ಕೊರೋನಾವೈರಸ್:
ಕೇಂದ್ರದಿಂದ
ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ರದ್ದು, ಸೋಂಕಿತರ ಸಂಖ್ಯೆ
31ಕ್ಕೆ
ನವದೆಹಲಿ:
ಮಾರಕ ಕೊರೋನಾವೈರಸ್ ಅಥವಾ ಕೋವಿಡ್ -೧೯ ಸೋಂಕಿಗೆ ಒಳಗಾಗಿರುವವರ
ಸಂಖ್ಯೆ ಭಾರತದಲ್ಲಿ ೩೧ಕ್ಕೆ
ತಲುಪಿದ್ದು, ಸೋಂಕು ಇನ್ನಷ್ಟು ವ್ಯಾಪಿಸದಂತೆ ತಡೆಯುವ ಸಲುವಾಗಿ ಕೇಂದ್ರ ಸರ್ಕಾರವು ತನ್ನ ನೌಕರರ ಹಾಜರಾತಿಯನ್ನು ದಾಖಲಿಸಲು ಜಾರಿಗೊಳಿಸಿದ್ದ ಬಯೋಮೆಟ್ರಿಕ್ ವ್ಯವಸ್ಥೆಯನ್ನು 2020 ಮಾರ್ಚ್ 06ರ ಶುಕ್ರವಾರ ಕೈಬಿಟ್ಟು ಹಳೆಯ
ರಿಜಿಸ್ಟರ್ ವ್ಯವಸ್ಥೆಗೆ ಮರಳಿದೆ.
ಕೊರೋನಾವೈರಸ್
ಸೋಂಕು ಹರಡಲು ಕಾರಣವಾಗಬಹುದು ಎಂಬ ಕಾರಣಕ್ಕಾಗಿ ಬಯೋಮೆಟ್ರಿಕ್ ದಾಖಲಾತಿಯಿಂದ ತನ್ನ ನೌಕರರಿಗೆ ವಿನಾಯ್ತಿ ನೀಡಲು ಕೇಂದ್ರ ನಿರ್ಧರಿಸಿತು. ಬಯೋಮೆಟ್ರಿಕ್ ವ್ಯವಸ್ಥೆಯನ್ನು ೨೦೧೪ರಲ್ಲಿ ಜಾರಿಗೆ ತರಲಾಗಿತ್ತು.
ಮಾರ್ಚ್
೩೧ರವರೆಗೆ ನೌಕರರಿಗೆ ಬಯೋಮೆಟ್ರಿಕ್ ಯಂತ್ರವನ್ನು ಬಳಸುವುದರಿಂದ ವಿನಾಯ್ತಿ ನೀಡಲಾಗಿದೆ ಎಂದು ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಮಾನವ ಸಂಪನ್ಮೂಲ ಮ್ಯಾನೇಜರ್ ಶುಕ್ರವಾರ ಹೊರಡಿಸಿದ ಆದೇಶ ತಿಳಿಸಿತು.
‘ಆದಾಗ್ಯೂ,
ಎಲ್ಲ ನೌಕರರೂ ಈ ಅವಧಿಯಲ್ಲಿ ಹಾಜರಾತಿ
ಪುಸ್ತಕದಲ್ಲಿ (ಅಟೆಂಡೆನ್ಸ್ ರಿಜಿಸ್ಟರ್) ತಮ್ಮ ಹಾಜರಾತಿಯನ್ನು ದಾಖಲಿಸಬೇಕು’ ಎಂದು
ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಅಜಯ್ ಕುಮಾರ್ ಸಿಂಗ್ ಅವರು ಹೊರಡಿಸಿದ ಆದೇಶದ ಸುತ್ತೋಲೆ ತಿಳಿಸಿತು.
