಫ್) ೩೩ ಹೊಸ ಫೈಟರ್ ಜೆಟ್ಗಳು ಸೇರಿವೆ.

ರಷ್ಯಾದಿಂದ ೨೧ ಮಿಗ್ -೨೯ ವಿಮಾನಗಳು, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ನಿಂದ ೧೨ ಹೊಸ ಸುಖೋಯ್ -೩೦, ದೇಶೀಯವಾಗಿ ಅಭಿವೃದ್ಧಿ ಪಡಿಸಿದ ಅಸ್ಟ್ರಾ ಬಿವಿಆರ್ ಗಾಳಿಯಿಂದ ಗಾಳಿಗೆ ನೆಗೆಯುವ ಕ್ಷಿಪಣಿಗಳು, ಸ್ಥಳೀಯವಾಗಿ ಅಭಿವೃದ್ಧಿ ಹೊಂದಿದ ೧೦೦೦ ಕಿಮೀ ದಾಳಿ ಸಾಮರ್ಥ್ಯದ ಭೂ-ದಾಳಿ ಕ್ರೂಸ್ ಕ್ಷಿಪಣಿ (ಎಲ್ಎಸಿಎಂ) ವ್ಯವಸ್ಥೆಗಳು, ಸ್ಥಳೀಯ ರಾಕೆಟ್ ವ್ಯವಸ್ಥೆಗಳು ಮತ್ತು ೫೯ ಮಿಗ್ -೨೯ ಜೆಟ್ಗಳ ನವೀಕರಣ ಇವುಗಳಲ್ಲಿ ಸೇರಿದ್ದವು.

ದೇಶೀಯ ಉದ್ಯಮದಿಂದ ಜುಲೈ ರಂದು ಖರೀದಿಸಲು ತೆರವುಗೊಳಿಸಿದ ಮಿಲಿಟರಿ ಯಂತ್ರಾಂಶದ ವೆಚ್ಚವನ್ನು ೩೧,೧೩೦ ಕೋಟಿ ರೂ.ಗಳಿಗೆ ಏರಿಸಲಾಗಿದೆ. ಆದೇಶಗಳು ಪ್ರಧಾನಿ ನರೇಂದ್ರ ಮೋದಿಯವರಆತ್ಮನಿರ್ಭರ ಭಾರತ ಅಭಿಯಾನಕ್ಕೆ (ಸ್ವಾವಲಂಬಿ ಭಾರತ ಚಳುವಳಿ) ಒತ್ತು ನೀಡಲಿವೆ.

No comments:

Advertisement