Tuesday, December 1, 2020

ರೈತ ನಿಯೋಗದ ಜೊತೆ ಕೇಂದ್ರ ಮಾತುಕತೆ: ಡಿ.3ರಂದು 2ನೇ ಸುತ್ತು

 ರೈತ ನಿಯೋಗದ ಜೊತೆ ಕೇಂದ್ರ ಮಾತುಕತೆ: ಡಿ.3ರಂದು 2ನೇ ಸುತ್ತು

ನವದೆಹಲಿ: ನೂತನ ಕೃಷಿ ಕಾಯ್ದೆಗಳಿಗೆ ಸಂಬಂಧಿಸಿದಂತೆ ಪ್ರತಿಭಟನಾ ನಿರತ ರೈತ ಸಂಘದ ಮುಖಂಡರು ಮತ್ತು ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಅವರ ನಡುವೆ ವಿಜ್ಞಾನಭವನದಲ್ಲಿ 2020 ಡಿಸೆಂಬರ್ 01ರ ಮಂಗಳವಾರ ನಡೆದ ಮಾತುಕತೆಫಲಪ್ರದವಾಗಿದ್ದುಮುಂದಿನ ಸುತ್ತಿನ ಮಾತುಕತೆ ಡಿಸೆಂಬರ್ ೩ರ ಗುರುವಾರ ನಡೆಯಲಿದೆ. ಮುಂದಿನ ಸುತ್ತಿನ ಮಾತುಕತೆಗೆ ಕೇಂದ್ರವು ರೈತ ಗುಂಪುಗಳ ಪ್ರತಿನಿಧಿಗಳನ್ನು ಮಂಗಳವಾರ ಆಹ್ವಾನಿಸಿದೆ.

‘ಫಲಪ್ರದಎಂಬ ವ್ಯಾಖ್ಯಾನದೊಂದಿಗೆ ಈದಿನ ನಡೆದ ಮಾತುಕತೆ ರಾತ್ರಿ ಮುಕ್ತಾಯಗೊಂಡಿದ್ದು, ಹೊಸ ಕೃಷಿ ಕಾನೂನುಗಳ ವಿವಾದಾತ್ಮಕ ನಿಬಂಧನೆಗಳ ಬಗ್ಗೆ ಚರ್ಚಿಸಲು ಸಮಿತಿಯೊಂದನ್ನು ರಚಿಸುವ ಪ್ರಸ್ತಾಪವನ್ನು ಸರ್ಕಾರವು ಪ್ರತಿಭಟನಾ ನಿರತ ರೈತರ ಮುಂದಿಟ್ಟಿದೆ ಎಂದು ಮೂಲಗಳು ತಿಳಿಸಿವೆ. ಆದರೆ ರೈತ ಸಂಘಟನೆಗಳು ಸಮಿತಿ ಪ್ರಸ್ತಾವವನ್ನು ತಿರಸ್ಕರಿಸಿರುವುದಾಗಿ ರಾತ್ರಿ ಹೇಳಿವೆ.

ಪ್ರಸ್ತಾವಿತ ಸಮಿತಿಗೆ ರೈತರ ಕಡೆಯಿಂದ ಸದಸ್ಯರಾಗಿ ನಾಮ ನಿರ್ದೇಶನ ಮಾಡುವಂತೆ ಕೇಂದ್ರ ಸಚಿವರಾದ ತೋಮರ್ ಮತ್ತು ಪಿಯೂಷ್ ಗೋಯಲ್ ಅವರು ರೈತ ಸಂಘದ ಮುಖಂಡರನ್ನು ಕೇಳಿಕೊಂಡಿದ್ದಾರೆ. ಅದಕ್ಕೆ ರೈತ ಮುಖಂಡರು ಎಲ್ಲರ ಜೊತೆ ಮಾತನಾಡುವುದಾಗಿ ತಿಳಿಸಿದ್ದರು.

ಸಮಿತಿಯಲ್ಲಿ ಕೃಷಿ ತಜ್ಞರು ಮತ್ತು ಸರ್ಕಾರಿ ಪ್ರತಿನಿಧಿಗಳು ಸಹ ಇರಲಿದ್ದಾರೆ ಎಂದು ಮೂಲಗಳು ಹೇಳಿವೆ. ಸರ್ಕಾರ ಮತ್ತು ರೈತ ಧುರೀಣರ ಮುಂದಿನ ಸಭೆ ಡಿಸೆಂಬರ್ ೩ರ ಗುರುವಾರ ನಡೆಯಲಿದೆ.

