My Blog List

Thursday, December 19, 2019

ಟಾಟಾ ಸನ್ಸ್ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಮಿಸ್ತ್ರಿ ಮರುನೇಮಕ: ಎನ್‌ಸಿಎಲ್‌ಎಟಿ ಆದೇಶ

ಟಾಟಾ ಸನ್ಸ್ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಮಿಸ್ತ್ರಿ ಮರುನೇಮಕ: ಎನ್ಸಿಎಲ್ಎಟಿ ಆದೇಶ
ನವದೆಹಲಿ: ಟಾಟಾ ಸನ್ಸ್ ವಿರುದ್ದದ ಕಾನೂನು ಸಮರದಲ್ಲಿ ಸೈರಸ್ ಮಿಸ್ತ್ರಿ ಅವರಿಗೆ 2019 ಡಿಸೆಂಬರ್  18ರ ಬುಧವಾರ ಕೊನೆಗೂ ಜಯ ಲಭಿಸಿತು.

ಟಾಟಾ ಸನ್ಸ್ ಕಂಪೆನಿಯ ಕಾರ್ಯನಿರ್ವಾಹಕ ಅಧ್ಯಕ್ಷರನ್ನಾಗಿ ಸೈರಸ್ ಮಿಸ್ತ್ರಿ ಅವರನ್ನು ಮರು ನೇಮಕ ಮಾಡುವಂತೆ ರಾಷ್ಟ್ರೀಯ ಕಂಪೆನಿ ಕಾಯ್ದೆ ಮೇಲ್ಮನವಿ ನ್ಯಾಯಮಂಡಳಿಯು (ಎನ್ಸಿಎಲ್ಎಟಿ) ಆದೇಶ ನೀಡಿತು.

ಕಾನೂನು ಬಾಹಿರವಾಗಿ ಎನ್. ಚಂದ್ರಶೇಖರನ್ ಅವರನ್ನು ಕಾರ್ಯನಿರ್ವಾಹಕ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದೂ ಎನ್ ಸಿಎಲ್ಎಟಿ ತನ್ನ ಆದೇಶದಲ್ಲಿ ತಿಳಿಸಿತು.

ತನ್ನ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಟಾಟಾ ಸನ್ಸ್ ಕಂಪೆನಿಗೆ ನಾಲ್ಕು ವಾರಗಳ ಕಾಲಾವಕಾಶವನ್ನು ನ್ಯಾಯಮಂಡಳಿ ನೀಡಿತು.

ಟಾಟಾ ಸನ್ಸ್ ಅಧ್ಯಕ್ಷ ಹುದ್ದೆಯಿಂದ ಪದಚ್ಯುತಿಗೊಳಿಸಿದ್ದನ್ನು ಪ್ರಶ್ನಿಸಿ, ಮಿಸ್ತ್ರಿ ಅವರು ಮುಂಬೈಯ ರಾಷ್ಟ್ರೀಯ ಕಂಪೆನಿ ಕಾಯ್ದೆ ನ್ಯಾಯಮಂಡಳಿಯ (ಎನ್ಸಿಎಲ್ಟಿ) ಮೆಟ್ಟಿಲೇರಿದ್ದರು.

ತಮ್ಮ ಪದಚ್ಯುತಿ ವಿಷಯದಲ್ಲಿ ಟಾಟಾ ಸನ್ಸ್ ನಿರ್ದೇಶಕ ಮಂಡಳಿ ಮತ್ತು ರತನ್ ಟಾಟಾ ಅವರಿಂದ ದುರ್ನಡತೆ ನಡೆದಿದೆ ಎಂದು ಮಿಸ್ತ್ರಿ ಅವರು ಆಪಾದಿಸಿದ್ದರು.

ಅಧ್ಯಕ್ಷನನ್ನು ಪದಚ್ಯುತಿಗೊಳಿಸಲು ಕಾಯ್ದೆಯಲ್ಲಿ ಅವಕಾಶ ಇದೆ. ನಿರ್ದೇಶಕ ಮಂಡಳಿಯ ಸದಸ್ಯರ ಪೈಕಿ ಮಂದಿ ಮಿಸ್ತ್ರಿ ಅವರ ಪದಚ್ಯುತಿ ನಿರ್ಧಾರದ ಪರ ಮತ ಚಲಾಯಿಸಿದ್ದರು ಎಂದು ಟಾಟಾ ಸಮೂಹವು ತನ್ನ ನಿಲುವನ್ನು ಸಮರ್ಥಿಸಿಕೊಂಡಿತ್ತು.

