Thursday, December 20, 2007

This is Tulunadu Panchanga

ಇದು 'ತುಳುನಾಡು

ಪಂಚಾಂಗ'


ದಕ್ಷಿಣ ಕರಾವಳಿಯ ಯಕ್ಷಗಾನ ಪ್ರಭೇದ ತೆಂಕು ತಿಟ್ಟಿನ ಪ್ರಸಂಗಗಳಲ್ಲಿ ಬರುವ ದೇವರ ವೇಷಭೂಷಣ, ಮುಖವರ್ಣಿಕೆಗಳು ಇಲ್ಲಿವೆ. ಶ್ರೀದೇವಿ, ನರಸಿಂಹ, ಈಶ್ವರ, ಶ್ರೀರಾಮ, ವೀರಭದ್ರ, ಅರ್ಧನಾರೀಶ್ವರ, ನಾಗರಾಜ, ಶ್ರೀಕೃಷ್ಣ, ಹನುಮಂತ, ಭೂ ವರಾಹ, ಶನೀಶ್ವರ, ಗರುಡ ವೇಷಗಳ ಮೋಹಕ ಚಿತ್ರಗಳು ಕಣ್ಸೆಳೆಯುತ್ತವೆ
.

ನೆತ್ರಕೆರೆ ಉದಯಶಂಕರ

ಐತಾರ, ಸೋಮಾರ, ಅಂಗಾರೆ, ಬುದಾರ, ಗುರುವಾರ, ಸುಕ್ರಾರ, ಸನಿಯಾರ ಎಂಬುದು ವಾರದ ಏಳು ದಿನಗಳ ಹೆಸರುಗಳು ಎಂಬುದು ನಿಮಗೆ ಗೊತ್ತೆ? ಈ ಹೆಸರುಗಳು ಕರ್ನಾಟಕದ ಭಾಗವೇ ಆಗಿರುವ ಕರಾವಳಿ ಕರ್ನಾಟಕ ತುಳುನಾಡಿನ ನಿತ್ಯ ಬಳಕೆಯ ಶಬ್ಧಗಳು.

ಗರಡಿ ನೇಮ, ಗರಡಿ ಜಾತ್ರೆ, ನಾಗಮಂಡಲ, ಬೆಡಿ ಉತ್ಸವ, ತೇರು, ತೆಂಗಾಯಿ ಉತ್ಸವ- ಹೀಗೆ ವೈವಿಧ್ಯಮಯ ಉತ್ಸವಗಳು ನಡೆಯುವ ನಾಡು ಇದು.

ಕರ್ನಾಟಕದ ಹಬ್ಬ, ಹರಿದಿನಗಳು ಯಾವುವು- ಯಾವಾಗ ಬರುತ್ತವೆ ಎಂದು ಕೇಳಿ. ಅವುಗಳ ವಿವರಗಳನ್ನೆಲ್ಲ ಒದಗಿಸುವ ಪಂಚಾಂಗ ಯಾನೆ ಕ್ಯಾಲೆಂಡರುಗಳು ಬೇಕಾದಷ್ಟು ಸಿಗುತ್ತವೆ. ಆದರೆ ತುಳುವರ ಹಬ್ಬ- ಹರಿದಿನಗಳು, ವಿಶೇಷ ಆಚರಣೆಗಳು ಯಾವುವು ಎಂದು ವಿವರಿಸುವ ಒಂದಾದರೂ ಪಂಚಾಂಗ, ಕ್ಯಾಲೆಂಡರ್ ಕಂಡಿದ್ದೀರಾ?

ಇಲ್ಲ. ತುಳುವರ ಹಬ್ಬ ಹರಿದಿನಗಳು, ವಿಶೇಷ ದಿನಗಳು, ಜಾತ್ರೆ, ಕೋಲ, ಕಂಬಳ ಇತ್ಯಾದಿಗಳು ಯಾವಾಗ ಬರುತ್ತವೆ ಎಂದು ಕೇಳಿದರೆ ಸ್ವತಃ ತುಳುವರೂ ತಡಬಡಾಯಿಸಬೇಕಾಗುತ್ತದೆ.

