Saturday, April 11, 2020

ಸದಾಕಾಲ ಲಭ್ಯ: ರಾಜ್ಯ ಮುಖ್ಯಮಂತ್ರಿಗಳಿಗೆ ಪ್ರಧಾನಿ ಮೋದಿ ಭರವಸೆ

ಸದಾಕಾಲ ಲಭ್ಯ: ರಾಜ್ಯ ಮುಖ್ಯಮಂತ್ರಿಗಳಿಗೆ ಪ್ರಧಾನಿ ಮೋದಿ ಭರವಸೆ

ನವದೆಹಲಿ: ಮುಖಗವಸು (ಮಾಸ್ಕ್) ಧರಿಸಿಕೊಂಡೇ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ 2020 ಏಪ್ರಿಲ್ 11ರ ಶನಿವಾರ ವಿಡಿಯೋ ಸವಹನ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ಕೊರೋನಾವೈರಸ್ ಸೋಂಕು ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ವಿಧಿಸಲಾಗಿರುವ ರಾಷ್ಟ್ರವ್ಯಾಪಿ ದಿಗ್ಬಂಧನವನ್ನು (ಲಾಕ್ ಡೌನ್) ವಿಸ್ತರಿಸುವ ಬಗ್ಗೆ ಯಾವುದೇ ಸಲಹೆಗಳಿಗೆ ತಾವು ಮುಕ್ತ ಮನಸ್ಸು ಹೊಂದಿರುವುದಾಗಿ ಭರವಸೆ ನೀಡಿದರು.

ನಾನು ವಾರಪೂರ್ತಿ ದಿನದ ೨೪ ಗಂಟೆ ಕೂಡಾ ನಿಮಗೆ ಲಭ್ಯನಿದ್ದೇನೆ. ಯಾರೇ ಮುಖ್ಯಮಂತ್ರಿ ನನ್ನ ಜೊತೆ ಮಾತನಾಡಿ ಕೋವಿಡ್-೧೯ಕ್ಕೆ ಸಂಬಂಧಿಸಿದಂತೆ ಯಾವುದೇ ಸಮಯದಲ್ಲಿ ಸಲಹೆ ನೀಡಬಹುದು. ನಾವೆಲ್ಲರೂ ಪರಸ್ಪರ ಹೆಗಲಿ ಹೆಗಲು ನೀಡಿ ಒಟ್ಟಿಗೆ ನಿಲ್ಲಬೇಕಾಗಿದೆಎಂದು ಪ್ರಧಾನಿ ಹೇಳಿದರು.

ವಿಡಿಯೋ ಕಾನ್ಪರೆನ್ಸಿನಲ್ಲಿ ಪಾಲ್ಗೊಂಡ ಹಲವಾರು ಮುಖ್ಯಮಂತ್ರಿಗಳೂ ಮುಖಗವಸುಗಳನ್ನು ಧರಿಸುವ ಮೂಲಕ ಮುಖಗವಸು ಧರಿಸುವುದರ ಅಗತ್ಯ ಕುರಿತು ರಾಷ್ಟ್ರಕ್ಕೆ ಸಂದೇಶ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ್ದು ಇದು ಮೂರನೇ ಸಲ. ಏಪ್ರಿಲ್ ೭ರ ಮಂಗಳವಾರ ಕೂಡಾ ಮುಖ್ಯಮಂತ್ರಿಗಳಿಂದ ಏಪ್ರಿಲ್ ೧೪ಕ್ಕೆ ಮುಕ್ತಾಯವಾಗಲಿರುವ ರಾಷ್ಟ್ರವ್ಯಾಪಿ ದಿಗ್ಬಂಧನವನ್ನು ಮುಂದುವರೆಸುವ ಬಗ್ಗೆ ಪ್ರಧಾನಿಯವರು ಹಿಮ್ಮಾಹಿತಿ ಪಡೆದಿದ್ದರು. ಏಪ್ರಿಲ್ ೨ರಂದು ಮುಖ್ಯಮಂತ್ರಿಗಳ ಜೊತೆಗಿನ ಸಂವಹನಕಾಲದಲ್ಲಿ ನಿಧಾನಗತಿಯಲ್ಲಿ ಲಾಕ್ ಡೌನ್ ನಿಂದ ಹೊರಬರುವ ಬಗ್ಗೆ ಕಾರ್‍ಯತಂತ್ರ ರೂಪಿಸುವಂತೆ ಪ್ರಧಾನಿ ಮುಖ್ಯಮಂತ್ರಿಗಳಿಗೆ ಸಲಹೆ ಮಾಡಿದ್ದರು.

