My Blog List

Wednesday, March 18, 2020

ಕೊರೋನಾ ವೈರಸ್: ವಿಶ್ವಾದ್ಯಂತ ೮೦೦೦ ಬಲಿ, ೨,೦೦,೦೦೦ ಮಂದಿಗೆ ಸೋಂಕು

ಕೊರೋನಾ : ವಿಶ್ವಾದ್ಯಂತ ೮೦೦೦ ಬಲಿ, ,೦೦,೦೦೦ ಮಂದಿಗೆ ಸೋಂಕು
ಜಗತ್ತಿನ ಎಲ್ಲೆಡೆ ದೇಶ-ದೇಶಗಳ ನಡುವಣ ಗಡಿಬಂದ್, ರಸ್ತೆಗಳಲ್ಲಿ ವಾಹನ ದಟ್ಟಣೆ
ಬರ್ಲಿನ್: ವಿಶ್ಯಾದ್ಯಂತ ಕೊರೋನಾವೈರಸ್ ಸೋಂಕಿಗೆ ಬಲಿಯಾದವರ ಸಂಖ್ಯೆ ೮೦೦೦ಕ್ಕೆ ತಲುಪಿದ್ದು, ಸೋಂಕಿತರ ಸಂಖ್ಯೆ ,೦೦,೦೦೦ ದಾಟಿದೆ ಎಂದು ವರದಿಗಳು  2020 ಮಾರ್ಚ್  18ರ  ಬುಧವಾರ ತಿಳಿಸಿದ್ದು, ದೇಶ-ದೇಶಗಳ ಮಧ್ಯೆ ಗಡಿಗಳನ್ನು ಮುಚ್ಚಿದ್ದರಿಂದಾಗಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.

ಕೋವಿಡ್ ೧೯ ಹರಡದಂತೆ ತಡೆಯಲು ದೇಶಗಳು ಹರಸಾಹಸ ಪಡುತ್ತಿದ್ದು, ಗಡಿಗಳಲ್ಲಿ ಸಂಚಾರ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದ ಪರಿಣಾಮವಾಗಿ ಐರೋಪ್ಯ ದೇಶಗಳ ಗಡಿಗಳಲ್ಲಿ ಬುಧವಾರ ತೀವ್ರ ವಾಹನ ದಟ್ಟಣೆ ಉಂಟಾಯಿತು. ರಸ್ತೆಗಳಲ್ಲಿ ಮೈಲುಗಟ್ಟಲೆಟ್ರಾಫಿಕ್ ಜಾಮ್ಆಗಿ, ತುರ್ತು ಔಷಧ ಒಯ್ಯುವ ಟ್ರಕ್ಕುಗಳಿಗೂ ಸಾಗುವುದು ಅತ್ಯಂತ ದುಸ್ತರವಾಗಿ ಪರಿಣಮಿಸಿತು.

೮೨,೦೦೦ ಮಂದಿ ಕೊರೋನಾ ವೈರಸ್ ವ್ಯಾಧಿಯಿಂದ ಗುಣಮುಖರಾಗಿದ್ದರೂ, ವಿಶ್ಯಾದ್ಯಂತ ಇದಕ್ಕೆ ಬಲಿಯಾದವರ ಸಂಖ್ಯೆ ೮೦೦೦ಕ್ಕೆ ಮತ್ತು ಸೋಂಕಿತರ ಸಂಖ್ಯೆ ,೦೦,೦೦೦ದ ಗಡಿ ದಾಟಿದೆ ಎಂದು ಜಾನ್ ಹಾಪ್ಕಿನ್ಸ್ ವಿಶ್ವ ವಿದ್ಯಾಲಯದ ಮಾಹಿತಿ ತಿಳಿಸಿತು.

