My Blog List

Sunday, January 5, 2020

ಶಿವಸೇನಾ ಸಚಿವ ರಾಜೀನಾಮೆ, ‘ಅಘಾಡಿ’ಗೆ ಮಹಾ ಆಘಾತ’

ಶಿವಸೇನಾ ಸಚಿವ ರಾಜೀನಾಮೆ,ಘಾಡಿಗೆ ಮಹಾ ಆಘಾತ
ಸಂಪುಟ ದರ್ಜೆ ನೀಡದ್ದಕ್ಕೆ ಅಬ್ದುಲ್ ಸತ್ತಾರ್ ರಾಜೀನಾಮೆ; ಪಕ್ಷದಿಂದ ನಿರಾಕರಣೆ
ಮುಂಬೈ:  ಶಿವಸೇನಾ ನೇತೃತ್ವದ ಮಹಾರಾಷ್ಟ್ರ ವಿಕಾಸ ಅಘಾಡಿ ಸರ್ಕಾರಕ್ಕೆ ಆಗಿರುವ ಹಿನ್ನಡೆಯೊಂದರಲ್ಲಿ ಸೇನಾ ಸಚಿವ ಅಬ್ದುಲ್ ಸತ್ತಾರ್ ಅವರು ತಮ್ಮ ಹುದ್ದೆಗೆ 2020 ಜನವರಿ 04ರ  ಶನಿವಾರ  ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಯಿತು. ಆದರೆ ಪಕ್ಷ ಮೂಲಗಳು ವರದಿಯನ್ನು ನಿರಾಕರಿಸಿದ್ದು, ಸತ್ತಾರ್ ಅವರು 2020 ಜನವರಿ 05ರ ಭಾನುವಾರ ಪಕ್ಷದ ನಾಯಕ ಉದ್ಧವ್ ಠಾಕ್ರೆ ಭೇಟಿ ಮಾಡಲಿದ್ದಾರೆ ಎಂದು ತಿಳಿಸಿದವು.

ಸತ್ತಾರ್ ಅವರು ತಮ್ಮನ್ನು ಸಂಪುಟದರ್ಜೆಗೆ ಪರಿಗಣಿಸದೇ ಇದ್ದ ಕಾರಣಕ್ಕೆ ಅಸಮಾಧಾನಗೊಂಡು ರಾಜೀನಾಮೆ ನೀಡಿದ್ದಾರೆ ಎಂದು ವರದಿಗಳು ಹೇಳಿದವು.

ಔರಂಗಾಬಾದ್ ಜಿಲ್ಲೆಯ ಸಿಲ್ಲೋದ್ ಕ್ಷೇತ್ರದ ಶಾಸಕ ಸತ್ತಾರ್ ಅವರು ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷದಿಂದ ಶಿವಸೇನೆಗೆ ಪಕ್ಷಾಂತರಗೊಂಡಿದ್ದರು. ಪಕ್ಷವು ತನಗೆ ಸಂಪುಟ ದರ್ಜೆಯನ್ನು ನೀಡದೆ, ರಾಜ್ಯ ಸಚಿವ ಸ್ಥಾನ ನೀಡಿದ್ದಕ್ಕಾಗಿ ಸತ್ತಾರ್ ಅವರು ಪಕ್ಷ ನಾಯಕತ್ವದ ಜೊತೆಗೆ ಮುನಿಸಿಕೊಂಡಿದ್ದರು ಎಂದು ಘಟನಾವಳಿಗಳ ಬಗ್ಗೆ ಅರಿವು ಹೊಂದಿರುವ ಅವರ ಆಪ್ತರೊಬ್ಬರು ತಿಳಿಸಿದರು.

ಸಚಿವರ ರಾಜೀನಾಮೆ ಬಗ್ಗೆ ಮುಖ್ಯಮಂತ್ರಿ ಕಚೇರಿಯಿಂದ ಅಥವಾ ರಾಜಭವನದಿಂದ ಯಾವುದೇ ದೃಢೀಕರಣ ಬಂದಿಲ್ಲ. ಸ್ವತಃ ಸತ್ತಾರ್ ಅವರೂ ವಿಷಯಕ್ಕೆ ಸಂಬಂಧಿಸಿದಂತೆ ಇನ್ನೂ ಮಾತನಾಡಿಲ್ಲ.

