Monday, December 28, 2020

‘ರಾಷ್ಟ್ರೀಯ ಸಾಮಾನ್ಯ ಸಂಚಾರಿ ಕಾರ್ಡ್: ಪ್ರಧಾನಿ ಉದ್ಘಾಟನೆ

 ‘ರಾಷ್ಟ್ರೀಯ ಸಾಮಾನ್ಯ ಸಂಚಾರಿ ಕಾರ್ಡ್: ಪ್ರಧಾನಿ ಉದ್ಘಾಟನೆ

ನವದೆಹಲಿ: ರಾಷ್ಟ್ರದ ಅಭಿವೃದ್ಧಿಯನ್ನು ಹೆಚ್ಚಿಸಲು ಸೇವೆಗಳಲ್ಲಿ ಏಕೀಕೃತ ತಾಂತ್ರಿಕ ಸಂಪರ್ಕಸಾಧನವನ್ನು ಬಳಸಬೇಕಾದ ಅಗತ್ಯವನ್ನು ಪ್ರಧಾನಿ ನರೇಂದ್ರ ಮೋದಿ 2020 ಡಿಸೆಂಬರ್  28ರ ಸೋಮವಾರ ಒತ್ತಿ ಹೇಳಿದರು.

ಏರ್ಪೋರ್ಟ್ ಎಕ್ಸ್ಪ್ರೆಸ್ ಮಾರ್ಗದಲ್ಲಿ ಸಮಗ್ರವಾಗಿ ಕಾರ್ಯನಿರ್ವಹಿಸುವ ಮಹತ್ವಾಕಾಂಕ್ಷೆಯ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (ಎನ್ಸಿಎಂಸಿ) ಸೇವೆಗಳನ್ನು ಪ್ರಾರಂಭಿಸಿ ಅವರು ಅವರು ಮಾತನಾಡಿದರು, ಕಳೆದ ೧೮ ತಿಂಗಳಲ್ಲಿ ೨೩ ಬ್ಯಾಂಕುಗಳು ನೀಡಿರುವ ರುಪೇ ಡೆಬಿಟ್ ಕಾರ್ಡ್ ಹೊಂದಿರುವ ಪ್ರಯಾಣಿಕರನ್ನು ಮೆಟ್ರೋ ಪ್ರಯಾಣಕ್ಕಾಗಿ ಸ್ವೈಪ್ ಮಾಡಲು ಎನ್ಸಿಎಂಸಿ ಅವಕಾಶ ನೀಡುತ್ತದೆ.

ದೆಹಲಿ ಮೆಟ್ರೋ ರೈಲು ನಿಗಮದಲ್ಲಿ (ಡಿಎಂಆರ್ಸಿ) ದೇಶದ ಯಾವುದೇ ಭಾಗದ ಪ್ರಯಾಣಿಕರು ಈಗ ಕಾರ್ಡನ್ನು ಬಳಸಿ ವಿಮಾನ ನಿಲ್ದಾಣ ಎಕ್ಸ್ಪ್ರೆಸ್ ಮಾರ್ಗದಲ್ಲಿ ಪ್ರಯಾಣಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ರಾಷ್ಟ್ರೀಯ ಸಾಮಾನ್ಯ ಸಂಚಾರಿ ಕಾರ್ಡ್ ಸಲಭ್ಯವು ೨೦೨೨ ವೇಳೆಗೆ ಇಡೀ ದೆಹಲಿ ಮೆಟ್ರೋ ನೆಟ್ವರ್ಕ್ನಲ್ಲಿ ಲಭ್ಯವಾಗಲಿದೆ" ಎಂದು ಡಿಎಂಆರ್ಸಿ ವಕ್ತಾರರು ತಿಳಿಸಿದರು.