ಈ ಕೊರತೆಯನ್ನು ಬಹಳಷ್ಟು ಮಟ್ಟಿಗೆ ನಿವಾರಿಸುವ ಕೆಲಸವನ್ನು ಮಾಡುತ್ತಿರುವ ವೈವಿಧ್ಯಮಯ ಪಂಚಾಂಗವೊಂದು ಕಳೆದ ಐದು ವರ್ಷಗಳಿಂದ ಪ್ರಕಟವಾಗುತ್ತಿದೆ.

ಈ ಪಂಚಾಂಗದ ಹೆಸರು 'ಮ್ಯಾಗ್ನಂ ತುಳುನಾಡು ಪಂಚಾಂಗ'. ಮಂಗಳೂರು ಮೂಲದ'ಮ್ಯಾಗ್ನಂ ಇಂಟರ್ ಗ್ರಾಫಿಕ್ಸ್ ಪ್ರೈವೇಟ್ ಲಿಮಿಟೆಡ್' ಸಂಸ್ಥೆ ಇದನ್ನು ಪ್ರಕಟಿಸುತ್ತಿದೆ.

ಕೇರಳದ ಕಾಸರಗೋಡಿನಿಂದ ಹಿಡಿದು ಕರಾವಳಿ ಕರ್ನಾಟಕದುದ್ದಕ್ಕೂ ಹರಡಿರುವ ತುಳುನಾಡಿನ ಸಂಸ್ಕೃತಿಯ ವಿವಿಧ ಮುಖಗಳನ್ನು ಸಮಸ್ತರಿಗೂ ಪರಿಚಯಿಸುವುದು ಈ ಕ್ಯಾಲೆಂಡರಿನ ಉದ್ದೇಶ. ಹಾಗಾಗಿ ಪ್ರತಿವರ್ಷವೂ ಒಂದೊಂದು ಹೊಸ ವಿಷಯದೊಂದಿಗೆ ಈ ಕ್ಯಾಲೆಂಡರ್ ಪ್ರಕಟಿಸುತ್ತಿದ್ದೇವೆ ಎನ್ನುತ್ತಾರೆ ಮ್ಯಾಗ್ನಂ ಮುಖ್ಯಸ್ಥ ಗೌತಮ್ ಘಾಟೆ.

2004ರಲ್ಲಿ 'ತುಳುನಾಡು ಪಂಚಾಂಗ' ಮೊತ್ತ ಮೊದಲಿಗೆ ಬೆಳಕು ಕಂಡಿತು. ಇದರಲ್ಲಿ ತುಳುನಾಡಿನ ಗಣಪತಿ ದೇವಾಲಯಗಳ ಚಿತ್ರಗಳನ್ನು ದಾಖಲಿಸಲಾಯಿತು. ಆಮೇಲೆ 2005ರಲ್ಲಿ ತುಳುನಾಡಿನ ವಿವಿಧ ದೇವಿಯರ ಚಿತ್ರಗಳು, 2006ರಲ್ಲಿ ತುಳುನಾಡಿನ ವಿವಿಧ ದೇವಾಲಯಗಳು, 2007ರಲ್ಲಿ ತುಳುವರ ನಾಗದೇವರುಗಳು- ನಾಗಮಂಡಲ- ನಾಗಶಿಲೆಗಳನ್ನು'ತುಳುನಾಡು ಪಂಚಾಂಗ' ದಾಖಲಿಸಿತು.