ಸತ್ತಾರ್ ರಾಜೀನಾಮೆ ಬಗ್ಗೆ ಹಿರಿಯ ಶಿವಸೇನಾ ನಾಯಕರು ತಮಗೆ ಸತ್ತಾರ್ ಅವರು ರಾಜೀನಾಮೆ ನೀಡಿರುವ ಬಗ್ಗೆ ಅರಿವು ಇಲ್ಲ ಎಂದು ಹೇಳಿದ್ದಾರೆ. ಪಕ್ಷವು ಅವರ ಮನವೊಲಿಸಲು ಯತ್ನಿಸುತ್ತಿದೆ.

ಸತ್ತಾರ್
ಅವರು ರಾಜೀನಾಮೆ ನೀಡಿಲ್ಲ ಎಂದು ಹಿರಿಯ ಸೇನಾ ಕಾರ್ಯಕರ್ತ ಅನಿಲ್ ದೇಸಾಯಿ ಪ್ರತಿಪಾದಿಸಿದ್ದಾರೆ. ಮಧ್ಯೆ ಸೇನಾದ ಅರ್ಜುನ್ ಖೋತ್ಕರ್ ಅವರನ್ನು ಪಕ್ಷದ ಪರವಾಗಿ ಸತ್ತಾರ್ ಅವರನ್ನು ಭೇಟಿ ಮಾಡಿ ವಿಷಯದ ಚರ್ಚೆಗಾಗಿ ಕಳುಹಿಸಲಾಗಿತ್ತು. ಖೋತ್ಕರ್ ಅವರು ಔರಂಗಾಬಾದ್ ಹೋಟೆಲ್ ಒಂದರಲ್ಲಿ ಸತ್ತಾರ್ ಅವರನ್ನು ಶನಿವಾರ ಭೇಟಿ ಮಾಡಿದರು ಆದರೆ ಅಲ್ಲಿಂದ ಹೊರಡುವ ಮುನ್ನ ಯಾವುದೇ ಹೇಳಿಕೆಯನ್ನೂ ನೀಡಲಿಲ್ಲ.

ಸತ್ತಾರ್
ಪುತ್ರ ಸಮೀರ್ ಅವರುಅವರು ರಾಜೀನಾಮೆ ಕೊಟ್ಟಿದ್ದಾರೆಯೇ ಎಂಬ ಬಗ್ಗೆ ನನಗೆ ಗೊತ್ತಿಲ್ಲ. ಅವರು ಮಾತ್ರವೇ ವಿಷಯದ ಬಗ್ಗೆ ಮಾತನಾಡಲು ಸಮರ್ಥರುಎಂದು ಹೇಳಿದರು.

ಡಿಸೆಂಬರ್
೩೦ರಂದು ನಡೆದ ಸಚಿವ ಸಂಪುಟ ವಿಸ್ತರಣೆಯಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ ಎಂಬ ಕಾರಣಕ್ಕಾಗಿ ಪಕ್ಷದ ಹಲವಾರು ಹಿರಿಯ ನಾಯಕರು ತೀವ್ರ ಅಸಮಾಧಾನಗೊಂಡಿದ್ದರು.

