Monday, November 4, 2019

ದೆಹಲಿಯಲ್ಲಿ ವಾಯು ಗುಣ ಮಟ್ಟ ಸ್ಥಿತಿ ಗಂಭೀರ: ೩೭ ವಿಮಾನಗಳ ಮಾರ್ಗ ಬದಲು

ದೆಹಲಿಯಲ್ಲಿ ವಾಯು ಗುಣ ಮಟ್ಟ ಸ್ಥಿತಿ ಗಂಭೀರ: ೩೭ ವಿಮಾನಗಳ ಮಾರ್ಗ ಬದಲು
ನವದೆಹಲಿ: ಕೆಲವು ದಿನಗಳಿಂದ ರಾಷ್ಟ್ರ ರಾಜಧಾನಿಯನ್ನು ಕಾಡುತ್ತಿರುವ ವಾಯುಮಾಲಿನ್ಯ ಸ್ಥಿತಿ 2019 ನವೆಂಬರ್ 3ರ ಭಾನುವಾರ ಗಂಭೀರ ಮಟ್ಟಕ್ಕೆ ಹೋಗಿದ್ದು, ಅತಿಯಾದ ಹೊಗೆ, ದೂಳಿನ ಮಬ್ಬು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ೩೭ ವಿಮಾನಗಳ ಮಾರ್ಗಗಳನ್ನು ಬದಲಾಯಿಸಲಾಯಿತು. ರಾಜಧಾನಿಯ ಹಾನಿಕಾರ ಅಂಶಗಳ ಪ್ರಮಾಣ ವಾತಾವರಣದಲ್ಲಿ ಹೆಚ್ಚಿದ್ದರಿಂದ ಗಾಳಿಯಲ್ಲಿನ ಆಮ್ಲಜನಕದ ಪ್ರಮಾಣ ತಗ್ಗಿದ್ದು, ಉಸಿರಾಟಕ್ಕೆ ಕಷ್ಟಕರವಾಗುವ ಭೀತಿ ಉದ್ಭವವಾಯಿತು.
ದಟ್ಟ ಹೊಗೆಯಿಂದಾಗಿ ಅಂದಾಜು ೩೭ ವಿಮಾನಗಳ ಹಾರಾಟ ಮಾರ್ಗವನ್ನು ಬದಲಿಸಲಾಗಿದೆ ಎಂದು ದೆಹಲಿ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದರು. ನಗರದ ಹಲವು ಭಾಗಗಳಲ್ಲಿ ಹೊಗೆಯ ಪದರ ಆವರಿಸಿಕೊಂಡು, ಏನೂ ಕಾಣದಂತಹ ಸ್ಥಿತಿ ನಿರ್ಮಾಣಗೊಂಡಿತು.
ಈದಿನ  ಮಧ್ಯಾಹ್ನದ ವೇಳೆಗೆ ದೆಹಲಿಯ ಹಲವು ಪ್ರದೇಶಗಳಲ್ಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್ ಸಿಆರ್) ಮಾಲಿನ್ಯ ಸ್ಥಿತಿ ಸೂಚ್ಯಂಕವು ೧೬೦೦ ಅಂಕಗಳನ್ನು ದಾಟಿದ್ದು ಇದು ಗಂಭೀರ ಅಪಾಯದ ಸೂಚನೆಯಾಗಿದೆ ಎಂದು ವರದಿಗಳು ಹೇಳಿದವು.
ಜಹಾಂಗೀರಪುರಿಯಲ್ಲಿ ವಾಯು ಗುಣಮಟ್ಟ ಮಾಪನದಲ್ಲಿ ಸೂಚ್ಯಂಕವು ೧೬೯೦, ದೆಹಲಿ ವಿಮಾನ ನಿಲ್ದಾಣ ಪ್ರದೇಶದಲ್ಲಿ ೧೧೨೦, ಗುಡಗಾಂವ್ನಲ್ಲಿ  ೯೯೦ ಮತ್ತು ನೋಯ್ಡಾದಲ್ಲಿ ೧೯೭೪ ಅಂಕಗಳು ದಾಖಲಾದವು.
ದೀಪಾವಳಿ ಆಚರಣೆಯ ಬಳಿಕ ದೆಹಲಿ ನಗರ ಪರಿಸರದಲ್ಲಿ ವಾಯು ಗುಣಮಟ್ಟ ಪಾತಾಳಕ್ಕೆ ಇಳಿದಿದೆ. ಇದು ಕಳೆದ ಐದು ವರ್ಷಗಳಲ್ಲೇ ಅತೀ ಕಳಪೆ ಗುಣಮಟ್ಟವಾಗಿದೆ. ವಿಚಾರದಲ್ಲಿ ಕೇಂದ್ರ ಸರ್ಕಾರ ತತ್ ಕ್ಷಣವೇ ಮಧ್ಯಪ್ರವೇಶಿಸಬೇಕು ಎಂದು  ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.

