My Blog List

Friday, October 2, 2020

ಪಾಕ್‌ ಕದನವಿರಾಮ ಉಲ್ಲಂಘನೆ: ಇಬ್ಬರು ಯೋಧರು ಹುತಾತ್ಮ

 ಪಾಕ್ಕದನವಿರಾಮ ಉಲ್ಲಂಘನೆ: ಇಬ್ಬರು ಯೋಧರು ಹುತಾತ್ಮ

ಶ್ರಿನಗರ:  ಉತ್ತರ ಕಾಶ್ಮೀರದ ನೌಗಾಮ್ ವಿಭಾಗನಲ್ಲಿ 2020 ಅಕ್ಟೋಬರ್ 01 ಗುರುವಾರ ಬೆಳಗ್ಗೆ ಪಾಕಿಸ್ತಾನ ನಡೆಸಿದ ಕದನ ವಿರಾಮ ಉಲ್ಲಂಘನೆಯಲ್ಲಿ ಭಾರತೀಯ ಸೇನೆಯ ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ ಎಂದು ಸೇನೆಯ ಅಧಿಕಾರಿಯೊಬ್ಬರು ತಿಳಿಸಿದರು.

ನೈಜ ನಿಯಂತ್ರಣ ರೇಖೆಯಲ್ಲಿ (ಎಲ್ಒಸಿ) ಗುರುವಾರ ಬೆಳಗ್ಗೆ ಪಾಕಿಸ್ತಾನವು ಅಪ್ರಚೋದಿತ ಕದನ ವಿರಾಮ ಉಲ್ಲಂಘನೆ ನಡೆಸಿತು ಎಂದು ಸೇನೆ ತಿಳಿಸಿದೆ. ಗಾಯಗೊಂಡ ಸೈನಿಕರನ್ನು ಸ್ಥಳಾಂತರಿಸಲಾಗುತ್ತಿದೆ.

ಕುಪ್ವಾರಾದ ನೌಗಾಮ್ ವಿಭಾಗದ ನಿಯಂತ್ರಣ ರೇಖೆಯ ಉದ್ದಕ್ಕೂ ಪಾಕಿಸ್ತಾನವು ಅಪ್ರಚೋದಿತ ಕದನ ವಿರಾಮ ಉಲ್ಲಂಘನೆಗೆ ಚಾಲನೆ ನೀಡಿದೆ ಎಂದು ಸೇನೆಯ ವಕ್ತಾರ ರಾಜೇಶ್ ಕಾಲಿಯಾ ಹೇಳಿಕೆಯಲ್ಲಿ ತಿಳಿಸಿದರು.

ಇಬ್ಬರು ಸೈನಿಕರು ಮಾರಣಾಂತಿಕ ಸ್ಥಿತಿಯಲ್ಲಿದ್ದಾರೆ. ಒಟ್ಟು ನಾಲ್ಕು ಸೈನಿಕರು ಗಾಯಗೊಂಡಿದ್ದು ಅವರನ್ನು ಸ್ಥಳಾಂತರಿಸಲಾಗಿದೆ. ಪಾಕ್ ಸೇನೆಗೆ ಸೂಕ್ತ ಉತ್ತರ ನೀಡಲಾಗುತ್ತಿದೆಎಂದು ವಕ್ತಾರರು ನುಡಿದರು.

ಎಲ್ಒಸಿಯಲ್ಲಿ ಬೆಳಗ್ಗ್ಗೆಯಿಂದ ಬಿಟ್ಟು ಬಿಟ್ಟು ಕದನ ವಿರಾಮದ ಉಲ್ಲಂಘನೆ ನಡೆಯುತ್ತಿದೆ. ಫಿರಂಗಿ ಗುಂಡಿನ ದಾಳಿಯ ಜೊತೆಗೆ ಇತರ ಶಸ್ತ್ರಾಸ್ತ್ರಗಳಿಂದಲೂ ದಾಳಿ ನಡೆಯುತ್ತಿದೆ  ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಹುತಾತ್ಮರಾಗಿರುವ ಸೈನಿಕರನ್ನು ಯುನಿಟ್ ೧೫ ಸಿಖ್ ಲೈಟ್ ಕಾಲಾಳುಪಡೆಯ ಹವಾಲ್ದಾರ್ ಕುಲದೀಪ್ ಮತ್ತು ಜಮ್ಮು ಮತ್ತು ಕಾಶ್ಮೀರ ರೈಫಲ್ಸ್ ರೈಫಲ್ ಮ್ಯಾನ್ ಶುಭಮ್ ಎಂದು ಗುರುತಿಸಲಾಗಿದೆ.

