My Blog List

Wednesday, May 6, 2020

ಕೊರೋನಾ ಮಾನವ ದೇಹಕ್ಕೆ ಅಂಟಿದ್ದು ಎಲ್ಲಿಂದ, ಯಾವಾಗ?

ಕೊರೋನಾ ಮಾನವ ದೇಹಕ್ಕೆ  ಅಂಟಿದ್ದು ಎಲ್ಲಿಂದ, ಯಾವಾಗ? 
ಲಂಡನ್: ಕೋವಿಡ್ -೧೯ ಸೋಂಕಿತ ,೫೦೦ ಕ್ಕೂ ಹೆಚ್ಚು ಜನರ ಮಾದರಿಗಳ ಆನುವಂಶಿಕ ವಿಶ್ಲೇಷಣೆಯಿಂದ  ಕೊರೋನಾವೈರಸ್ ಕಳೆದ ವರ್ಷದ ಕೊನೆಯಲ್ಲಿ ಪ್ರಪಂಚದಾದ್ಯಂತ ವೇಗವಾಗಿ ಹರಡಲು ಆರಂಭಿಸಿದ್ದು, ವೇಳೆಯಲ್ಲೇ ಮಾನವ ದೇಹವನ್ನು ಆಶ್ರಯಿಸಲು ಅದು ಕಲಿತುಕೊಂಡಿತು ಎಂಬುದು ಬೆಳಕಿಗೆ ಬಂದಿದೆ ಎಂದು  ವಿಜ್ಞಾನಿಗಳು 2020 ಮೇ  06ರ ಬುಧವಾರ ಹೇಳಿದರು.
ಯೂನಿವರ್ಸಿಟಿ ಕಾಲೇಜ್ ಲಂಡನ್ (ಯುಸಿಎಲ್) ಜೆನೆಟಿಕ್ಸ್ ಇನ್ಸ್ಟಿಟ್ಯೂಟ್ ವಿಜ್ಞಾನಿಗಳು ನಡೆಸಿದ ಅಧ್ಯಯನವು ಕೊರೋನಾವೈರಸ್ಸಿನ (ಎಸ್ಎಆರ್ಎಸ್-ಕೋವಿ -) ಸುಮಾರು ೨೦೦ ಪುನರಾವರ್ತಿತ ಆನುವಂಶಿಕ ರೂಪಾಂತರಗಳನ್ನು ಕಂಡುಹಿಡಿದಿದೆ - ಇದು ಜನರಲ್ಲಿ ಹರಡುವಾಗ ಅದು ಹೇಗೆ ವಿಕಸನಗೊಳ್ಳಬಹುದು ಎಂಬುದನ್ನು ಸೂಚಿಸುತ್ತಿವೆ ಎಂದು ಸಂಶೋಧಕರು ಹೇಳಿದರು.
ಸಂಶೋಧನೆಯ ಸಹ-ನೇತೃತ್ವ ವಹಿಸಿದ್ದ ಯುಸಿಎಲ್ ಪ್ರಾಧ್ಯಾಪಕ ಫ್ರಾಂಕೋಯಿಸ್ ಬಲ್ಲೌಕ್ಸ್, ಸಾರ್ಸ್ ಕೋವ್- ಜಾಗತಿಕ ಆನುವಂಶಿಕ ವೈವಿಧ್ಯತೆಯ ಹೆಚ್ಚಿನ ಪ್ರಮಾಣವು ರೋಗ ಬಾಧಿತವಾದ ದೇಶಗಳಲ್ಲಿ ಕಂಡುಬರುತ್ತದೆ ಎಂದು ಫಲಿತಾಂಶಗಳು ತೋರಿಸಿದೆ ಎಂದು ಹೇಳಿದರು.

ಇದು ಸಾಂಕ್ರಾಮಿಕ ರೋಗದ ಆರಂಭದಿಂದಲೂ ವೈರಸ್ ಜಗತ್ತಿನಾದ್ಯಂತ ವ್ಯಾಪಕವಾಗಿ ಹರಡುತ್ತಿದೆ ಎಂಬುದನ್ನು ಅದು ಸೂಚಿಸುತ್ತದೆ ಎಂದೂ ಸಂಶೋಧಕರು ನುಡಿದರು.

