Friday, November 27, 2020

ಭಾರತದ ಜಿಡಿಪಿ: ಚೇತರಿಕೆ, ಕುಸಿತ ಶೇ.೨೩ರಿಂದ ಶೇ.೭.೫ಕ್ಕೆ ಇಳಿಕೆ

 ಭಾರತದ ಜಿಡಿಪಿ: ಚೇತರಿಕೆ, ಕುಸಿತ ಶೇ.೨೩ರಿಂದ ಶೇ..೫ಕ್ಕೆ ಇಳಿಕೆ

ನವದೆಹಲಿ: ೨೦೧೯ರ ಇದೇ ಅವಧಿಗೆ ಹೋಲಿಸಿದರೆ ಭಾರತದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಜುಲೈ-ಸೆಪ್ಟೆಂಬರ್ ನಡುವಣ ತ್ರೈಮಾಸಿಕದ ಅವಧಿಯಲ್ಲಿ ಶೇಕಡಾ . ರಷ್ಟು ಕುಗ್ಗಿದೆ ಎಂದು ರಾಷ್ಟ್ರೀಯ ಅಂಕಿಅಂಶ ಕಚೇರಿ 2020 ನವೆಂಬರ್ 27ರ ಶುಕ್ರವಾರ ಬಿಡುಗಡೆ ಮಾಡಿದ ಮಾಹಿತಿ ತಿಳಿಸಿದೆ.

ಏಪ್ರಿಲ್-ಜೂನ್ ಅವಧಿಯ ತ್ರೈಮಾಸಿಕದ ಅವಧಿಯಲ್ಲಿ ಜಿಡಿಪಿ ಕಂಡಿದ್ದ ಶೇಕಡಾ ೨೩. ಕುಸಿತಕ್ಕೆ ಹೋಲಿಸಿದರೆ ಆರ್ಥಿಕತೆ ಪುಟಿದೇಳುತ್ತಿರುವುದರ ಲಕ್ಷಣ ಇದಾಗಿದೆ, ಆದರೆ ಒಂದು ವರ್ಷದ ಹಿಂದಿನ ಇದೇ ಅವಧಿಗೆ ಹೋಲಿಸಿದರೆ ಸತತ ಎರಡು ತ್ರೈಮಾಸಿಕಗಳಲ್ಲಿ ದಾಖಲಾಗಿರುವ ಜಿಡಿಪಿ ಕುಸಿತದಿಂದಾಗಿ ಭಾರತವು ಪ್ರಮುಖ ಮುಂದುವರೆದ ಮತ್ತು ಉದಯೋನ್ಮುಖ ಆರ್ಥಿಕತೆಗಳಲ್ಲಿ ಅತ್ಯಂತ ಬಡ ಪ್ರದರ್ಶನ ನೀಡಿದಂತಾಗಿದೆ ಮತ್ತು ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ತಾಂತ್ರಿಕ ಹಿಂಜರಿತವನ್ನು ಪ್ರವೇಶಿಸಿದೆ.

ಒಂದು ವರ್ಷದ ಹಿಂದಿನ ಅವಧಿಗೆ ಹೋಲಿಸಿದರೆ ಸಾಂಕ್ರಾಮಿಕ-ಪ್ರೇರಿತ ದಿಗ್ಬಂಧನಗಳು (ಲಾಕ್ಡೌನ್) ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಜಿಡಿಪಿಯಲ್ಲಿ ಶೇಕಡಾ ೨೩.೯ರಷ್ಟು ಕಡಿದಾದ ಸಂಕೋಚನಕ್ಕೆ ಕಾರಣವಾಗಿತ್ತು.

ದೇಶವು ಈಗ ೧೯೪೭ರ ನಂತರ ಇದೇ ಮೊದಲ ಬಾರಿಗೆ "ತಾಂತ್ರಿಕ ಹಿಂಜರಿತ" ಕ್ಕೆ ಪ್ರವೇಶಿಸಿದೆ ಎಂಬುದು ಎರಡು ತ್ರೈಮಾಸಿಕಗಳ ಸತತ ಸಂಕೋಚನದ ಅರ್ಥವಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಅಂದಾಜಿನ ಪ್ರಕಾರ ಪೂರ್ಣ ಆರ್ಥಿಕ ವರ್ಷದಲ್ಲಿ ಆರ್ಥಿಕತೆಯು ಶೇಕಡಾ .೫ರಷ್ಟು ಕುಗ್ಗಲಿದೆ.

ಡೈನಾಮಿಕ್ ಫ್ಯಾಕ್ಟರ್ ಮಾದರಿಯನ್ನು ಬಳಸಿಕೊಂಡು ೨೭ ಮಾಸಿಕ ಸೂಚಕಗಳಿಂದ ಸೂಚ್ಯಂಕವನ್ನು ರಚಿಸಲಾಗಿದೆ ಮತ್ತು ಆರ್ಥಿಕತೆಯ ಪುನರಾರಂಭದೊಂದಿಗೆ ಆರ್ಥಿಕತೆಯು ೨೦೨೦ರ ಮೇ / ಜೂನ್ ತಿಂಗಳುಗಳ ಬಳಿಕ ತ್ವರಿತವಾಗಿ ಚೇತರಿಸಿದೆ. ಅಂದರೆ ಸೇವಾ ಕ್ಷೇತ್ರಗಳಿಗಿಂತ ಬೇಗನೇ ಉದ್ಯಮ ಕ್ಷೇತ್ರವು ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ ಎಂಬುದನ್ನು ಇದು ಸೂಚಿಸಿದೆ ಎಂದು ಮಾದರಿಯು ಹೇಳಿದೆ. 

