Tuesday, February 10, 2026

ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಕೇರಳ ಚೆಂಡೆ ಸಂಭ್ರಮ

 ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಕೇರಳ ಚೆಂಡೆ ಸಂಭ್ರಮ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ೨೦೨೬ ಫೆಬ್ರುವರಿ ೮ರ ಸಂಜೆ ಕೇರಳ ಚೆಂಡೆಯ ಸಂಭ್ರಮ. ನಿರಂತರ ಅರವತ್ತು ನಿಮಿಷಗಳ ಕಾಲ ಅಂದರೆ ಒಂದು ಘಂಟೆ ಅರೆ ನಿಮಿಷದ ಬಿಡುವು ಕೂಡಾ ಇಲ್ಲದಂತೆ ಕೇಳಿಬಂದ ಚೆಂಡೆಯ ಧ್ವನಿಗೆ ಎಲ್ಲರೂ ಮಂತ್ರಮುಗ್ಧ..

ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ದ್ವಿತೀಯ ವಾರ್ಷಿಕೋತ್ಸವದ ಅಂಗವಾಗಿ ಸಾಯಂಕಾಲ ಏರ್ಪಡಿಸಲಾಗಿದ್ದ ಕಾರ್ಯಕ್ರಮದ ಸಂದರ್ಭ ಅದು. ವಿಡಿಯೋ 👇

ಈ ಚೆಂಡೆಯ ಸಂಭ್ರಮ ಇಲ್ಲಿಗೆ ಮುಗಿಯಲಿಲ್ಲ. ನಂತರ ಬಡಾವಣೆಯ ಮುಖ್ಯರಸ್ತೆಯಲ್ಲಿ ಅವರ ಘೋಷಯಾತ್ರೆ ಬಡಾವಣೆಯ ಎಲ್ಲರ ಮನ ತಣಿಸಿತು. ಚೆಂಡೆಯ ತಂಡದ ಸದಸ್ಯರ ಜೊತೆಗೆ ದೇವಸ್ಥಾನಕ್ಕೆ ವಾರ್ಷಿಕೋತ್ಸವ ಸಡಗರದಲ್ಲಿ ಪಾಲ್ಗೊಳ್ಳಲು ಬಂದಿದ್ದ ಭಕ್ತರೂ ಹೆಜ್ಜೆ ಹಾಕಿದರು.

ಘೋಷಯಾತ್ರೆಯ ಬಳಿಕ ದೇವಾಲಯದಲ್ಲಿ ಚೆಂಡೆಯ ನಿನಾದದೊಂದಿಗೇ ಮಹಾಪೂಜೆ ಮತ್ತು ಮಹಾಮಂಗಳಾರತಿ. ವಿಡಿಯೋ 👇

ಈ ಚೆಂಡೆವಾದನ ಮಾಡಿದ ತಂಡದಲ್ಲಿ ಇದ್ದವರು ೮ ಮಂದಿ. ಅವರ ಪೈಕಿ ಕೆಲವರು ಸಿವಿಲ್‌ ಹಾಗೂ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು. ಇಬ್ಬರು ಮಕ್ಕಳು. ಅನಿಲ್‌ ಕುಮಾರ್‌ ನೇತೃತ್ವದ ಈ ತಂಡದಲ್ಲಿ ಇದ್ದವರು: ಹರಿ, ಪ್ರಶಾಂತ್‌, ಅಖಿಲ್‌, ನಿಹಾಲ್‌, ಜಯಕುಮಾರ್‌ ಮತ್ತು ೧೦ ವರ್ಷದ ಬಾಲಕ ವೈಶಾಖ್‌ ಹಾಗೂ ೧೩ರ ಹರೆಯದ ರಥು ಕುಮಾರ್. ಈ ಚೆಂಡೆ ವಾದನಕ್ಕೆ ವ್ಯವಸ್ಥೆ ಮಾಡಿದವರು ಬಡಾವಣೆಯ ಹಿರಿಯ ಸದಸ್ಯ ಕೆ.ಪಿ. ಸುಗುಣನ್.‌

ಚೆಂಡೆ ವಾದನಕ್ಕೆ ಮುನ್ನ ವಿದ್ಯಾ ರಘುಪ್ರಸಾದ್‌ ನೇತೃತ್ವದಲ್ಲಿ ನೆರೆಯ ಎಂಸಿಇಸಿಎಚ್‌ಎಸ್‌ ಬಡಾವಣೆಯ ಭಕ್ತಿ ಸಂಗಮ ಭಜನಾ ಮಂಡಳಿ ಸದಸ್ಯೆಯರು ಹಾಗೂ ದೇವಸ್ಥಾನದ ಭಜನಾ ತಂಡದ ಸದಸ್ಯರು ಸುಶ್ರಾವ್ಯವಾಗಿ ಭಜನಾ  ಸೇವೆ 👇 (ವಿಡಿಯೋ) ಸಲ್ಲಿಸಿದರು.

ದೇವಾಲಯದ ಅಲಂಕಾರ ಸೇವೆ ಹಾಗೂ ರಾತ್ರಿ ದೇವಾಲಯದಲ್ಲೇ ತಯಾರಿಸಿದ ಪ್ರಸಾದ ಸೇವೆಯನ್ನು ಶ್ರೀ ಮುನಿರಾಜು ಮತ್ತು ಕುಟುಂಬ ವಹಿಸಿಕೊಂಡಿತ್ತು. ಮಧ್ಯಾಹ್ನದ ಪ್ರಸಾದ ಸೇವೆಯನ್ನು ಎಚ್.ವಿ. ಉದಯಶಂಕರ, ಕೆ.ಎಂ. ನಾಗರಾಜ್‌ ಮತ್ತು ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಚೌಡರೆಡ್ಡಿ ಕುಟುಂಬ ಸದಸ್ಯರು ವ್ಯವಸ್ಥೆ ಮಾಡಿದ್ದರು.

ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋಗಳು ಇಲ್ಲಿವೆ. ಇಲ್ಲಿವೆ. ಗಣಪತಿ ಸ್ತುತಿ ವಿಡಿಯೋ

ಇದನ್ನೂ ಓದಿರಿ:
ದ್ವಿತೀಯ ವಾರ್ಷಿಕೋತ್ಸವ ಪಂಚಹೋಮ ಸಂಭ್ರಮ

No comments:

Advertisement