My Blog List

Wednesday, May 6, 2020

ಕೊರೋನಾ ಬಳಿಕದ ಯುಗದಲ್ಲಿ ಸ್ವದೇಶೀ ಆರ್ಥಿಕತೆಗೆ ಒತ್ತು: ಆರೆಸ್ಸೆಸ್ ಸಲಹೆ

ಕೊರೋನಾ ಬಳಿಕದ ಯುಗದಲ್ಲಿ ಸ್ವದೇಶೀ ಆರ್ಥಿಕತೆಗೆ ಒತ್ತು: ಆರೆಸ್ಸೆಸ್  ಸಲಹೆ
ನವದೆಹಲಿ: ಕೋವಿಡ್ -೧೯ ಯುಗದ ಬಳಿಕ ಸ್ವಾವಲಂಬನೆ ಅಥವಾಸ್ವದೇಶಿಪರ್ಯಾಯ ಆರ್ಥಿಕ ಮಾದರಿ ರೂಪಿಸುವ ಬಗ್ಗೆ ಒತ್ತು ನೀಡಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘವು (ಆರ್ ಎಸ್ ಎಸ್) ಜಾಗತಿಕ ಸಾಂಕ್ರಾಮಿಕ ರೋಗದಮೂಲವನ್ನು ಪತ್ತೆ ಹಚ್ಚಲುವಿಸ್ತೃತ ತನಿಖೆ ನಡೆಯಬೇಕು ಎಂದು  2020 ಮೇ  06ರ ಬುಧವಾರ ಹೇಳಿತು.

ಆರ್ಎಸ್ಎಸ್ ಜಂಟಿ ಪ್ರಧಾನ ಕಾರ್ಯದರ್ಶಿ  (ಸಹ ಕಾರ್ಯವಾಹ) ದತ್ತಾತ್ರೇಯ ಹೊಸಬಾಳೆ ಮತ್ತು ವಿದೇಶಿ ಮಾಧ್ಯಮ ವ್ಯಕ್ತಿಗಳ ನಡುವಿನ ಸಂವಾದಕ್ಕೆ ಮುನ್ನ ಸಂಘವು ವಿತರಿಸಿರುವ ಹಿನ್ನೆಲೆ ಟಿಪ್ಪಣಿಯಲ್ಲಿ ಕೆಲವು ವಿಶಾಲ ನೀತಿ ಹಾಗೂ ಸಮಸ್ಯೆಗಳನ್ನು ವಿವರಿಸಲಾಗಿದೆ.

ಸಾಂಕ್ರಾಮಿಕ ರೋಗದ ಮೂಲ, ಕಾರಣ ಮತ್ತು ಪ್ರಭಾವದ ಬಗ್ಗೆ ತನಿಖೆ ನಡೆಸಲು ವಿಸ್ತೃತ ವಿಚಾರಣೆ ನಡೆಸಲಾಗುವುದು ಎಂದು ನಾವು ಆಶಿಸುತ್ತೇವೆ. ಭವಿಷ್ಯದಲ್ಲಿ ಇಂತಹ ವಿಷಮ ಪರಿಸ್ಥಿತಿಯನ್ನು ನಿವಾರಿಸುವ ನಿಟ್ಟಿನಲ್ಲಿ ವ್ಯವಹರಿಸಲು ಜವಾಬ್ದಾರಿಯುತ ವ್ಯಕ್ತಿಗಳು, ಸಂಸ್ಥೆಗಳು ಮತ್ತು ದೇಶಗಳನ್ನು ಒಳಗೊಂಡಂತೆ ಹೊಸ ಪ್ರಭುತ್ವಗಳನ್ನು ಸೃಷ್ಟಿಸಲು ಇಡೀ ಜಗತ್ತು ಒಗ್ಗೂಡಬೇಕುಎಂದು ಟಿಪ್ಪಣಿ ಹೇಳಿದೆ. ಆದರೆ ಎಲ್ಲೂ ಅದು ಚೀನಾ ಹೆಸರನ್ನು ಪ್ರಸ್ತಾಪಿಸಿಲ್ಲ.

