Saturday, November 23, 2019

ಕ್ಯಾನ್ಸರ್ ಕೋಶಗಳ ಬೆಳವಣಿಗೆ ತಡೆ ಒಡ್ಡಬಲ್ಲ ಸಾಧನ

ಕ್ಯಾನ್ಸರ್ ಕೋಶಗಳ ಬೆಳವಣಿಗೆ ತಡೆ ಒಡ್ಡಬಲ್ಲ ಸಾಧನ
ಬೆಂಗಳೂರಿನ ವೈದ್ಯಕೀಯ ಎಂಜಿನಿಯರ್  ಆವಿಷ್ಕಾರಕ್ಕೆ ಅಮೆರಿಕ ಮಾನ್ಯತೆ
ಬೆಂಗಳೂರು: ಬೆಂಗಳೂರು ಮೂಲದ ವೈದ್ಯಕೀಯ ಎಂಜಿನಿಯರ್ ಒಬ್ಬರು ಆವಿಷ್ಕರಿಸಿದಸೈಟೋಟ್ರಾನ್ಹೆಸರಿನ ಸಾಧನವನ್ನು ಅಮೆರಿಕದ ಅಮೆರಿಕದ ಆಹಾರ ಮತ್ತು ಔಷಧs ಆಡಳಿತ ಇಲಾಖೆಯು ಮೆಚ್ಚಿಕೊಂಡಿದ್ದು, ಸಂಶೋಧನೆಯನ್ನುಮಹತ್ವದ ತಿರುವುಎಂಬುದಾಗಿ ಬಣ್ಣಿಸಿತು.

ಖಾಸಗಿ ಸಂಶೋಧನಾ ಸಂಸ್ಥೆಯಲ್ಲಿ ಅಭಿವೃದ್ಧಿ ಪಡಿಸಲಾಗಿರುವ ಸೈಟೋಟ್ರಾನ್ಸಾಧನಕ್ಕೆ ಪೇಟೆಂಟ್ ಪಡೆಯಲಾಗಿದ್ದು, ಇದು ಕ್ಯಾನ್ಸರ್ ಕೋಶಗಳ ವೃದ್ಧಿಯನ್ನು ತಡೆಯುವ ಸಾಮರ್ಥ್ಯವನ್ನು ತೋರಿಸಿದೆ. ಬಳಿಕ ಸಾಧನದ ಆವಿಷ್ಕಾರವನ್ನು ಮಹತ್ವದ ತಿರುವು ಎಂಬುದಾಗಿ ಪರಿಗಣಿಸಲಾಗಿದೆ ಎಂದು ಸುದ್ದಿ ಸಂಸ್ಥೆಯೊಂದು  2019 ನವೆಂಬರ್ 22ರ ಶುಕ್ರವಾರ ವರದಿ ಮಾಡಿತು.

ಸಾಧನವು ಕ್ಯಾನ್ಸರ್ ಕೋಶಗಳ ವೃದ್ಧಿಯನ್ನು ತಡೆಯುತ್ತದೆ ಮತ್ತು ಮುಂದಿನ ಚಿಕಿತ್ಸೆಯಲ್ಲಿ ಅವುಗಳನ್ನು ಕೊಬ್ಬಿನ ಕೋಶಗಳಾಗಿ ಪರಿವರ್ತಿಸುತ್ತದೆ ಎಂದು ಡಿ ಸ್ಕಲೀನ್ ಸಂಸ್ಥೆಯ ಅಧ್ಯಕ್ಷ ಡಾ.ರಾಜಾ ವಿಜಯ ಕುಮಾರ್ ಹೇಳಿದರು.  ಡಾ. ರಾಜಾ ವಿಜಯ ಕುಮಾರ್ ಅವರ  ಮುಂದುವರೆದ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದಲ್ಲಿ (ಸೆಂಟರ್ ಫಾರ್ ಅಡ್ವಾನ್ಸ್ಡ್ ರಿಸರ್ಚ್ ಅಂಡ್ ಡೆವಲಪ್ಮೆಂಟ್) ಈ ಸಾಧನವನ್ನು ವಿನ್ಯಾಸಗೊಳಿಸಲಾಗಿದೆ.

