Friday, October 2, 2020

ಚೀನೀ ಒತ್ತಡ ತಂತ್ರದ ಮೊದಲ ಹೆಜ್ಜೆ: 1959ರ ಎಲ್ಎಸಿ ಹಕ್ಕು ಪ್ರತಿಪಾದನೆ ?

 ಚೀನೀ ಒತ್ತಡ ತಂತ್ರದ ಮೊದಲ ಹೆಜ್ಜೆ: 1959ರ ಎಲ್ಎಸಿ ಹಕ್ಕು ಪ್ರತಿಪಾದನೆ ?

ನವದೆಹಲಿ: ಲಡಾಖ್ನಲ್ಲಿ ೧೯೫೯ರ ಗರಿಷ್ಠ ಕಾರ್ಟೋಗ್ರಾಫಿಕಲ್ ಹಕ್ಕಿನ ಆಧಾರದಲ್ಲಿ ,೫೯೭ ಕಿಮೀ ಉದ್ದದ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್ಎಸಿ) ಪ್ರತಿಪಾದನೆಯನ್ನು ಪುನರುಚ್ಚರಿಸುವುದರೊಂದಿಗೆ ಚೀನೀ ಸೇನೆಯು ಪಶ್ಚಿಮ ವಲಯದಲ್ಲಿ ಭಿನ್ನಾಭಿಪ್ರಾಯಗಳು ಇರುವ ಇತರ ಆರು ಪ್ರದೇಶಗಳ ಮೇಲೆ ಒತ್ತಡ ಹಾಕಲು ಯೋಜನೆ ರೂಪಿಸಿದೆ ಎಂದು ರಾಷ್ಟ್ರೀಯ ಭದ್ರತಾ ಯೋಜಕರು ಶಂಕಿಸಿದ್ದಾರೆ.

ಅಂದಾಜಿನ ಬಗ್ಗೆ ಎಚ್ಚರಿಕೆ ತಾಳಿರುವ ಭಾರತೀಯ ಸೇನೆಯು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯ (ಪಿಎಲ್) ಇಂತಹ ಯಾವುದೇ ಯತ್ನಗಳನ್ನು ಪೂರ್ವಭಾವಿಯಾಗಿಯೇ ತಡೆಯುವ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಿದೆ ಎಂದು ಸುದ್ದಿ ಮೂಲಗಳು 2020 ಅಕ್ಟೋಬರ್ 01 ಗುರುವಾರ ಹೇಳಿವೆ.

ಸೇನಾ ಭೂಪಟಗಳಲ್ಲಿ ಹಸಿರು ರೇಖೆ (ಗ್ರೀನ್ ಲೈನ್) ಎಂಬುದಾಗಿ ವಿವರಿಸಲಾಗಿರುವ ೧೯೫೯ರ ರೇಖೆಯನ್ನು ಆಗಿನ ಚೀನಾ ಪ್ರಧಾನಿ ಚೌ ಎನ್ ಲೈ ಅವರು ಭಾರತದ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಗೆ ೧೯೫೯ರ ನವೆಂಬರ್ ೭ರಂದು ಕಳುಹಿಸಿದ್ದರು. ಬಳಿಕ ಇದನ್ನು ೧೯೬೨ ನವೆಂಬರ್ ೧೫ ರಂದು ಆಫ್ರಿಕನ್-ಏಷ್ಯನ್ ರಾಷ್ಟ್ರಗಳ ಮುಖ್ಯಸ್ಥರನ್ನು ಉದ್ದೇಶಿಸಿ ಬರೆದ ಪತ್ರಕ್ಕೆ ಸೇರಿಸಲಾಗಿತ್ತು..

ತಜ್ಞರ ಮಟ್ಟದ ಗುಂಪು ಪಾಶ್ಚಿಮಾತ್ಯ ವಲಯದ ಸ್ಪಷ್ಟೀಕರಣ ಮತ್ತು ದೃಢೀಕರಣದ ಅನಿರ್ದಿಷ್ಟ ಕಸರತ್ತಿನ ಸಮಯದಲ್ಲಿ, ಭಾರತ ಮತ್ತು ಚೀನಾವು ಗಮನಾರ್ಹವಾದ ೧೨ ಕ್ಷೇತ್ರಗಳಲ್ಲಿ ಭಿನ್ನಾಭಿಪ್ರಾಯಗಳನ್ನು ಹೊಂದಿವೆ ಎಂಬುದು ಸ್ಪಷ್ಟವಾಗಿದೆ. ಪಾಶ್ಚಿಮಾತ್ಯ ವಲಯದ ನಕ್ಷೆಗಳನ್ನು  ೨೦೦೨ರ ಜೂನ್ ೧೭ರಂದು ವಿನಿಮಯ ಮಾಡಿಕೊಳ್ಳಬೇಕಾಗಿತ್ತು ಆದರೆ ಚೀನಿಯರು ಕೊನೆಯ ಕ್ಷಣದಲ್ಲಿ ಹಿಂದೆ ಸರಿದಿದ್ದರು.