ದೇಶದಲ್ಲಿ
ಕೊರೋನಾವೈರಸ್ ಸೋಂಕು ದೃಢ ಪಟ್ಟಿರುವ ಸಂಖ್ಯೆ ಕೇವಲ ೩೧ರಷ್ಟು ಸಣ್ಣ ಪ್ರಮಾಣದ್ದಾಗಿದ್ದರೂ, ಮುಂಜಾಗರೂಕತಾ ಕ್ರಮವಾಗಿ ಬಯೋಮೆಟ್ರಿಕ್ ದಾಖಲಾತಿ ವಿನಾಯ್ತಿಯನ್ನು ನೀಡಲಾಗುತ್ತಿದೆ ಸಿಂಗ್ ಅವರ ಸುತ್ತೋಲೆ ಹೇಳಿತು.
‘ಆದರೆ
ವೈರಸ್ನ ಗುಣಲಕ್ಷಣವನ್ನು ಗಮನದಲ್ಲಿ
ಇರಿಸಿಕೊಂಡು ಅದರ ಹರಡುವಿಕೆಯನ್ನು ತಡೆಯಲು ಸಾಧ್ಯವಿರುವ ಎಲ್ಲ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯವಾಗಿದೆ’ ಎಂದು
ಇಲಾಖೆ ತಿಳಿಸಿತು.
‘ವೈರಸ್
ಸೋಂಕು ಸಾಮಾನ್ಯವಾಗಿ ಸೋಂಕಿತ ಮೇಲ್ಮೈಗಳ ಮೂಲಕ ಹರಡುವಂತೆ ಕಾಣಿಸುತ್ತದೆ. ಆದ್ದರಿಂದ ಮುಟ್ಟುವಂತಹ ಮೇಲ್ಮೈಗಳ ಸ್ಪರ್ಶವನ್ನು ನಿವಾರಿಸುವುದು ಉತ್ತಮ. ಮಾನವ ಸರ್ಶದಿಂದ ಸೋಂಕು ಹರಡಬಹುದು’
ಎಂದು ಸುತ್ತೋಲೆ ಹೇಳಿತು.
ಪ್ರಧಾನಿ
ನರೇಂದ್ರ ಮೋದಿ ಅವರ ಸಲಹೆಯಂತೆ ಆಧಾರ್ ಆಧಾರಿತ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಜಾರಿಗೆ ತರಲಾಗಿತ್ತು. ಇದು
ಸರ್ಕಾರದ ಕೆಲಸದ ಸಂಸ್ಕೃತಿಯನ್ನೇ ಬದಲಾಯಿಸಬಲ್ಲುದು ಎಂದು ಪ್ರಧಾನಿ ಹೇಳಿದ್ದರು.
ಶುಕ್ರವಾರ
೧.೨ ಲಕ್ಷ ಮಂದಿ
ತಮ್ಮ ಹಾಜರಾತಿಯನ್ನು ಆನ್ಲೈನ್ ನಿಗಾ ವ್ಯವಸ್ಥೆ ಹೊಂದಿರುವ ಬಯೋಮೆಟ್ರಿಕ್ ಮೂಲಕ ದಾಖಲಿಸಿದ್ದರು.
‘ಅಟೆಂಡೆನ್ಸ್.ಗವ್.ಇನ್’ ಈ ವೆಬ್ ಸೈಟ್
ಪ್ರಕಾರ, ನೌಕರರು ಸಾಮಾನ್ಯವಾಗಿ ಬೆಳಗ್ಗೆ ೯.೩೩ಕ್ಕೆ ತಮ್ಮ
ಹಾಜರಾತಿಯನ್ನು ದಾಖಲಿಸುತ್ತಾರೆ ಮತ್ತು ಸಂಜೆ ೫.೪೦ಕ್ಕೆ ಕರ್ತವ್ಯ
ಮುಗಿಸಿದ್ದನ್ನು ದಾಖಲಿಸುತ್ತಾರೆ.