ಇತರ ರಾಜ್ಯಗಳ ಕೊಯ್ದ ಪೈರಿನ ಕೂಳೆ ಸುಡುವುದರಿಂದ ದೆಹಲಿಯ ಹವಾಮಾನ ಸ್ಥಿತಿ ಹದಗೆಡುತ್ತಿದೆ. ದೂರುವ ಆಟ ಆಡಲು ನನಗೆ ಇಷ್ಟವಿಲ್ಲ, ಆದರೆ ಪರಿಸ್ಥಿತಿ ವಿಷಮಿಸುತ್ತಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ವಾಯು ಗುಣಮಟ್ಟ ಸುಧಾರಣೆಗೆ ಕೇಂದ್ರ ಸರ್ಕಾರ ಯಾವ ಕ್ರಮ ಕೈಗೊಂಡರೂ ರಾಜ್ಯ ಸರ್ಕಾರ ಬೆಂಬಲಿಸಲಿದೆ ಎಂದೂ ಕೇಜ್ರಿವಾಲ್ ನುಡಿದರು.

ನಿಷೇಧದ ಹೊರತಾಗಿಯೂ ನಿರ್ಮಾಣ ಚಟುವಟಿಕೆಗಳನ್ನು ನಡೆಸಿದ್ದಕ್ಕಾಗಿ ೩೮ ಜನರನ್ನು ಅಧಿಕಾರಿಗಳು ಬಂಧಿಸಿದ ಒಂದು ದಿನದ ನಂತರ, ರಾಷ್ಟ್ರ ರಾಜಧಾನಿಯಲ್ಲಿನ ವಾಯುಗುಣಮಟ್ಟ ಸೂಚ್ಯಂಕವು (ಎಕ್ಯೂಐ) ೧೮ಕ್ಕೂ ಹೆಚ್ಚಿನ ಕಡೆಗಳಲ್ಲಿ ಬೆಳಗ್ಗೆಯೇ ೯೯೯ ಅಂಕಗಳನ್ನು ದಾಟುವುದರೊಂದಿಗೆ ರಾಷ್ಟ್ರೀಯ ರಾಜಧಾನಿ ಪ್ರದೇಶದ ವಾಯುಮಾಲಿನ್ಯ  ಇನ್ನಷ್ಟು ಹದಗೆಟ್ಟಿತ್ತು.

ಸರ್ಕಾರೀ ವಾಯುಗುಣಮಟ್ಟದ ನಿಗಾ ಕೇಂದ್ರದ ಪ್ರಕಾರ, ಬವಾನಾದಲ್ಲಿನ ವಾಯುಗುಣಮಟ್ಟ ಸೂಚ್ಯಂಕ (ಎಕ್ಯೂಐ) ೯೯೯ ಕ್ಕೆ ಮುಟ್ಟಿದ್ದು,  ಜಹಾಂಗೀರಪುರಿ, ರೋಹಿಣಿ, ಸೋನಿಯಾ ವಿಹಾರ್, ಶಹದಾರಾ, ಓಖ್ಲಾ, ಮೇಜರ್ಧ್ಯಾನ್ಚಂದ್ಕ್ರೀಡಾಂಗಣ, ಆನಂದ್ ವಿಹಾರ್, ಪಂಜಾಬಿ ಬಾಗ್, ಪೂಸಾ, ಮಂದಿರ ಮಾರ್ಗ, ಮುಂಡ್ಕಾ, , ಶ್ರೀನಿವಾಸಪುರಿ ಮತ್ತು ಜೆಎನ್ಯು ಮತ್ತಿತರ ಸ್ಥಳಗಳಲ್ಲಿ ಕೂಡಾ ೯೦೦ರ ಗಡಿ ದಾಟಿತು.
ದೆಹಲಿಯ ಮಾಲಿನ್ಯದಲ್ಲಿ ಕೊಯ್ದ ಪೈರಿನ ಕೂಳೆಯ ಮಾಲಿನ್ಯದ ಪಾಲು ಶುಕ್ರವಾರ ಗರಿಷ್ಠ ಶೇಕಡಾ ೪೪ರಷ್ಟು ಇದ್ದುದು ಶನಿವಾರ ಶೇಕಡಾ ೧೭ ಕ್ಕೆ ಇಳಿದಿದೆ ಎಂದು ಸರ್ಕಾರ ಪ್ರತಿಪಾದಿಸಿದ್ದರೂ,  ವಾಯು ಗುಣಮಟ್ಟದಲ್ಲಿ ಸುಧಾರಣೆ ಕಂಡು ಬರಲಿಲ್ಲ.
ಗಾಳಿಯ ವೇಗದಲ್ಲಿ ಗಮನಾರ್ಹ ಸುಧಾರಣೆ ಇದೆ ಮತ್ತು ಅದು ಕ್ರಮೇಣ ಹೆಚ್ಚಾಗುತ್ತದೆ ಎಂದು ಹವಾಮಾನತಜ್ಞರು ಹೇಳಿದರು. ಭಾನುವಾರದಿಂದ ಮಂಗಳವಾರದವರೆಗೆ ಪ್ರದೇಶದಲ್ಲಿ ಗಂಟೆಗೆ ೨೦-೨೫ ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಅವರು ಹೇಳಿದರು. ಗಾಳಿಯ ವೇಗ ಹೆಚ್ಚಿದಷ್ಟೂ ಪರಿಸ್ಥಿತಿ ಸುಧಾರಿಸುವ ಆಶಯ ಇದೆ.