ವರ್ಷದ ಜುಲೈ-ಸೆಪ್ಟೆಂಬರ್ನಲ್ಲಿ ಚೀನಾದ ಆರ್ಥಿಕತೆಯು ಶೇಕಡಾ .೯ರಷ್ಟು ಏರಿಕೆಯಾಗಿದ್ದು, ೨೦೨೦ ಏಪ್ರಿಲ್-ಜೂನ್ ತಿಂಗಳುಗಳ ಶೇಕಡಾ . ಬೆಳವಣಿಗೆಗಿಂತ ವೇಗವಾಗಿದೆ.

ವೈರಸ್ ಹಿನ್ನೆಲೆಯ ಲಾಕ್ಡೌನ್ಗಳು ಜಗತ್ತನ್ನು ತತ್ತರಗೊಳಿಸಿದ ನಂತರ, ಸೆಪ್ಟೆಂಬರ್ ೩೦ ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಅಮೆರಿಕ, ಜಪಾನ್ ಮತ್ತು ಜರ್ಮನಿ ಸೇರಿದಂತೆ ಪ್ರಮುಖ ಆರ್ಥಿಕತೆಗಳು ದಾಖಲಿಸಿದ ಬೆಳವಣಿಗೆ ಭಾರತವು ಪುನರುಜ್ಜೀವನವನ್ನು ಕಾಣಲಿದೆ ಎಂಬ ನಿರೀಕ್ಷೆಯನ್ನು ಹುಟ್ಟುಹಾಕಿತ್ತು.

ಆದರೆ, ಅಕ್ಟೋಬರ್-ನವೆಂಬರ್ ಹಬ್ಬದ ಋತುವಿನಲ್ಲಿ ಹೆಚ್ಚಿದ ಖರ್ಚಿನಿಂದಾಗಿ ಗ್ರಾಹಕ ವ್ಯವಹಾರಗಳು ಉತ್ತೇಜನವನ್ನು ಕಂಡರೂ, ನಿರ್ಮಾಣ ಮತ್ತು ಆತಿಥ್ಯ ಕ್ಷೇತ್ರಗಳು ತೊಂದರೆಗೆ ಈಡಾಗುವುದರೊಂದಿಗೆ ವಿಸ್ತೃತ  ಚೇತರಿಕೆಯ ಭರವಸೆಗಳು ನಾಶವಾದವು.

ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಕಳೆದ ತಿಂಗಳು ಬಿಡುಗಡೆ ಮಾಡಿದ ಅಂದಾಜಿನ ಪ್ರಕಾರ, ವರ್ಷ ಶೇಕಡಾ . ರಷ್ಟು ಕುಗ್ಗುವ ನಿರೀಕ್ಷೆಯಿರುವ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಭಾರತ ಹೆಣಗಾಡಿದೆ.

ಏತನ್ಮಧ್ಯೆ, ಅಂತಾರಾಷ್ಟ್ರೀಯ ಹಣಕಾಸು ನಿದಿಯು (ಐಎಂಎಫ್)  ವರ್ಷ ಭಾರತದ ಆರ್ಥಿಕತೆಯು ಶೇಕಡಾ ೧೦.೩ರಷ್ಟು ಕುಗ್ಗುತ್ತದೆ ಎಂದು ಭವಿಷ್ಯ ನುಡಿದಿದೆ. ಇದು ಪ್ರಮುಖ ಉದಯೋನ್ಮುಖ ಆರ್ಥಿಕತೆಗೆ ದೊಡ್ಡ ಕುಸಿತವಾಗಿದೆ ಮತ್ತು ಸ್ವಾತಂತ್ರ್ಯಾ ನಂತರದ ಅತ್ಯಂತ ಕೆಟ್ಟ ಹಿನ್ನಡೆಯಾಗಿದೆ.

ತಿಂಗಳ ಆರಂಭದಲ್ಲಿ ಬಿಡುಗಡೆಯಾದ ಆಕ್ಸ್ಫರ್ಡ್ ಎಕನಾಮಿಕ್ಸ್ ವರದಿಯು ಸಾಂಕ್ರಾಮಿಕ ರೋಗವನ್ನು ಸಡಿಲಿಸಿದ ನಂತರವೂ ಭಾರತವು ಅತ್ಯಂತ ಕೆಟ್ಟ ಪರಿಣಾಮ ಬೀರುವ ಆರ್ಥಿಕತೆಯಾಗಿದೆ ಎಂದು ಹೇಳಿತ್ತು. ೨೦೨೫ ವೇಳೆಗೆ ವಾರ್ಷಿಕ ಉತ್ಪಾದನೆಯು ವೈರಸ್ ಪೂರ್ವ ಮಟ್ಟಕ್ಕಿಂತ ಶೇಕಡಾ ೧೨ರಷ್ಟು ಕಡಿಮೆ ಇರುತ್ತದೆ ಎಂದು ವರದಿ ಹೇಳಿತ್ತು.

No comments:

Advertisement