ಆಸ್ಟ್ರಿಯಾದ ಗಡಿಯಲ್ಲಿ ಸಿಕ್ಕಿಹಾಕಿಕೊಂಡಿರುವ ಪೂರ್ವ ಭಾಗದ ಐರೋಪ್ಯರು ಸ್ವದೇಶಕ್ಕೆ ಮರಳುವ ಸಲುವಾಗಿ ಹಾಕುತ್ತಿರುವ  ಒತ್ತಡದ ಹಿನ್ನೆಲೆಯಲ್ಲಿ ಹಂಗೆರಿಯು ರಾತ್ರೋರಾತ್ರಿ ತನ್ನ ಗಡಿಗಳನ್ನು ಹಂತ ಹಂತಗಳಲ್ಲಿ ತೆರೆಯಿತು. ಬಲ್ಗೇರಿಯಾದ ನಾಗರಿಕರಿಗೆ ಮೊದಲ ನಿಯಂತ್ರಿತ ವಾಹನಗಳ ಮೂಲಕ ಸಾಗಲು ಅನುಮತಿ ನೀಡಲಾಯಿತು. ಅವರ ಬಳಿಕ ರೋಮೇನಿಯನ್ನರು ಸಾಗಿದರು.
ಆದರೆ ಹಂಗೇರಿಯನ್ನರಿಗೆ ಅಥವಾ ಸಾರಿಗೆ ಟ್ರಕ್ಗಳಿಗೆ ಮಾತ್ರ ಮುಂದೆ ಸಾಗಲು ಕಾನೂನು ಅವಕಾಶ ನೀಡಿದ್ದರಿಂದಾಗಿ ಬುಧವಾರ ನಸುಕಿನ ವೇಳೆಗೆ ಆಸ್ಟ್ರೇಲಿಯಾದ ಕಡೆಯ ಗಡಿಯಲ್ಲಿ ೨೮ ಕಿಲೋ ಮೀಟರ್ (೧೭ಮೈಲು) ಉದ್ದಕ್ಕೆ ಟ್ರಕ್ಗಳು, ೧೪ ಕಿಲೋಮೀಟರ್ (೯ಮೈಲು) ಉದ್ದಕ್ಕೆ ಕಾರುಗಳ ಸಾಲುಗಳು ಕಂಡು ಬಂದವು.

ಗಡಿಗಳಲ್ಲಿ ವಾಹನ ದಟ್ಟಣೆ ಉಂಟಾದ ಕಾರಣ, ಆಹಾರ, ವೈದ್ಯಕೀಯ ಸರಬರಾಜು ಮತ್ತು ಇತರ ಅಗತ್ಯ ವಸ್ತುಗಳ ಸರಬರಾಜಿಗೆ ಧಕ್ಕೆಯಾಗದಂತೆ ಹೇಗೆ ನೋಡಿಕೊಳ್ಳಬೇಕು ಎಂದು ಐರೋಪ್ಯ ಒಕ್ಕೂಟದ ನಾಯಕರು ತೀವ್ರವಾಗಿ ಪರಿಶೀಲನೆ ನಡೆಸುತ್ತಿದ್ದಾರೆ.

ಕೃಷಿ ಉತ್ಪಾದನೆ ಸ್ಥಗಿತಗೊಳ್ಳದಂತೆ ನೋಡಿಕೊಳ್ಳುವ ಸಲುವಾಗಿ ಋತುಮಾನದ ಕೃಷಿ ಕಾರ್ಮಿಕರ ಸುಲಲಿತ ಸಂಚಾರಕ್ಕೆ ಮಾರ್ಗ ಕಂಡು ಹಿಡಿಯುವ ನಿಟ್ಟಿನಲ್ಲೂ ಅವರು ತೀವ್ರ ಪರಾಮರ್ಶೆ ನಡೆಸುತ್ತಿದ್ದಾರೆ.

ವಿಶ್ವಾದ್ಯಂತ ಬಹುತೇಕ ಎಲ್ಲ ರಾಷ್ಟ್ರಗಳೂ ಇವೇ ಸಮಸ್ಯೆಗಳನ್ನು ಎದುರಿಸುತ್ತಿವೆ. ಅಮೆರಿಕ ಮತ್ತು ಕೆನಡಾ ಉಭಯ ರಾಷ್ಟ್ರಗಳ ನಡುವಣ ಅಗತ್ಯೇತರ ಪ್ರವಾಸವನ್ನು ಪರಸ್ಪರ ಸಮ್ಮತಿಯೊಂದಿಗೆ ನಿಷೇಧಿಸುವ ಮಾರ್ಗವನ್ನು ರೂಪಿಸಲು ಯತ್ನಿಸುತ್ತಿವೆ.