ಮಹಾಚಂಡಮಾರುತದ ಪರಿಣಾಮವಾಗಿ  ನವೆಂಬರ್ ಮತ್ತು ನವೆಂಬರ್ ರಂದು ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ದೆಹಲಿಯಲ್ಲಿ ಚದುರಿದಂತೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಕಚೇರಿ ತಿಳಿಸಿತು. ಮಳೆಯು ಎಷ್ಟೇ ಹಗುರವಾದರೂ, ಕೊಯ್ದ ಪೈರಿನ ಕೂಳೆ ಸುಡುವಿಕೆಯ ಪರಿಣಾಮವನ್ನು ಕಡಿಮೆ ಮಾಡುವ ದೃಷ್ಟಿಯಿಂದ ಮಹತ್ವದ್ದಾಗಿರುತ್ತದೆ ಮತ್ತು ಮಾಲಿನ್ಯಕಾರಕಗಳನ್ನು ತೊಳೆಯುತ್ತದೆ ಎಂದು ಹವಾಮಾನ ಕಚೇರಿ ಹೇಳಿತು.
ವಿಷಕಾರಿ ಮಬ್ಬು ಪರೀಕ್ಷಿಸಲು ವಿಫಲವಾದ ಬಗ್ಗೆ ಪರಸ್ಪರ ಆಪಾದನೆ ಆಟ ಮುಂದುವರೆದಿದ್ದರೂ, ದೆಹಲಿ, ಪಂಜಾಬ್ ಮತ್ತು ಹರಿಯಾಣದ ಮುಖ್ಯಮಂತ್ರಿಗಳು ಹಿಂದಿನ ದಿನ ಸಮಸ್ಯೆಗೆ "ಶಾಶ್ವತ" ಪರಿಹಾರಕ್ಕಾಗಿ ಜಂಟಿಯೋಜನೆಯನ್ನು ಸಿದ್ಧ ಪಡಿಸಿ ಜಾರಿಗೆ ತರಲು ಕೇಂದ್ರದ ತುರ್ತು ಮಧ್ಯಪ್ರವೇಶಕ್ಕೆ ಆಗ್ರಹಿಸಿದ್ದರು.

ಸೆಪ್ಟೆಂಬರ್ ೧೨, ಅಕ್ಟೋಬರ್ ೧೭ ಮತ್ತು ಅಕ್ಟೋಬರ್ ೧೯ ರಂದು ಕೇಂದ್ರ ಪರಿಸರ ಸಚಿವ ಪ್ರಕಾಶ ಜಾವಡೇಕರ್ಅವರು ರಾಜ್ಯ ಪರಿಸರ ಸಚಿವರ ಜೊತೆಗಿನ ಸಭೆಗಳನ್ನು ಮೂರು ಬಾರಿ ಮುಂದೂಡಿದ್ದಾರೆ ಎಂದು ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಆಪಾದಿಸಿದರು. ಕೇಂದ್ರ ಸಚಿವರಿಗೆ ರಾಷ್ಟ್ರ ರಾಜಧಾನಿಯ ಕಳಪೆ ಗಾಳಿಯ ಗುಣಮಟ್ಟವನ್ನು ಪರಿಗಣಿಸಲು ಸಮಯವಿಲ್ಲ ಅಥವಾ ಅಥವಾ ಅದು ಆದ್ಯತೆಯ ವಿಷಯವಾಗಿಲ್ಲ ಎಂದು ಸಿಸೋಡಿಯಾ ದೂರಿದರು.

