Tuesday, October 6, 2020

ಕಪ್ಪು ಕುಳಿಗಳ ಬಗ್ಗೆ ಅರಿವು: 3 ವಿಜ್ಞಾನಿಗಳಿಗೆ ಭೌತಶಾಸ್ತ್ರ ನೊಬೆಲ್ ಪ್ರಶಸ್ತಿ

 ಕಪ್ಪು ಕುಳಿಗಳ ಬಗ್ಗೆ ಅರಿವು: 3 ವಿಜ್ಞಾನಿಗಳಿಗೆ
ಭೌತಶಾಸ್ತ್ರ ನೊಬೆಲ್ ಪ್ರಶಸ್ತಿ

ಸ್ಟಾಕ್ ಹೋಮ್: ಕಪ್ಪು ಕುಳಿಗಳ (ಕೃಷ್ಣರಂಧ್ರ) ಬಗ್ಗೆ ತಿಳುವಳಿಕೆಯನ್ನು ಹೆಚ್ಚಿಸಿದ್ದಕ್ಕಾಗಿ ಮೂವರು ವಿಜ್ಞಾನಿಗಳು ವರ್ಷದ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು 2020 ಅಕ್ಟೋಬರ್ 06ರ ಮಂಗಳವಾರ ಗೆದ್ದಿದ್ದಾರೆ.

ಬ್ರಿಟನ್ನಿನ ರೋಜರ್ ಪೆನ್ರೋಸ್ ವರ್ಷದ ಅರ್ಧದಷ್ಟು ಬಹುಮಾನವನ್ನು "ಕಪ್ಪು ಕುಳಿ ರಚನೆಯು ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತದ ದೃಢವಾದ ಮುನ್ಸೂಚನೆಯಾಗಿದೆ" ಎಂಬುದಾಗಿ ಪತ್ತೆ ಹಚ್ಚಿದ್ದಕ್ಕಾಗಿ ಪಡೆದಿದ್ದಾರೆ ಎಂದು ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಪ್ರಕಟಿಸಿತು..

ಜರ್ಮನಿಯ ರೀನ್ಹಾರ್ಡ್ ಜೆನ್ಜೆಲ್ ಮತ್ತು ಅಮೇರಿಕದ ಆಂಡ್ರಿಯಾ ಘೆಜ್ ಅವರು ಬಹುಮಾನದ ಉಳಿದ ಅರ್ಧ ಮೊತ್ತವನ್ನು "ನಮ್ಮ ನಕ್ಷತ್ರಪುಂಜದ ಮಧ್ಯಭಾಗದಲ್ಲಿನ ಒಂದು ಸೂಪರ್ ಮ್ಯಾಸಿವ್ ಕಾಂಪ್ಯಾಕ್ಟ್ ವಸ್ತುವಿನ ಪತ್ತೆಗಾಗಿ ಪಡೆಯುತ್ತಾರೆ ಎಂದು ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಗೊರನ್ ಕೆ ಹ್ಯಾನ್ಸನ್ ಹೇಳಿದರು. ಪ್ರಶಸ್ತಿಗಳು "ಬ್ರಹ್ಮಾಂಡದ ಅತ್ಯಂತ ವಿಲಕ್ಷಣ ವಸ್ತುಗಳಲ್ಲೊಂದಾದಕಪ್ಪು ಕುಳಿಗಳ ಪತ್ತೆಯನ್ನು ಸಂಭ್ರಮಿಸುತ್ತವೆ. ಕಪ್ಪು ಕುಳಿಗಳು ವೈಜ್ಞಾನಿಕ ಕಾದಂಬರಿ ಮತ್ತು ವೈಜ್ಞಾನಿಕ ವಾಸ್ತವಾಂಶಗಳ ಪ್ರಧಾನ ಅಂಗವಾಗಿರುವುದರ ಜೊತೆಗೆ ಇಂದಿಗೂ ಕೌತುಕ ಉಂಟಾಗುವಂತೆ ಮಾಡಿವೆ ಎಂದು ನೊಬೆಲ್ ಸಮಿತಿಯ ವಿಜ್ಞಾನಿಗಳು ಹೇಳಿದರು.

ಕಪ್ಪು ರಂಧ್ರಗಳ ರಚನೆ ಸಾಧ್ಯ ಎಂದು ಪೆನ್ರೋಸ್ ಗಣಿತದೊಂದಿಗೆ ಸಾಬೀತುಪಡಿಸಿದರು, ಇದು ಆಲ್ಬರ್ಟ್ ಐನ್ಸ್ಟೈನ್ ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತವನ್ನು ಆಧರಿಸಿದೆ. ಗೆನ್ಜೆಲ್ ಮತ್ತು ಘೆಜ್ ನಮ್ಮ ಕ್ಷೀರಪಥ ನಕ್ಷತ್ರಪುಂಜದ ಧೂಳಿನಿಂದ ಆವೃತವಾದ ಕೇಂದ್ರವನ್ನು ಗಮನಿಸಿದರು, ಆದರೆ ತಾರೆಗಳು ಸುತ್ತುತ್ತಿದ್ದರೂ ಏನು ವಿಚಿತ್ರ ಸಂಗತಿ ನಡೆಯುತ್ತಿದೆ ಎಂಬುದನ್ನು ನೋಡಲು ಅವರಿಗೆ ಸಾಧ್ಯವಾಗಿರಲಿಲ್ಲ.

