ಕೇಂದ್ರದಿಂದ ಹೊಸ ಕೊರೋನಾ ಮಾರ್ಗಸೂಚಿ
ನವದೆಹಲಿ: ಕೆಲವು ರಾಜ್ಯಗಳಲ್ಲಿ ಕೊರೋನವೈರಸ್ ಕಾಯಿಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಧಾರಕ (ಕಂಟೈನ್‌ಮೆಂಟ್) ವಲಯಗಳಲ್ಲಿ ರಾತ್ರಿ ಕರ್ಫ್ಯೂ ಸೇರಿದಂತೆ ಕಟ್ಟು ನಿಟ್ಟಿನ ಸ್ಥಳೀಯ ನಿರ್ಬಂಧಗಳನ್ನು ವಿಧಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅವಕಾಶ ನೀಡುವ ಹೊಸ ಮಾರ್ಗಸೂಚಿಗಳನ್ನು ಕೇಂದ್ರ ಗೃಹ ಸಚಿವಾಲಯವು 2020 ನವೆಂಬರ 25ರ ಬುಧವಾರ ಪ್ರಕಟಿಸಿತು.
ಹೊಸ ಮಾರ್ಗಸೂಚಿಯ ಪ್ರಕಾರ ರಾಜ್ಯಗಳು ಕೇಂದ್ರ ಸರ್ಕಾರದ ಜೊತೆ ಸಮಾಲೋಚಿಸಿ ಧಾರಕವಲಯಗಳಲ್ಲಿ ರಾತ್ರಿ ಕರ್ಫ್ಯೂನಂತಹ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬಹುದು. ಆದರೆ ಧಾರಕವಲಯಗಳಿಂದ ಹೊರಗೆ ಈ ನಿರ್ಬಂಧಗಳನ್ನು ವಿಧಿಸುವಂತಿಲ್ಲ.
(ಕೋವಿಡ್ -೧೯) ವಿರುದ್ಧ ಕಣ್ಗಾವಲು, ನಿಯಂತ್ರಣ ಮತ್ತು ಎಚ್ಚರಿಕೆಗಾಗಿ ಕೇಂದ್ರ ಗೃಹ ಸಚಿವಾಲಯ ಬಿಡುಗಡೆ ಮಾಡಿದ ಹೊಸ ಮಾರ್ಗಸೂಚಿ ಮಾನದಂಡಗಳು ೨೦೨೦ ಡಿಸೆಂಬರ್ ಡಿಸೆಂಬರ್ ೧ರಿಂದ ಜಾರಿಗೆ ಬರಲಿದ್ದು, ಡಿಸೆಂಬರ್ ೩೧ ರವರೆಗೆ ಜಾರಿಯಲ್ಲಿರುತ್ತದೆ.
ದೇಶದ ಕೋವಿಡ್ -೧೯ ಪರಿಸ್ಥಿತಿಯನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿಯವರು ಮುಖ್ಯಮಂತ್ರಿಗಳ ಜೊತೆ ನಡೆಸಿದ ವಿಡಿಯೋ ಕಾನ್ಫರೆನ್ಸಿನಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಹೇಳಿದ "ಡೈನಾಮಿಕ್ ಕಂಟೈನ್‌ಮೆಂಟ್ ವಲಯಗಳು" ಎಂಬ ಕರೆಗೆ ಅನುಗುಣವಾಗಿ, ಗೃಹ ಸಚಿವಾಲಯವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಧಾರಕ (ಕಂಟೈನ್‌ಮೆಂಟ್) ವಲಯಗಳ ಗಡಿರೇಖೆಯನ್ನು ಸೂಕ್ಷ್ಮ ಮಟ್ಟದಲ್ಲಿ ಜಿಲ್ಲಾ ಅಧಿಕಾರಿಗಳು ಖಚಿತಪಡಿಸಿಕೊಬೇಕು ಎಂದು ಸೂಚಿಸಿದೆ.
ಆರೋಗ್ಯ ಸಚಿವಾಲಯವು ಸೂಚಿಸಿರುವ ಕೋವಿಡ್ -೧೯ ನಿಯಂತ್ರಣ ಕ್ರಮಗಳನ್ನು ಗಡಿರೇಖೆ ಹೊಂದಿರುವ ಕಂಟೈನ್‌ಮೆಂಟ್ ವಲಯಗಳಲ್ಲಿ ಕಟ್ಟುನಿಟ್ಟಾಗಿ ಪಾಲಿಸಬೇಕು. ವೈದ್ಯಕೀಯ ತುರ್ತುಸ್ಥಿತಿ ಮತ್ತು ಅಗತ್ಯ ಸರಕು ಮತ್ತು ಸೇವೆಗಳ ಪೂರೈಕೆಯನ್ನು ಕಾಪಾಡಿಕೊಳ್ಳಲು ಓಡಾಟ ನಡೆಸುವುದರ ಹೊರತಾಗಿ ಈ ವಲಯಗಳಲ್ಲಿ ಒಳಕ್ಕೆ ಅಥವಾ ಹೊರಕ್ಕೆ ಜನರ ಚಲನವಲನ ನಡೆಯುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಕಟ್ಟುನಿಟ್ಟಾದ ಪರಿಧಿಯ ನಿಯಂತ್ರಣ ಇರಬೇಕು ಎಂದು ಗೃಹ ವ್ಯವಹಾರಗಳ ಇಲಾಖೆ ಹೇಳಿದೆ.
