Saturday, January 17, 2026

ಜಕ್ಕೂರಿನಲ್ಲಿ ಸುಗ್ಗಿ ಹುಗ್ಗಿ: ಮಿಂಚಿದ ಯಕ್ಷಗಾನ

 ಜಕ್ಕೂರಿನಲ್ಲಿ ಸುಗ್ಗಿ ಹುಗ್ಗಿ: ಮಿಂಚಿದ ಯಕ್ಷಗಾನ

ಬೆಂಗಳೂರಿನ ಜಕ್ಕೂರು ಮೈದಾನದಲ್ಲಿ ಕಂದಾಯ ಸಚಿವ ಹಾಗೂ ಬ್ಯಾಟರಾಯನಪುರ ಕ್ಷೇತ್ರದ ಶಾಸಕ ಶ್ರೀ ಕೃಷ್ಣ ಬೈರೇಗೌಡ ಅವರ ನೇತೃತ್ವದಲ್ಲಿ ೨೦೨೬ ಜನವರಿ ೧೭ ಮತ್ತು ೧೮ರಂದು ಎರಡು ದಿನ ಸುಗ್ಗಿ ಹುಗ್ಗಿ ಸಂಕ್ರಾಂತಿ ಸಂಭ್ರಮ.

ವಿವಿಧ ಬಗೆಯ ಕ್ರೀಡೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ನೃತ್ಯ ನಾಟಕ, ಸ್ಪರ್ಧೆಗಳು, ಬಾಯಲ್ಲಿ ನೀರೂರಿಸುವ ಬಗೆ ಬಗೆಯ ತಿಂಡಿ ತಿನಸುಗಳು, ಉಡುಪುಗಳ ಮೇಳ.

೨೦೨೬ರ  ಜನವರಿ ೧೭ರಂದು ವಿವಿಧ ಬಗೆ ನೃತ್ಯ ಸ್ಪರ್ಧೆಗಳಲ್ಲಿ ನಾಗವಾರ ಆಸುಪಾಸಿನ ಮಕ್ಕಳ ತಂಡ- ʼಭೈರವʼ ನೃತ್ಯ ತಂಡವು ಕರಾವಳಿಯ ಹೆಮ್ಮೆಯ ಕಲೆ ಯಕ್ಷಗಾನದ ತುಣುಕೊಂದನ್ನು ಪ್ರದರ್ಶಿಸಿತು. ಯಕ್ಷ ಕಲಾ ಕೌಸ್ತುಭದ ಯಕ್ಷಗಾನ ಗುರು ಉಮೇಶ್‌ ರಾಜ್‌ ಅವರಿಗೆ ಮಾರ್ಗದರ್ಶನ ಮಾಡಿದರು.

ಯಕ್ಷಗಾನದ ವಿಡಿಯೋ ಇಲ್ಲಿದೆ. ಕೆಳಗಿನ ಚಿತ್ರ ಕ್ಲಿಕ್‌ ಮಾಡಿ ಅಥವಾ ಯೂ ಟ್ಯೂಬ್‌ ವಿಡಿಯೋ ಲಿಂಕ್‌ ಕ್ಲಿಕ್‌ ಮಾಡಿ: https://youtu.be/yDx_oeGV4aM







No comments:

Advertisement