ಭಾರತದಲ್ಲಿ ೭೪೪೭ ಮಂದಿಯನ್ನು ಬಾಧಿಸಿರುವ ಮಾರಕ ಕೊರೋನಾವೈರಸ್ ಸೋಂಕಿಗೆ ಈವರೆಗೆ ಸುಮಾರು ೨೫೦ರಷ್ಟು ಮಂದಿ ಬಲಿಯಾಗಿದ್ದಾರೆ.

ರಾಜಸ್ಥಾನ, ಒಡಿಶಾ ಮತ್ತು ಪಂಜಾಬ್ ರಾಜ್ಯಗಳು ದಿಗ್ಬಂಧನವನ್ನು ಏಪ್ರಿಲ್ ೩೦ರವರೆಗೆ ವಿಸ್ತರಿಸಲು ನಿರ್ಧಾರ ಕೈಗೊಂಡಿದ್ದು, ಇತರ ಬಹುತೇಕ ರಾಜ್ಯಗಳು ಲಾಕ್‌ಡೌನ್ ವಿಸ್ತರಣೆಗೆ ಪ್ರಧಾನಿಯವರನ್ನು ಕೋರಿದವು ಎಂದು ವರದಿಗಳು ತಿಳಿಸಿವೆ.

ದಿಗ್ಬಂಧನಿಂದಾಗಿ ಸಹಸ್ರಾರು ಮಂದಿ ನಿರುದ್ಯೋಗಿಗಳಾಗಿರುವ ಹಿನ್ನೆಲೆಯಲ್ಲಿ ಜೀವ ಮತ್ತು ಜೀವನ ಎರಡರ ಮಧ್ಯೆ ಸಮತೋಲನ ಸಾಧಿಸಲು ಸರ್ಕಾರ ಯತ್ನಿಸುತ್ತಿದೆ. ಇದರ ಜೊತೆ ವೈದ್ಯಕೀಯ ಮೂಲಸವಲತ್ತು ಕೂಡಾ ಕೊರೋನಾವೈರಸ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತೀವ್ರ ಒತ್ತಡಕ್ಕೆ ಒಳಗಾಗಿವೆ.

ಮುಖ್ಯಮಂತ್ರಿಗಳ ಜೊತೆ ಪ್ರಧಾನಿಯವರ ಸಭೆ ನಡೆಯುವುದಕ್ಕೆ ಮುನ್ನ ಪಶ್ಚಿಮ ಬಂಗಾಳ ಸರ್ಕಾರವು ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಧ ೧೦ ಕೊರೋನಾ ಹಾಟ್ ಸ್ಪಾಟ್‌ಗಳು ಮತ್ತು ಕ್ಲಸ್ಟರ್‌ಗಳಲ್ಲಿ ಸಂಪೂರ್ಣ ಲಾಕ್ ಡೌನ್ ವಿಧಿಸುವ ನಿರ್ಣಯ ಕೈಗೊಂಡಿತ್ತು. ದಿಗ್ಬಂಧನದಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಬಡ ಕುಟುಂಬಗಳಿಗೆ ನಗದು ಹಣ ವರ್ಗಾವಣೆ ಮಾಡುವಂತೆ ಪ್ರಧಾನಿಯವರ ಬಳಿ ಬೇಡಿಕೆ ಮುಂದಿಡುವಂತೆ ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿಗಳ ಪೈಕಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಹೊರತು ಪಡಿಸಿ ಉಳಿದ ಬಹುತೇಕ ಮುಖ್ಯಮಂತ್ರಿಗಳು ಏಪ್ರಿಲ್ ೩೦ರವರೆಗೆ ದಿಗ್ಬಂಧನ ವಿಸ್ತರಣೆಯ ಅಗತ್ಯವನ್ನು ಪ್ರತಿಪಾದಿಸಿದವು. ಕನಿಷ್ಠ ರಾಜ್ಯಗಳಂತೂ ದಿಗ್ಬಂಧನ ವಿಸ್ತರಣೆಗೆ ವಸ್ತುಶಃ ಆಗ್ರಹವನ್ನೇ ಮಾಡಿದವು.

ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರೂ ದಿಗ್ಬಂಧನ ವಿಸ್ತರಿಸುವಂತೆ ಪ್ರಧಾನಿಯನ್ನು ಕೋರಿದರು. ’ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಬಹುದು, ಆದರೆ ಜೀವಗಳ ಪುನರುಜ್ಜೀವನ ಸಾಧ್ಯವಿಲ್ಲಎಂದು ಕೆಸಿಆರ್ ನುಡಿದರು.

ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್, ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ತಮಿಳುನಾಡು ಮುಖ್ಯಮಂತ್ರಿ . ಪಳನಿಸ್ವಾಮಿ ಅವರು ಏಪ್ರಿಲ್ ೩೦ರವರೆಗೆ ಲಾಕ್ ಡೌನ್ ವಿಸ್ತರಿಸಲು ಪ್ರಧಾನಿಗೆ ಮನವಿ ಮಾಡಿದರು.

ರಾಷ್ಟ್ರಮಟ್ಟದಲ್ಲಿಯೇ ನಿರ್ಣಯ ಕೈಗೊಳ್ಳಬೇಕು, ರಾಜ್ಯಮಟ್ಟದ ನಿರ್ಣಯ ಪರಿಣಾಮಕಾರಿಯಾಗಲಾರದು. ರಸ್ತೆ, ರೈಲ್ವೇ, ವಿಮಾನಯಾನ ಸೇರಿದಂತೆ ಯಾವುದೇ ಸಾರಿಗೆಯನ್ನು ಮುಕ್ತಗೊಳಿಸಬಾರದುಎಂದು ಕೇಜ್ರಿವಾಲ್ ಹೇಳಿದರು.

ದಿಗ್ಬಂಧನ ವಿಸ್ತರಣೆ ವಿಚಾರವಾಗಿ ಮತ್ತು ಕೊರೊನಾ ಸೋಂಕು ಹರಡುವಿಕೆಗೆ ಸಂಬಂಧಿಸಿದಂತೆ ಹಾಗೂ ಕೊರೊನಾ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ರಾಜ್ಯಗಳು ಏನೇನು ಕ್ರಮ ಕೈಗೊಂಡಿವೆ ಎಂಬ ಬಗ್ಗೆಯೂ ಪ್ರಧಾನಿಯವರು ಮುಖ್ಯಮಂತ್ರಿಗಳಿಂದ ಮಾಹಿತಿ qದರು.

ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ಛತ್ತೀಸಗಡ, ಪಂಜಾಬ್ ಮತ್ತು ಉತ್ತರ ಪ್ರದೇಶ ರಾಜ್ಯಗಳ ಮುಖ್ಯಮಂತ್ರಿಗಳು ತಮ್ಮ ರಾಜ್ಯಗಳ ವಿಷಯವನ್ನು ಪ್ರಧಾನಿ ಬಳಿ ಮಂಡಿಸಿದರು. ವಲಸೆ ಕಾರ್ಮಿಕರ ಬಗ್ಗೆ ಮಹಾರಾಷ್ಟ್ರ, ದೆಹಲಿ ಮತ್ತು ಪಂಜಾಬ್ ಮುಖ್ಯಮಂತ್ರಿಗಳು ಮಾತನಾಡಿದರು. ರಾಜ್ಯ ಸರ್ಕಾರಗಳಿಗೆ ಆದಾಯ ಬರುತ್ತಿಲ್ಲ. ಹೀಗಾಗಿ ಆರ್ಥಿಕ ನೆರವು ನೀಡಬೇಕು ಎಂದೂ ಮುಖ್ಯಮಂತ್ರಿಗಳು ಪ್ರಧಾನಿ ಬಳಿ ಮನವಿ ಮಾಡಿದರು ಎಂದು ಸುದ್ದಿ ಮೂಲಗಳು ತಿಳಿಸಿದವು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ  ಅವರು ರಾಜ್ಯದ ಸದ್ಯದ ಸ್ಥಿತಿ, ಸೋಂಕು ನಿವಾರಣೆ ನಿಟ್ಟಿನಲ್ಲಿ ಸಿದ್ಧತೆ ಮತ್ತು ಮುಂದಿನ ನಡೆಯ ಬಗ್ಗೆ  ವಿಚಾರ ವಿನಿಮಯ ನಡೆಸಿದರು ಎಂದು ಮೂಲಗಳು ಹೇಳಿದವು.  ವೇಳೆ ಮುಖ್ಯಮಂತ್ರಿಯವರ  ಜೊತೆಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಬಿ. ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್. ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಭಾಗವಹಿಸಿದ್ದರು.

ವಿಡಿಯೋ ಸಂವಾದ ಆರಂಭಕ್ಕೂ ಮೊದಲು ಯಡಿಯೂರಪ್ಪ ಗೃಹ ಕಚೇರಿ ಕೃಷ್ಣದಲ್ಲಿ  ಸಚಿವರು ಮತ್ತು ಅಧಿಕಾರಿಗಳ ಜೊತೆ ಪೂರ್ವಭಾವಿ ಸಭೆ ನಡೆಸಿದ್ದರು. ಕೊರೊನಾ ವೈರಸ್ ತಡೆಗಟ್ಟಲು ತೆಗೆದುಕೊಂಡಿರುವ ಕ್ರಮಗಳ  ಕುರಿತು ಮಾಹಿತಿ ಪಡೆದುಕೊಂಡಿದ್ದರು.

 ಪ್ರಧಾನಿ ಭರವಸೆ: ಮುಖ್ಯಮಂತ್ರಿಗಳ ಎಲ್ಲ ಸಲಹೆಗಳನ್ನೂ ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಭರವ ನೀಡಿದ  ಪ್ರಧಾನಿ ಮೋದಿ ಕೇಂದ್ರ ಮತ್ತು ರಾಜ್ಯಗಲು ಹೋರಾಟದಲ್ಲಿ ಒಗ್ಗಟ್ಟು ಮೆರೆಯಬೇಕು ಎಂದು ಹೇಳಿದರು.

ನಾನು ವಾರಪೂರ್ತಿ ದಿನದ ೨೪ ತಾಸು ಕೂಡಾ ಲಭ್ಯನಿದ್ದೇನೆ. ರಾಜ್ಯಗಳು ಮತ್ತು ಕೇಂದ್ರ ಒಟ್ಟಾಗಿ ಕೆಲಸ ಮಾಡುವ ಅಗತ್ಯವಿದೆ. ನಿಮ್ಮ ಎಲ್ಲ ಸಲಹೆಗಳನ್ನು ಪರಿಗಣಿಸಲಾಗುವುದು. ಕೋವಿಡ್-೧೯ರ ವಿರುದ್ಧದ ಹೋರಾಟವನ್ನು ಪರಸ್ಪರ ಹೆಗಲಿಗೆ ಹೆಗಲು ನೀಡುತ್ತಾ ನಾವು ಒಟ್ಟಾಗಿ ಮುಂದಕ್ಕೆ ಒಯ್ಯಲಿದ್ದೇವೆಎಂದು ಪ್ರಧಾನಿ ನುಡಿದರು.