"ಎಲ್ಲಾ ವೈರಸ್ಗಳು ಸ್ವಾಭಾವಿಕವಾಗಿ ರೂಪಾಂತರಗೊಳ್ಳುತ್ತವೆ. ಅವುಗಳ ರೂಪಾಂತರಗಳು ಸಾಮಾನ್ಯ ಮತ್ತು ಸಾರ್ಸ್ ಕೋವ್- ನಿರೀಕ್ಷೆಗಿಂತ ವೇಗವಾಗಿ ಅಥವಾ ನಿಧಾನವಾಗಿ ರೂಪಾಂತರಗೊಳ್ಳುತ್ತಿದೆ ಎಂದೇನೂ ಸೂಚಿಸುವಂತಿಲ್ಲಎಂದು ಬಲ್ಲೌಕ್ಸ್ ಹೇಳಿದರು.

"ಸಾರ್ಸ್ ಕೋವ್- ಹೆಚ್ಚು - ಕಡಿಮೆ ಮಾರಕ ಮತ್ತು ಸಾಂಕ್ರಾಮಿಕವಾಗುತ್ತಿದೆ ಎಂದು ಕೂಡಾ ನಾವು ಹಂತದಲ್ಲಿ ಹೇಳಲಾಗುವುದಿಲ್ಲಎಂದು ಅವರು ನುಡಿದರು.

ಜಾಗತಿಕವಾಗಿ .೬೮ ದಶಲಕ್ಷಕ್ಕೂ ಹೆಚ್ಚು ಜನರು ಕೊರೋನವೈರಸ್ ಸೋಂಕಿಗೆ ಒಳಗಾಗಿದ್ದಾರೆ ಮತ್ತು ೨೫೬,೦೦೦ ಜನರು ಸೋಂಕಿಗೆ ಬಲಿಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

೨೦೧೯ ಡಿಸೆಂಬರ್ನಲ್ಲಿ ಚೀನಾದಲ್ಲಿ ಮೊದಲ ಬಾರಿಗೆ ಗುರುತಿಸಿದಾಗಿನಿಂದ ೨೧೦ ಕ್ಕೂ ಹೆಚ್ಚು ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಸೋಂಕುಗಳು ಕಂಡು ಬಂದಿವೆ.

ಸೋಂಕು, ಜೆನೆಟಿಕ್ಸ್ ಮತ್ತು ಎವಲ್ಯೂಷನ್  ನಿಯತಕಾಲಿಕದಲ್ಲಿ ಬುಧವಾರ ಪ್ರಕಟವಾದ ಯುಸಿಎಲ್ ತಂಡದ ಸಂಶೋಧನೆಗಳು, ಪ್ರಪಂಚದಾದ್ಯಂತ ಶೀಘ್ರವಾಗಿ ಹರಡುವ ಮೊದಲು ೨೦೧೯ ಕೊನೆಯಲ್ಲಿ ವೈರಸ್ ಹೊರಹೊಮ್ಮಿದೆ ಎಂದು ದೃಡಪಡಿಸುತ್ತವೆ ಎಂದು ಬಲ್ಲೌಕ್ಸ್ ಹೇಳಿದರು,.

ಸೋಂಕಿನ ನಿಖರವಾದ ಪ್ರಾರಂಭದ ಸ್ಥಳವನ್ನು ದೃಢಪಡಿಸಲು ಅಧ್ಯಯನಕ್ಕೆ ಸಾಧ್ಯವಾಗಿಲ್ಲ.
ಬಲ್ಲೌಕ್ಸ್ ತಂಡವು ವಿಶ್ವದಾದ್ಯಂತ ಸೋಂಕಿತ ರೋಗಿಗಳಿಂದ ,೫೦೦ ಕ್ಕೂ ಹೆಚ್ಚು ವೈರಸ್ಗಳ ಜೀನ್ ನಕ್ಷೆಗಳನ್ನು (ಜೀನೋಮ್) ಪರೀಕ್ಷಿಸಿತು. ಅವರ ಫಲಿತಾಂಶಗಳು ೨೦೧೯ ಉತ್ತರಾರ್ಧದಿಂದ ಸಾರ್ಸ್ ಕೋವ್- ವೈರಸ್ಗಳು ಸಾಮಾನ್ಯ ಪೂರ್ವಜರನ್ನು  ಹೊಂದಿವೆ ಎಂಬುದಕ್ಕೆ ಪುರಾವೆಗಳನ್ನು ಒದಗಿಸಿವೆ. ಇದು ವೈರಸ್ ಬೇರೆ ಪ್ರಾಣಿಯಿಂದ ಮನುಷ್ಯರಿಗೆ ಸೋಂಕಿದೆ ಎಂಬುದನ್ನು ಸೂಚಿಸುತ್ತದೆ.
ಕೋವಿಡ್
-೧೯ ರೋಗವನ್ನು   ಉಂಟುಮಾಡುವ ವೈರಸ್ ಮೊದಲ ಬಾರಿಗೆ ಪತ್ತೆಯಾಗುವುದಕ್ಕಿಂತ ಮುಂಚೆಯೇ ಮಾನವ ದೇಹದಲ್ಲಿ ಇರಲಿಲ್ಲ ಎಂಬುದು ಇದರ ಅರ್ಥವಾಗಿದೆಬಲ್ಲೌಕ್ಸ್ ಹೇಳಿದರು.