ಆಗ್ನೇಯ ಏಷ್ಯಾದಲ್ಲಿ ಮಲೇಶ್ಯಾ ತನ್ನ ಗಡಿಗಳನ್ನು ಮುಚ್ಚಿದ ಬಳಿಕ ಮಲೇಶ್ಯಾ ಮತ್ತು ಸಿಂಗಾಪುರದ ನಡುವಣ ಆರ್ಥಿಕ ವ್ಯವಹಾರಕ್ಕೆ ಧಕ್ಕೆ ಉಂಟಾಗಿದೆ. ವಿದೇಶೀಯರಿಗೆ ತನ್ನ ಮುಖ್ಯ ದ್ವೀಪದಿಂದ ತೆರಳಲು ೭೨ ಗಂಟೆಗಳ ಕಾಲಾವಕಾಶ ನೀಡಿ ಹೊರಡಿಸಿದ್ದ ಆದೇಶವನ್ನು ಫಿಲಿಪ್ಪೈನ್ಸ್ ಹಿಂಪಡೆದಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ಅಮೆರಿಕದ ದಕ್ಷಿಣ ಗಡಿಯನ್ನು ಅಕ್ರಮವಾಗಿ ಪ್ರವೇಶಿಸುವ ಎಲ್ಲ ಮೆಕ್ಸಿಕೊ ಜನರನ್ನು ತತ್ ಕ್ಷಣವೇ ಹಿಂದಕ್ಕೆ ಕಳುಹಿಸುವ ಯೋಜನೆಯನ್ನು ಪರಿಶೀಲಿಸುತ್ತಿದೆ. ಆದರೆ ಯೋಜನೆ ಇನ್ನೂ ಅಂತಿಮಗೊಂಡಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಮಾಧ್ಯಮ ಒಂದಕ್ಕೆ ತಿಳಿಸಿದರು.

ಪಶ್ಚಿಮ ವರ್ಜೀನಿಯಾದಲ್ಲಿ ಕೊರೋನಾವೈರಸ್ ಸೋಂಕು ವರದಿಯಾದ ಬಳಿಕ ಈಗ ಅಮೆರಿಕದ ಪ್ರತಿಯೊಂದು ರಾಜ್ಯದಲ್ಲೂ ಸೋಂಕು ಹರಡಿದೆ.

ಅತಿ ದೂರದ ಹವಾಯಿಯಲ್ಲಿ ಗವರ್ನರ್ ಅವರು ತಮ್ಮ ದ್ವೀಪದ ರಜಾದಿನಗಳ ಪಯಣವನ್ನು ಕನಿಷ್ಠ ಮುಂದಿನ ೩೦ ದಿನಗಳ ಅವಧಿಗೆ ಮುಂದೂಡುವಂತೆ ಪ್ರವಾಸಿಗರಿಗೆ ಸಲಹೆ ಮಾಡಿದ್ದಾರೆ. ನೆವಾಡಾದ ಗವರ್ನರ್ ಅವರು ರಾಜ್ಯದ ಕ್ಯಾಸಿನೋಗಳನ್ನು ಒಂದು ತಿಂಗಳ ಕಾಲ ಮುಚ್ಚಲು ಆದೇಶ ನೀಡಿದ್ದಾರೆ.

ಜಾಗತಿಕ ಗಡಿಗಳ ಬಂದ್ ಪರಿಣಾಮವಾಗಿ ಆರ್ಥಿಕತೆ ಮೇಲೆ ತೀವ್ರ ಪರಿಣಾಮವಾಗುತ್ತಿರುವುದಿಂದ ಚಿಂತಿತವಾಗಿರುವ ಅಮೆರಿಕ, ಬ್ರಿಟನ್ ಮತ್ತು ನೆದರ್ ಲ್ಯಾಂಡ್ ಕೋಟ್ಯಂತರ ಡಾಲರ್ ಮೊತ್ತದ ರಕ್ಷಣಾ ಪ್ಯಾಕೇಜ್ಗಳನ್ನು ಪ್ರಕಟಿಸಿವೆ. ವಿಶ್ವ ಹಣಕಾಸು ಸಂಸ್ಥೆಯ (ಐಎಂಎಫ್ಪ್ರಬಲ ಟೀಕಾಕಾರನಾಗಿರುವ ವೆನೆಜುವೆಲಾ ಬಿಲಿಯನ್ ಡಾಲರ್ ಸಾಲ ನೀಡುವಂತೆ ವಿಶ್ವ ಹಣಕಾಸು ಸಂಸ್ಥೆಯನ್ನು ಕೋರಿದೆ.

ಏಷ್ಯಾದ ಪ್ರಮುಖ ಷೇರುಪೇಟೆಗಳು ಬುಧವಾರ ಬೆಳಗ್ಗೆ ಚೇತರಿಕೆ ತೋರಿ ಬಳಿಕ ಕುಸಿದವು. ಟ್ರಂಪ್ ಅವರ ನೆರವಿನ ಭರವಸೆ ಹಿನ್ನೆಲೆಯಲ್ಲಿ  ವಾಲ್ಸ್ಟ್ರೀಟಿನಲ್ಲಿ ಚೇತರಿಕೆ ಕಂಡ ಬಳಿಕ ಬೆಳಗ್ಗೆ ಷೇರುಪೇಟೆಗಳು ಸ್ವಲ್ಪ ಏರುಮುಖವಾಗಿದ್ದವು.

