Wednesday, September 30, 2020

ವಿವಾದಾತ್ಮಕ ಬಾಬರಿ ಮಸೀದಿ ಧ್ವಂಸ ಪ್ರಕರಣ: ಚಾರಿತ್ರಿಕ ತೀರ್ಪು

 ವಿವಾದಾತ್ಮಕ ಬಾಬರಿ ಮಸೀದಿ ಧ್ವಂಸ ಪ್ರಕರಣ ಚಾರಿತ್ರಿಕ ತೀರ್ಪು,  ಎಲ್ಲ 32  ಆರೋಪಿಗಳ ದೋಷಮುಕ್ತಿ

ಲಕ್ನೋ: ೨೮ ವರ್ಷಗಳ ಹಿಂದೆ ಸಂಭವಿಸಿದ ಅಯೋಧ್ಯೆಯ ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ 2020 ಸೆಪ್ಟೆಂಬರ್ 30ರ ಬುಧವಾರ ,೦೦೦ ಪುಟಗಳ ಚಾರಿತ್ರಿಕ ತೀರ್ಪು ನೀಡಿದ ವಿಶೇಷ ಸಿಬಿಐ ನ್ಯಾಯಾಲಯವು ಬಿಜೆಪಿಯ ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ ಜೋಶಿ, ಉಮಾಭಾರತಿ ಸೇರಿದಂತೆ ಎಲ್ಲ ೩೨ ಮಂದಿ ಆರೋಪಿಗಳನ್ನು ಖುಲಾಸೆ ಮಾಡಿತು.

ತೀರ್ಪನ್ನು ಓದಿ ಹೇಳಿದರ ವಿಶೇಷ ನ್ಯಾಯಾಧೀಶ ಸುರೇಂದ್ರ ಕುಮಾರ್ ಯಾದವ್ ಅವರು೧೯೯೨ ಬಾಬರಿ ಮಸೀದಿ ನೆಲಸಮವು ಪೂರ್ವ ಯೋಜಿತವಲ್ಲ ಮತ್ತು ಸಾಕ್ಷ್ಯಗಳು ಬಲವಾಗಿಲ್ಲಎಂದು ಹೇಳಿ ಎಲ್ಲ ಆರೋಪಿಗಳನ್ನೂ ದೋಷಮುಕ್ತಗೊಳಿಸಿದರು.

ತೀರ್ಪನ್ನು ಓದಿ ಹೇಳುವ ವೇಳೆಯಲ್ಲಿ ಸಾಧ್ವಿ ಋತಂಭರ, ಸಾಕ್ಷಿ ಮಹಾರಾಜ್, ವಿನಯ್ ಕಟಿಯಾರ್ ಮತ್ತು ಚಂಪತ್ ರಾಯ್ ಬನ್ಸಾಲ್ ಅವರು ನ್ಯಾಯಾಲಯಕ್ಕೆ ಹಾಜರಾಗಿದ್ದರೆ, ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ ಜೋಷಿ, ಮತ್ತು ಉಮಾಭಾರತಿ ವಿಡಿಯೋ ಕಾನ್ಪರೆನ್ಸಿಂಗ್ ಮೂಲಕ ಹಾಜರಾಗಿದ್ದರು.

ಅಡ್ವಾಣಿ ಮತ್ತು ಮುರಳಿ ಮನೋಹರ ಜೋಷಿ ಅವರು ವಯಸ್ಸು ಸಂಬಂಧಿv ಅನಾರೋಗ್ಯದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಖುದ್ದು ಹಾಜರಾಗಲಿಲ್ಲ. ಉಮಾಭಾರತಿ ಅವರು ಕೊರೋನಾವೈರಸ್ ಸೋಂಕಿನ ಕಾರಣ ವಿಡಿಯೋ ಕಾನ್ಪರೆನ್ಸಿಂಗ್ ಮೂಲಕ ನ್ಯಾಯಾಲಯದ ಕಲಾಪ ವೀಕ್ಷಿಸಿದರು.