ಕಣ್ಗಾವಲು ತಂಡಗಳು ಮನೆ-ಮನೆಯ ಮೇಲೆ ತೀವ್ರವಾದ ಕಣ್ಗಾವಲು ಮತ್ತು ಚಿಕಿತ್ಸೆಯ ಸೌಲಭ್ಯಗಳಲ್ಲಿ ಅಥವಾ ಮನೆಯಲ್ಲಿ ಕೋವಿಡ್ -೧೯ ರೋಗಿಗಳ ತ್ವರಿತ ಪ್ರತ್ಯೇಕತೆಯನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ಅದು ಹೇಳಿದೆ.
ಕೊರೋನವೈರಸ್ ರೋಗ ಹರಡುವುದನ್ನು ತಡೆಗಟ್ಟಲು ರಾತ್ರಿ ಕರ್ಫ್ಯೂ ಸೇರಿದಂತೆ ಸ್ಥಳೀಯ ನಿರ್ಬಂಧಗಳನ್ನು ವಿಧಿಸಲು ಕೇಂದ್ರವು ರಾಜ್ಯಗಳಿಗೆ ಅವಕಾಶ ನೀಡಿದೆ. ಆದಾಗ್ಯೂ, ಕೇಂದ್ರ ಸರ್ಕಾರದೊಂದಿಗೆ ಪೂರ್ವ ಸಮಾಲೋಚನೆ ನಡೆಸದೆ, ಕಂಟೈನ್‌ಮೆಂಟ್ ವಲಯಗಳ ಹೊರಗೆ ಯಾವುದೇ ಸ್ಥಳೀಯ ದಿಗ್ಬಂಧನವನ್ನು (ಲಾಕ್‌ಡೌನ್) ರಾಜ್ಯಗಳು ವಿಧಿಸಲು ಸಾಧ್ಯವಿಲ್ಲ.
ಕೆಲಸದ ಸ್ಥಳಗಳಲ್ಲಿ ಸಾಮಾಜಿಕ ಅಂತರವನ್ನು ಖಚಿತಪಡಿಸಿಕೊಳ್ಳುವಂತೆ ಮಾರ್ಗಸೂಚಿ ರಾಜ್ಯಗಳಿಗೆ ತಿಳಿಸಿದೆ ಮತ್ತು ಅವರು ಕೆಲಸಕ್ಕೆ ಬೇರೆ ಬೇರೆ ಅವಧಿಯನ್ನು ಪರಿಗಣಿಸಬಹುದು ಎಂದು ಹೇಳಿದೆ.
"ನಗರಗಳಲ್ಲಿ, ಪ್ರಕರಣಗಳ ಸಕಾರಾತ್ಮಕ ಪ್ರಮಾಣ ಶೇಕಡಾ ೧೦ಕ್ಕಿಂತ ಹೆಚ್ಚಿದ್ದರೆ, ಸಂಬಂಧಪಟ್ಟ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಒಂದೇ ಸಮಯದಲ್ಲಿ ಕಚೇರಿಗೆ ಹಾಜರಾಗುವ ನೌಕರರ ಸಂಖ್ಯೆಯನ್ನು ಕಡಿಮೆ ಮಾಡುವ ಉದ್ದೇಶದಿಂದ, ಬೇರೆ ಬೇರೆ ಕಚೇರಿ ಸಮಯ ಮತ್ತು ಸಾಮಾಜಿಕ ಅಂತರ ಪಾಲನೆಗಾಗಿ ಇತರ ಸೂಕ್ತ ಕ್ರಮಗಳನ್ನು ಜಾರಿಗೆ vರುವ ಬಗ್ಗೆ ಪರಿಗಣಿಸಬೇಕು’ ಎಂದು ಗೃಹ ವ್ಯವಹಾರಗಳ ಸಚಿವಾಲಯದ ಹೇಳಿಕೆ ತಿಳಿಸಿದೆ.
ಕೋವಿಡ್ -೧೯ ರ ಹರಡುವಿಕೆಯ ವಿರುದ್ಧ ಸಾಧಿಸಿರುವ ಗಣನೀಯ ಲಾಭಗಳನ್ನು ಕ್ರೋಢೀಕರಿಸುವುದು ಮಾರ್ಗಸೂಚಿಗಳ ಮುಖ್ಯ ಉದ್ದೇಶ ಎಂದು ಗೃಹ ಸಚಿವಾಲಯ ಹೇಳಿದೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿನ ಸ್ಥಿರ ಕುಸಿತದಲ್ಲಿ ಕೊರೋನಾ ವಿರುದ್ಧ ಸಾಧಿಸಿರುವ ಗಣನೀಯ ಲಾಭದ ಕ್ರೋಢೀಕರಣ ಗೋಚರಿಸುತ್ತದೆ.
ಹೊಸ ಮಾರ್ಗಸೂಚಿಗಳು ಭಾರತದ ಕೋವಿಡ್ -೧೯ ಒಟ್ಟು ಸಂಖ್ಯೆಯು ೪,೪೪,೭೪೬ ಸಕ್ರಿಯ ಪ್ರಕರಣಗಳೊಂದಿಗೆ ೯.೨೨ ಕೋಟಿಯನ್ನು (೯.೨೨ ಮಿಲಿಯನ್) ಮೀರಿದೆ. ವೈರಸ್ ೧,೩೪,೬೯೯ ಜೀವಗಳನ್ನು ಬಲಿ ತೆಗೆದುಕೊಂಡರೆ, ೮೬,೪೨,೭೭೧ ಜನರು ಈ ಕಾಯಿಲೆಯಿಂದ ಗುಣಮುಖರಾಗಿ ಚೇತರಿಸಿಕೊಂಡಿದ್ದಾರೆ.
No comments:
Post a Comment