ಇದೇ
ವೇಳೆಗೆ ಭಾರತದ ಕ್ರೀಡಾ ಪ್ರಾಧಿಕಾರ ಕೂಡಾ ದೇಶಾದ್ಯಂತ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ಅಮಾನತುಗೊಳಿಸಿದೆ ಎಂದು ವರದಿಗಳು ತಿಳಿಸಿವೆ.
ಅಟ್ಟಾರಿ-ವಾಘಾ ಗಡಿ: ಸಾರ್ವಜನಿಕರಿಲ್ಲ: ಈ ಮಧ್ಯೆ ಪಂಜಾಬಿನ
ಅಟ್ಟಾರಿ-ವಾಘಾ ಗಡಿಯಲ್ಲಿ ಪ್ರತಿದಿನ ನಡೆಯುವ ರಿಟ್ರೀಟ್ ಸಮಾರಂಭದಲ್ಲಿ ವೀಕ್ಷಣೆಗಾಗಿ ಬರದಂತೆ ಸಾರ್ವಜನಿಕರನ್ನು ನಿಷೇಧಿಸಲಾಗಿದೆ.
ವಾಘಾ-ಅಟ್ಟಾರಿ ಗಡಿಯಲ್ಲಿ ಗಡಿ ಭದ್ರತಾ ಪಡೆಯು ರಿಟ್ರೀಟ್ ಕಾರ್ಯಕ್ರಮವನ್ನು ಮುಂದುವರೆಸುತ್ತದೆ ಆದರೆ ಅದನ್ನು ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ ನೀಡುವುದಿಲ್ಲ. ಕೊರೋನಾವೈರಸ್ ಹರಡುವಿಕೆಯನ್ನು ತಡೆಯಲು ದೊಡ್ಡ ಪ್ರಮಾಣದಲ್ಲಿ ಜನರು ಸೇರುವುದನ್ನು ನಿವಾರಿಸುವಂತೆ ಕೇಂದ್ರ ಕೊಟ್ಟಿರುವ ಮಾರ್ಗಸೂಚಿಗಳಿಗೆ ಅನುಗುಣವಾಗಿ ಆರೋಗ್ಯ ಕಾಳಜಿಯನ್ನು ಗಮನದಲ್ಲಿ ಇಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ
ಎಂದು ಹಿರಿಯ ಬಿಎಸ್ ಎಫ್ ಅಧಿಕಾರಿ ತಿಳಿಸಿದರು.
ಮಾರಕ
ಕೊರೋನಾವೈರಸ್ ವಿಶ್ವಾದ್ಯಂತ ಈವರೆಗೆ ೩,೩೪೫ ಮಂದಿಯನ್ನು
ಬಲಿ ತೆಗೆದುಕೊಂಡಿದೆ. ಸುಮಾರು ೯೮,೦೦೦ ಜನರಿಗೆ
ಸೋಂಕು ತಗುಲಿರುವುದು ದೃಢ ಪಟ್ಟಿದೆ. ಚೀನಾದಲ್ಲಿ ಶುಕ್ರವಾರ ೧೧೪ ಹೊಸದಾಗಿ ಸೋಂಕು ತಗುಲಿದ ಪ್ರಕರಣಗಳು ವರದಿಯಾಗಿವೆ. ಯುರೋಪಿನಲ್ಲಿ ಇಟಲಿಯು ಕೊರೋನಾವೈರಸ್ ವ್ಯಾಧಿಯ ಕೇಂದ್ರವಾಗಿ ಪರಿಣಮಿಸಿದ್ದು ಈವರೆಗೆ ಕೋವಿಡ್-೧೯ಕ್ಕೆ ೧೪೮ ಮಂದಿ ಬಲಿಯಾಗಿದ್ದಾರೆ. ಏಷ್ಯಾದ ರಾಷ್ಟ್ರಗಳ ಪೈಕಿ ಚೀನಾ ಬಿಟ್ಟರೆ ಇರಾನಿನಲ್ಲಿ ಅತ್ಯಂತ ಹೆಚ್ಚು ಕೊರೋನಾವೈರಸ್ ಸಾವುಗಳು ಸಂಭವಿಸಿದ್ದು ಇಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ ೧೦೭ಕ್ಕೆ ಏರಿದೆ.
