Monday, April 20, 2020

ಈ ಅಗ್ಗದ ವೆಂಟಿಲೇಟರಿಗೆ ವಿದ್ಯುತ್ತೇ ಬೇಕಿಲ್ಲ.!

ಈ ಅಗ್ಗದ ವೆಂಟಿಲೇಟರಿಗೆ ವಿದ್ಯುತ್ತೇ ಬೇಕಿಲ್ಲ.!
ಬೆಂಗಳೂರು ಕಂಪೆನಿ ಸಾಧನೆ: ನೀತಿ ಆಯೋಗದ ಮೆಚ್ಚುಗೆ
ನವದೆಹಲಿ:  ಕೊರೋನಾವೈರಸ್ ಬಿಕ್ಕಟ್ಟಿನ ಮಧ್ಯೆ, ಬೆಂಗಳೂರು ಮೂಲದ ತಂತ್ರಜ್ಞಾನ ಸಂಸ್ಥೆಯೊಂದು ವಿದ್ಯುತ್ತಿನ ಅಗತ್ಯವೇ ಇಲ್ಲದ ವಿಶ್ವದಲ್ಲೇ ಅತ್ಯಂತ ಅಗ್ಗದ ವೆಂಟಿಲೇಟರನ್ನು ತಯಾರಿಸಿದೆ. ತನ್ಮೂಲಕ ಸಂಸ್ಥೆಯು ವೆಂಟಿಲೇಟರುಗಳ ಅಭಾವದ ಸವಾಲಿಗೆ ಉತ್ತರ ನೀಡಿದೆ.

ಕೇವಲ ೨೫೦೦ ರೂಪಾಯಿ ಬೆಲೆಯ ವೆಂಟಿಲೇಟರ್ ವಿಶ್ವದಲ್ಲೇ ಅತ್ಯಂತ ಕಡಿಮೆ ದರದ ಮಾದರಿಯ ವೆಂಟಿಲೇಟರ್ ಆಗಿದೆ. ಉಪಕರಣವನ್ನು ಬೆಂಗಳೂರು ಮೂಲಕ ಡೈನಾಮಿಕ್ ಟೆಕ್ ಸಂಸ್ಥೆಯು ತಯಾರಿಸಿದೆ. ಸಂಸ್ಥೆಯು ಉತ್ತಮ ಗುಣಮಟ್ಟದ ಎಂಜಿನಿಯರಿಂಗ್ ಉತ್ಪನ್ನಳನ್ನು ವಾಹನ (ಆಟೋಮೋಟಿವ್), ವೈಮಾನಿಕ (ಏರೋನಾಟಿಕ್) ಮತ್ತು ಭದ್ರತಾ ಉದ್ದೇಶಗಳಿಗಾಗಿ ತಯಾರಿಸುತ್ತದೆ.

ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಅವರು 2020 ಏಪ್ರಿಲ್ 20ರ ಸೋಮವಾರ  ಟ್ವಟ್ಟರ್ ಮೂಲಕಭಾರತೀಯ ಸಂಶೋಧನೆಯನ್ನು ಶ್ಲಾಘಿಸಿದರು. ಇಂತಹ ಸಂಶೋಧನೆಗಳು ಗ್ರಾಮೀಣ ಆರೋಗ್ಯ ಕೇಂದ್ರಗಳು ಮತ್ತು ಸ್ಥಳೀಯ ಆಸ್ಪತ್ರೆಗಳಿಗೆ ಅತ್ಯಂತ ನಿರ್ಣಾಯಕವಾಗಿವೆ ಎಂದು ಅವರು ಹೇಳಿದರು.
ಉಪಕರಣದ ಕಾರ್ಯ ನಿರ್ವಹಣೆಗೆ ವಿದ್ಯುತ್ ಬೇಕಾಗಿಯೇ ಇಲ್ಲ ಮತ್ತು ಇದರ ನಿರ್ಮಾಣಕ್ಕೆ ಆಮದು ಭಾಗಗಳ ಅಗತ್ಯವೂ ಇಲ್ಲ. ವೆಂಟಿಲೇಟರ್ ಒತ್ತಡವನ್ನು ನಿರ್ವಹಿಸುತ್ತದೆ ಮತ್ತು ನಿಯಂತ್ರಿತ ಪ್ರಮಾಣದ ಉಸಿರಾಟಕ್ಕಾಗಿ ಆಮ್ಲಜನಕವನ್ನು ಕೂಡಾ ನಿಯಂತ್ರಿಸುತ್ತದೆ.

ಶೂನ್ಯ ವಿದ್ಯುತ್ತು, ಆಮದು ಬೇಕಾಗಿಲ್ಲ, ಎಲೆಕ್ಟ್ರಾನಿಕ್ ಭಾಗಗಳಿಲ್ಲ. ಗರಿಷ್ಠ/ ಕನಿಷ್ಠ ಒತ್ತಡವನ್ನು ನಿರ್ವಹಿಸುತ್ತದೆ. ನಿಯಂತ್ರಿತ ಆಮ್ಲಜನಕ ಮಿಶ್ರಣ ನಿಯಂತ್ರಿತ ಉಸಿರಾಟ ದರ. ಬೆಲೆ: ಒಂದಕ್ಕೆ ೨೫೦೦ ರೂಪಾಯಿ ಎಂದು ಕಾಂತ್ ಟ್ವೀಟ್ ಮಾಡಿದರು.