ಪ್ರಕರಣದ ಆರೋಪಿಗಳಾದ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್, ಸತೀಶ್ ಪ್ರಧಾನ್ ಮತ್ತು ಮಹಂತ ನೃತ್ಯ ಗೋಪಾಲ ದಆಸ್ ಅವರು ಕೂಡಾ ವಿಡಿಯೋ ಕಾನ್ಪರೆನ್ಸಿಂಗ್ ಮೂಲಕ ಹಾಜರಾಗಿದ್ದರು.

ಮಸೀದಿ ಕಟ್ಟಡ ನೆಲಸಮ ವೇಳೆಯಲ್ಲಿ ಸ್ಥಳದಲ್ಲಿ ಹಾಜರಿದ್ದ ನಾಯಕರು ಜನಸಮೂಹವನ್ನು ತಡೆಯಲು ಪ್ರಯತ್ನಿಸುತ್ತಿದ್ದರು ಮತ್ತು ಜನ ಸಮೂಹವನ್ನು ಪ್ರಚೋದಿಸಲಿಲ್ಲಎಂದು ನ್ಯಾಯಾಧೀಶರು ತೀರ್ಪಿನಲ್ಲಿ ಹೇಳಿದರು.

ವಿವಾದಿತ ಕಟ್ಟಡದ ಹಿಂದಿನಿಂದ ಕಲ್ಲುಗಳ ಹೊಡೆಯುವಿಕೆ ಪ್ರಾರಂಭವಾಯಿತು. ಅಶೋಕ್ ಸಿಂಘಾಲ್ ಹಿಂದೂ ದೇವತೆಗಳ ಪ್ರತಿಮೆಗಳನ್ನು ಇದ್ದುದರಿಂದ ಕಟ್ಟಡವನ್ನು ಸುರಕ್ಷಿತವಾಗಿಡಲು ಬಯಸಿದ್ದರು. ಎಲ್ಲ ಕರಸೇವಕರ ಉಭಯ ಕೈಗಳನ್ನೂ ಕಾರ್ ನಿರತವಾಗಿ ಇರಿಸುವ ಸಲುವಾಗಿ ನೀರು ಮತ್ತು ಹೂವುಗಳನ್ನು ತರಲು ನಿರ್ದೇಶಿಸಲಾಗಿತ್ತುನ್ಯಾಯಾಧೀಶ ಎಸ್.ಕೆ. ಯಾದವ್ ಹೇಳಿದರು.

ಬಿಗಿ ಬಂದೋಬಸ್ತ್

ಲಕ್ನೋ ವಿಶೇಷ ಸಿಬಿಐ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೊಲೀಸರು ಕಟ್ಟು ನಿಟ್ಟಿನ ಎಚ್ಚರಿಕೆ ವಹಿಸಿದ್ದರು.

ಅಪರಾಧ ಸಾಬೀತಾಗಿದ್ದಿದ್ದರೆ, ಕೇಸರಿ ಪಡೆಯ ಪ್ರಮುಖರಾದ ಅಡ್ವಾಣಿ, ಜೋಶಿ, ಉಮಾ ಭಾರತಿ, ಕಟಿಯಾರ್, ಋತಂಭರ, ಮಹಂತ ನೃತ್ಯ ಗೋಪಾಲ ದಾಸ್, ಬನ್ಸಲ್, ರಾಮ ವಿಲಾಸ್ ವೇದಾಂತಿ, ಧರ್ಮದಾಸ್ ಮತ್ತು ಡಾ.ಸತೀಶ್ ಪ್ರಧಾನ್ ಅವರು ಐದು ವರ್ಷಗಳವರೆಗೆ ಗರಿಷ್ಠ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತಿತ್ತು.

ತೀರ್ಪಿನ ಹಿನ್ನೆಲೆಯಲ್ಲಿ ಉತ್ತರಪ್ರದೇಶದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಲಾಗಿದೆ. ಅಯೋಧ್ಯೆಯಲ್ಲಿ ನಾಗರಿಕ ಉಡುಪಿನಲ್ಲಿರುವ ಪೊಲೀಸರು ಕಾವಲು ಕಾಯುತ್ತಿದ್ದರೆ, ಅಯೋಧ್ಯಾ ಪ್ರಕರಣದ ವಿಚಾರಣೆ ನಡೆದ ಲಕ್ನೋದ ಕೈಸರ್ ಬಾಗ್ ಹಳೆಯ ಹೈಕೋರ್ಟ್ ಕಟ್ಟಡದಲ್ಲಿ ,೦೦೦ ಪೊಲೀಸರನ್ನು ನಿಯೋಜಿಸಲಾಗಿತ್ತು.