ಭಾರತವು
ಕೊರೋನಾವೈರಸ್ ವಿರುದ್ಧ ತನ್ನ ಸಮರವನ್ನು ತೀವ್ರಗೊಳಿಸಿದ್ದು, ಅದು ಹರಡದಂತೆ ವ್ಯಾಪಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಸೋಂಕು ದೃಢಪಟ್ಟಿರುವ ೩೧ ಮಂದಿಯನ್ನು ಏಕಾಂಗಿ
ವಾಸದ ವಾರ್ಡ್ಗಳಿಗೆ ದಾಖಲಿಸಲಾಗಿದೆ. ಕೊರೋನಾವೈರಸ್ನ್ನು ತಡೆಯುವ ಸಲುವಾಗಿ ಸರ್ಕಾರವು ೩೦,೦೦೦ ಮಂದಿಯ
ಮೇಲೆ ತೀವ್ರ ನಿಗಾ ಇರಿಸಿದೆ.
ಕೊರೋನಾವೈರಸ್
ಕೇಂದ್ರವಾದ ಚೀನಾದ ವುಹಾನ್ ನಗರದಿಂದ ಭಾರತಕ್ಕೆ ವಾಪಸಾದ ಮೂವರು ಸೋಂಕಿತ ರೋಗಿಗಳನ್ನು ಸಂಪೂರ್ಣವಾಗಿ ಗುಣಪಡಿಸಿದ ಬಳಿಕ ಕೇರಳದ ಆರೋಗ್ಯ ಅಧಿಕಾರಿಗಳು
ಆಸ್ಪತ್ರೆಯಿಂದ ಬಿಡುಗಡೆ ಮಾಡುವ ಮೂಲಕ ಭಾರತವು ಕೊರೋನಾವೈರಸ್ ವಿರೋಧಿ ಸಮರದಲ್ಲಿ ಯಶಸ್ಸು ಕಂಡಿತ್ತು.
ಕೋವಿಡ್
-೧೯ ವಿಶ್ವಾದ್ಯಂತ ಆರ್ಥಿಕತೆಯನ್ನು ಕೂಡಾ ತತ್ತರಗೊಳ್ಳುವಂತೆ ಮಾಡಿದೆ. ಹೂಡಿಕೆದಾರರಲ್ಲಿ ಭೀತಿ ಮುಗಿಲೆತ್ತರಕ್ಕೆ ಏರಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೂ ಕೊರೋನಾವೈರಸ್ ಆರ್ಥಿಕತೆಯ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿದ್ದಾರೆ.
ಕೊರೋನಾವೈರಸ್
ಸೋಂಕಿನ ಪರಿಣಾಮವಾಆಗಿ ಇಟಲಿಯ ಸೆರೀ ಎಯಲ್ಲಿ ನಡೆಯಬೇಕಾಗಿದ್ದ ಫುಟ್ಬಾಲ್ ಪಂದ್ಯಾವಳಿಗಳನ್ನೂ ರದ್ದು ಪಡಿಸಲಾಗಿದೆ. ಟೋಕಿಯೋದಲ್ಲಿ ನಡೆಯುವ ೨೦೨೦ರ ಬೇಸಿಗೆ ಒಲಿಂಪಿಕ್ ಆಟೋಟಗಳ ಮೇಲೂ ಕೊರೋನಾವೈರಸ್ ಕರಿನೆರಳು ಬೀರಿದ್ದು ಆರು ರಾಷ್ಟ್ರಗಳ ರಗ್ಬಿ ಅನುಮಾನಾಸ್ಪದವಾಗಿದೆ.
No comments:
Post a Comment