ಹೊಸ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದ ಸಾವಿರಾರು ರೈತರು ನವೆಂಬರ್ ೨೬ ರಿಂದ ಸಿಂಗು ಮತ್ತು ಟಿಕ್ರಿ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಹೊಸ ಕೃಷಿ ಕಾನೂನುಗಳು ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯನ್ನು ಹಾಳುಮಾಡಲಿದ್ದು ಮತ್ತು ಕಾರ್ಪೊರೇಟ್ ಕೃಷಿಗೆ ಅವಕಾಶ ಕಲ್ಪಿಸಲಿದೆ ಎಂಬ ಭಯ ರೈತರಲ್ಲಿ ಮೂಡಿದ್ದು, ಹಿನ್ನೆಲೆಯಲ್ಲಿ ರೈತ ಚಳವಳಿ ಭುಗಿಲೆದ್ದಿದೆ.

ಮಧ್ಯೆ,  ರೈತರು ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ೨೦೨೦, ರೈತರು (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ, ೨೦೨೦, ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, ೨೦೨೦ - ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಲು ಸರ್ಕಾರ ಪ್ರಸ್ತುತ ನಿರ್ಧರಿಸಿಲ್ಲ ಎಂದು ವರದಿಗಳು ಹೇಳಿವೆ.

ಸಭೆಗೆ ಕೆಲವು ಗಂಟೆಗಳ ಮುನ್ನ ಕೇಂದ್ರದ ಹೊಸ ಕೃಷಿ ಸುಧಾರಣಾ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆ ಕುರಿತು ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ, ತೋಮರ್ ಮತ್ತು ಗೋಯಲ್, ಬಿಜೆಪಿ ಮುಖ್ಯಸ್ಥ ಜೆ.ಪಿ.ನಡ್ಡಾ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದರು.

ಶುಕ್ರವಾರದ ಹಿಂಸಾಚಾರದ ನಂತರ ಪ್ರತಿಭಟನೆ ವೇಳೆಯಲ್ಲಿ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ, ಪಂಜಾಬ್ ಮತ್ತು ಹರಿಯಾಣದ ರೈತರು ಸಿಂಗು ಮತ್ತು ಟಿಕ್ರಿ ಗಡಿಗಳಲ್ಲಿ ಶಾಂತಿಯುತ ಧರಣಿ ನಡೆಸಿದರು. ಸೋಮವಾರ ಘಾಜಿಪುರ ಗಡಿಯಲ್ಲಿ ಪ್ರತಿಭಟನಾಕಾರರ ಸಂಖ್ಯೆ ಹೆಚ್ಚಾಯಿತು.

ವಿರೋಧ ಪಕ್ಷಗಳೂ ಸಹ ಒತ್ತಡವನ್ನು ಹೆಚ್ಚಿಸಿ, ರೈತರ "ಪ್ರಜಾಪ್ರಭುತ್ವ ಹೋರಾಟವನ್ನು ಗೌರವಿಸಿ" ಮತ್ತು ಕಾನೂನುಗಳನ್ನು ರದ್ದುಗೊಳಿಸಿ ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದವು.

ಕೇಂದ್ರದ ಕೃಷಿ ಕಾನೂನುಗಳು ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯನ್ನು ಕಿತ್ತುಹಾಕಲು ದಾರಿ ಮಾಡಿಕೊಡುತ್ತವೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ ಮತ್ತು ಅವುಗಳನ್ನು ದೊಡ್ಡ ಸಂಸ್ಥೆಗಳ "ಕರುಣೆಗೆ" ಬಿಡುತ್ತವೆ ಎಂದು ಚಳವಳಿಕಾರರು ಹೇಳಿದರೆ, ಹೊಸ ಕಾನೂನುಗಳು ರೈತರಿಗೆ ಉತ್ತಮ ಅವಕಾಶಗಳನ್ನು ತರುತ್ತವೆ ಮತ್ತು ಕೃಷಿಯಲ್ಲಿ ಹೊಸ ತಂತ್ರಜ್ಞಾನಗಳಿಗೆ ಅವಕಾಶ ಮಾಡಿಕೊಡುತ್ತವೆ ಎಂದು ಸರ್ಕಾರ ಪ್ರತಿಪಾದಿಸಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರ್ಕಾರವು ವರ್ಷದ ಆರಂಭದಲ್ಲಿ ಸಂಸತ್ತಿನ ಮೂಲಕ ಅಂಗೀಕಾರ ನೀಡಿರುವ ಕಾನೂನುಗಳು ಬೆಳೆಗಾರರಿಗೆ ಈಗಿನ ಸರ್ಕಾರಿ ಮಾರುಕಟ್ಟೆಗಳಿಂದ ಖಾತರಿ ದರಗಳನ್ನು ಪಡೆಯುವ ಬದಲು ಭಾರತದಲ್ಲಿ ಎಲ್ಲಿಯಾದರೂ ತಮ್ಮ ಉತ್ಪನ್ನಗಳನ್ನು ಕಾನೂನುಬದ್ಧವಾಗಿ ಮಾರಾಟ ಮಾಡಲು ಮುಕ್ತ ಅವಕಾಶ ಕಲ್ಪಿಸುವುದಾಗಿ ತಿಳಿಸಿವೆ.