ಎರಡು ವರ್ಷಗಳಲ್ಲಿ ಕೊಯ್ದ ಪೈರಿನ ಕೂಳೆ ಸುಡುವುದನ್ನು ನಿಲ್ಲಿಸಲು ಕೇಂದ್ರವು ಎರಡು ವರ್ಷಗಳಲ್ಲಿ ಕೇವಲ ೬೩,೦೦೦ ಯಂತ್ರಗಳನ್ನು ಒದಗಿಸಿದೆ. ಇದು ಹೀಗೆಯೇ ಮುಂದುವರೆದರೆ ಕೂಳೆ ಸುಡುವುದನ್ನು ನಿಲ್ಲಿಸಲು ೫೦-೬೦ ವರ್ಷಗಳು ಬೇಕಾಗಬಹುದು. ಅವಧಿಯಲ್ಲಿ "ದೆಹಲಿ-ಎನ್ ಸಿಆರ್ ಏನು ಮಾಡಬೇಕು" ಎಂದು ಸಿಸೋಡಿಯಾ ಪ್ರಶ್ನಿಸಿದರು.

ಇತ್ತೀಚಿನ ದಿನಗಳಲ್ಲಿ ಪಂಜಾಬಿನಲ್ಲಿ ೨೨,೦೦೦ ಮತ್ತು ಹರಿಯಾಣದಲ್ಲಿ ,೨೦೦ ಕ್ಕೂ  ಕೂಳೆ ಸುಟ್ಟ ಪ್ರಕರಣಗಳು ವರದಿಯಾಗಿವೆ ಎಂದು ಎಂದು ಅಧಿಕಾರಿಗಳು ತಿಳಿಸಿದರು.

ನಿಷೇಧದ ಹೊರತಾಗಿಯೂ ನಿರ್ಮಾಣ ಚಟುವಟಿಕೆಗಳನ್ನು ನಡೆಸಿದ್ದಕ್ಕಾಗಿ ಅಧಿಕಾರಿಗಳು ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದ ಐದು ರಿಯಲ್ಎಸ್ಟೇಟ್ ಸಂಸ್ಥೆಗಳ ನಿರ್ದೇಶಕರು ಮತ್ತು ಮೂವರು ಎಂಜಿನಿಯರ್ಗಳು ಸೇರಿದಂತೆ ೩೮ ಜನರನ್ನು ಬಂಧಿಸಿದ್ದಾರೆ.

ನವೆಂಬರ್ 1ರ ಶುಕ್ರವಾರ, ಸುಪ್ರೀಂಕೋರ್ಟ್ ಆದೇಶದ ಮೇರೆಗೆ ರಚನೆಗೊಂಡಿರುವ ಪರಿಸರ ಮಾಲಿನ್ಯ (ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಪ್ರಾಧಿಕಾರವು ದೆಹಲಿಯಲ್ಲಿ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯನ್ನು ಘೋಷಿಸಿ, ನವೆಂಬರ್ ೫ರವರೆಗೆ ಎಲ್ಲ ನಿರ್ಮಾಣ ಚಟುವಟಿಕೆಗಳನ್ನೂ ನಿಷೇಧಿಸಿತ್ತು. ಬೆನ್ನಲ್ಲೇ ದೆಹಲಿ ಸರ್ಕಾರವು ಎಲ್ಲಾ ಶಾಲೆಗಳನ್ನು ಕೂಡಾ ನವೆಂಬರ್ ೫ರವರೆಗೆ ಮುಚ್ಚಲು ನಿರ್ಧರಿಸಿತು.

ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದಲ್ಲಿ ೧೨ನೇ ತರಗತಿಯವರೆಗಿನ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳನ್ನು ಸಹ ನವೆಂಬರ್ ರವರೆಗೆ ಮುಚ್ಚಲಾಗಿದೆ.