ರಾಷ್ಟ್ರೀಯ ಸ್ವಯಂ ಸೇವಕ ಸಂಘವು (ಆರ್ಎಸ್ಎಸ್) ಪ್ರಧಾನಿ ನರೇಂದ್ರ ಮೋದಿಯವರ ಮುಖಂಡತ್ವದಲ್ಲಿ ಕೇಂದ್ರದಲ್ಲಿ ರಚಿಸಲಾಗಿರುವ ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸೈದ್ಧಾಂತಿಕ ಚಿಲುಮೆಯಾಗಿದೆ ಎಂಬುದು ಗಮನಾರ್ಹ.

ಸಾಂಕ್ರಾಮಿಕ ರೋಗದ ನಂತರ ಸರ್ಕಾರದ ಕಾರ್ಯ ಮತ್ತು ಉದ್ದೇಶಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ದೇಶೀಯ ಮತ್ತು ಅಂತರಾಷ್ಟೀಯ ನೀತಿಗಳ ಬಗ್ಗೆ ಆರ್ಎಸ್ಎಸ್ ಟಿಪ್ಪಣಿ ಒತ್ತು ನೀಡಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಆಡಳಿತವು ಕೊರೊನಾವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಚೀನಾದ ನಿರ್ವಹಣೆಯನ್ನು ಕಟುವಾಗಿ ಟೀಕಿಸುತ್ತಿದೆ. ಏಷ್ಯಾದ ದೈತ್ಯ ರಾಷ್ಟ್ರವು (ಚೀನಾ) ಅಲ್ಲಿನ ವುಹಾನ್ ನಗರದಲ್ಲಿ ಮೊತ್ತ ಮೊದಲಿಗೆ ವ್ಯಾಪಕವಾಗಿ ಹರಡಿದ ರೋಗದ ತೀವ್ರತೆ ಮತ್ತು ಪ್ರಮಾಣವನ್ನು ವಿಶ್ವಕ್ಕೆ ಸಂವಹನ ಮಾಡುವಲ್ಲಿ ಪಾರದರ್ಶಕವಾಗಿಲ್ಲ ಎಂದು ಅಮೆರಿಕ ಆಪಾದಿಸಿದೆ.

ವೈರಸ್ನಿಂದ ,೦೦,೦೦೦ಕ್ಕೂ ಹೆಚ್ಚು ಜೀವಗಳನ್ನು ಬಲಿಪಡೆದಿರುವ ವೈರಸ್ಸು ಭೂಮಿಯ ಮೂರನೇ ಒಂದು ಭಾಗzಲ್ಲಿ ಆರ್ಥಿಕ ಚಟುವಟಿಕೆಗಳನ್ನೇ ದಿಗ್ಬಂಧನಕ್ಕೆ ಒಳಗಾಗುವಂತೆ ಮಾಡಿರುವ ಹಿನ್ನೆಲೆಯಲ್ಲಿ ಉಂಟಾದ ಆರ್ಥಿಕ ವಿನಾಶವನ್ನು ಎದುರಿಸುವಲ್ಲಿ ’‘ಬಂಡವಾಳಶಾಹಿ ಮತ್ತು ಕಮ್ಯುನಿಸಂಸಿದ್ದಾಂತಗಳ ಮಿತಿಗಳನ್ನು ಒತ್ತಿಹೇಳಲು ಆರ್ಎಸ್ಎಸ್ ವಿತರಿಸಿರುವ ಟಿಪ್ಪಣಿಯು ಪ್ರಯತ್ನಿಸಿದೆ.