ಇದೀಗ 2008ರ 'ತುಳುನಾಡು ಪಂಚಾಂಗ' ತುಳುನಾಡಿನ ಪ್ರಮುಖ ನೃತ್ಯ ನಾಟಕ ಪ್ರಕಾರವಾದ ಯಕ್ಷಗಾನದಲ್ಲಿ ದೇವರುಗಳ ಪಾತ್ರ ಹೇಗಿರುತ್ತದೆ ಎಂಬುದನ್ನು ಪರಿಚಯಿಸಿದೆ.

ದಕ್ಷಿಣ ಕರಾವಳಿಯ ಯಕ್ಷಗಾನ ಪ್ರಭೇದ 'ತೆಂಕು ತಿಟ್ಟಿ'ನ ಪ್ರಸಂಗಗಳಲ್ಲಿ ಬರುವ ದೇವರ ವೇಷಭೂಷಣ, ಮುಖವರ್ಣಿಕೆಗಳು ಇಲ್ಲಿವೆ. ಶ್ರೀದೇವಿ, ನರಸಿಂಹ, ಈಶ್ವರ, ಶ್ರೀರಾಮ, ವೀರಭದ್ರ, ಅರ್ಧನಾರೀಶ್ವರ, ನಾಗರಾಜ, ಶ್ರೀಕೃಷ್ಣ, ಹನುಮಂತ, ಭೂ ವರಾಹ, ಶನೀಶ್ವರ, ಗರುಡ ವೇಷಗಳ ಮೋಹಕ ಚಿತ್ರಗಳು ಕಣ್ಸೆಳೆಯುತ್ತವೆ.

ಈ ಕ್ಯಾಲೆಂಡರಿನಲ್ಲಿ ತುಳುನಾಡಿಗೆ ಸಂಬಂಧಿಸಿದ ಹಬ್ಬ ಹರಿದಿನ, ಜಾತ್ರೆ, ಕೋಲ, ಕಂಬಳ ಇತ್ಯಾದಿ ವಿಶೇಷ ದಿನಗಳ ವಿವರ ಉಂಟು. ಅವುಗಳನ್ನು ತುಳು ಭಾಷೆಯಲ್ಲಿಯೇ ನೀಡಿರುವುದು ತುಳುವರನ್ನು ಆಕರ್ಷಿಸುತ್ತಿದೆ.

ತುಳುನಾಡು ಪಂಚಾಂಗಕ್ಕೆ ವರ್ಷದಿಂದ ವರ್ಷಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕರ್ನಾಟಕದ ಪಶ್ಚಿಮ ಕರಾವಳಿ, ಕೇರಳದ ಕಾಸರಗೋಡು ಜಿಲ್ಲೆ, ತುಳುವರು ಬಹು ಸಂಖ್ಯೆಯಲ್ಲಿ ಇರುವ ಮುಂಬೈ, ಬೆಂಗಳೂರು ಮಹಾನಗರಗಳಲ್ಲೂ ಕ್ಯಾಲೆಂಡರ್ ಜನಪ್ರಿಯವಾಗಿದೆ ಎನ್ನುತ್ತಾರೆ ಗೌತಮ್ ಘಾಟೆ.

ಸಂಗ್ರಹ ಯೋಗ್ಯ ಪಂಚಾಂಗವನ್ನು ಬಯಸುವವರು (080) 22380793/ 22380794 ನಂಬರುಗಳನ್ನು ಸಂಪರ್ಕಿಸಬಹುದು ಎನ್ನುತ್ತಾರೆ ಗೌತಮ್.

3 comments:

Unknown said...

hi, am sudhir shetty. i would like to know where do i get this tulu panchaga. pls let me know. my email id is sksin74@gmail.com

Deepak Devadiga said...

hi, MY NAME IS DEEPAK DEVADIGA i would like to know download this panchanga pls let me know. my email id is deepak.devadiga@gmail.com

Deepak Devadiga said...

hi, MY NAME IS DEEPAK DEVADIGA i would like to know download this panchanga pls let me know. my email id is deepak.devadiga@gmail.com

Advertisement