ಐರೋಪ್ಯ ಒಕ್ಕೂಟಕ್ಕೆ ೩೦ ದಿನಗಳ ಕಾಲ ವಿದೇಶೀಯರನ್ನು ನಿಷೇಧಿಸಲು ಸರ್ವಾನುಮತದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬ್ರಸ್ಸೆಲ್ಸ್ನಲ್ಲಿ ಯುರೋಪಿಯನ್ ಕಮಿಷನ್ ಅಧ್ಯಕ್ಷ ಉರ್ಸುಲಾ ವೊನ್ ಡೆರ್ ಲಿಯೆನ್ ಹೇಳಿದರು.

ಕೆಲವೇ ಕೆಲವು ಅಪವಾದಗಳನ್ನು ಹೊರತುಪಡಿಸಿ, ಸಾಮೂಹಿಕ ಪ್ರವೇಶ ನಿಷೇಧದ ಕಮೀಷನ್ ಪ್ರಸ್ತಾಪಕ್ಕೆ ನಾರ್ವೆ, ಸ್ವಿಜರ್ಲೆಂಡ್, ಐಸ್ಲ್ಯಾಂಡ್ ಮತ್ತು ಬ್ರಿಟನ್ ಸೇರಿದಂತೆ ಎಲ್ಲ ಐರೋಪ್ಯ ನಾಯಕರೂ ಸಮ್ಮೇಳನದಲ್ಲಿ ಒಪ್ಪಿದ್ದಾರೆ ಎಂದು ಜರ್ಮನ್ ಚಾನ್ಸಲರ್ ಅಂಗೇಲಾ ಮರ್ಕೆಲ್ ನುಡಿದರು. ಜರ್ಮನಿಯು ನಿರ್ಣಯವನ್ನು ತತ್ ಕ್ಷಣವೇ ಜಾರಿಗೊಳಿಸುವುದು ಎಂದು ಅವರು ಹೇಳಿದರು.

ಆದರೆ ಸುಲಿಲಿತವಾಗಿ ಇದರ ಜಾರಿಗೆ ಈವರೆಗೆ ಐರೋಪ್ಯ ಒಕ್ಕೂಟ ವಿಫಲಗೊಂಡಿದೆ.
ಬುಧವಾರ ವಾರ್ಸಾವು ಪ್ರತಿಯೊಬ್ಬ ಚಾಲಕನನ್ನೂ ಕೋವಿಡ್-೧೯ರ ಲಕ್ಷಣ ಪತ್ತೆ ಸಲುವಾಗಿ ಪರೀಕ್ಷೆಗೆ ಒಳಪಡಿಸುವಂತೆ ಆಜ್ಞಾಪಿಸಿದ ಬಳಿಕ ಸಹಸ್ರಾರು ಟ್ರಕ್ಕುಗಳು ಲಿಥುವೇನಿಯಾದಲ್ಲಿ ಪೋಲಂಡ್ ಕಡೆಗೆ ಹೋಗುವ ರಸ್ತೆಗಳಲ್ಲಿ ಕಿಕ್ಕಿರಿದವು. ಮಂಗಳವಾರ ರಾತ್ರಿಯಿಂದಲೇ ಟ್ರಕ್ಕುಗಳ ಸಾಲುಗಳು ಆರಂಭವಾಗಿದ್ದು ೬೦ ಕಿಮೀ (೩೭) ಮೈಲುಗಳಷ್ಟು ದೂರಕ್ಕೂ ವಾಹನಗಳು ನಿಂತಿದ್ದವು.

ಗಡಿಗಳನ್ನು ಮುಚ್ಚಿದ್ದರಿಂದಾಗಿ ಸಿಂಗಾಪುರ ಪ್ರವೇಶಿಸಲು ಮಲೇಶ್ಯಾ ಜನರು ತಿಣುಕಾಡಬೇಕಾಯಿತು. ವಿವಿಧ ಕೆಲಸಗಳಿಗಾಗಿ ಮಲೇಶ್ಯಾ-ಸಿಂಗಾಪುರ ಮಧ್ಯೆ ಪ್ರತಿದಿನ ,೦೦,೦೦೦ಕ್ಕೂ ಹೆಚ್ಚು ಜನರು ಪ್ರಯಾಣ ಮಾಡುತ್ತಿದ್ದು, ಅವರಲ್ಲಿ ಬಹುತೇಕ ಮಂದಿ ವಾಹನ ದಟ್ಟಣೆಯಲ್ಲಿ ಸಿಕ್ಕಿಹಾಕಿಕೊಂಡರು.

No comments:

Advertisement