ಬುಧವಾರ, ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಕೃಷ್ಣ ಘಾಟಿ (ಕೆಜಿ) ಸೆಕ್ಟರ್ನಲ್ಲಿ ೭೪೪ ಕಿ.ಮೀ ಉದ್ದದ ಎಲ್ಒಸಿ ಉದ್ದಕ್ಕೂ ಪಾಕಿಸ್ತಾನ ಶೆಲ್ ದಾಳಿ ನಡೆಸಿದಾಗ ಲ್ಯಾನ್ಸ್ ನಾಯಕ್ ಕರ್ನೈಲ್ ಸಿಂಗ್ ಹುತಾತ್ಮರಾಗಿದ್ದರು. ಸಿಂಗ್ ಅವರು ಪಂಜಾಬ್ ಸಂಗ್ರೂರ್ ಜಿಲ್ಲೆಯ ಲೋಹಾ ಖೇರಾ ಮೂಲದವರು.

ಸೋಮವಾರ, ಉತ್ತರ ಕಾಶ್ಮೀರದ ಮಚಿಲ್ ವಿಭಾಗದಲ್ಲಿ ಪಾಕಿಸ್ತಾನ ಪಡೆಗಳು ಭಾರತೀಯ ಪಿಕೆಟ್ಗಳ ಮೇಲೆ ಗುಂಡು ಹಾರಿಸಿದಾಗ ಭಾರತೀಯ ಯೋಧನೊಬ್ಬ ಗಾಯಗೊಂಡಿದ್ದರು.

ವರ್ಷ ಪಾಕಿಸ್ತಾನವು ನಿಯಂತ್ರಣ ರೇಖೆಯಾದ್ಯಂತ, ವಿಶೇಷವಾಗಿ ಉತ್ತರ ಕಾಶ್ಮೀರದಲ್ಲಿ ಹಲವಾರು ಕದನ ವಿರಾಮ ಉಲ್ಲಂಘನೆಗಳನ್ನು ನಡೆಸಿದೆ. ಅಂತಹ ಪ್ರತಿಯೊಂದು ಕದನ ವಿರಾಮ ಉಲ್ಲಂಘನೆಗೆ ಸೇನೆಯು ಪೂರ್ಣ ಬಲದಿಂದ ಉತ್ತರ ನೀಡಿದೆ. ಅಪ್ರಚೋದಿತ ಕದನ ವಿರಾಮ ಉಲ್ಲಂಘನೆಯು ಮುಖ್ಯವಾಗಿ ಭಯೋತ್ಪಾದಕರ ಒಳನುಸುಳುವಿಕೆಗೆ ಅನುಕೂಲ ಒದಗಿಸುವ ಉದ್ದೇಶದ್ದಾಗಿದೆ ಎಂದು ಸೇನೆಯ ಹಿರಿಯ ಅಧಿಕಾರಿಗಳು ಹೇಳಿದರು.

ಪಾಕಿಸ್ತಾನ ಸೇನೆಯು ಬುಧವಾರ ರಾತ್ರಿ ಮಂಕೋಟೆ ಮತ್ತು ಕೃಷ್ಣ ಘಾಟಿ ವಲಯಗಳಲ್ಲಿನ ನಿಯಂತ್ರಣ ರೇಖೆಯ ಉದ್ದಕ್ಕೂ ಸಣ್ಣ ಶಸ್ತ್ರಾಸ್ತ್ರಗಳಿಂದ ಗುಂಡು ಹಾರಿಸುವುದು ಮತ್ತು ಶೆಲ್ ದಾಳಿ ಮಾಡುವ ಮೂಲಕ ಅಪ್ರಚೋದಿತ ಕದನ ವಿರಾಮ ಉಲ್ಲಂಘನೆಗೆ ಚಾಲನೆ ನೀಡಿತು ಎಂದು ರಕ್ಷಣಾ ವಕ್ತಾರರು ತಿಳಿಸಿದರು.

ಗಡಿಯುದ್ದಕ್ಕೂ ನಡೆದ ಗುಂಡಿನ ದಾಳಿಯಲ್ಲಿ ಲ್ಯಾನ್ಸ್ ನಾಯಕ್ ಕರ್ನೈಲ್ ಸಿಂಗ್ ಹುತಾತ್ಮರಾದರು.

ಸೆಪ್ಟೆಂಬರ್ ೩೦ ರಾತ್ರಿ ಪೂಂಚ್ ಜಿಲ್ಲೆಯ ಕೃಷ್ಣ ಘಾಟಿ ವಲಯದಲ್ಲಿ ಸರ್ವೋಚ್ಚ ತ್ಯಾಗ ಮಾಡಿದ ಶ್ವೇತ ನೈಟ್ ಕೋರ್  ಮತ್ತು ಎಲ್ಲಾ ಶ್ರೇಣಿಯ ಜನರಲ್ ಆಫೀಸರ್ ಬ್ರೇವ್ಹಾರ್ಟ್ ಲ್ಯಾನ್ಸ್ ನಾಯಕ್ ಕರ್ನೈಲ್ ಸಿಂಗ್ ಅವರಿಗೆ ನಮಸ್ಕರಿಸುತ್ತೇವೆ ಮತ್ತು ಅವರ ಕುಟುಂಬಕ್ಕೆ ಸಂತಾಪ ಸೂಚಿಸುತ್ತೇವೆ" ಎಂದು ವಕ್ತಾರರು ಹೇಳಿದರು

No comments:

Advertisement