My Blog List

Wednesday, April 22, 2020

ರಿಲಯನ್ಸ್ ಜಿಯೋದಲ್ಲಿ ಫೇಸ್ ಬುಕ್ ಕೈ, ಶೇಕಡಾ ೯.೯೯ ಪಾಲು ಖರೀದಿ

ರಿಲಯನ್ಸ್ ಜಿಯೋದಲ್ಲಿ ಫೇಸ್ ಬುಕ್ ಕೈ,  ಶೇಕಡಾ .೯೯ ಪಾಲು ಖರೀದಿ, ಭಾರತೀಯ ತಂತ್ರಜ್ಞಾನ ವಲಯದಲ್ಲಿ ಅತಿದೊಡ್ಡ ಎಫ್ಡಿಐ
ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ಐಎಲ್) ಟೆಲಿಕಾಂ ಘಟಕವಾದ ರಿಲಯನ್ಸ್ ಜಿಯೋ ತನ್ನ ಶೇ ..೯೯ ರಷ್ಟು ಪಾಲನ್ನು . ಬಿಲಿಯನ್ ಡಾಲರ್ ಅಥವಾ ೪೩,೫೭೪ ಕೋಟಿ ರೂಪಾಯಿಗಳಿಗೆ ಅಮೆರಿಕದ ತಂತ್ರಜ್ಞಾನ ದೈತ್ಯ ಸಂಸ್ಥೆ ಫೇಸ್ಬುಕ್ಗೆ   2020 ಏಪ್ರಿಲ್ 22ರ ಬುಧವಾರ ಮಾರಾಟ ಮಾಡಿತು.
.೬೨ ಲಕ್ಷ ಕೋಟಿ ರೂಪಾಯಿ ಮೊತ್ತದ ಬಹುಕೋಟಿ ಡಾಲರ್ ಒಪ್ಪಂದವು ಫೇಸ್ಬುಕ್ನ್ನು ಜಿಯೋ ಪ್ಲಾಟ್ಫಾರ್ಮ್ಸ್ ಲಿಮಿಟೆಡ್ನಲ್ಲಿ ಅತಿದೊಡ್ಡ ಅಲ್ಪಸಂಖ್ಯಾತ ಷೇರುದಾರರನ್ನಾಗಿ ಮಾಡುತ್ತದೆ.

ಪಾಲುದಾರಿಕೆಯನ್ನು ಅಭೂತಪೂರ್ವ ಎಂಬುದಾಗಿ ಬಣ್ಣಿಸಿದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ’ಇದು ವಿಶ್ವದ ಯಾವುದೇ ಭಾಗದಲ್ಲಿ ತಂತ್ರಜ್ಞಾನ ಕಂಪನಿಯ ಅಲ್ಪಸಂಖ್ಯಾತ ಪಾಲನ್ನು ಹೊಂದಿರುವ ಅತಿದೊಡ್ಡ ಹೂಡಿಕೆಯಾಗಿದೆ ಮತ್ತು ಭಾರತದ ತಂತ್ರಜ್ಞಾನ ಕ್ಷೇತ್ರದಲ್ಲಿ ಅತಿದೊಡ್ಡ ನೇರ ಬಂಡವಾಳ ಹೂಡಿಕೆ (ಎಫ್ಡಿಐ) ಆಗಿದೆಎಂದು ಹೇಳಿತು.

ಸಹಭಾಗಿತ್ವವು ಆರ್ಐಎಲ್ಗೆ ತನ್ನ ಸಾಲದ ಹೊರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ವೇಗವಾಗಿ ಬೆಳೆಯುತ್ತಿರುವ ಮತ್ತು ಬೃಹತ್ ಮಾರುಕಟ್ಟೆಯಲ್ಲಿ ಫೇಸ್ಬುಕ್ಗೆ ದೃಢವಾದ ಹೆಜ್ಜೆಯನ್ನು ಇರಿಸಲು ನೆರವಾಗುತ್ತದೆ.

