Wednesday, April 15, 2026

ಸೌರಮಾನ ಯುಗಾದಿ ʼವಿಶು-ಕಣಿʼ ಆಚರಣೆ

ಸೌರಮಾನ ಯುಗಾದಿ ʼವಿಶು-ಕಣಿʼ ಆಚರಣೆ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ  ೨೦೨೬ ಏಪ್ರಿಲ್‌ ೧೫ರ ಬುಧವಾರ ಸೌರಮಾನ ಯುಗಾದಿ ʼವಿಶು-ಕಣಿʼಯನ್ನು ಆಚರಿಸಲಾಯಿತು.

ಬೆಳಗ್ಗೆಯೇ ಸಮೃದ್ಧಿಯ ಸಂಕೇತವಾದ  ಹಲ-ಫಲ, ಹಣ್ಣುಗಳು, ತರಕಾರಿ, ಹೂ, ನಾಣ್ಯಗಳನ್ನು ಒಳಗೊಂಡ ʼವಿಶು-ಕಣಿʼ ದರ್ಶನ ವ್ಯವಸ್ಥೆ ಮಾಡಲಾಗಿತ್ತು.


ಶ್ರೀಮತಿ ಶ್ರೀವಿದ್ಯಾ ಡಿ. ಕಾರ್ತಿಕ್‌ ಮತ್ತು ಕುಟುಂಬದವರು ಶ್ರೀ ದೇವರಿಗೆ ವಸ್ತ್ರಾಲಂಕಾರ, ಕೆ.ಪಿ. ಸುಗುಣನ್‌ ಮತ್ತು ಕುಟುಂಬದವರು ʼಕಣಿ-ದರ್ಶನʼ ಹಾಗೂ ವಿಶೇಷ ಅಪ್ಪಂ ಪ್ರಸಾದ, ನೆತ್ರಕೆರೆ ಉದಯಶಂಕರ ನಾರಾಯಣ ಭಟ್‌ ಮತ್ತು ಕುಟುಂಬದವರು ನಾಣ್ಯ ಸೇವೆ, ಶ್ರೀಮತಿ ಉಮಾ ಜಯಶಂಕರ್‌ ಮತ್ತು ಕುಟುಂಬದವರು ಸಂಜೆಯ ಪ್ರಸಾದದ ವ್ಯವಸ್ಥೆ ಮಾಡಿದ್ದರು.

ಶ್ರೀ ದೇವರಿಗೆ ಅಭಿಷೇಕ ವಿಶೇಷ ಅಲಂಕಾರದ ವ್ಯವಸ್ಥೆ ಮಾಡಲಾಗಿತ್ತು.

ಈ ಸಂದರ್ಭದ ಕೆಲವು ಫೋಟೋ ಹಾಗೂ ವಿಡಿಯೋಗಳು ಇಲ್ಲಿವೆ. ಮಹಾಮಂಗಳಾರತಿವಿಡಿಯೋ ನೋಡಲು ಕೆಳಗಿನ ಚಿತ್ರ  ಕ್ಲಿಕ್‌ ಮಾಡಿ. ಇತರ ವಿಡಿಯೋಗಳನ್ನು ನೋಡಲು ಅವುಗಳನ್ನು ಕ್ಲಿಕ್‌ ಮಾಡಿ.


No comments:

Advertisement