ಕಳೆದ ವಾರ ನವದೆಹಲಿಯತ್ತ ಮೆರವಣಿಗೆ ಹೊರಟ ರೈತರನ್ನು ತಡೆಯಲು ನಡೆದ ಯತ್ನದಲ್ಲಿ ಪೊಲೀಸರು ಬೆತ್ತ ಪ್ರಹಾರ, ಅಶ್ರುವಾಯು ಶೆಲ್ ಮತ್ತು ಜಲಫಿರಂಗಿ ಪ್ರಯೋಗಿಸಿದ್ದರು. ಯಾವುದಕ್ಕೂ ಜಗ್ಗದೆ ಮುಂದುವರೆದ ರೈತರು ಕಡೆಗೆ ದೆಹಲಿ ಗಡಿಯಲ್ಲಿ ಹೆದ್ದಾರಿ ಧರಣಿ ಆರಂಭಿಸಿದ್ದರು. ರಾಜಧಾನಿಯ ಎರಡು ಪ್ರಮುಖ ಪ್ರವೇಶ ಕೇಂದ್ರಗಳಲ್ಲಿ ಈಗ ರೈತ ಚಳವಳಿಗಾರರು ಮತ್ತು ಶಸ್ತ್ರಸಜ್ಜಿತ ಭದ್ರತಾ ಸಿಬ್ಬಂದಿ ಮುಖಾಮುಖಿಯಾಗಿದ್ದಾರೆ.

ಮಧ್ಯೆ ದೆಹಲಿಯ ಬುರಾರಿಯಲ್ಲಿ ಪ್ರತಿಭಟನೆ ಮುಂದುವರೆಸುವಂತೆ ಸೂಚಿಸಿದ ಕೇಂದ್ರ ಸರ್ಕಾರ ಹೆದ್ದಾರಿಗಳಲ್ಲಿ ಪ್ರತಿಭಟನೆ ನಿಲ್ಲಿಸಿ ಮೈದಾನಕ್ಕೆ ತೆರಳಿದರೆ ಮಾತುಕತೆ ನಡೆಸುವುದಾಗಿ ಹೇಳಿತ್ತು. ರೈತ ಮುಖಂಡರು ಷರತ್ತಿನ ಮಾತುಕತೆ ನಿರ್ಲಕ್ಷಿಸಿ ಚಳವಳಿ ಮುಂದುವರೆಸಿದ್ದರು.

ಸೋಮವಾರ ವಾರಾಣಸಿಯಲ್ಲಿ ಮೆರವಣಿಗೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ,  ಸುಧಾರಣಾ ಪ್ಯಾಕೇಜ್ ಬಗ್ಗೆ ವಿರೋಧಿಗಳು "ತಪ್ಪು ಮಾಹಿತಿ" ಹರಡಿದ್ದಾರೆ ಎಂದು ಆರೋಪಿಸಿದರು. ವಾರಾಣಸಿ  ಭೇಟಿಯ ಸಂದರ್ಭದಲ್ಲಿ ರೈತರನ್ನು ದಾರಿ ತಪ್ಪಿಸುತ್ತಿರುವುದಾಗಿ ವಿರೋಧ ಪಕ್ಷಗಳನ್ನು ಗುರಿಯಾಗಿಸಿ ಟೀಕಿಸಿದ ಮೋದಿ, ಹೊಸದಾಗಿ ರೂಪಿಸಿದ ಕೃಷಿ ಕಾನೂನುಗಳನ್ನುಐತಿಹಾಸಿಕಎಂದು ಬಣ್ಣಿಸಿದರು.

