ರೈತರ
ಪ್ರಬಲ ಪ್ರತಿಭಟನೆ: ಸಂಪುಟ ನಿರ್ಣಯಕ್ಕೆ ತಡೆ
ರಾಜಧಾನಿ
ಸ್ಥಳಾಂತರಕ್ಕೆ ಆಂಧ್ರ ಸರ್ಕಾರದ ಬ್ರೇಕ್
ಹೈದರಾಬಾದ್: ಅಮರಾವತಿ ಪ್ರದೇಶದ ರೈತರ ಪ್ರಬಲ ಪ್ರತಿಭಟನೆಯ ಮಧ್ಯೆ, ರಾಜ್ಯದ ಆಡಳಿತಾತ್ಮಕ ರಾಜಧಾನಿಯನ್ನು ಅಮರಾವತಿಯಿಂದ ವಿಶಾಖಪಟ್ಟಣಕ್ಕೆ ಸ್ಥಳಾಂತರಿಸುವ ನಿರ್ಧಾರ ಜಾರಿಯನ್ನು ವಿಳಂಬಗೊಳಿಸಲು ಆಂದ್ರ ಪ್ರದೇಶ ಸರ್ಕಾರವು 2019 ಡಿಸೆಂಬರ್ 27ರ ಶುಕ್ರವಾರ ನಿರ್ಧರಿಸಿತು.
ವಿಷಯಕ್ಕೆ ಸಂಬಂಧಿಸಿದಂತೆ ಸಮಗ್ರ ಪರಿಶೀಲನೆಗಾಗಿ ಉನ್ನತಾಧಿಕಾರ ಸಮಿತಿಯೊಂದರನ್ನು ರಚಿಸಲೂ ರಾಜ್ಯ ಸಚಿವ ಸಂಪುಟವು ನಿರ್ಧರಿಸಿತು. ಸಮಿತಿಯು ನಿರ್ಧಾರದ ಅನುಷ್ಠಾನದಿಂದ ಉದ್ಭವಿಸಬಹುದಾದ ವಿಷಯಗಳ ಬಗೆಗೂ ಪರಿಶೀಲನೆ ನಡೆಸಲಿದೆ.
ಆಡಳಿತದ ವಿಕೇಂದ್ರೀಕರಣದ ಭಾಗವಾಗಿ, ವಿಶಾಖಪಟ್ಟಣದಲ್ಲಿ ಆಡಳಿತಾತ್ಮಕ (ಕಾರ್ಯಾಂಗ) ರಾಜಧಾನಿ, ಅಮರಾವತಿಯಲ್ಲಿ ಶಾಸಕಾಂಗ ರಾಜಧಾನಿ ಮತ್ತು ಕರ್ನೂಲ್ನಲ್ಲಿ ನ್ಯಾಯಾಂಗ ರಾಜಧಾನಿ- ಹೀಗೆ ಮೂರು ರಾಜಧಾನಿಗಳನ್ನು ಸೃಷ್ಟಿಸಲು ಶಿಫಾರಸು ಮಾಡಿ ನಿವೃತ್ತ ಐಎಎಸ್ ಅಧಿಕಾರಿ ಜಿ ಎನ್ ರಾವ್ ನೇತೃತ್ವದ ಆರು ಸದಸ್ಯರ ತಜ್ಞ ಸಮಿತಿಯು ನೀಡಿದ ವರದಿಯನ್ನು ಸಚಿವ ಸಂಪುಟ ಸಭೆಯು ಅನುಮೋದಿಸಿತು.

ಸಂಪುಟ
ಸಭೆಯ ಬಳಿಕ, ವರದಿಗಾರರ ಜೊತೆ ಮಾತನಾಡಿದ ಮಾಹಿತಿ ಮತ್ತು ಸಾರ್ವಜನಿಕ ಬಾಂಧವ್ಯಗಳ ಸಚಿವ ಪೆರ್ನಿ ವೆಂಕಟ್ರಾಮಯ್ಯ ಯಾನೆ ನಾನಿ ಅವರು ’ಮೂರು ರಾಜಧಾನಿಗಳ ರಚನೆಗಾಗಿ ಸಮಗ್ರ ಯೋಜನೆಯೊಂದನ್ನು ರೂಪಿಸುವ ಹೊಣೆಯನ್ನು ಬೋಸ್ಟನ್ ಕನಸಲ್ಟಿಂಗ್ ಗ್ರೂಪ್ (ಬಿಸಿಜಿ) ಖಾಸಗಿ ಕನ್ಸಲ್ಟೆನ್ಸಿ ಸಂಸ್ಥೆಗೆ ವಹಿಸಿ ವರದಿ ಸಲ್ಲಿಸುವಂತೆ ಸರ್ಕಾರ ಸೂಚಿಸಿತು’
ಎಂದು ಹೇಳಿದರು.
‘ಬಿಸಿಜಿಯು ತನ್ನ ವರದಿಯನ್ನು ಜನವರಿ ಮೊದಲ ವಾರದಲ್ಲಿ ಸಲ್ಲಿಸುವ ನಿರೀಕ್ಷೆ ಇದೆ. ಅ ಬಳಿಕ, ರಾಜ್ಯ ಸರ್ಕಾರವು ಉಭಯ ವರದಿಗಳನ್ನು ಅಧ್ಯಯನ ಮಾಡಲು ಉನ್ನತಾಧಿಕಾರ ಸಮಿತಿಯನ್ನು ರಚಿಸುವುದು ಮತ್ತು ಆಮೇಲೆ ಅಂತಿಮ ನಿರ್ಧಾರವನ್ನು ಕೈಗೊಳ್ಳಲಾಗುವುದು’ ಎಂದು ಅವರು ನುಡಿದರು.