೨೫ ಸೂಕ್ಷ್ಮ ಜಿಲ್ಲೆಗಳಲ್ಲಿ ಕ್ಷಿಪ್ರ ಕಾರ್ ಪಡೆ (ರಾಪಿಡ್ ಆಕ್ಷನ್ ಫೋರ್ಸ್ -ಆರ್ಎಎಫ್) ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಸೆಪ್ಟೆಂಬರ್ ೩೦ ರೊಳಗೆ ತೀರ್ಪು ನೀಡುವಂತೆ ಸುಪ್ರೀಂ ಕೋರ್ಟ್ ನೀಡಿದ್ದ ನಿರ್ದೇಶನದ ಮೇರೆಗೆ ಈದಿನ ತೀರ್ಪಿಗೆ ದಿನಾಂಕ ನಿಗದಿ ಪಡಿಸಲಾಗಿತ್ತು.

ಅಯೋಧ್ಯೆಯಲ್ಲಿ ಪುರಾತನ ರಾಮಮಂದಿರವಿದ್ದ ಜಾಗದಲ್ಲಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಆಪಾದಿಸಿ ನಡೆದಿದ್ದ ಸುದೀರ್ಘ ಕಾಲದ ಚಳವಳಿ ೧೯೯೨ರಲ್ಲಿ ಕರಸೇವಕರಿಂದ ವಿವಾದಾತ್ಮಕ ಕಟ್ಟಡ ನೆಲಸಮದಲ್ಲಿ ಪರ್ಯವಸಾನಗೊಂಡಿತ್ತು.

ಅಯೋಧ್ಯೆಯ ಭೂ ವಿವಾದ ಪ್ರಕರಣವನ್ನು ಸುಪ್ರೀಂಕೋರ್ಟ್ ಕಳೆದ ವರ್ಷ ಇತ್ಯರ್ಥ ಪಡಿಸಿ, ಇಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅವಕಾಶ ನೀಡಿತು. ಇದೇ ವೇಳೆಗೆ ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕಾಗಿ ಪರ್ಯಾಯ ಸ್ಥಳವನ್ನು ಮಂಜೂರು ಮಾಡಬೇಕೆಂದು ಸುಪ್ರೀಂಕೋರ್ಟ್ ನಿರ್ದೇಶಿಸಿತ್ತು.

ಆಗಸ್ಟ್ ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಭೂಮಿ ಪೂಜೆಯಲ್ಲಿ ಪಾಲ್ಗೊಂಡು ದೇಗುಲ ನಿರ್ಮಾಣದ ಶಂಕು ಸ್ಥಾಪನೆಯನ್ನು ನೆರವೇರಿಸಿದ್ದರು.

ಅಯೋಧ್ಯ ಮಸೀದಿ ಧ್ವಂಸ ಪ್ರಕರಣದ ತೀರ್ಪು ಹೊರಬೀಳುವುದಕ್ಕೆ ಒಂದು ದಿನ ಮುಂಚಿತವಾಗಿ ಬಿಜೆಪಿ ನಾಯಕಿ ಉಮಾ ಭಾರತಿ ಅವರು ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಬರೆದ ಪತ್ರದಲ್ಲಿ ಅಪರಾಧಿ ಎಂಬುದಾಗಿ ತೀರ್ಮಾನವಾದರೆ ತಾವು ಜಾಮೀನು ಪಡೆಯುವ ಬದಲು "ಗಲ್ಲಿಗೇರಿಸಿಕೊಳ್ಳಲುಬಯಸುವುದಾಗಿ ತಿಳಿಸಿದ್ದರು.

ಉಮಾ ಭಾರತಿ ಅವರು ಸೆಪ್ಟೆಂಬರ್ ೨೬ ರಂದು ನಡ್ಡಾ ಅವರಿಗೆ ಪತ್ರ ಬರೆದಿದ್ದಾರೆ ಎಂದು ವರದಿಯೊಂದು ತಿಳಿಸಿತ್ತು.

ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪದಾಧಿಕಾರಿಗಳ ನಾಟಕೀಯ ಪುನರ್ರಚನೆಯಲ್ಲಿ ಉಮಾ ಭಾರತಿ ಅವರನ್ನು ಪದಾಧಿಕಾರಿಗಳ ಪಟ್ಟಿಯಿಂದ ಕೈಬಿಡಲಾಗಿತ್ತು.

"ಅಯೋಧ್ಯೆ ಚಳವಳಿಯಲ್ಲಿ" ಭಾಗವಹಿಸಿದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಉಮಾ ಭಾರತಿ, ಜಾಮೀನು ಕೋರುವುದು ತನ್ನ ಪಾತ್ರದ "ಘನತೆಗೆ ಕಳಂಕ ತರುತ್ತದೆಎಂದು ಹೇಳಿದ್ದರು.

ಸೆಪ್ಟೆಂಬರ್ ೩೦ ರಂದು ಅಯೋಧ್ಯೆಯ ತೀರ್ಪು ಏನೆಂದು ನನಗೆ ತಿಳಿದಿಲ್ಲ ಆದರೆ ನಾನು ಜಾಮೀನು ಪಡೆಯುವುದಿಲ್ಲ. ಅಯೋಧ್ಯೆ ಚಳವಳಿಯಲ್ಲಿ ನಾನು ಭಾಗವಹಿಸಿದ್ದಕ್ಕೆ ಹೆಮ್ಮೆ ಇದೆ. ಅಯೋಧ್ಯೆ ಚಳವಳಿಯ ಭಾಗವಾಗಿದ್ದಕ್ಕಾಗಿ ನಾನು ಗಲ್ಲಿಗೇರಬೇಕಾಗಿ ಬಂದರೂ ಅದು ನನಗೆ ಸ್ವೀಕಾರಾರ್ಹ ಎಂದು ನಾನು ಹಿಂದೆಯೇ ಹೇಳಿದ್ದೇನೆ. ಜಾಮೀನು ಪಡೆಯುವುದರಿಂದ ನಾನು ಚಳವಳಿಯಲ್ಲಿ ಭಾಗವಹಿಸಿದ ಘನತೆಗೆ ಕಳಂಕ ತಟ್ಟುತ್ತದೆಎಂದು ಉಮಾಭಾರತಿ ಹೇಳಿದ್ದರು.

ಕೊರೋನಾವೈರಸ್ ಸೋಂಕಿಗೆ ಒಳಗಾಗಿರುವ ಭಾರತಿ ಅವರನ್ನು ಪ್ರಸ್ತುತ ಹೃಷಿಕೇಶದಲ್ಲಿರುವ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ಗೆ (ಏಮ್ಸ್) ದಾಖಲಿಸಲಾಗಿದೆ. ಅವರ ಸ್ಥಿತಿ ಸ್ಥಿರವಾಗಿದೆ  ಎಂದು ಸುದ್ದಿ ಮೂಲಗಳು ತಿಳಿಸಿವೆ.

೨೦೦೧ ರಲ್ಲಿ ವಿಚಾರಣಾ ನ್ಯಾಯಾಲಯವು ಪ್ರಕರಣ ಕೈಬಿಟ್ಟ ನಂತರ ಆರೋಪಿಗಳ ವಿರುದ್ಧ ಗಂಭೀರ ಕ್ರಿಮಿನಲ್ ಪಿತೂರಿ ಆರೋಪದಡಿ ವಿಚಾರಣೆ ಪ್ರಾರಂಭವಾಗಿತ್ತು. ೨೦೧೦ ರಲ್ಲಿ ಅಲಹಾಬಾದ್ ಹೈಕೋರ್ಟ್ ವಿಚಾರಣಾ ನ್ಯಾಯಾಲಯವು ಪ್ರಕರಣ ಕೈಬಿಟ್ಟ ತೀರ್ಪನ್ನು ಎತ್ತಿಹಿಡಿದಿತ್ತು. ಆದರೆ ಸುಪ್ರೀಂ ಕೋರ್ಟ್ ೨೦೧೭ರ ಏಪ್ರಿಲ್ ೧೯ ರಂದು ಪಿತೂರಿ ಆರೋಪ ಪ್ರಕರಣದ ಪುನಾರಂಭಕ್ಕೆ ಆದೇಶಿಸಿತು.