ಸಾಧನವು ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ನೀಡುವ ವಿಧಾನವನ್ನು ಬದಲಾಯಿಸಬಹುದು ಎಂದು ಹೇಳಿರುವ ಡಾ. ರಾಜಾ ವಿಜಯ್ ಕುಮಾರ್ಮುಂದಿನ ಜನವರಿ ವೇಳೆಗೆ ಸಾಧನವು ಭಾರತದ ಆಸ್ಪತ್ರೆಗಳಲ್ಲಿ  ಬಳಕೆಗೆ ಲಭ್ಯವಾಗಬಹುದುಎಂದು ಸುದ್ದಿ ಸಂಸ್ಥೆಗೆ ತಿಳಿಸಿದರು.

" ಸಾಧನವು ಅಯಸ್ಕಾಂತೀಯ ಅನುರಣನ (ಮ್ಯಾಗ್ನೆಟಿಕ್ ರಿಸೋನೆನ್ಸ್) ಬಳಕೆಯ ಮೂಲಕ ಜೀವಕೋಶಗಳು ಮತ್ತು ಅಂಗಾಂಶಗಳು ಕಾರ್ಯನಿರ್ವಹಿಸುವ ವಿಧಾನವನ್ನು ಬದಲಾಯಿಸುತ್ತದೆ.

ನಮ್ಮ
ದೇಹದ ಯಾವುದೇ ಕೋಶವು ಒಂದು ಜೀವಿತಾವಧಿಯಲ್ಲಿ ೫೦ ಬಾರಿ ವಿಭಜಿಸಲ್ಪಡುತ್ತದೆ, ಮತ್ತು ೫೦ ವಿಭಜನೆಗಳ ಬಳಿಕ, ವಿಭಜನೆ ಪ್ರಕ್ರಿಯೆ ಸ್ಥಗಿತಗೊಳ್ಳುತ್ತದೆ. ದುರದೃಷ್ಟವಶಾತ್ ಕ್ಯಾನ್ಸರ್ ಗೆಡ್ಡೆಯ ಕೋಶಗಳ ವಿಭಜನೆ ರೀತಿ ಸ್ಥಗಿತಗೊಳ್ಳುವುದಿಲ್ಲ.  ನಾವು ಸಾಧನದ ಮೂಲಕ ಕೃತಕವಾಗಿತಡೆಸಂಕೇತವನ್ನು ಪ್ರಚೋದಿಸುತ್ತೇವೆ ಮತ್ತು ನಿರ್ದಿಷ್ಟ ಪಿ -೫೩ ಪ್ರೋಟೀನ್ ಅನಿಯಂತ್ರಿತವಾಗುವಂತೆ ಮಾಡುತ್ತೇವೆ. ಪ್ರೊಟೀನ್ ಅನಿಯಂತ್ರಿತವಾಗುತ್ತಿದ್ದಂತೆಯೇ ಕ್ಯಾನ್ಸರ್ ಮತ್ತಷ್ಟು ಬೆಳೆಯುವುದನ್ನು ನಿಲ್ಲಿಸುತ್ತದೆ "ಎಂದು ಡಾ ಕುಮಾರ್ ಹೇಳಿದರು.