ಸಣ್ಣ ಉದ್ಯಮಗಳೊಂದಿಗೆ ಸಂಪರ್ಕಿಸಲು ಜನರಿಗೆ ಸಹಾಯ ಮಾಡಲು ತನ್ನ ಮೆಸೇಜಿಂಗ್ ಪ್ಲಾಟ್ಫಾರ್ಮ್ ವಾಟ್ಸಪ್ನ್ನು ರಿಲಯನ್ಸ್ -ಕಾಮರ್ಸ್ ಉದ್ಯಮ ಜಿಯೋಮಾರ್ಟ್ನೊಂದಿಗೆ ಸಮನ್ವಯಗೊಳಿಸುವತ್ತ ಗಮನ ಹರಿಸುವುದಾಗಿ ಸಾಮಾಜಿಕ ಮಾಧ್ಯಮ ದೈತ್ಯ ಫೇಸ್ಬುಕ್ ಹೇಳಿದೆ.

ಫೇಸ್ಬುಕ್ನೊಂದಿಗಿನ ಸಹಭಾಗಿತ್ವದ ಕುರಿತು ಪ್ರತಿಕ್ರಿಯಿಸಿದ ಆರ್ಐಎಲ್ ಅಧ್ಯಕ್ಷ ಮುಖೇಶ್ ಅಂಬಾನಿ, ’೨೦೧೬ ರಲ್ಲಿ ರಿಲಯನ್ಸ್ ಜಿಯೋವನ್ನು ಪ್ರಾರಂಭಿಸಿದಾಗ, ಪ್ರತಿಯೊಬ್ಬ ಭಾರತೀಯರ ಜೀವನ ಮಟ್ಟವನ್ನು ಸುಧಾರಿಸಲು ಮತ್ತು ವಿಶ್ವದ ಪ್ರಮುಖ ಡಿಜಿಟಲ್ ಸೊಸೈಟಿಯಾಗಿ ಭಾರತವನ್ನು ಮುನ್ನಡೆಸಲು ಭಾರತದ ಡಿಜಿಟಲ್ ಸರ್ವೋದಯದ ಕನಸಿನಿಂದ ನಾವು ಪ್ರೇರೇಪಿಸಲ್ಪಟ್ಟಿದ್ದೇವೆ. ಆದ್ದರಿಂದ ರಿಲಯನ್ಸ್ನಲ್ಲಿರುವ ನಾವೆಲ್ಲರೂ ಫೇಸ್ಬುಕ್ನ್ನು ನಮ್ಮ ದೀರ್ಘಕಾಲೀನ ಪಾಲುದಾರರಾಗಿ ಸ್ವಾಗತಿಸುವ ಅವಕಾಕ್ಕಾಗಿ ವಿನೀತರಾಗಿದ್ದೇವೆಎಂದು ಹೇಳಿದರು.

ಜಿಯೋ ಮತ್ತು ಫೇಸ್ಬುಕ್ ಸಂಯೋಜಿತ ಪ್ರಯತ್ನವು  ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾ ಗುರಿಯನ್ನು ಅನುಷ್ಠಾನಗೊಳಿಸಿ ಭಾರತೀಯರ ಬದುಕು ಮತ್ತು ಉದ್ಯಮವನ್ನು ಹಗುರಗೊಳಿಸುವ ಎರಡು ಮಹತ್ವಾಕಾಂಕ್ಷೆಗಳನ್ನು ಈಡೇರಿಸಲಿದೆ. ಕೊರೋನಾ ನಂತರದ ಯುಗದಲ್ಲಿ ಭಾರತದ ಆರ್ಥಿಕತೆಯ ಪುನಃಶ್ಚೇತನ ಪಡೆಯಲಿದ್ದು ಅಲ್ಪಾವಧಿಯಲ್ಲೇ ಪುಟಿದೇಳಲಿದೆ. ಪರಿವರ್ತನೆಗೆ ಉಭಯ ಕಂಪೆನಿಗಳ ನಡುವಣ ಪಾಲುದಾರಿಕೆಯ ಮಹತ್ವದ ಕಾಣಿಕೆ ನೀಡಲಿದೆ ಎಂದು ಅವರು ಹೇಳಿದರು.

ಜಿಯೋ ಜೊತೆಗಿನ ಸಹಯೋಗವು ಬೆಳೆಯುತ್ತಿರುವ ಡಿಜಿಟಲ್ ಆರ್ಥಿಕತೆಯಲ್ಲಿ ವ್ಯವಹಾರಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಹೊಸ ಮಾರ್ಗಗಳನ್ನು ಜನರಿಗೆ ಸೃಷ್ಟಿಸಿಕೊಡಲಿದೆ ಎಂದು ಫೇಸ್ಬುಕ್ ಪೋಸ್ಟ್ನಲ್ಲಿ ಮಾರ್ಕ್ ಜುಕರ್ಬರ್ಗ್ ಹೇಳಿದರು.