ದೈನಂದಿನ ವಿಚಾರಣೆ ನಡೆಸಿ ಎರಡು ವರ್ಷಗಳಲ್ಲಿ ಪ್ರಕರಣವನ್ನು ಇತ್ಯರ್ಥ ಪಡಿಸುವಂತೆಯೂ ಸುಪ್ರಿಂಕೋರ್ಟ್ ವಿಶೇಷ ನ್ಯಾಯಾಧೀಶರಿಗೆ ನಿರ್ದೇಶನ ನೀಡಿತ್ತು.

ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ಮಧ್ಯೆ ದ್ವೇಷವನ್ನು ಬಿತ್ತಿದ ಮತ್ತು ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಸಲುವಾಗಿ ಉದ್ದೇಶಪೂರ್ವಕವಾಗಿ ದುರುದ್ದೇಶಪೂರಿತ ಕೃತ್ಯಗಳಲ್ಲಿ ಪಾಲ್ಗೊಂಡದ್ದು, ಸಾರ್ವಜನಿಕ ಕಿಡಿಗೇಡಿತನ, ಗಲಭೆ ಮತ್ತು ಕಾನೂನುಬಾಹಿರ ಸಭೆಗೆ ಕಾರಣವಾಗುವಂತಹ ಹೇಳಿಕೆಗಳನ್ನು ನೀಡಿದ ಆರೋಪಗಳನ್ನು ಆರೋಪಿಗಳ ವಿರುದ್ಧ ಹೊರಿಸಲಾಗಿತ್ತು.

ಅವರು ಈಗಾಗಲೇ ವಿಚಾರಣೆಯನ್ನು ಎದುರಿಸುತ್ತಿರುವ ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ೧೬ ನೇ ಶತಮಾನದ ಮಸೀದಿಯನ್ನು ಕೆಡವಲು ಆರೋಪಿಗಳುಕರಸೇವಕರ ಮೂಲಕ ಸಂಚುರೂಪಿಸಿದರು ಎಂದು ಸಿಬಿಐ ವಾದಿಸಿತ್ತು.

ಆದರೆ ಆರೋಪಿಗಳು ತಮ್ಮ ತಪ್ಪನ್ನು ಸಾಬೀತುಪಡಿಸಲು ಯಾವುದೇ ಪುರಾವೆಗಳಿಲ್ಲ, ತಾವು ನಿರಪರಾಧಿಗಳು ಎಂದು ವಾದಿಸಿದ್ದರು. ಕೇಂದ್ರದಲ್ಲಿ ಆಗ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರವು ರಾಜಕೀಯ ಲಾಭಕ್ಕಾಗಿ ಪ್ರಕರಣವನ್ನು ಹೆಣೆದಿದೆ ಎಂದು ಅವರು ವಾದಿಸಿದ್ದರು.

ಪ್ರಕರಣದಲ್ಲಿ ೩೫೦ ಕ್ಕೂ ಹೆಚ್ಚು ಸಾಕ್ಷಿಗಳು ತಮ್ಮ ಹೇಳಿಕೆಗಳನ್ನು ದಾಖಲಿಸಿದ್ದರು. ಸಿಬಿಐ ೪೯ ಸಂಬಂಧಿತ ಪ್ರಕರಣಗಳಲ್ಲಿ ಏಕೀಕೃತ ಚಾರ್ಜ್ಶೀಟ್ ಸಲ್ಲಿಸಿತ್ತು. ಪ್ರಕರಣ ಆರಂಭವಾದಾಗ ಇದ್ದ ೪೯ ಆರೋಪಿಗಳ ಪೈಕಿ ೩೨ ಮಂದಿ ಮಾತ್ರ ತೀರ್ಪು ನೀಡುವ ವೇಳೆಗೆ ಬದುಕಿ ಉಳಿದಿದ್ದಾರೆ.

ಅಯೋಧ್ಯಾ ಪ್ರಕರಣ: ಇತಿಹಾಸದ ಮೈಲಿಗಲ್ಲುಗಳು

No comments:

Advertisement