Wednesday, March 18, 2020

ಭಾರತ: ೧೫೧ಕ್ಕೆ ಏರಿದ ಕೋವಿಡ್-೧೯, ಮಹಾರಾಷ್ಟ್ರದಲ್ಲಿ ೪೨

ಭಾರತ: ೧೫೧ಕ್ಕೆ ಏರಿದ ಕೋವಿಡ್-೧೯,  ಮಹಾರಾಷ್ಟ್ರದಲ್ಲಿ ೪೨
ನವದೆಹಲಿ: ಭಾರತದಲ್ಲಿ ವಿವಿಧ ಕಡೆ ಹೊಸದಾಗಿ ಸೋಂಕು ತಗುಲಿದ ಪ್ರಕರಣಗಳ ವರದಿಯ ಬಳಿಕ ಕೊರೋನಾ ವೈರಸ್ (ಕೋವಿಡ್ -೧೯) ಸೋಂಕಿತರ ಸಂಖ್ಯೆ  ೧೫೧ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ 2020 ಮಾರ್ಚ್  18ರ  ಬುಧವಾರ ತಿಳಿಸಿತು.

೧೫೧ ಜನರಲ್ಲಿ ೧೨೬ ಮಂದಿ ಭಾರತೀಯರಾಗಿದ್ದು, ೨೫ ಮಂದಿ ವಿದೇಶೀಯರು ಎಂದು ಸಚಿವಾಲಯ ಹೇಳಿತು.

ವೈರಸ್ ಸೋಂಕಿತರ ರಾಜ್ಯವಾರು ವಿವರಗಳನ್ನು ನೀಡಿದ ಆರೋಗ್ಯ ಸಚಿವಾಲಯ ಕೋವಿಡ್ ೧೯ ದೃಢಪಟ್ಟ ೪೨ ಪ್ರಕರಣಗಳೊಂದಿಗೆ ಮಹಾರಾಷ್ಟ್ರವು ಸೋಂಕಿತ ರಾಜ್ಯಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಅದರ ನಂತರದ ಸ್ಥಾನದಲ್ಲಿ ಇರುವ ಕೇರಳವು ೨೭, ಉತ್ತರ ಪ್ರದೇಶ ೧೬ ಮತ್ತು ಕರ್ನಾಟಕ ೧೧ ಪ್ರಕರಣಗಳನ್ನು ದಾಖಲಿಸಿವೆ ಎಂದು ತಿಳಿಸಿತು.

ಸೋಂಕು ತಗುಲಿದ ವ್ಯಕ್ತಿಗಳ ಸಂಪರ್ಕಕ್ಕೆ ಬಂದ ,೭೦೦ಕ್ಕೂ ಹೆಚ್ಚು ಮಂದಿಯನ್ನು ತೀವ್ರ ಕಣ್ಗಾವಲಿನಲ್ಲಿ ಇರಿಸಲಾಗಿದೆ ಎಂದು ಸಚಿವಾಲಯ ಹೇಳಿತು.

ದೆಹಲಿಯಲ್ಲಿ ಈವರೆಗೆ ಕೊರೋನಾವೈರಸ್ ಸೋಂಕು ತಗುಲಿದ ೧೦ ಪ್ರಕರಣಗಳು ವರದಿಯಾಗಿದ್ದು, ಇವುಗಳ ಪೈಕಿ ಒಬ್ಬ ವಿದೇಶೀ ಪ್ರಜೆ ಸೇರಿದ್ದಾನೆ.

ಸರ್ಕಾರಿ ಮಾಹಿತಿಯ ಪ್ರಕಾರ, ೧೪ ಸೋಂಕು ಪೀಡಿತರು ಈವರೆಗಿನ ಅವಧಿಯಲ್ಲಿ ಗುಣಮುಖರಾಗಿದ್ದು ಅವರನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ. ಇವರಲ್ಲಿ ಕೇರಳದಲ್ಲಿ ಕಳೆದ ತಿಂಗಳು ಬಿಡುಗಡೆ ಮಾಡಲಾಗಿದ್ದ ಮೂವರು ವಿದಾರ್ಥಿಗಳೂ ಸೇರಿದ್ದಾರೆ.

ವಿಶ್ವಾದ್ಯಂತ ೧೧,೫೦೦ ಮಂದಿಗೆ ಹೊಸದಾಗಿ ಸೋಂಕು ತಗುಲಿದ್ದು, ಇದರೊಂದಿಗೆ ಸೋಂಕು ದೃಢಪಟ್ಟ ಪ್ರಕರಣಗಳ ಸಂಖ್ಯೆ ,೭೯,೦೦೦ವನ್ನು ದಾಟಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಮಂಗಳವಾರದ ತನ್ನ ವರದಿಯಲ್ಲಿ ತಿಳಿಸಿತ್ತು.

ಮಂಗಳವಾರ ಸೋಂಕಿಗೆ ಒಟ್ಟು ೪೭೫ ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ ೭೪೨೬ಕ್ಕೆ ತಲುಪಿದೆ ಎಂದು ವರದಿ ಹೇಳಿತ್ತು. ಭಾರತದಲ್ಲಿ ಈವರೆಗೆ ಮೂವರು ಸೋಂಕಿಗೆ ಬಲಿಯಾಗಿದ್ದಾರೆ.

ಸರ್ಕಾರವು ಮಂಗಳವಾರ ಅಫ್ಘಾನಿಸ್ಥಾನ, ಫಿಲಿಪ್ಪೈನ್ಸ್ ಮತ್ತು ಮಲೇಶ್ಯಾದಿಂದ ಭಾರತಕ್ಕೆ ಪ್ರಯಾಣಿಕರ ಪ್ರವೇಶವನ್ನು ತತ್ ಕ್ಷಣದಿಂದ ಜಾರಿಗೆ ಬರವಂತೆ ನಿಷೇಧಿಸಿತ್ತು.

ದೇಶದಲ್ಲಿ ಕೊರೋನಾವೈರಸ್ ಪ್ರಕರಣಗಳು ಹೆಚ್ಚುತ್ತಿರುವಂತೆಯೇ ಸರ್ಕಾರವು ಐರೋಪ್ಯ ಒಕ್ಕೂಟ ರಾಷ್ಟ್ರಗಳು, ಟರ್ಕಿ ಮತ್ತು ಇಂಗ್ಲೆಂಡಿನಿಂದ ಕೂಡಾ ಪ್ರವಾಸಿಗರ ಭಾರತ ಪ್ರವೇಶವನ್ನು ನಿಷೇಧಿಸಿದೆ.

 ಮಾರ್ಚ್ ೧೮ರ ಬುಧವಾರ ಜಾರಿಯಾಗಿರುವ ನಿಷೇಧ ಮಾರ್ಚ್ ೩೧ರವರೆಗೆ ಮುಂದುವರೆಯಲಿದೆ.

No comments:

Advertisement