ಚೀನಾ ವೀಕ್ಷಕರ ಪ್ರಕಾರ, ಈಗಾಗಲೇ ಪ್ರಶ್ನಿತವಾಗಿರುವ ೧೨ ಕ್ಷೇತ್ರಗಳ ಪೈಕಿ ನೆಹರೂ ಅವರು ಸ್ವತಃ ತಿರಸ್ಕರಿಸಿದ ಸಮರ್ ಲುಂಗ್ಪಾ, ಡೆಮ್ಚೋಕ್ ಮತ್ತು ಚುಮಾರ್ ಸೇರಿದಂತೆ ಉಳಿದ ಆರು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಆಕ್ರಮಣವನ್ನು ಪ್ರಾರಂಭಿಸಬಹುದು.

ಆದ್ದರಿಂದ, ಪೈಪೋಟಿಯಲ್ಲಿರುವ ಪೂರ್ವ ಲಡಾಖ್ನಲ್ಲಿ ಭಾರೀ ಹಿಮವು ಬೀಳಲು ಆರಂಭವಾಗುವ ಮುನ್ನವೇ ಪಿಎಲ್ ನಡೆಸಬಹುದಾದ ಯಾವುದೇ ಆಕ್ರಮಣಶೀಲ ನಡೆಯನ್ನು ಹಿಮ್ಮೆಟ್ಟಿಸಲು ಸೇನೆಯನ್ನು ಸನ್ನದ್ಧ ಸ್ಥಿತಿಯಲ್ಲಿ ಇಡುವಂತೆ ಭಾರತೀಯ ಸೇನಾ ಕಮಾಂಡರ್ಗಳು ಸೂಚಿಸಿದ್ದಾರೆ.

ಧ್ರುವ ಮಾರುತಗಳು ಮತ್ತು ಹಿಮ ಯೋಧರ ಮೇಲೆ ಮಾತ್ರವಲ್ಲದೆ ಅವರ ಶಸ್ತ್ರೋಪಕರಣಗಳನ್ನೂ ಹಾಳುಮಾಡುತ್ತದೆ. ಅಂತಹ ಚಳಿಯ ಪರಿಸ್ಥಿತಿಗಳಲ್ಲಿ ಫಿರಂಗಿ ಬಂದೂಕುಗಳು ಮತ್ತು ಟ್ಯಾಂಕ್ ಬ್ಯಾರೆಲ್ಗಳು ಹೆಪ್ಪುಗಟ್ಟುತ್ತವೆ. ಆದ್ದರಿಂದ ನವೆಂಬರ್ ೧೫ ರಿಂದ ಮೇ ವರೆಗೆ, ಎತ್ತರದ ಚಳಿಯಲ್ಲಿ ಬದುಕುವುದಕ್ಕೆ ಉಭಯ ಸೇನೆಗಳು ಮೊದಲ ಆದ್ಯತೆ ನೀಡುತ್ತವೆ.

ಸೇನೆ ವಾಪಸಾತಿಗೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ಎರಡೂ ಸೇನೆ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ತೊಡಗಿಸಿಕೊಂಡಿದ್ದಾರಾದರೂ, ಪಶ್ಚಿಮ ವಲಯ ಕಮಾಂಡ್ ಪಿಎಲ್ ಕಮಾಂಡರ್ಗಳು ತಮ್ಮ ಕಮಾಂಡರ್-ಇನ್-ಚೀಫ್ ಕ್ಸಿ ಜಿನ್ಪಿಂಗ್ ಅವರ ಮಾತನ್ನು ಮಾತ್ರ ಕೇಳುತ್ತಾರೆ ಹೊರತು ಬೀಜಿಂಗ್ನಲ್ಲಿನ ವಿದೇಶಾಂಗ ಸಚಿವಾಲಯದ ಮಾತನ್ನಲ್ಲ. ಶಕ್ತಿಕೇಂದ್ರ ಮಿಲಿಟರಿ ಆಯೋಗದಲ್ಲಿ (ಸಿಎಂಸಿ) ಅನೇಕ ಜನರಲ್ಗಳು ವಿದೇಶಾಂಗ ಸಚಿವರನ್ನು ಮೀರಿಸಿರುವುದು ಇದಕ್ಕೆ ಕಾರಣ.