"ಉದಾಹರಣೆಗೆ, ವಾಟ್ಸಪ್ ಶಕ್ತಿಯೊಂದಿಗೆ ಜಿಯೋಮಾರ್ಟ್ನ್ನು ಒಟ್ಟುಗೂಡಿಸುವ ಮೂಲಕ, ವ್ಯವಹಾgಕ್ಕಾಗಿ ಸಂಪರ್ಕ ಸಾಧಿಸಲು, ಶಾಪಿಂಗ್ ಮಾಡಲು ಮತ್ತು ಅಂತಿಮವಾಗಿ ಉತ್ಪನ್ನಗಳನ್ನು ತಡೆರಹಿತವಾಗಿ ಮೊಬೈಲ್ ಬಳಸುವ ಮೂಲಕ ಖರೀದಿಸಲು ನಾವು ಜನರನ್ನು ಶಕ್ತಗೊಳಿಸಬಹುದುಎಂದು ಅವರು ನುಡಿದರು.

ಜಿಯೋ ಪ್ಲಾಟ್ಫಾರ್ಮ್ಗಳು, ರಿಲಯನ್ಸ್ ರಿಟೇಲ್ ಲಿಮಿಟೆಡ್ ಮತ್ತು ವಾಟ್ಸಪ್ ಬಳಸಿ ಜಿಯೋಮಾರ್ಟ್ ಪ್ಲಾಟ್ಫಾರ್ಮ್ನಲ್ಲಿ ರಿಲಯನ್ಸ್ ರಿಟೇಲ್ ಹೊಸ ವಾಣಿಜ್ಯ ವ್ಯವಹಾರವನ್ನು ಇನ್ನಷ್ಟು ವೇಗಗೊಳಿಸಲು ಮತ್ತು ವಾಟ್ಸಪ್ನಲ್ಲಿ ಸಣ್ಣ ಉದ್ಯಮಗಳಿಗೆ ಬೆಂಬಲ ನೀಡಲು ವಾಣಿಜ್ಯ ಪಾಲುದಾರಿಕೆ ಒಪ್ಪಂದವನ್ನು ಮಾಡಿಕೊಂಡಿದೆ ಎಂದು ಉಭಯ ಕಂಪೆನಿಗಳು ಘೋಷಿಸಿದವು.

"ರಿಲಯನ್ಸ್ ರಿಟೇಲ್ ಹೊಸ ವಾಣಿಜ್ಯ ವೇದಿಕೆ, ಜಿಯೋಮಾರ್ಟ್ ಅನ್ನು ಲಕ್ಷಾಂತರ ಸಣ್ಣ ವ್ಯಾಪಾರಿಗಳು ಮತ್ತು ಕಿರಾಣಿ ಅಂಗಡಿಗಳ ಸಹಭಾಗಿತ್ವದಲ್ಲಿ ನಿರ್ಮಿಸಲಾಗಿದ್ದು, ಭಾರತೀಯ ಗ್ರಾಹಕರ ಅಗತ್ಯಗಳನ್ನು ಉತ್ತಮವಾಗಿ ಪೂರೈಸಲು ಅವರಿಗೆ ಅಧಿಕಾರ ನೀಡುತ್ತದೆ. ಗ್ರಾಹಕರು ಹತ್ತಿರದ ಕಿರಾಣಿಗಳನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ ಎಂದು ಖಚಿತಪಡಿಸಿಕೊಳ್ಳಲು ಕಂಪನಿಗಳು ನಿಕಟವಾಗಿ ಕಾರ್ಯನಿರ್ವಹಿಸುತ್ತವೆ. ವಾಟ್ಸಪ್ ಬಳಸಿ ಜಿಯೋಮಾರ್ಟ್ನೊಂದಿಗೆ  ತಮ್ಮ ಇಷ್ಟದಂತೆ ವಹಿವಾಟು ನಡೆಸುವ ಮೂಲಕ ಯಾರು ಬೇಕಾದರೂ ತಮ್ಮ ಮನೆಗಳಿಗೆ ಉತ್ಪನ್ನಗಳು ಮತ್ತು ಸೇವೆಗಳನ್ನು ಪಡೆಯಬಹುದುಎಂದು ರಿಲಯನ್ಸ್ ಜಿಯೋ ಹೇಳಿಕೆ ತಿಳಿಸಿದೆ.

No comments:

Advertisement