ದೀಪಾವಳಿಯ ನಂತರ ಗಾಳಿಯಲ್ಲಿ . ಮತ್ತು ೧೦ ಗಾತ್ರದ ಹಾನಿಕಾರಕ ಪರ್ಟಿಕ್ಯುಲೇಟ್ ಮ್ಯಾಟರ್(ಕಣ್ಣಿಗೆ ಕಾಣದ ಸೂಕ್ಷ್ಮ ಕಣಗಳು) ವಿಪರೀತವಾಗಿ ಹೆಚ್ಚಿದ್ದನ್ನು ಅನುಸರಿಸಿ ಗೌತಮ್ ಬುದ್ಧ ನಗರ ಆಡಳಿತವು ನೋಯ್ಡಾ ಮತ್ತು  ಗ್ರೇಟರ್ ನೋಯ್ಡಾದ ಸರ್ಕಾರಿ ಮತ್ತು ಖಾಸಗಿ ಶಾಲೆಗಳನ್ನು ಮುಚ್ಚುವ ನಿರ್ಧಾರ ಕೈಗೊಂಡಿತು.
ಬಹಳಷ್ಟು ಶಾಲೆಗಳು ಬಳಸುವ ಮಕ್ಕಳನ್ನು ಒಯ್ಯುವ ಬಸ್ಸುಗಳು ಮತ್ತು ಮಿನಿ ಬಸ್ಸುಗಳು ಹಾನಿಕಕಾರಕ ಪರ್ಟಿಕ್ಯುಲೇಟ್ ಮ್ಯಾಟರ್ ಗಾಳಿಯಲ್ಲಿ ಅತಿಯಾಗಿ ಸೇರಲು ಕಾರಣವಾಗಿವೆ ಎಂದು ಎಂದು ಗೌತಮ್ ನಗರದ ಜಿಲ್ಲಾಧಿಕಾರಿ ನುಡಿದರು.

ಈದಿನ  ಬೆಳಿಗ್ಗೆ ೧೦.೩೫ ಕ್ಕೆ, ನೋಯ್ಡಾದ ವಾಯುಗುಣಮಟ್ಟ ಸೂಚ್ಯಂಕ (ಎಕ್ಯೂಐ) ೪೮೭ ಆಗಿದ್ದರೆ, ಗ್ರೇಟರ್ ನೋಯ್ಡಾ ೪೭೦ ಆಗಿದ್ದು, ಎರಡೂ "ತೀವ್ರ" ವಿಭಾಗದಲ್ಲಿವೆ, ಅಂದರೆ ಇದು ಆರೋಗ್ಯವಂತ ಜನರ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅಸ್ತಿತ್ವದಲ್ಲಿರುವ ರೋಗಗಳು ತೀವ್ರಗೊಳ್ಳುವಂತೆ ಮಾಡುತ್ತದೆ.

ರಾಜಧಾನಿಯಲ್ಲಿ ಸಮ-ಬೆಸ ವಾಹನ ಸಂಚಾರ ನವೆಂಬರ್ ರಿಂದ ಪ್ರಾರಂಭವಾಗಲಿದ್ದು, ಖಾಸಗಿ ಸಿಎನ್ಜಿ ವಾಹನಗಳಿಗೂ  ಬಾರಿ ವಿನಾಯಿತಿ ನೀಡಿಲ್ಲ. ಓಲಾ ಮತ್ತು ಉಬರ್ ಕ್ಯಾಬ್ಗಳು ಸಮ-ಬೆಸ ವಾಹನ ಸಂಚಾರದ ೧೨ ದಿನಗಳ ಅವಧಿಯಲ್ಲಿನ ಬೆಲೆ ಹೆಚ್ಚಳವನ್ನು ಸ್ಥಗಿತಗೊಳಿಸಿವೆ. ನೋಂದಣಿಯಾಗಿರುವ ಒಟ್ಟು ವಾಹನಗಳಲ್ಲಿ ಶೇಕಡಾ ೮೮ ರಷ್ಟು ದ್ವಿಚಕ್ರ ವಾಹನಗಳಿಗೆ ವಿನಾಯಿತಿ ನೀಡಲಾಗಿದೆ.

-೫೦ ನಡುವಿನ ಎಕ್ಯೂಐ ಮಟ್ಟವನ್ನುಉತ್ತಮ , ೫೧-೧೦೦ತೃಪ್ತಿದಾಯಕ, ೧೦೧-೨೦೦ಮಧ್ಯಮ, ೨೦೧-೩೦೦ಬಡ೩೦೧-೪೦೦ ’"ತುಂಬಾ ಕಳಮತ್ತು ೪೦೧-೫೦೦ ಮಟ್ಟವನ್ನುತೀವ್ರ  ಎಂದು ಪರಿಗಣಿಸಲಾಗುತ್ತದೆ. ೫೦೦ ಕ್ಕಿಂತ ಹೆಚ್ಚಿನ ಎಕ್ಯೂಐ ಮಟ್ಟವನ್ನುತುರ್ತುಎಂಬುದಾಗಿ ಪರಿಗಣಿಸಲಾಗುತ್ತದೆ.

No comments:

Advertisement