ದೇಶದ ಸಂಪನ್ಮೂಲಗಳು ಮತ್ತು ಸಾಮರ್ಥ್ಯಗಳನ್ನು ಯಾವುದಾದರೂ ಉತ್ಪಾದPತೆಯತ್ತ ತಿರುಗಿಸುವುದು ನಮ್ಮ  ನಮ್ಮ ಜವಾಬ್ದಾರಿಯಾಗಿದೆ ಎಂದು ಪ್ರಧಾನಿ ಹೇಳಿದರು, ಸಮಗ್ರ ವಿಧಾನವು ದೇಶದ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಅವರು ನುಡಿದರು.

"ಎಲ್ಲ ಸಾರ್ವಜನಿಕ ಸಾರಿಗೆಗಳಿಗೆ ಪ್ರಯಾಣಿಕರಿಗೆ ಸಮಗ್ರ ಪ್ರವೇಶ ಲಭ್ಯತೆಯ ಕಲ್ಪನೆಯೊಂದಿಗೆ ಕಾರ್ಡನ್ನು  ಪ್ರಾರಂಭಿಸಲಾಗಿದೆ. ಟಿಕೆಟ್ಗಾಗಿ ಸರದಿಯಲ್ಲಿ ನಿಲ್ಲುವ ಸಮಯವನ್ನು ಉಳಿಸಲು ಒಂದು ಕಾರ್ಡ್ ಸಹಾಯ ಮಾಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.

ಒಂದು ರಾಷ್ಟ್ರ, ಒಂದು ಸಂಚಾರೀ (ಚಲನಶೀಲತೆ) ಕಾರ್ಡ್ ಒಂದು ಉದಾಹರಣೆ. ನಮ್ಮ ಸರ್ಕಾರವು ಒಂದು ರಾಷ್ಟ್ರ, ಒಂದು ಫಾಸ್ಟ್ಯಾಗ್ ನಂತಹ ಹಲವಾರು ಇತರ ಉಪಕ್ರಮಗಳನ್ನು ತಂದಿದೆ, ಇದು ಪ್ರಯಾಣವನ್ನು ತಡೆರಹಿತವಾಗಿಸಿತು ಮತ್ತು ಎಲ್ಲರನ್ನು ಸಂಚಾರ ದಟ್ಟಣೆಯಿಂದ ಮುಕ್ತಗೊಳಿಸಿತು ಎಂದು ಮೋದಿ ನುಡಿದರು.

ಒಂದು ರಾಷ್ಟ್ರ ಒಂದು ತೆರಿಗೆ, ಅಂದರೆ ಜಿಎಸ್ಟಿ, ತೆರಿಗೆ ವ್ಯವಸ್ಥೆಯನ್ನು ಸಮಗ್ರಗೊಳಿಸಿದೆ ಮತ್ತು ತೆರಿಗೆ ಜಾಮ್ ನಿವಾರಿಸಿದೆ ಎಂದು ಅವರು ಹೇಳಿದರು.

ಇದಕ್ಕೆ ಮುನ್ನ ಬಿಡುಗಡೆ ಮಾಡಲಾದ ಹೇಳಿಕೆಯಲ್ಲಿ, ಡಿಎಂಆರ್ಸಿಯು ರಾಷ್ಟ್ರೀಯ ಸಾಮಾನ್ಯ ಸಂಚಾರೀ ಕಾರ್ಡ್ ಉದ್ಘಾಟನೆಯನ್ನು ಸ್ವಾಗತಿಸಿತು ಮತ್ತು " ಆವಿಷ್ಕಾರಗಳು ದೆಹಲಿ-ಎನ್ಸಿಆರ್ ನಿವಾಸಿಗಳಿಗೆ ಪ್ರಯಾಣ, ಸೌಕರ್ಯ ಮತ್ತು ವರ್ಧಿತ ಚಲನಶೀಲತೆಯ ಹೊಸ ಶಕೆಯನ್ನು ಆರಂಭಿಸಲಿದೆ ಎಂದು ಹೇಳಿತು.

No comments:

Advertisement