ಹಿಂದೆ ಕಾಂಗ್ರೆಸ್- ಎನ್ಸಿಪಿ ಸರ್ಕಾರದಲ್ಲಿ ಪಶು ಸಂಗೋಪನಾ ಖಾತೆಯ ಸಂಪುಟ ದರ್ಜೆ ಸಚಿವರಾಗಿದ್ದ ಮರಾಠಾವಾಡ ಪ್ರದೇಶದ ಔರಂಗಾಬಾದ್ ಜಿಲ್ಲೆಯ ಸಿಲ್ಲೋದ್ ಕ್ಷೇತ್ರದ ಶಾಸಕ ಸತ್ತಾರ್ ಅವರು ಬಾರಿ ಶಿವಸೇನಾ ಕೋಟಾದಲ್ಲಿ ತಮಗೆ ಸಂಪುಟದರ್ಜೆ ಸಚಿವ ಸ್ಥಾನ ಲಭಿಸುತ್ತದೆ ಎಂದು ನಿರೀಕ್ಷಿಸಿದ್ದರುಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದ ಅವರು ಔರಂಗಾಬಾದ್ ಕ್ಷೇತ್ರದಿಂದ ಸ್ಪರ್ಧಿಸಲು ತಮಗೆ ಟಿಕೆಟ್ ಸಿಗದ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಸತ್ತಾರ್
ಅವರು ಆಗಿನ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿ ಮಾಡಿದಾಗ, ಅವರು ಬಿಜೆಪಿ ಸೇರುತ್ತಾರೆ ಎಂಬ ವದಂತಿಗಳು ಕೇಳಿ ಬಂದಿದ್ದವು. ಅಂತಿಮವಾಗಿ ಸತ್ತಾರ್ ಅವರು ಶಿವಸೇನೆಯನ್ನು ಆಯ್ಕೆ ಮಾಡಿಕೊಂಡರು ಮತ್ತು ವಿಧಾನಸಭಾ ಚುನಾವಣೆಯಲ್ಲಿ ಅವರನ್ನು ಸಿಲ್ಲೋದ್ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಲಾಯಿತು. ಸತ್ತಾರ್ ಅವರು ಭಾರೀ ಗೌಜಿನೊಂದಿಗೆ ಉದ್ಧವ್ ಠಾಕ್ರೆ ಅವರ ಸಮ್ಮುಖದಲ್ಲಿ ಶಿವಸೇನೆ ಸೇರಿದ್ದರು.

ಆದರೆ
ಈಗ ಸಂಪುಟ ದರ್ಜೆ ಸಚಿವ ಸ್ಥಾನಮಾನವು ಶಿವಸೇನೆ ಮತ್ತು ಸತ್ತಾರ್ ಮಧ್ಯೆ ವಿವಾದದ ಕೇಂದ್ರ ಬಿಂದುವಾಗಿದೆ.

ಸತ್ತಾರ್
ರಾಜೀನಾಮೆ ವದಂತಿಗಳನ್ನು ತಳ್ಳಿಹಾಕಿದ ಶಿವಸೇನೆಯ ರಾಜ್ಯಸಭಾ ಸದಸ್ಯ ಅನಿಲ್ ದೇಸಾಯಿಯಾವ ರಾಜೀನಾಮೆಯನ್ನೂ ಅಂಗೀಕರಿಸಲಾಗುವುದಿಲ್ಲಎಂದು ನುಡಿದರು.
ಸತ್ತಾರ್ ಅವರು ಭಾನುವಾರ ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಖೋತ್ಕರ್ ಹೇಳಿದರು.

ರಾಜೀನಾಮೆಯ
ಯಾವ ಪತ್ರವೂ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರಿಗೆ ತಲುಪಿಲ್ಲ ಎಂದು ಹಿರಿಯ ಸೇನಾ ನಾಯಕ ಸಂಜಯ್ ರಾವತ್ ಪ್ರತಿಪಾದಿಸಿದರು. ಸತ್ತಾರ್ ಅವರ ಹಿಂದಿನ ರಾಜಕೀಯ ಸಿದ್ಧಾಂತದ ಬಗ್ಗೆ ಪ್ರಸ್ತಾಪಿಸಿದ ರಾವತ್ ಅವರುಅವರು ಪ್ರಾರಂಭದಿಂದಲೇ ಶಿವಸೇನೆಯ ಜೊತೆಗೆ ಇರಲಿಲ್ಲ. ಯಾವುದೇ ಇಲಾಖೆಯೂ ಸಣ್ಣದು ಅಥವಾ ನಗಣ್ಯವಲ್ಲ ಯಾರಾದರೂ ಹಾಗೆ ಯೋಚಿಸುತ್ತಿದ್ದರೆ ಅದು ತಪ್ಪುಎಂದು ಅವರು ನುಡಿದರು.