ಭಾರತೀಯ ಸೇನೆ ಎಂದರೆ ವ್ಯವಹಾರ ಎಂದರ್ಥವಾಗಿದ್ದು ಅದು ಯಾವುದೇ ಆಕ್ರಮಣವನ್ನು ಹಿಮ್ಮೆಟ್ಟಿಸುವ ಶಕ್ತಿ ಮತ್ತು ಸಾಮರ್ಥ್ಯವನ್ನು ಹೊಂದಿದೆ ಎಂದು ಪಿಎಲ್ ಅರಿತುಕೊಂಡಿರುವುದರಿಂದ ಲಡಾಖ್ ಎಲ್ಎಸಿಯಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ. ಪಿಎಲ್ ಸೈನಿಕರು ಪ್ಯಾಂಗೊಂಗ್ ತ್ಸೊದ ಉತ್ತರದಲ್ಲಿ ಪಂಜಾಬಿ ಹಾಡುಗಳನ್ನು ಮತ್ತು ದಕ್ಷಿಣದಲ್ಲಿ ಮಾನಸಿಕ ಯುದ್ಧ ಸಂದೇಶ ನುಡಿಸುವುದನ್ನು ನಿಲ್ಲಿಸಿದ್ದಾರೆ, ಭಾರತೀಯ ಸೈನಿಕರು ಈಗ ಯಾವುದೇ ಉಲ್ಲಂಘನೆಯು ತೀವ್ರ ಪ್ರತೀಕಾರವನ್ನು ಆಹ್ವಾನಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಭಾರತೀಯ ರಾಜತಾಂತ್ರಿಕರು ಚೀನಾ ಮುಂದಿಟ್ಟಿರುವ ೧೯೫೯ ಸಾಲಿನ ಹಕ್ಕಿನ ಪ್ರತಿಪಾದನೆಯಿಂದ ಅಧೀರರಾಗಿಲ್ಲ. ಭಾರತೀಯ ಎಲ್ಎಸಿ ಹಕ್ಕನ್ನು ಸಮರ್ಥಿಸಿಕೊಳ್ಳುವ ಬದಲು ಎಲ್ಎಸಿಯಲ್ಲಿ ಚೀನಾದ ಕೆಂಪು ರೇಖೆಗಳನ್ನು ದಾಟದಿರುವ ಬಗ್ಗೆ ಹೆಚ್ಚು ಯೋಚಿಸಿದ ಅವರ ಪೂರ್ವಾಧಿಕಾರಿಗಳನ್ನು ಭಾರತೀಯ ರಾಜತಾಂತ್ರಿಕರು ಪ್ರಶ್ನಿಸುತ್ತಾರೆ.

"ಲಡಾಖ್ ಬಿಕ್ಕಟ್ಟು ಭಾರತ ಮತ್ತು ಚೀನಾ ನಡುವಣ ಮೂಲಸವಲತ್ತು ಪೈಪೋಟಿಯಲ್ಲಿನ ೩೦ ವರ್ಷಗಳ ಭೇದದ ಫಲಿತಾಂಶವಾಗಿದೆ. ಚೀನಾ ಶಾಂಘೈ ಆಯಿತು ಮತ್ತು ಭಾರತ ಮುಂಬೈ ಆಗಿಯೇ ಉಳಿದಿದೆ. ಇದು ಉತ್ತಮ ಇಂಗ್ಲಿಷ್ ಅಲ್ಲ ಆದರೆ ಬಲವಾದ ಮೂಲಸೌಕರ್ಯ ಮತ್ತು ಸೇನೆಯ ಚೀನಾವನ್ನು ಮಾತುಕತೆಯ ಟೇಬಲ್ಗೆ ಬರಲು ಒತ್ತಾಯಿಸುತ್ತದೆಎಂದು ಸೇವೆ ಸಲ್ಲಿಸುತ್ತಿರುವ ರಾಜತಾಂತ್ರಿಕರೊಬ್ಬರು ನುಡಿದರು.

ಜಮ್ಮುವಿನ ಡೋಗ್ರಾ ಆಡಳಿತಗಾರ, ರಾಜಾ ಗುಲಾಬ್ ಸಿಂಗ್ ಅವರ ಜನರಲ್ ಜೊರಾವರ್ ಸಿಂಗ್ ಕಹ್ಲೂರಿಯಾ ಅವರ ೧೮೪೧ ಟಿಬೆಟ್ ಅಭಿಯಾನದ ಆಧಾರದ ಮೇಲೆ ಟಿಬೆಟ್ ಭಾಗವನ್ನು ಭಾರತವು ಪ್ರತಿಪಾದಿಸುವುದು ಎಷ್ಟು ಅಸಂಬದ್ಧವೋ ಅಷ್ಟೇ ಅಸಂಬದ್ಧ ಚೀನಾದ ೧೯೫೯ ಹಕ್ಕು ಪ್ರತಿಪಾದನೆ ಎಂದು ಅವರು ಹೇಳಿದರು.

No comments:

Advertisement