೨೦೧೪ರಲ್ಲಿ ರಾಜ್ಯ ಪುನರ್ ವಿಂಗಡಣೆಗಾಗಿ ಕೇಂದ್ರವು ಶಿವರಾಮ ಕೃಷ್ಣನ್ ಸಮಿತಿ ರಚಿಸಿದ್ದನ್ನು ಉಲೇಖಿಸಿದ ಅವರು, ಈ ಸಮಿತಿಯು ಅಭಿವೃದ್ಧಿಗಾಗಿ ಅಧಿಕಾರ ವಿಕೇಂದ್ರೀಕರಣಕ್ಕೆ ಶಿಫಾರಸು ಮಾಡಿತ್ತು ಎಂದು ಹೇಳಿದರು.

‘ಹೀಗಾಗಿಯೇ
ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಉದ್ದೇಶಕ್ಕೆ ಬೇಕಾದ ಮೂಲ ಸವಲತ್ತುಗಳು ಇರುವ ವಿಶಾಖಪಟ್ಟಣದಲ್ಲಿ ಆಡಳಿತಾತ್ಮಕ ರಾಜಧಾನಿಯನ್ನು ಸ್ಥಾಪಿಸುವ ಸೂಚನೆ ನೀಡಿದ್ದಾರೆ’ ಎಂದು
ಸಚಿವರು ಹೇಳಿದರು. ಸರ್ಕಾರದ ಈ ಕ್ರಮದಿಂದ ಹಿಂದುಳಿದ
ವಿಜಿಯನಗರಂ ಮತ್ತು
ಶ್ರೀಕಾಕುಲಂ ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ’ ಎಂದು
ಸಚಿವ ವೆಂಕಟ್ರಾಮಯ್ಯ ವಿವರಿಸಿದರು.
ಅಮರಾವತಿ
ಪ್ರದೇಶದ ರೈತರ ಪ್ರತಿಭಟನೆಗೆ ಪ್ರತಿಕ್ರಿಯಿಸಿದ ನಾನಿ, ’ಅವರು ಪ್ರದೇಶದ ೩೩,೦೦೦ ಎಕರೆ
ಭೂಮಿಯನ್ನು ಒಟ್ಟುಗೂಡಿಸಿ, ೧೦೦೦ ಎಕರೆ ಭೂಮಿಯನ್ನು ಕೂಡಾ ಅಭಿವೃದ್ಧಿ ಮಾಡದ ಹಿಂದಿನ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರ ಮನೆಯ ಮುಂದೆ ರೈತರು ಧರಣಗಳನ್ನು ನಡೆಸಬೇಕು’
ಎಂದು ಹೇಳಿದರು.
ತಮ್ಮ
ಆಡಳಿತಾವಧಿಯಲ್ಲಿ ನಾಯ್ಡು ಅವರು ರಾಜಧಾನಿ ನಿರ್ಮಾಣವನ್ನು ಪೂರ್ಣಗೊಳಿಸಿದ್ದರೆ, ಈ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ.
ಯೋಜನೆಗೆ ೧.೦೯ ಲಕ್ಷ
ಕೋಟಿ ರೂಪಾಯಿ ಬೇಕು ಎಂಬುದಾಗಿ ಮೊದಲು ಪ್ರತಿಪಾದಿಸಿದ್ದ ನಾಯ್ಡು ಅವರು ಈಗ ಅದು ಸ್ವಯಂ
ಹಣಕಾಸು ನೆರವಿನ ಯೋಜನೆ ಎಂದು ಹೇಳುತ್ತಿದ್ದಾರೆ ಎಂದು ಸಚಿವರು ನುಡಿದರು.
ರಾಜಧಾನಿ
ಪ್ರದೇಶದಲ್ಲಿನ ಅಕ್ರಮಗಳು ಮತ್ತು ಒಳ ವ್ಯಾಪಾರದ ಬಗ್ಗೆ
ತನಿಖೆ ನಡೆಸಿದ ಸಂಪುಟ ಉಪ ಸಮಿತಿಯ ವರದಿಗೂ
ಸಂಪುಟ ತನ್ನ ಅನುಮೋದನೆ ನೀಡಿತು. ’ಸಮಿತಿಯು ಹಲವಾರು ಅಕ್ರಮಗಳನ್ನು ಮತ್ತು ಹಿಂದಿನ ಟಿಡಿಪಿ ಸರ್ಕಾರದ ಅವಧಿಯಲ್ಲಿನ ಅಕ್ರಮ ವ್ಯವಹಾರಗಳನ್ನು ಪತ್ತೆ ಹಚ್ಚಿದೆ’ ಎಂದು ಅವರು ಹೇಳಿದರು.
ರಾಜ್ಯವು
ವಿಷಯಕ್ಕೆ ಸಂಬಂಧಿಸಿದಂತೆ ಕಾನೂನು ಅಭಿಪ್ರಾಯ ಪಡೆಯಲಿದ್ದು, ಬಳಿಕ ವಿಷಯವನ್ನು ಲೋಕಾಯುಕ್ತಕ್ಕೆ ಒಪ್ಪಿಸಬಹುದು ಅಥವಾ ಸಿಬಿಐ ಇಲ್ಲವೇ ಸಿಬಿ-ಸಿಐಡಿ ತನಿಖೆಗೆ ವಹಿಸಬಹುದು’
ಎಂದು ಸಚಿವರು ನುಡಿದರು.
No comments:
Post a Comment