ತನ್ನ ಮೊದಲ ಪ್ರಕರಣಗಳನ್ನು ಫ್ರಾನ್ಸ್  ದೃಢ ಪಡಿಸಿದ್ದಕ್ಕೆ ಒಂದು ತಿಂಗಳ ಮೊದಲು ಡಿಸೆಂಬರ್ ೨೭ ಹೊತ್ತಿಗೆ ಕೋವಿಡ್-೧೯ ಸೊಂಕು ಹರಡಲು ಆರಂಭವಾಗಿದೆ ಎಂಬುದನ್ನು ವಾರದ ಆರಂಭದಲ್ಲಿ ಪ್ರಕಟವಾದ ಫ್ರೆಂಚ್ ವಿಜ್ಞಾನಿಗಳ ಅಧ್ಯಯನವು ಕಂಡುಹಿಡಿದಿತ್ತು.

ವಿಶ್ವ ಆರೋಗ್ಯ ಸಂಸ್ಥೆಯು, ಫ್ರೆಂಚ್ ಪ್ರಕರಣದಲ್ಲಿ "ಆಶ್ಚರ್ಯವೇನಿಲ್ಲ" ಎಂದು ಹೇಳಿತ್ತು ಮತ್ತು ಯಾವುದೇ ಆರಂಭಿಕ ಅನುಮಾನಾಸ್ಪದ ಪ್ರಕರಣಗಳ ತನಿಖೆ ನಡೆಸುವಂತೆ ದೇಶಗಳನ್ನು ಒತ್ತಾಯಿಸಿತ್ತು.

೧೯೮ ಸಣ್ಣ ಆನುವಂಶಿಕ ಬದಲಾವಣೆಗಳು ಅಥವಾ ರೂಪಾಂತರಗಳನ್ನು ಗುರುತಿಸಿದ ಅಧ್ಯಯನವು  ರೂಪಾಂತರಗಳು ಸ್ವತಂತ್ರವಾಗಿ ಒಂದಕ್ಕಿಂತ ಹೆಚ್ಚು ಬಾರಿ ಸಂಭವಿಸಿವೆ ಎಂದು ಹೇಳಿದೆ. ವೈರಸ್ ಹೇಗೆ ಹೊಂದಿಕೊಳ್ಳುತ್ತಿದೆ ಎಂಬುದರ ಸುಳಿವುಗಳನ್ನು ಇವು ಹೊಂದಿರಬಹುದು ಮತ್ತು ಇದು ಔಷಧಗಳು ಮತ್ತು ಲಸಿಕೆಗಳನ್ನು ಅಭಿವೃದ್ಧಿಪಡಿಸುವ ಪ್ರಯತ್ನಗಳಿಗೆ ಸಹಾಯ ಮಾಡುತ್ತದೆ.

"ವೈರಸ್ಸುಗಳನ್ನು ಸೋಲಿಸುವ ಪ್ರಮುಖ ಸವಾಲು ಏನೆಂದರೆ, ವೈರಸ್ ರೂಪಾಂತgಗೊಳ್ಳುವುದು. ಹೀಗೆ ರೂಪಾಂತರಗೊಂಡಿದ್ದರೆ ಲಸಿಕೆ ಅಥವಾ ಔಷಧವು ಬಳಿಕ ಅದಕ್ಕೆ ಪರಿಣಾಮಕಾರಿಯಾಗುವುದಿಲ್ಲ" ಎಂದು ಬಲ್ಲೌಕ್ಸ್ ಹೇಳಿದರು.

"ನಾವು ರೂಪಾಂತರಗೊಳ್ಳುವ ಸಾಧ್ಯತೆ ಕಡಿಮೆ ಇರುವ ವೈರಸ್ ಕೆಲವು ಭಾಗಗಳ ಮೇಲೆ ನಮ್ಮ ಪ್ರಯತ್ನಗಳನ್ನು ಕೇಂದ್ರೀಕರಿಸಿದರೆ, ದೀರ್ಘಾವಧಿಯಲ್ಲಿ ಪರಿಣಾಮಕಾರಿಯಾಗುವ ಔಷಧಗಳನ್ನು  ಅಭಿವೃದ್ಧಿಪಡಿಸಬಹುದುಎಂದು ಅವರು ನುಡಿದರು.

No comments:

Advertisement