"ಇಡೀ ಪ್ರಪಂಚದ ಮೇಲೆ ಹೇರಿದ ಭೌತವಾದಿ ಪ್ರಪಂಚದ ದೃಷ್ಟಿಕೋನವು ಆರ್ಥಿಕ ಕುಸಿತ ಮತ್ತು ಪರಿಸರ ನಾಶದ ಹೊಸ ಚಕ್ರಗಳಿಗೆ ನಮ್ಮನ್ನು ತಳ್ಳುತ್ತದೆ. ಇಂತಹ ಸನ್ನಿವೇಶದಲ್ಲಿ, ನಾವು ಸ್ವಾವಲಂಬನೆ ಮತ್ತುಸ್ವದೇಶಿಆಧಾರಿತ ಹೊಸ ಮಾದರಿಯನ್ನು ಅಭಿವೃದ್ಧಿಪಡಿಸುವುದು ವಿವೇಕಯುತವಾಗಿದೆ. ಸ್ಥಳೀಯ ಮಾದರಿಯಲ್ಲಿ, ಸ್ಥಳೀಯ ಸಂಪನ್ಮೂಲಗಳು, ಕಾರ್ಯಪಡೆ ಮತ್ತು ಅಗತ್ಯಗಳನ್ನು ಆರ್ಥಿಕ ಚಟುವಟಿಕೆಯಲ್ಲಿ ಸಂಯೋಜಿಸಲಾಗುವುದು, ಪರಿಸರವನ್ನು ಅದು ಗಣನೆಗೆ ತೆಗೆದುಕೊಳ್ಳುತ್ತದೆ" ಎಂದು ಟಿಪ್ಪಣಿ ಹೇಳಿದೆ.

ಸಾಂಕ್ರಾಮಿಕ ರೋಗವನ್ನು ನಿಯಂತ್ರಣಕ್ಕೆ ತಂದ ನಂತರ ಜಗತ್ತು ಮತ್ತು ಅದರ ಆರ್ಥಿಕತೆಯು ಹೇಗೆ ಮರು ಮಾಪನಾಂಕ ನಿರ್ಣಯಿಸುತ್ತದೆ ಎಂಬ  ಉದ್ವಿಗ್ನ ಚರ್ಚೆಯ ಹಿನ್ನೆಲೆಯಲ್ಲಿ ಆರ್ಎಸ್ಎಸ್  ದೃಷ್ಟಿಕೋನವು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತವೆ.

ಕೆಲವು ಅಂತಾರಾಷ್ಟ್ರೀಯ ಕಂಪೆನಿಗಳು ಉತ್ಪಾದನೆಗಾಗಿ ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಿದರೆ, ಭಾರತ, ಇಂಡೋನೇಷ್ಯಾ ಮತ್ತು ಥೈಲ್ಯಾಂಡ್ ಇದರ ಫಲಾನುಭವಿಗಳಾಗುತ್ತವೆ ಎಂದು  ಹೇಳಲಾಗುತ್ತಿದೆ.

‘ಕೋವಿಡ್-೧೯ ಬಿಕ್ಕಟ್ಟಿನ ನಂತರ, ಸ್ಥಳೀಯ ಸ್ವಾವಲಂಬನೆಗೆ ಹಾನಿಯಾಗದಂತೆ, ನಮ್ಮ ನೈಸರ್ಗಿಕ ಸಂಪನ್ಮೂಲಗಳಿಗೆ ಹಾನಿಯಾಗದಂತೆ, ಇನ್ನೊಂದು ಸಮಸ್ಯೆಗೆ ಸಿಲುಕದಂತೆ  ಇತರ ದೇಶಗಳಿಂದ ಹೂಡಿಕೆಯನ್ನು ಹೇಗೆ ಆಕರ್ಷಿಸಬಹುದು ಎಂದು ಭಾರತ ಸರ್ಕಾರ ಮತ್ತು ಇತರ ರಾಜ್ಯ ಆಡಳಿತಗಳು ಯೋಚಿಸಬೇಕು" ಎಂದು ಸಾಂಕ್ರಾಮಿಕ ನಂತರದ ಹೂಡಿಕೆಗಳನ್ನು ಭಾರತ ಹೇಗೆ ಆಕರ್ಷಿಸಬಹುದು ಎಂಬ ಪ್ರಶ್ನೆಗೆ ಹೊಸಬಾಳೆ  ಉತ್ತರಿಸಿದ್ದಾರೆ.

No comments:

Advertisement