My Blog List

Tuesday, May 19, 2020

ಕೊರೋನಾ ರೋಗಿಗಳಿಗೆ ಚೇತರಿಕೆ ನೀಡುವ ಮದ್ದು ಸಿದ್ಧ: ಚೀನಾ

ಕೊರೋನಾ ರೋಗಿಗಳಿಗೆ ಚೇತರಿಕೆ ನೀಡುವ ಮದ್ದು ಸಿದ್ಧ:  ಚೀನಾ
ಬೀಜಿಂಗ್: ಬೀಜಿಂಗ್ ಮೂಲದ ವಿಶ್ವವಿದ್ಯಾಲಯದ ವಿಶೇಷ ಸಂಶೋಧನಾ ತಂಡವೊಂದು ತಾನು ಕೋವಿಡ್-೧೯ ರೋಗಿಗ ಚೇತರಿಕೆಯ ಅವಧಿಯನ್ನು ಕಡಿಮೆಗೊಳಿಸುವ ಔಷಧವನ್ನು ಅಭಿವೃದ್ಧಿ ಪಡಿಸುತ್ತಿರುವುದಾಗಿ ಪ್ರಕಟಿಸಿದ್ದು, ಔಷಧವು ರೋಗಿಗಳಲ್ಲಿ ಅತಿ ಕಡಿಮೆ ಅವಧಿಯಲ್ಲಿ ಕೋವಿಡ್ ವಿರುದ್ಧ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂದು  2020 ಮೇ 19ರ ಮಂಗಳವಾರ ಹೇಳಿತು.
ಬೀಜಿಂಗ್‌ನ ಪ್ರತಿಷ್ಠಿತ ಪೆಕಿಂಗ್ ವಿಶ್ವ ವಿದ್ಯಾಲಯದ ಬೀಜಿಂಗ್ ಅತ್ಯಾಧುನಿಕ ಜೆನೋಮಿಕ್ಸ್ (ತಳಿ ನಕ್ಷೆ) ಸಂಶೋಧನಾ ಕೇಂದ್ರವು ಪ್ರಾಣಿಗಳ ಮೇಲೆ ಔಷಧವನ್ನು ಯಶಸ್ವಿಯಾಗಿ ಪ್ರಯೋಗಿಸಿದೆ ಎಂದು ಹೇಳಿತು.

ಸನ್ನಿ ಕ್ಷೀ ನೇತೃತ್ವದ ಜಂಟಿ ಸಂಶೋಧನಾ ತಂಡವೊಂದು ಉಸಿರಾಟದ ತೊಂದರೆಗೆ ಕಾರಣವಾಗುವ ಕೋವಿಡ್ -೧೯ಕ್ಕೆ ಕಾರಣವಾಗುವ ಕೊರೋನಾವೈರಸ್ -ಸಾರ್ಸ್-ಕೋವ್- ವೈgಸ್ ವಿರುದ್ಧ ಪ್ಲಾಸ್ಮಾದಿಂದ ಸಿಂಗಲ್ -ಸೆಲ್ -ಸೀಕ್ವೆನ್ಸಿಂಗ್ ಮೂಲಕ ಪ್ರತಿಕಾಯಗಳನ್ನು ಯಶಸ್ವಿಯಾಗಿ ಪತ್ತೆ ಹಚ್ಚಿದೆ ಎಂದು ಪೆಕಿಂಗ್ ವಿಶ್ವ ವಿದ್ಯಾಲಯವು ಹೇಳಿಕೆಯೊಂದರಲ್ಲಿ ಪ್ರಕಟಿಸಿತು.

ಆನ್ ಲೈನ್ ಮೆಡಿಕಲ್ ಜರ್ನಲ್ ಸೆಲ್‌ನಲ್ಲಿ ಸಂಶೋಧನೆಯನ್ನು ಪ್ರಕಟಿಸಲಾಗಿದ್ದು, ವೈರಾಣುಗಳನ್ನು ತಟಸ್ಥಗೊಳಿಸುವ ಪ್ರತಿಕಾಯಗಳನ್ನು ರೋಗಕ್ಕೆ ಚಿಕಿತ್ಸೆ ಹಾಗೂ ಮುಂಜಾಗರೂಕತಾ ಕ್ರಮವಾಗಿ ಬಳಸುವ ಔಷಧಗಳಲ್ಲಿ ಉಪಯೋಗಿಸಿಕೊಳ್ಳಬಹುದು ಎಂದು ಹೇಳಿಕೆ ತಿಳಿಸಿತು.

ಚಳಿಗಾಲದಲ್ಲಿ ಕೋವಿಡ್-೧೯ ಸಾಂಕ್ರಾಮಿಕವು ಪುನಃ ಕಾಣಿಸಿಕೊಂqರೆ, ವೇಳೆಗೆ ನಮ್ಮ ತಟಸ್ಥಗೊಳಿಸುವ ಪ್ರತಿಕಾಯಗಳು ಲಭ್ಯವಿರಬಹುದು ಎಂದು ಕ್ಷೀ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಾವು ಪ್ರತಿಕಾಯಗಳನ್ನು ಇಲಿಯ ಮೇಲೆ ಪ್ರಯೋಗಿಸಿದಾಗ ಐದೇ ದಿನಗಳಲ್ಲಿ ಅದರ ದೇಹದಲ್ಲಿದ್ದ ವೈರಾಣುಗಳ ಪ್ರಮಾಣ ಗಣನೀಯವಾಗಿ ತಗ್ಗಿತು ಎಂದು ಕ್ಷೀ ನುಡಿದರು.