ಆದರೆ ನಗರವನ್ನು ಸಂಪರ್ಕಿಸುವ ಇತರ ಮಾರ್ಗಗಳನ್ನು ದಿಗ್ಬಂಧಿಸುವ ಯೋಜನೆಯನ್ನು ಪ್ರತಿಭಟನಾಕಾರರು ಘೋಷಿಸಿದ ನಂತರ ಹೆಚ್ಚಿನ ಪ್ರತಿಭಟನೆಗಳನ್ನು ತಡೆಯುವ ಪ್ರಯತ್ನದಲ್ಲಿ ತೊಡಗಿದ ಅವರ ಸರ್ಕಾರ ಮಂಗಳವಾರ ರೈತರ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿತು.

ಬೇರೆಡೆ ಪೊಲೀಸರು ರಸ್ತೆ ತಡೆಗಳನ್ನು ಸ್ಥಾಪಿಸಿ ರಾಜಧಾನಿಗೆ ಮೆರವಣಿಗೆ ನಡೆಸಲು ಯತ್ನಿಸುತ್ತಿದ್ದ ಪ್ರತಿಭಟನಾಕಾರರನ್ನು ಬಂಧಿಸಿದರು.

ಮಧ್ಯೆ ರೈತ ಪ್ರತಿಭಟನೆಗಳು ಭಾರತ ಮತ್ತು ಕೆನಡಾ ನಡುವೆ ರಾಜತಾಂತ್ರಿಕ ವಿವಾದವನ್ನು ಹುಟ್ಟು ಹಾಕಿದವು. ಪಂಜಾಬಿ ಮೂಲದ ವಲಸೆಗಾರರಿಗೆ ದೊಡ್ಡ ನೆಲೆಯಾಗಿರುವ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಟ್ವಿಟ್ಟರ್ ನಲ್ಲಿ ವಿಡಿಯೋ ಸಂದೇಶವನ್ನು ಪ್ರಕಟಿಸಿ, ರೈತರ ಚಳವಳಿ ಕಳವಳ ಹುಟ್ಟಿಸಿದೆ ಎಂದು ಹೇಳಿದ್ದಲ್ಲದೆ, ರೈತರ ಶಾಂತಿಯುತ ಪ್ರತಿಭಟನೆಯ ಹಕ್ಕನ್ನು ಸಮರ್ಥಿಸಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಭಾರತದ ವಿದೇಶಾಂಗ ಸಚಿವಾಲಯವು ಟ್ರೂಡೋ ಅವರ ಹೆಸರನ್ನು ಪ್ರಸ್ತಾಪಿಸದೆಯೇ  "ಭಾರತದ ರೈತರಿಗೆ ಸಂಬಂಧಿಸಿದ ಕೆನಡಾದ ನಾಯಕರ ಹೇಳಿಕೆ ಅನೈತಿಕವಾದದ್ದುಎಂದು ಟೀಕಿಸಿತು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಪ್ರತಿನಿಧಿಗಳು ತಾವುನಿರ್ಣಾಯಕಯುದ್ಧಕ್ಕಾಗಿ ರಾಷ್ಟ್ರ ರಾಜಧಾನಿಗೆ ಬಂದಿದ್ದೇವೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ತಮ್ಮಮನ್ ಕಿ ಬಾತ್ಅನ್ನು ಕೇಳಬೇಕೆಂದು ಒತ್ತಾಯಿಸಿದ್ದರು.

ಮಂಗಳವಾರ ದೆಹಲಿಯಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಭೇಟಿಯಾದ ರೈತರ ನಿಯೋಗದ ಸದಸ್ಯ ಚಂದಾ ಸಿಂಗ್, "ನಮ್ಮ ಆಂದೋಲನ ಮುಂದುವರೆಯುತ್ತದೆ ಮತ್ತು ನಾವು ಖಂಡಿತವಾಗಿಯೂ ಸರ್ಕಾರದಿಂದ ಏನನ್ನಾದರೂ ಹಿಂಪಡೆಯುತ್ತೇವೆ. ಅದು ಗುಂಡುಗಳು ಇರಬಹುದು ಅಥವಾ ಶಾಂತಿಯುತ ಪರಿಹಾರ ಇರಬಹುದುಹೇಳಿದರು.

No comments:

Advertisement