ಸೇನಾ
ಮುಖ್ಯಸ್ಥ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ  ಅವರು ಸರ್ಕಾರವನ್ನು ಬೆಂಬಲಿಸುತ್ತಿರುವ ಮೂವರು ಪಕ್ಷೇತರ ಶಾಸಕರಿಗೆ ಒಂದು ಸಂಪುಟ ದರ್ಜೆ ಸ್ಥಾನವನ್ನೂ ಎರಡು ಕಿರಿಯ ಸಚಿವರ ಸ್ಥಾನವನ್ನೂ ನೀಡಿದ್ದಕ್ಕೂ ಹಲವಾರು ಸೇನಾ ನಾಯಕರು ಅಸಮಾಧಾನಗೊಂಡಿದ್ದರು.

ಅಜಿತ್ ಪವಾರ್ ಮತ್ತು ಆದಿತ್ಯ ಠಾಕ್ರೆ ಸೇರಿದಂತೆ ಶಿವಸೇನಾ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ಸಿಪಿ) ಮತ್ತು ಕಾಂಗ್ರೆಸ್ ಪಕ್ಷಗಳ ಒಟ್ಟು ೩೬ ಶಾಸಕರು ಸೋಮವಾರ ಮಹಾ ವಿಕಾಸ ಅಘಾಡಿಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಏನಿದ್ದರೂ, ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ತ್ರಿಪಕ್ಷ ಮೈತ್ರಿಕೂಟದಲ್ಲಿನ ಘರ್ಷಣೆಗಳು ಹೊರ ಬರಲಾರಂಭವಾಗಿದ್ದವು. ಖಾತೆ ಹಂಚಿಕೆಗೆ ಸಂಬಂಧಿಸಿದಂತೆ ಯಾವುದೇ ಅಸಮಾಧಾನವೂ ಇಲ್ಲ ಎಂದು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಸ್ಪಷ್ಟ ಪಡಿಸಿದ್ದರು.

ಖಾತೆ ಹಂಚಿಕೆಗೆ ಸಂಬಂಧಿಸಿದಂತೆ ಠಾಕ್ರೆ ಸರ್ಕಾರವು ಎದುರಿಸುತ್ತಿರುವ ಬಿಕ್ಕಟ್ಟು ಇನ್ನೂ ಇತ್ಯರ್ಥಗೊಂಡಿಲ್ಲ ಎಂದು ಹೇಳಲಾಗಿದ್ದು, ಆಂತರಿಕ ಭಿನ್ನಮತಗಳು ಮೈತ್ರಿಕೂಟದ ಅಂಗಪಕ್ಷಗಳ ಒಳಗಿನ ತಿಕ್ಕಾಟವನ್ನು ಬಹಿರಂಗಕ್ಕೆ ತಂದಿವೆ.

ಶಿವಸೇನೆಯಲ್ಲಿಕಳೆದುಕೊಂಡಿರುವ ಅವಕಾಶಗಳಿಗಾಗಿಹಲವಾರು ಶಾಸಕರು ಅಸಂತೃಪ್ತರಾಗಿದ್ದಾರೆ. ಭಾಸ್ಕರ್ ಜಾಧವ್, ಪ್ರತಾಪ್ ಸರ್ನಾಯಕ್ಸುನೀಲ್ ರಾವತ್ (ಸಂಜಯ್ ರಾವತ್ ಸಹೋದರ), ಪ್ರಕಾಶ್ ಅಬಿತ್ಕರ್ ಮತ್ತು ತಾನಾಜಿ ಸಾವಂತ್ ಅವರು ಸಚಿವ ಸ್ಥಾನದಿಂದ ಹೊರಗಿಟ್ಟದ್ದಕ್ಕಾಗಿ ಈಗಾಗಲೇ ಅತೃಪ್ತಿ ಹೊರಹಾಕಿದ್ದಾರೆ.

No comments:

Advertisement