ವೈಕುಂಠ ಏಕಾದಶಿಗೆ ಸಡಗರದ ಸಿದ್ಧತೆ
ಬೆಂಗಳೂರು ರಾಮಕೃಷ್ಣ
ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ
ಸ್ವಾಮಿ ದೇವಸ್ಥಾನದಲ್ಲಿ ೨೦೨೫ ಡಿಸೆಂಬರ್ ೩೦ ಮಂಗಳವಾರದ ವೈಕುಂಠ ಏಕಾದಶಿ ಆಚರಣೆಗೆ ಸಡಗರದ ಸಿದ್ಧತೆ,
ಶ್ರಮದಾನ ಕಾರ್ಯಕ್ರಮಗಳು ಡಿಸೆಂಬರ್ ೨೯ರಂದು ಭರದಿಂದ ನಡೆದವು.
ಭಕ್ತಾದಿಗಳು ದೇವಾಲಯ
ಸ್ವಚ್ಛತೆಯಿಂದ ಹಿಡಿದು ಅಲಂಕಾರದವರೆಗೆ ಎಲ್ಲ ರೀತಿಯ ಶ್ರಮದಾನದಲ್ಲಿ ಲಗುಬಗೆಯಿಂದ ಪಾಲ್ಗೊಂಡರು.
ಮಂಗಳವಾರ ಬೆಳಗ್ಗೆ ೪
ಗಂಟೆಗೆ ಬ್ರಾಹ್ಮೀ ಮುಹೂರ್ತದಲ್ಲಿ ಅಭಿಷೇಕ, ಸಂಕಲ್ಪದೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಬಳಿಕ ವಿಶೇಷ
ಪೂಜೆ, ಭಜನಾ ಕಾರ್ಯಕ್ರಮಗಳು ನಡೆಯಲಿವೆ. ಬೆಳಗ್ಗೆ ೧೧ ಗಂಟೆಗೆ ವಿದ್ಯಾ ರಘು ಪ್ರಸಾದ್ ತಂಡವು ಭಜನಾ
ಕಾರ್ಯಕ್ರಮವನ್ನು ನೆರವೇರಿಸಿಕೊಡಲಿದೆ.
ವೈಕುಂಠ ದ್ವಾರವನ್ನು
ಶನಿವಾರ ರಾತ್ರೆಯ ವೇಳಗೆ ಸಜ್ಜುಗೊಳಿಸಲಾಗಿದ್ದು ಬೆಳಗ್ಗೆಯಿಂದ ರಾತ್ರಿ ೯ ಗಂಟೆಯವರೆಗೆ ವೈಕುಂಠ ದ್ವಾರ
ದರ್ಶನದ ವ್ಯವಸ್ಥೆ ಮಾಡಲಾಗಿದೆ. ರಾತ್ರಿ ೯ ಗಂಟೆಗೆ ಮಹಾಮಂಗಳಾರತಿ ನಡೆಯಲಿದೆ.
ಮಾಜಿ ಸಚಿವ ಮಾಲೂರು ಎಸ್.ಎನ್. ಕೃಷ್ಣಯ್ಯ ಶೆಟ್ಟಿ ಅವರು ಉಚಿತ ಲಡ್ಡು ಪ್ರಸಾದ ವಿತರಣೆಗೆ ವ್ಯವಸ್ಥೆ ಮಾಡಿದ್ದಾರೆ.

No comments:
Post a Comment