ಉಪಕರಣದ ಕೈಗೆಟಕುವ ದರ ಮತ್ತು ಸುಲಭ ತಯಾರಿಕೆಯು ಇದನ್ನು ದೂರದ ಮತ್ತು ದೇಶದ ಗ್ರಾಮೀಣ ಭಾಗಗಳಲ್ಲಿ ಆರೋಗ್ಯ ಕಾಳಜಿಗಾಗಿ ಅತ್ಯುತ್ತಮ ಆಯ್ಕೆಯನ್ನಾಗಿ ಮಾಡಿದೆ. ಇನ್ನೊಂದು ಅನುಕೂಲವೆಂದರೆ ವೆಂಟಿಲೇಟರುಗಳು ಬಳಸಿ ಬಿಸಾಡಬಹುದಾದ, ಸುಲಭವಾಗಿ ಒಯ್ಯಬಹುದಾದ ಮತ್ತು ಬಳಕೆಗೆ ಅತ್ಯಂತ ಸುಲಭವಾದುದಾಗಿವೆ ಎಂದು ಕಾಂತ್ ನುಡಿದರು.

ಪ್ರಾಣಗಳನ್ನು ರಕ್ಷಿಸಲು ಇಂತಹ ಆವಿಷ್ಕಾರ ಅಗತ್ಯ ಭಾರತಕ್ಕೆ ಇದೆ ಎಂದು ಕಾಂತ್ ಟ್ವೀಟ್ ಹೇಳಿದೆ.

ಕೇವಲ ,೫೦೦ ರೂಪಾಯಿ ದರವನ್ನು ನಿಗದಿಪಡಿಸಲಾಗಿರುವ ಉಪಕರಣ ವಿಶ್ವದಲ್ಲಿಯೇ ಅತ್ಯಂತ ಅಗ್ಗದ ವೆಂಟಿಲೇಟರ್ ಎಂದೂ ಕಾಂತ್ ಹೇಳಿದರು.

ಏರ್ ಬಸ್ ಮತ್ತು ಬೋಯಿಂಗ್ಗಳಿಗೆ ವಿವಿಧ ಭಾಗಗಳನ್ನು ಸರಬರಾಜು ಮಾಡುವ ಸರಪಣಿಯ  ಅವಿಭಾಜ್ಯ ಅಂಗವಾಗಿದೆ ಡೈನಾಮಿಕ್ ಟೆಕ್. ಇದು ಮುಂಚೂಣಿಯ ಆಟೋ ಭಾಗಗಳ ನಿರ್ಮಾಣ ಸಂಸ್ಥೆಯಾಗಿದ್ದು ಉನ್ನತ ದರ್ಜೆಯ ಎಂಜಿನಿಯರಿಂಗ್ ಕಂಪೆನಿಯಾಗಿದೆ ಎಂದು ಅವರು ತಿಳಿಸಿದರು.

ಅಫ್ಘಾನಿಸ್ಥಾನದಲ್ಲೂ ಯತ್ನ: ಮಧ್ಯ ತಾವು ಕೂಡಾ ಜೀವ ಸಂರಕ್ಷಕ ಸಾಧನವಾದ ವೆಂಟಿಲೇಟರ್ ನಿರ್ಮಿಸುವ ಕಾರ್ಯದಲ್ಲಿ ಮಗ್ನವಾಗಿರುವುದಾಗಿ ಅಫ್ಘಾನಿಸ್ಥಾನದ ಪ್ರಶಸ್ತಿ ವಿಜೇತಗರ್ಲ್ಸ್ ರೊಬೋಟಿಕ್ಸ್ ತಂಡವು ಹೇಳಿದೆ. ತಮ್ಮ ಸಮರಗ್ರಸ್ಥ ರಾಷ್ಟ್ರಕ್ಕೆ ವೈರಸ್ ವಿರುದ್ಧದ ಹೋರಾಟಕ್ಕೆ ನೆರವಾಗುವ ಸಲುವಾಗಿ ಹಳೆ ಕಾರುಗಳ ಭಾಗಗಳನ್ನು ಬಳಸಿ ವೆಂಟಿಲೇಟರ್ ನಿರ್ಮಿಸುವ ಯತ್ನವನ್ನು ತಾವು ಮಾಡುತ್ತಿರುವುದಾಗಿ ಗರ್ಲ್ಸ್ ರೊಬೋಟಿಕ್ ತಂಡ ಹೇಳಿದೆ.

ಪೂರ್ಣಗೊಂಡ ಬಳಿಕ ವೆಂಟಿಲೇಟರ್ ಮಾದರಿಯನ್ನು ಆರೋಗ್ಯ ಸಚಿವಾಲಯಕ್ಕೆ ಪರೀಕ್ಷೆಯ ಸಲುವಾಗಿ ಕಳುಹಿಸಲಾಗುವುದು. ಮೊದಲಿಗೆ ಪ್ರಾಣಿಗಳ ಮೇಲೆ ಪ್ರಯೋಗಿಸಿ ಇದನ್ನು ಪರೀಕ್ಷಿಸಬಹುದು ಎಂದು ವಕ್ತಾರ ವಾಹಿದ್ ಮೇಯರ್ ಹೇಳಿದರು.

ಕೊರೋನಾವೈರಸ್ ವಿಶ್ವಾದ್ಯಂತ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತೀವ್ರ ಗಂಭೀರ ಸ್ಥಿತಿಯಲ್ಲಿ ಇರುವ ರೋಗಿಗಳಿಗೆ ಸಾಕಷ್ಟು ಸಂಖ್ಯೆಯಲ್ಲಿ ವೆಂಟಿಲೇಟರ್ ಒದಗಿಸಬೇಕಾದ ಅಗತ್ಯ ಹಿಂದೆಂದಿಗಿಂತಲೂ ಈಗ ಹೆಚ್ಚು ಇದೆ.
ವಿಡಿಯೋ  ವೀಕ್ಷಿಸಲು ಚಿತ್ರ ಕ್ಲಿಕ್ ಮಾಡಿರಿ


No comments:

Advertisement