೩೦ ವರ್ಷಗಳ ಸಂಶೋಧನೆಯ ಮೂಲಕ ಅಭಿವೃದ್ಧಿಪಡಿಸಲಾಗಿರುವ ಸಾಧನವು ಎಂಆರ್ ಸ್ಕ್ಯಾನರ್ (ಮ್ಯಾಗ್ನೆಟಿಕ್ ರಿಸೋನೆನ್ಸ್ ಇಮೇಜಿಂಗ್) ಯಂತ್ರದಂತೆ ಕಾಣುತ್ತದೆ, ಆದರೆ ಆವರ್ತಕ ಕ್ಷೇತ್ರ ಕ್ವಾಂಟಮ್ ನ್ಯೂಕ್ಲಿಯರ್ ಮ್ಯಾಗ್ನೆಟಿಕ್ ರೆಸೋನೆನ್ಸ್ (ರೊಟೇಷನಲ್ ಫೀಲ್ಡ್ ಕ್ವಾಂಟಮ್ ನ್ಯೂಕ್ಲಿಯರ್ ಮ್ಯಾಗ್ನೆಟಿಕ್ ರೆಸೋನೆನ್ಸ್) ಎಂಬ ತಂತ್ರಜ್ಞಾನವನ್ನು ಬಳಸುತ್ತದೆ. ತನ್ಮೂಲಕ ವೃತ್ತಾಕಾರವಾಗಿ ಧ್ರುವೀಕರಿಸಲ್ಪಟ್ಟ ರೇಡಿಯೊ ಫ್ರೀಕ್ವೆನ್ಸಿ ಪರಿಕರಗಳು ಮತ್ತು ಉದ್ದೇಶಿತವೇಗದ-ರೇಡಿಯೋ-ಸ್ಫೋಟಗಳನ್ನುನೀಡುತ್ತದೆ  ಹಾಗೂ ವಿವಿಧ ಅಂಗಾಂಶಗಳ ಸಂಯೋಜನೆಯನ್ನು ರೂಪಿಸಲು ಸಹಾಯ ಮಾಡುತ್ತದೆ. ಅಂಗಾಂಶಗಳ ಪ್ರೊಟೀನ್ಗಳು ಮತ್ತು ಇತರ ಘಟಕಗಳ ಮೇಲೆ ಕಾರ್ಯ ನಿರ್ವಹಿಸುವುದರಿಂದ,  ರೋಗಿಯ ಅಗತ್ಯಕ್ಕೆ ಅನುಗುಣವಾಗಿ ಕೋಶಗಳ ಚಟುವಟಿಕೆಯನ್ನು ಸುಧಾರಿಸಲು ಅಥವಾ ಅವುಗಳ ಚಟುವಟಿಕೆಯನ್ನು ನಿಲ್ಲಿಸಲು ಸಾಧನವು ವೈದ್ಯರಿಗೆ ನೆರವಾಗುತ್ತದೆ.

ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯಲು ಅಥವಾ ಚಟುವಟಿಕೆಯನ್ನು ಹೆಚ್ಚಿಸಲು ಮತ್ತು ಅಸ್ಥಿಸಂಧಿವಾತ ಅಥವಾ ಬೆನ್ನುಮೂಳೆಯ ಕಾಯಿಲೆಗಳ ರೋಗಿಗಳಿಗೆ ಕೆಲವು ಜೀವಕೋಶಗಳು ಮತ್ತು ಮೃದ್ವಸ್ಥಿಗಳ (ಮೃದು ಎಲುಬು)  ಮರುಬೆಳವಣಿಗೆ ಗೆ ವೈದ್ಯರು ಬಯಸಿದರೆ, ಅದಕ್ಕೆ ಅನುಗುಣವಾಗಿ ಸಾಧನವನ್ನು ಪ್ರೋಗ್ರಾಮ್ ಮಾಡಲಾಗುತ್ತದೆ. ಚಿಕಿತ್ಸೆಯನ್ನು ೨೮ ನಿರಂತರ ದಿನಗಳ ಅವಧಿಯಲ್ಲಿ ನೀಡಲಾಗುತ್ತದೆ. ಎಲ್ಲಾ ಘನ ಕ್ಯಾನ್ಸರ್ / ಗೆಡ್ಡೆಗಳಿಗೆ - ವಿಶೇಷವಾಗಿ, ಯಕೃತ್ತು, ಮೇದೋಜ್ಜೀರಕ ಗ್ರಂಥಿ ಮತ್ತು ಸ್ತನ ಕ್ಯಾನ್ಸರ್ಗಳಿಗೆ ಇದು ಪರಿಣಾಮಕಾರಿಯಾಗಿದೆ. ಆದರೆ, ರಕ್ತದ  ಕ್ಯಾನ್ಸರ್ ಘನ ಗಡ್ಡೆಯಲ್ಲವಾದ ಕಾರಣ ರಕ್ತದ ಕ್ಯಾನ್ಸರ್ ತಡೆಗೆ ಇದನ್ನು ಬಳಸಲು ಸಾಧ್ಯವಾಗಿಲ್ಲ.
ಪ್ರತಿಕೂಲ ಪರಿಣಾಮಗಳನ್ನು ನಾವು ಅಧ್ಯಯನ ಮಾಡಿದ್ದೇವೆ, ಯಾವುದೇ ಅಡ್ಡ ಪರಿಣಾಮಗಳು ನಮ್ಮ ಅನುಭವಕ್ಕೆ ಬಂದಿಲ್ಲ. ಇಲ್ಲಿಯವರೆಗೆ ಯಾವುದೇ ವ್ಯತಿರಿಕ್ತ ಪರಿಣಾಮಗಳು ವರದಿಯಾಗಿಲ್ಲ, ಅಥವಾ ಚಿಕಿತ್ಸೆಯಲ್ಲಿ ಯಾವುದೇ ಅಡ್ಡಪರಿಣಾಮಗಳು ವರದಿಯಾಗಿಲ್ಲ" ಎಂದು ಡಾ ಕುಮಾರ್ ನುಡಿದರು.