೨೦೧೮ರ ಜುಲೈ ತಿಂಗಳಲ್ಲಿ ಮಿಸ್ತ್ರಿ ಸಲ್ಲಿಸಿದ್ದ ಅರ್ಜಿಯನ್ನು ಮುಂಬೈ ಎನ್ಸಿಎಲ್ಟಿ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಮಿಸ್ತ್ರಿ ಅವರು ಎನ್ಸಿ ಎಲೆಟಿಗೆ ಅರ್ಜಿ ಸಲ್ಲಿಸಿದ್ದರು.

ಸೈರಸ್ ಮಿಸ್ತ್ರಿ ಸಂತಸ: ರಾಷ್ಟ್ರೀಯ ಕಂಪೆನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯು ತಮ್ಮನ್ನು ಟಾಟಾ ಸನ್ಸ್ ಕಾರ್ ನಿರ್ವಾಹಕ ಅಧ್ಯಕ್ಷರಾಗಿ ಮರು ನೇಮಕ ಮಾಡುವಂತೆ ನೀಡಿದ ಆದೇಶವನ್ನು ಸ್ವಾಗತಿಸಿದ ಸೈರಸ್ ಮಿಸ್ತ್ರಿಮೇಲ್ಮನವಿ ಮೇಲಿನ ಎನ್ಸಿಎಲ್ಎಟಿ ಆದೇಶವು ನನ್ನ ನಿಲುವಿನ ಸಮರ್ಥನೆಯಾಗಿದೆಎಂದು ಹೇಳಿದರು.

ಟಾಟಾ ಸನ್ಸ್ ಆಡಳಿತ ಮಂಡಳಿಯು ನನ್ನನ್ನು ಮೂರು ವರ್ಷದ ಹಿಂದೆ ಯಾವುದೇ ಎಚ್ಚರಿಕೆ ಅಥವಾ ಕಾರಣವನ್ನೂ ನೀಡಲು ಹುದ್ದೆಯಿಂದ ಕಿತ್ತು ಹಾಕಿತ್ತು. ಈದಿನದ ತೀರ್ಪು ನನ್ನ ವೈಯಕ್ತಿಕ ವಿಜಯವಲ್ಲ, ಇದು ಉತ್ತಮ ಆಡಳಿತದ ತತ್ವಗಳಿಗೆ ಮತ್ತು ಅಲ್ಪಸಂಖ್ಯಾತ ಶೇರುದಾರ ಹಕ್ಕಿಗೆ ಲಭಿಸಿರುವ ಜಯಎಂದು ಮಿಸ್ತ್ರಿ ಬಣ್ಣಿಸಿದರು.

ಮಿಸ್ತ್ರಿ ಕುಟುಂಬವು ಟಾಟಾ ಸನ್ಸ್ ಕಂಪೆನಿಯಲಿ ಶೇಕಡಾ ೧೮.೪ರಷ್ಟು ಶೇರುಗಳನ್ನು ಹೊಂದಿದೆ ಎಂದು ಅವರು ನುಡಿದರು.

ಇದಕ್ಕೆ ಮುನ್ನ ರಾಷ್ಟ್ರೀಯ ಕಂಪೆನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯು ಎನ್ ಚಂದ್ರಶೇಖರನ್ ಅವರನ್ನು ಟಾಟಾ ಸನ್ಸ್ ಕಂಪೆನಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಿದ್ದು ಅಕ್ರಮ ಎಂದು ಹೇಳಿ, ಮಿಸ್ತ್ರಿ ಅವರನ್ನು ಕಂಪೆನಿಯ ಅಧ್ಯಕ್ಷರಾಗಿ ಮರುನೇಮಕ ಮಾಡಲು ಅದೇಶಿಸಿತ್ತು.

ಏನಿದ್ದರೂ ತನ್ನ ಆದೇಶದ ಅನುಷ್ಠಾನಕ್ಕೆ ನಾಲ್ಕು ವಾರಗಳ ತಡೆಯಾಜ್ಞೆ ನೀಡಿದ ಎನ್ಸಿಎಲ್ಎಟಿ, ಕಾಲಾವಧಿಯಲಿ ಟಾಟಾ ಸನ್ಸ್ ಮೇಲ್ಮನವಿ ಸಲ್ಲಿಸಬಹುದು ಎಂದು ಹೇಳಿತ್ತು.