ಅಂದರೆ ಔಷಧವು ಚಿಕಿತ್ಸೆಯಲ್ಲೂ  ಫಲಕಾರಿಯಾಗುವ ಸಾಮರ್ಥ್ಯ ಹೊಂದಿದೆ ಎಂದು ಅರ್ಥ ಎಂದು ಅವರು ನುಡಿದರು.

ಔಷಧವು ಕೋಶಗಳಿಗೆ ವೈರಸ್ ಸೋಂಕದಂತೆ ತಡೆಯಲು ಮಾನವ ರೋಗನಿರೋಧಕ ವ್ಯವಸ್ಥೆಯಿಂದ ಉತ್ಪಾದಿಸಿದ ತಟಸ್ಥಗೊಳಿಸುವ ಪ್ರತಿಕಾಯಗಳನ್ನು ಬಳಸುತ್ತದೆ. ಕ್ಷೀ ಅವರ ತಂಡವು ಚೇತರಿಸಿದ ೬೦ ರೋಗಿಗಳ ರಕ್ತದಿಂದ ಪ್ರತಿಕಾಯಗಳನ್ನು ಪ್ರತ್ಯೇಕಿಸಿದೆ.

ಮಧ್ಯೆ, ಕೋವಿಡ್-೧೯ ಲಸಿಕೆಗಳು ಬೀಜಿಂಗ್‌ನಲ್ಲಿ ಕ್ಲಿನಿಕಲ್ ಪರೀಕ್ಷೇಯ ೨ನೇ ಹಂತವನ್ನು ಪ್ರವೇಶಿಸಿದೆ ಎಂದು ಮುನಿಸಿಪಲ್ ಆರೋಗ್ಯ ಅಧಿಕಾರಿಯೊಬ್ಬರು ನುಡಿದರು.

ಐದು ಸಂಶೋಧನಾತ್ಮಕ ಔಷಧಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ಕ್ಲಿನಿಕಲ್ ಪರೀಕ್ಷೆಗಳಿಗಾಗಿ ಅನುಮೋದಿಸಲಾಗಿದೆ. ಇವೆಲ್ಲವೂ ಕ್ಲಿನಿಕಲ್ ಅಧ್ಯಯನದ ೨ನೇ ಹಂತವನ್ನು ಪ್ರವೇಶಿಸಿವೆ ಎಂದು ಬೀಜಿಂಗ್ ಮುನಿಸಿಪಲ್ ವಿಜ್ಞಾನ ಮತ್ತು ತಂತ್ರಜ್ಞಾನ ಆಯೋಗದ ಮುಖ್ಯಸ್ಥ ಕ್ಷು ಕ್ವಿಯಾಂಗ್ ಹೇಳಿದರು.

ರೋಗನಿರ್ಣಯದ ಕಾರಕಗಳು, ಔಷಧಗಳು, ಲಸಿಕೆಗಳು ಮತ್ತು ವೈದ್ಯಕೀಯ ಉಪಕರಣಗಳ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಕ್ಷಿಪ್ರಗೊಳಿಸಲಾಗುತ್ತದೆ  ಮತ್ತು ಹೆಚ್ಚುತ್ತಿರುವ ಬೇಡಿಕೆಗಳನ್ನು ಪೂರೈಸಲು ತಮ್ಮ ಸಾಮರ್ಥ್ಯವನ್ನು ವಿಸ್ತರಿಸುತ್ತಿವೆ ಎಂದು ಕ್ಷು ಅವರನ್ನು ಉಲ್ಲೇಖಿಸಿ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕ್ಲಿನಿಕಲ್ ಪ್ರಯೋಗಗಳ ಎರಡನೇ ಹಂತವು ಜುಲೈನಿಂದ ಸತತವಾಗಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ
ಎರಡನೇ ಹಂತದ ಕ್ಲಿನಿಕಲ್ ಪ್ರಯೋಗಗಳಿಗಾಗಿ ಒಟ್ಟು ,೦೩೬ ಸ್ವಯಂಸೇವಕರು ಸಜ್ಜಾಗಿದ್ದು ಅವರಿಗೆ ಲಸಿಕೆ ನೀಡಲಾಗಿದ್ದು ಲಸಿಕೆಗಳ ಸುರಕ್ಷಿತ ಮತ್ತು ಪರಿಣಾಮಕಾರಿತ್ವವನ್ನು ಎಂದು ಸಂಶೋಧಕರು ನಿರ್ಣಯಿಸುತ್ತಿದ್ದಾರೆ ಎಂದು ಸುದ್ದಿ ಸಂಸ್ಥೆ ಹೇಳಿದೆ.

No comments:

Advertisement