ಯುರೋಪ್, ಮೆಕ್ಸಿಕೊ, ಅಮೆರಿಕ, ಮಲೇಷ್ಯಾ ಮತ್ತು ಕೊಲ್ಲಿಯ ಕೆಲವು ದೇಶಗಳಲ್ಲಿ ನಿಯಂತ್ರಣ ಅಧಿಕಾರಿಗಳು ಇದರ ಬಳಕೆಗೆ ಅವಕಾಶ ನೀಡಿದ್ದಾರೆ. ಭಾರತದಲ್ಲಿ ಅನುಮತಿ ಪಡೆಯುವ ಪ್ರಕ್ರಿಯೆ ಜಾರಿಯಲ್ಲಿದ್ದು, ತಂತ್ರಜ್ಞಾನವನ್ನು ಬಳಸಲು ಬಯಸುವ ಆಸ್ಪತ್ರೆಗಳೊಂದಿಗೆ ಸಂಸ್ಥೆ ಮಾತುಕತೆ ನಡೆಸುತ್ತಿದೆ  ಎಂದು ಅವರು ನುಡಿದರು.

"ಮುಂದಿನ ಜನವರಿಯಿಂದ ಬಳಕೆಗೆ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖರಾಗಿದ್ದೇವೆಎಂದು ಕುಮಾರ್ ಹೇಳಿದರು.

ಕೆಲವು ಸಂಸ್ಥೆಗಳು ಸಾಧನದ ಬಳಕೆಗೆ ಮುಂದೆ ಬಂದಿದ್ದು, ವಿವಿಧ ನಗರಗಳಲ್ಲಿ ಮರು-ಅಂಗಾಂಶ ಎಂಜಿನಿಯರಿಂಗ್ ಮತ್ತು ಪುನರುತ್ಪಾದಕ ಔಷಧ ಮತ್ತು ಆರೈಕೆ ಕೇಂದ್ರಗಳನ್ನು ಸ್ಥಾಪಿಸಲು ಬಯಸಿರುವುದಾಗಿ ತಿಳಿಸಿವೆ. ಕೆಲವು ಆಸ್ಪತ್ರೆಗಳೂ ಇದನ್ನು ಹೇಗೆ ಬಳಸಬಹುದು ಎಂಬುದಾಗಿ ನೋಡಲು ಬಂದಿವೆ. ಬಹುತೇಕ ಜನವರಿಯಿಂದ ಇದು ಲಭ್ಯವಾಗುವಂತೆ ಮಾಡಲು ನಾವು ಯೋಜಿಸುತ್ತಿದ್ದೇವೆ.  ಇದು ಲಕ್ಷಾಂತರ ಮಂದಿಗೆ ಅನುಕೂಲಕರವಾಗುವುದು, ಭಾರತದಲ್ಲಿ ಮಾತ್ರವೇ ಅಲ್ಲ ಸಂಪೂರ್ಣ ಮಾನವ ಜನಾಂಗಕ್ಕೆ ಇದರ ಲಾಭ ಲಭಿಸುವುದು ಎಂದು ನಾನು ಹಾರೈಸಿದ್ದೇನೆ ಎಂದು ಕುಮಾರ್ ನುಡಿದರು.

No comments:

Advertisement