ಸಾಮಾನ್ಯ ಕಾರ್‍ಯತಂತ್ರವನ್ನು ಅನುಸರಿಸಿದರೆ, ನಾವು ಕೊರೋನಾವೈರಸ್ಸನ್ನು ಪರಾಭವಗೊಳಿಸಬಹುದು ಮತ್ತು ಬಿಕ್ಕಟ್ಟಿನಿಂದ ಸಂಭವಿಸುತ್ತಿರುವ ಜೀವ ಹಾನಿ ತಪ್ಪಿಸಬಹುದುಎಂದು ಪ್ರಧಾನಿ ಹೇಳಿದರು.

ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

ಮಧ್ಯೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂ ಎಚ್ ) ಕೂಡಾ ಏಕಾಏಕಿ ದಿಗ್ಬಂಧನಗಳನ್ನು ಸಡಿಲಿಸಿ ಪ್ರವಾಸೀ ನಿರ್ಬಂಧಗಳನ್ನು ರದ್ದು ಪಡಿಸುವುದರ ವಿರುದ್ಧ ಎಚ್ಚರಿಕೆ ನೀಡಿದೆ. ’ನಿರ್ಬಂಧಗಳನ್ನು ತೆರವುಗೊಳಿಸುವುದರಿಂದ ಮಾರಕ ರೋಗವು ಮತ್ತೆ ತಲೆಎತ್ತುವ ಅಪಾಯವಿದೆಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕ ಟೆಡ್ರೋಸ್ ಅಧನೊಮ್ ಘೆಬ್ರಿಯೇಸಸ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಇಟಲಿ, ಜರ್ಮನಿ, ಸ್ಪೇನ್ ಮತ್ತು ಫ್ರಾನ್ಸ್ ನಂತಹ ಕೆಲವು ಐರೋಪ್ಯ ರಾಷ್ಟ್ರಗಳಲ್ಲಿ ಸಾಂಕ್ರಾಮಿಕ ಪ್ರಸಾರ ನಿಧಾನಗೊಳ್ಳುತ್ತಿರುವ ಶುಭ ಸುದ್ದಿ ಬಂದಿದೆ. ಆದರೆ ಆಫ್ರಿಕಾದ ೧೬ ರಾಷ್ಟ್ರಗಳಲ್ಲಿ ಸಮುದಾಯ ವರ್ಗಾವಣೆ ಸೇರಿದಂತೆ ಸೋಂಕು ಹೆಚ್ಚುತ್ತಿರುವ ಅಪಾಯದ ವರದಿಗಳೂ ಬಂದಿವೆ ಎಂದು ಅವರು ನುಡಿದರು.

ವಿಶ್ವಾದ್ಯಂತ ಈಗಾಗಲೇ ,೦೦,೦೦೦ ಕ್ಕೂ ಹೆಚ್ಚು ಮಂದಿ ಮಾರಕ ಸೋಂಕಿಗೆ ಬಲಿಯಾಗಿದ್ದಾರೆ. ವಿಶ್ವಾದ್ಯಂತ ಸರ್ಕಾರಗಳು ಹಿಂದೆಂದೂ ಕಾಣದಂತಹ ನಿರ್ಬಂಧ ಕ್ರಮಗಳನ್ನು ರೋಗಕ್ಕೆ ತಡೆಹಾಕುವ ಸಲುವಾಗಿ ಹೇರಿದ್ದರಿಂದ ಬಿಲಿಯನ್ (೪೦೦ ಕೋಟಿ) ಮಂದಿ ಮನೆಗಳಲ್ಲೇ ಬಂಧಿಗಳಾಗಿದ್ದಾರೆ.

ಕಳೆದ ವರ್ಷದ ಅಂತ್ಯದಲ್ಲಿ ಕೊರೋನಾವೈರಸ್ ಮೊದಲಿಗೆ ಕಾಣಿಸಿಕೊಂಡಿದ್ದ ಚೀನಾದ ವುಹಾನ್ ನಗರದಲ್ಲಿ ಎಲ್ಲ ನಿರ್ಬಂಧಗಳನ್ನು ಹಲವಾರು ತಿಂಗಳುಗಳ ಬಳಿಕ ಈವಾರ ಚೀನೀ ಸರ್ಕಾರ ಸಡಿಲಿಸಿದೆ.

No comments:

Advertisement