ಐವತ್ತು ವರ್ಷಗಳಿಗೂ ಹೆಚ್ಚು ಕಾಲ ಮಿಸ್ತ್ರಿ ಕುಟುಂಬವು ಟಾಟಾ ಸನ್ಸ್ ಕಂಪೆನಿಯ ಅಲ್ಪಸಂಖ್ಯಾತ ಶೇರುದಾರನಾಗಿ ಸಂಸ್ಥೆಯ ಜವಾಬ್ದಾರಿಯುತ ರಕ್ಷಕನಾಗಿ ತನ್ನ ಪಾತ್ರವನ್ನು ನಿರ್ವಹಿಸಿದೆ. ಇಡೀ ರಾಷ್ಟ್ರವೇ ಇದಕ್ಕಾಗಿ ಹೆಮ್ಮೆ ಪಟ್ಟಿದೆಎಂದು ಮಿಸ್ತ್ರಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಶ್ರೀಮಂತ ಶಾಪೂರ್ ಜಿ ಪಲ್ಲೋನ್ ಜಿ ಕುಟುಂಬದ ಕುಡಿಯಾದ ಮಿಸ್ತ್ರಿ ಅವರನ್ನು ೨೦೧೬ರ ಅಕ್ಟೋಬರ್ ತಿಂಗಳಲ್ಲಿ ರಾತ್ರೋರಾತ್ರಿ ಟಾಟಾ ಸನ್ಸ್ ಅಧ್ಯಕ್ಷ ಸ್ಥಾನದಿಂದ  ಕಿತ್ತು ಹಾಕಲಾಗಿತ್ತು. ರತನ್ ಟಾಟಾ ಅವರ ಬಳಿಕ ೨೦೧೨ರಲ್ಲಿ ಟಾಟಾ ಸನ್ಸ್ ಕಂಪೆನಿಯ  ಆರನೇ ಅಧ್ಯ್ಷಕರು ಅವರಾಗಿದ್ದರು.

ಆದಾಗ್ಯೂ, ಮಿಸ್ತ್ರಿ ಮತ್ತು ಟಾಟಾ ಕುಟುಂಬದ ಹಿರಿಯ ರತನ್ ಟಾಟಾ ಅವರ ಮಧ್ಯೆ ಪ್ರಮುಖ ಹೂಡಿಕೆ ವಿಚಾರಗಳಲ್ಲಿ ಘರ್ಷಣೆ ಉಂಟಾಗುತ್ತಿತ್ತು ಎನ್ನಲಾಗಿತ್ತು. ವಿಶ್ವದ ಅತ್ಯಂತ ಅಗ್ಗದ ನ್ಯಾನೋ ಕಾರು ತಯಾರಿ ವಿಚಾರದಲ್ಲೂ ಅವರಿಬ್ಬರ ಮಧ್ಯೆ ಭಿನ್ನಾಭಿಪ್ರಾಯವಿತ್ತು ಎನ್ನಲಾಗಿತ್ತು.

ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ತಾನು ಯಾವಾಗಲೂ ಪರಿಣಾಮಕಾರಿ ಮಂಡಳಿ ಆಡಳಿತಕ್ಕಾಗಿ ಮತ್ತು ದೀರ್ಘಾವಧಿಯ ಶೇರುದಾರರ ಮೌಲ್ಯ, ಲಾಭ ಮತ್ತು ಬೆಳವಣಿಗೆಯ ಸಂಸ್ಕೃತಿ ಮತ್ತು ಪ್ರಕ್ರಿಯೆ ಅಭಿವೃದ್ಧಿ ಪಡಿಸಲು ಶ್ರಮಿಸಿದ್ದಾಗಿ ಮಿಸ್ತ್ರಿ ನುಡಿದರು.

ಟಾಟಾ ಸಮೂಹವನ್ನು ಸಂಸ್ಥೆಯಾಗಿ ಸಮೃದ್ಧಗೊಳಿಸಲು ಖಾಸಗಿ ಕಂಪೆನಿಗಳ, ಅವುಗಳ ಮಂಡಳಿಗಳ, ಟಾಟಾ ಸನ್ಸ್ ಆಡಳಿತ, ಟಾಟಾ ಸನ್ಸ್ ಮಂಡಳಿ ಮತ್ತು ಟಾಟಾ ಸನ್ಸ್ ಶೇರುದಾರರ ನಿರ್ವಹಣೆ ಮತ್ತು ಆಡಳಿತ ಚೌಕಟ್ಟಿನಲ್ಲಿ ಸೌಹಾರ್ದ ಅತ್ಯಂತ ಮಹತ್ವದ್ದು ಎಂದು ಮಿಸ್ತ್ರಿ ಹೇಳಿದರು.

No comments:

Advertisement