ಅದು ಕಪ್ಪು ಕುಳಿಯಾಗಿತ್ತು. ನಮ್ಮ ಸೂರ್ಯನ ದ್ರವ್ಯರಾಶಿಯ ದಶಲಕ್ಷ ಪಟ್ಟು ಗಾತ್ರದ ಕಪ್ಪು ಕುಳಿ. ಅದು ಸಾಮಾನ್ಯ ಕಪ್ಪು ಕುಳಿಯಲ್ಲ, ಅತಿ ದೊಡ್ಡ ಕಪ್ಪು ಕುಳಿ ಅಥವಾ ಕೃಷ್ಣ ರಂಧ್ರ.

ಈಗ ಎಲ್ಲಾ ನಕ್ಷತ್ರಪುಂಜಗಳು ಅತಿ ದೊಡ್ಡ ಕಪ್ಪು ಕುಳಿಗಳನ್ನು ಹೊಂದಿವೆ ಎಂದು ವಿಜ್ಞಾನಿಗಳು ತಿಳಿದಿದ್ದಾರೆ.

ಸಂಬಂಧಿತ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಹಲವಾರು ವಿಜ್ಞಾನಿಗಳು ಬಹುಮಾನವನ್ನು ಹಂಚಿಕೊಳ್ಳುವುದು ಸಾಮಾನ್ಯವಾಗಿದೆ. ಕಳೆದ ವರ್ಷದ ಬೌತಶಾಸ್ತ್ರಕ್ಕೆ ನೀಡಲಾಗುವ ನೊಬೆಲ್ ಪ್ರಶಸ್ತಿಯನ್ನು ಕೆನಡಾದ ಮೂಲದ ವಿಜ್ಞಾನಿ ಜೇಮ್ಸ್ ಪೀಬಲ್ಸ್ ಅವರು ಮಹಾಸ್ಫೋಟದ ನಂತರದ ಆರಂಭಿಕ ಕ್ಷಣಗಳ ಬಗೆಗಿನ ಸೈದ್ಧಾಂತಿಕ ಕೆಲಸಕ್ಕಾಗಿ ಮತ್ತು ಸ್ವಿಸ್ ಖಗೋಳಶಾಸ್ತ್ರಜ್ಞರಾದ ಮೈಕೆಲ್ ಮೇಯರ್ ಮತ್ತು ಡಿಡಿಯರ್ ಕ್ವೆಲೋಜ್ ನಮ್ಮ ಸೌರಮಂಡಲದ ಹೊರಗಿನ ಗ್ರಹವನ್ನು ಪತ್ತೆ ಹಚ್ಚಿದ್ದಕ್ಕಾಗಿ ಹಂಚಿಕೊಂಡಿದ್ದರು.

ಪ್ರತಿಷ್ಠಿತ ಪ್ರಶಸ್ತಿಯು ಚಿನ್ನದ ಪದಕ ಮತ್ತು ೧೦ ಮಿಲಿಯನ್ ಸ್ವೀಡಿಷ್ ಕ್ರೋನರ್ (. ಮಿಲಿಯನ್ -೧೧ ಲಕ್ಷ) ಡಾಲರ್ಗಿಂತಲೂ ಹೆಚ್ಚು) ಗೌರವ ಧನವನ್ನು ಹೊಂದಿದೆ.

೧೨೪ ವರ್ಷಗಳ ಹಿಂದೆ ಬಹುಮಾನದ ಸೃಷ್ಟಿಕರ್ತ, ಸ್ವೀಡಿಷ್ ಸಂಶೋಧಕ ಆಲ್ಫ್ರೆಡ್ ನೊಬೆಲ್ ಅವರು ಬರೆದಿಟ್ಟ ಉಯಿಲಿ ಸೌಜನ್ಯದಿಂದ ನೀಡಲಾಗುವ ಪ್ರಶಸ್ತಿಯ ಮೊತ್ತವನ್ನು ಹಣದುಬ್ಬರವನ್ನು ಸರಿಹೊಂದಿಸಲು ಇತ್ತೀಚೆಗೆ ಹೆಚ್ಚಿಸಲಾಗಿದೆ.

ಪಿತ್ತಜನಕಾಂಗವನ್ನು ಹಾಳುಮಾಡುವ ಹೆಪಟೈಟಿಸ್ ಸಿ ವೈರಸ್ ಪತ್ತೆ ಹಚ್ಚಿದ್ದಕ್ಕಾಗಿ ಅಮೆರಿಕದ ಹಾರ್ವೆ ಜೆ ಆಲ್ಟರ್ ಮತ್ತು ಚಾರ್ಲ್ಸ್ ಎಂ ರೈಸ್ ಮತ್ತು ಬ್ರಿಟಿಷ್ ಮೂಲದ ವಿಜ್ಞಾನಿ ಮೈಕೆಲ್ ಹೌಟನ್ ಅವರಿಗೆ ಸೋಮವಾರ ನೊಬೆಲ್ ಸಮಿತಿ ಶರೀರಶಾಸ್ತ್ರ ಮತ್ತು ವೈದ್ಯಕೀಯ ಕ್ಷೇತ್ರದ ಪ್ರಶಸ್ತಿಯನ್ನು ಘೋಷಿಸಿತ್ತು.

ಮುಂದಿನ ದಿನಗಳಲ್ಲಿ ರಸಾಯನಶಾಸ್ತ್ರ, ಸಾಹಿತ್ಯ, ಶಾಂತಿ ಮತ್ತು ಅರ್ಥಶಾಸ್ತ್ರ ಕ್ಷೇತ್ರಗಳಲ್ಲಿ ಅತ್ಯುತ್ತಮ ಕೆಲಸಕ್ಕಾಗಿ ನೊಬೆಲ್ ಪ್ರಶಸ್ತಿಗಳ ಘೋಷಣೆಯಾಗಲಿದೆ.

No comments:

Advertisement